ಬಾಲಿವುಡ್‌ನಲ್ಲಿ ಮತ್ತೊಂದು ಸ್ಟಾರ್ ಸಿನಿಮಾಗೆ ಸೋಲು; ಮುಂದುವರೆದ ಸೌತ್ ಸ್ಟಾರ್‌ಗಳ ಆರ್ಭಟ

By Suvarna NewsFirst Published May 13, 2022, 6:23 PM IST
Highlights

ಇಂದು (ಮೇ 13) ತೆರೆಗೆ ಬಂದ ರಣವೀರ್ ಸಿಂಗ್ ನಟನೆಯ ಜಯೇಶ್ ಭಾಯ್ ಜೋರ್ದಾರ್(Jayeshbhai Jordaar) ಸಿನಿಮಾ ಕೂಡ ಹೀನಾಯ ಸೋಲು ಕಾಣುವ ಸೂಚನೆ ಸಿಕ್ಕಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರಕ್ಕೆ ನೆಟ್ಟಿಗರು ಡಿಸಾಸ್ಟರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಹರಿದುಬರುತ್ತಿದೆ.

ಬಾಲಿವುಡ್‌ನಲ್ಲಿ ಸೋಲಿನ ಸರಣಿ ಮುಂದುವರೆದಿದೆ. ಇತ್ತೀಚಿಗೆ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋತಿವೆ. ಬಾಲಿವುಡ್ ನಲ್ಲಿ ಸೌತ್ ಸ್ಟಾರ್ ಗಳ ಆರ್ಭಟ ಪ್ರಾರಂಭವಾದ ಬಳಿಕ ಯಾವ ಹಿಂದಿ ಸಿನಿಮಾವೂ ಉತ್ತಮ ಗಳಿಕೆ ಮಾಡಿಲ್ಲ. ಕೊರೊನಾ ಬಳಿಕ ಬಂದ ಅಕ್ಷಯ್ ಕುಮಾರ್(Akshay Kumar) ನಟನೆಯ ಸೂರ್ಯವಂಶಿ, ಅಲಿಯಾ ಭಟ್(Alia Bhatt) ಗಂಗೂಬಾಯಿ ಕಾಠಿಯಾವಾಡಿ ಮತ್ತು ಕಾಶ್ಮೀರ್ ಫೈಲ್ಸ್ ಸಿನಿಮಾಗಳನ್ನು ಬಿಟ್ಟರೇ ಬಾಲಿವುಡ್‌ನಲ್ಲಿ ಯಾವ ಸಿನಿಮಾಗಳು ಸದ್ದು ಮಾಡಿಲ್ಲ. ಆರ್ ಆರ್ ಆರ್ ಮತ್ತು ಕೆಜಿಎಫ್-2 ಸಿನಿಮಾಗಳ ಅಬ್ಬರಿಂದ ಮಂಕಾಗಿರುವ ಬಾಲಿವುಡ್‌ಗೆ ಸರಣಿ ಸೋಲು ಮತ್ತಷ್ಟು ಆಘಾತ ತಂದಿದೆ.

ಇಂದು (ಮೇ 13) ತೆರೆಗೆ ಬಂದ ರಣವೀರ್ ಸಿಂಗ್(Ranveer sIngh) ನಟನೆಯ ಜಯೇಶ್ ಭಾಯ್ ಜೋರ್ದಾರ್(Jayeshbhai Jordaar) ಸಿನಿಮಾ ಕೂಡ ಹೀನಾಯ ಸೋಲು ಕಾಣುವ ಸೂಚನೆ ಸಿಕ್ಕಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಣವೀರ್ ಸಿಂಗ್(Ranveer Singh) ಸಿನಿಮಾ ಅಂದ್ಮೇಲೆ ಭಾರಿ ನಿರೀಕ್ಷೆ ಇದ್ದೆ ಇರುತ್ತದೆ. ಆದರೆ ಇಂದ ಬಂದ ಜಯೇಶ್ ಭಾಯ್ ಜೋರ್ದಾರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಈ ಚಿತ್ರಕ್ಕೆ ನೆಟ್ಟಿಗರು ಡಿಸಾಸ್ಟರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಹರಿದುಬರುತ್ತಿದೆ.

ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಸಿನಿಮಾದ ಬಗ್ಗೆ ವಿಮರ್ಶೆ ಮಾಡಿದ್ದು ಕಳಪೆಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ 1.5 ರೇಟಿಂಗ್ ಕೊಟ್ಟಿದ್ದಾರೆ. ಇನ್ನು ವಿಮರ್ಶಕ ರೋಹಿತ್ ಜೈಸ್ವಾಲ್ ಕೂಡ ಐದಕ್ಕೆ ಒಂದು ಸ್ಟಾರ್ ನೀಡಿದ್ದಾರೆ. ಅನೇಕರು ಈ ಸಿನಿಮಾಗೆ ಬಾಯಿಗೆ ಬಂದಹಾಗೆ ಬೈಯುತ್ತಿದ್ದಾರೆ. ದೊಡ್ಡ ತಲೆನೋವು ಸಿನಿಮಾ ಎನ್ನುತ್ತಿದ್ದಾರೆ. ಬೋರಿಂಗ್ ಸಿನಿಮಾ ಎಂದು ಜರಿಯುತ್ತಿದ್ದಾರೆ.

...: POOR.
Rating: ⭐️½
Jordaar concept, but kamzor writing... Screenplay of convenience... sparkles, but the amateurish goings-on play spoilsport. pic.twitter.com/fY3xYqzcpI

— taran adarsh (@taran_adarsh)


Rocky bai Vibes: ರಾಕಿಂಗ್ ಸ್ಟಾರ್ ಕಾಸ್ಟ್ಯೂಮ್ ಕಾಪಿ ಮಾಡಿದ ರಣವೀರ್ ಸಿಂಗ್..!

 

ಅಂದಹಾಗೆ ಈ ಸಿನಿಮಾಗೆ ದಿವ್ಯಾಂಗ್ ಠಕ್ಕರ್ ಆಕ್ಷನ್ ಕಟ್ ಹೇಳಿದ್ದಾರೆ. ರಣ್ವೀರ್ ಸಿಂಗ್ ಗೆ ನಾಯಕಿಯಾಗಿ ಅರ್ಜುನ್ ರೆಡ್ಡಿ ಖ್ಯಾತಿಯ ಶಾಲಿನಿ ಪಾಂಡೆ ನಟಿಸಿದ್ದಾರೆ. ಅರ್ಜುನ್ ರೆಡ್ಡಿ ಸೂಪರ್ ಸಕ್ಸಸ್ ಬಳಿಕ ಶಾಲಿನಿ ಮತ್ತೆ ಗೆಲವು ಕಂಡಿಲ್ಲ. ಸರಣಿ ಸೋಲಿನಲ್ಲಿರುವ ಶಾಲಿನಿ ಚೊಚ್ಚಲ ಬಾಲಿವುಡ್ ಸಿನಿಮಾದಲ್ಲಿ ಸ್ಟಾರ್ ನಟನ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಅಲ್ಲದೆ ದೊಡ್ಡ ಗೆಲುವಿನ ಕನಸು ಕಂಡಿದ್ದರು. ಆದರೆ ಈ ಸಿನಿಮಾ ಕೂಡ ಸರಣಿ ಸೋಲಿನ ಲಿಸ್ಟ್ ಗೆ ಸೇರ್ಪಡೆಯಾಗಿದೆ.

ರಣ್ವೀರ್ ಸಿಂಗ್ ಕೊನೆಯದಾಗಿ 83 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಜಯೇಶ್ ಭಾಯ್ ಜೋರ್ದಾರ್ ಸಿನಿಮಾದಿಂದ ಸೋಲು ಕಂಡಿದ್ದಾರೆ.

ನಿರ್ದೇಶಕರು ಕಟ್ ಹೇಳಿದ್ರೂ ಕಿಸ್ ಮಾಡುತ್ತಲೇ ಇದ್ವಿ; ರಾಮ-ಲೀಲಾ ದೃಶ್ಯದ ಬಗ್ಗೆ ರಣ್ವೀರ್ ಮಾತು

ಅಂದಹಾಗೆ ಸೌತ್ ಸಿನಿಮಾಗಳ ಅಬ್ಬರಿಂದ ನಲುಗಿಹೋಗಿರುವ ಬಾಲಿವುಡ್ ದೊಡ್ಡ ಹಿಟ್ ಸಿನಿಮಾಗಾಗಿ ಕಾಯುತ್ತಿದೆ. ಆದರೆ ಸಾಲು ಸಾಲು ಸಿನಿಮಾಗಳು ನೆಲಕಚ್ಚುತ್ತಿವೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾ ಬಿಗುಡಗೆಯಾಗಿ ತಿಂಗಳಾದರೂ ಉತ್ತಮ ಪ್ರದರ್ಶನ ಕಾಣುತ್ತಿದೆ. 4ನೇ ವಾರವೂ ಭರ್ಜರಿ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ ಕೆಜಿಎಫ್-2 ಇದುರೆಗೂ 420 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರೆದಿಯಾಗಿದೆ. ಇನ್ನು ಮೇ 12ರಂದು ತೆರೆಗೆ ಬಂದ ತೆಲುಗು ಸ್ಟಾರ್ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿಯೇ ಸಿನಿಮಾ ಬರೋಬ್ಬರಿ 36 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಒಟ್ನಲ್ಲಿ ದಕ್ಷಿಣ ಸಿನಿಮಾಗಳು ಅಬ್ಬರಿಸುತ್ತಿವೆ. ಸೋಲಿನ ದವಡೆಯಿಂದ ಪಾರಾಗಲು ಬಾಲಿವುಡ್ ಹರಸಾಹಸ ಪಡುತ್ತಿದೆ. ಸರಣಿ ಸೋಲಿನಿಂದ ಯಾವಾಗ ಹೊರಬರುತ್ತೆ ಕಾದು ನೋಡಬೇಕು.

click me!