ಜೈಲರ್‌ ಗ್ಲಿಂಫ್ಸ್‌ಗೆ ಫ್ಯಾನ್ಸ್‌ ಫಿದಾ: ರಜನಿಕಾಂತ್‌, ಶಿವಣ್ಣ, ಮೋಹನ್‌ಲಾಲ್‌ ಖಡಕ್‌ ಲುಕ್‌ ರಿವಿಲ್‌

By Govindaraj S  |  First Published May 6, 2023, 8:27 AM IST

47 ಸೆಕೆಂಡುಗಳ ಈ ಗ್ಲಿಂಫ್ಸ್‌ನಲ್ಲಿ ಚಿತ್ರದ 16ಕ್ಕೂ ಹೆಚ್ಚು ಬಹು ಮುಖ್ಯ ಪಾತ್ರಧಾರಿಗಳ ಲುಕ್ಕುಗಳನ್ನು ರಿವಿಲ್‌ ಮಾಡಲಾಗಿದೆ. ಈ ಪೈಕಿ ಎಂದಿನಂತೆ ನಟ ಶಿವರಾಜ್‌ಕುಮಾರ್‌ ಅವರು ಮಾಸ್‌ ಲುಕ್‌ಗೆ ಅವರ ಅಭಿಮಾನಿಗಳು ಬಹುಪರಾಕ್‌ ಹೇಳುತ್ತಿದ್ದಾರೆ. 


ಆಗಸ್ಟ್‌ 10ಕ್ಕೆ ತೆರೆಗೆ ಬರಲು ಸಜ್ಜಾಗಿರುವ ಬಹುಭಾಷೆಯ ಕಲಾವಿದರ ನಟನೆ, ಬಹು ಕೋಟಿ ವೆಚ್ಚದ ‘ಜೈಲರ್‌’ ಚಿತ್ರದ ಗ್ಲಿಂಫ್ಸ್‌ ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರು ಹಾಗೂ ಅಭಿಮಾನಿಗಳ ಕುತೂಹಲ ಹಾಗೂ ನಿರೀಕ್ಷೆ ಹೆಚ್ಚಿಸಲಾಗಿದೆ. ರಜನಿಕಾಂತ್‌ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಕನ್ನಡದಿಂದ ಶಿವರಾಜ್‌ಕುಮಾರ್‌, ಮಲಯಾಳಂನಿಂದ ಮೋಹನ್‌ಲಾಲ್‌, ವಿನಾಯಗನ್‌, ಹಿಂದಿಯಿಂದ ಜಾಕಿ ಶ್ರಾಫ್‌, ತೆಲುಗಿನಿಂದ ಸುನೀಲ್‌, ರಮ್ಯಾಕೃಷ್ಣ, ನಾಗಬಾಬು, ತಮ್ಮನ್ನಾ, ತ್ರಿಶಾ ಹೀಗೆ ಬಹು ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. 

47 ಸೆಕೆಂಡುಗಳ ಈ ಗ್ಲಿಂಫ್ಸ್‌ನಲ್ಲಿ ಚಿತ್ರದ 16ಕ್ಕೂ ಹೆಚ್ಚು ಬಹು ಮುಖ್ಯ ಪಾತ್ರಧಾರಿಗಳ ಲುಕ್ಕುಗಳನ್ನು ರಿವಿಲ್‌ ಮಾಡಲಾಗಿದೆ. ಈ ಪೈಕಿ ಎಂದಿನಂತೆ ನಟ ಶಿವರಾಜ್‌ಕುಮಾರ್‌ ಅವರು ಮಾಸ್‌ ಲುಕ್‌ಗೆ ಅವರ ಅಭಿಮಾನಿಗಳು ಬಹುಪರಾಕ್‌ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಶಿವಣ್ಣ ಹಾಗೂ ರಜನಿಕಾಂತ್‌ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಯಾರ ಪಾತ್ರ ಹೇಗಿರಲಿದೆ ಎಂಬುದು ಟೀಸರ್‌, ಟ್ರೇಲರ್‌ ಬಂದ ಮೇಲೆಯೇ ತಿಳಿಯಲಿದೆ. 

Tap to resize

Latest Videos

undefined

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಬೇಬಿ ಪ್ಲಾನಿಂಗ್ ಗುಟ್ಟು ರಟ್ಟಾಯ್ತು!

ಈಗ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಟೀಸರ್‌ ರೂಪದ ಈ ಈ ಗ್ಲಿಂಫ್ಸ್‌ ದೃಶ್ಯಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸನ್‌ ಪಿಕ್ಚೇರ್‌ ನಿರ್ಮಿಸಿ, ನೆಲ್ಸನ್‌ ದಿಲೀಪ್‌ಕುಮಾರ್‌ ನಿರ್ದೇಶಿಸಿರುವ ಈ ಚಿತ್ರದ ಬಹಳಷ್ಟು ಚಿತ್ರೀಕರಣ ಮಂಗಳೂರಿನ ಆಸುಪಾಸು ನಡೆದಿದೆ. ಕೇಂದ್ರ ಕಾರಾಗೃಹವೊಂದರಲ್ಲಿ 24 ಗಂಟೆಗಳ ಕಾಲ ನಡೆಯುವ ಕತೆಯನ್ನು ‘ಜೈಲರ್‌’ ಸಿನಿಮಾ ಒಳಗೊಂಡಿದೆ.
 

ಕಾಂತಾರ ಮನೆಯಲ್ಲೇ ಜೈಲರ್‌ ಶೂಟಿಂಗ್‌: ಸೂಪರ್‌ಸ್ಟಾರ್‌ ರಜನಿಕಾಂತ್‌, ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅಭಿನಯದ ‘ಜೈಲರ್‌’ ಚಿತ್ರಕ್ಕೆ ರಿಷಬ್‌ ಶೆಟ್ಟಿಅವರ ‘ಕಾಂತಾರ’ ಚಿತ್ರದಲ್ಲಿನ ರಾಜನ ದೃಶ್ಯ ಬರುವ ಅರಮನೆ ಜಾಗದಲ್ಲಿ ಚಿತ್ರೀಕರಣ ನಡೆದಿದೆ. ಕಳೆದ ಒಂದು ವಾರದಿಂದ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈಗ ಶೂಟಿಂಗ್‌ ಸ್ಪಾಟ್‌ನಿಂದ ಚಿತ್ರದ ಮೇಕಿಂಗ್‌ ಫೋಟೋಗಳು ಬಹಿರಂಗವಾಗಿವೆ. ಈ ಚಿತ್ರದಲ್ಲಿ ಸಾಧು ಕೋಕಿಲ ಕೂಡ ನಟಿಸುತ್ತಿದ್ದಾರೆ. ಇವರ ಜತೆಗೆ ತಮಿಳಿನ ಹಾಸ್ಯ ನಟ ಯೋಗಿ ಬಾಬು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. 

ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ಸನ್ ಪಿಕ್ಚರ್‌ ಕಲಾನಿತಿ ಮಾರನ್  ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್, ತಮನ್ನಾ ಮತ್ತು ರಮ್ಯಾ ಕೃಷ್ಣ ಅಭಿನಯಿಸುತ್ತಿದ್ದಾರೆ. 2022ರ ಫೆಬ್ರವರಿಯಲ್ಲಿ ಈ ಸಿನಿಮಾ ಮೊದಲ ಘೋಷಣೆ ಮಾಡಲಾಗಿತ್ತು. ರಜನಿ 169ನೇ ಸಿನಿಮಾ ಇದಾಗಿದ್ದು 2022ರ ಜೂನ್‌ನಲ್ಲಿ ಟೈಟಲ್ ಜೈಲರ್‌ ಎಂದು ರಿವೀಲ್ ಮಾಡಿದ್ದರು. ಆಗಸ್ಟ್‌ ತಿಂಗಳಿನಲ್ಲಿ ಸಿನಿಮಾ ಚಿತ್ರೀಕರಣ ಅರಂಭಿಸಿದ್ದರು. ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. 

Naga Chaitanya: ಸೀಕ್ರೆಟ್ ಕ್ರಶ್​ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಟಿ ಸಮಂತಾ ಮಾಜಿ ಪತಿ!

ಈ ಚಿತ್ರಕ್ಕೆ ಸದ್ಯ ಮಂಗಳೂರಿನ ಚಿತ್ರೀಕರಣ ಶೆಡ್ಯೂಲ್‌ ಮುಕ್ತಾಯ ಆಗಿದೆ. ಸಿನಿಮಾ ರಂಗು ಹೆಚ್ಚಿಸಲು ಸುನಿಲ್, ಜಾಕಿ ಶ್ರಾಫ್, ವಸಂತ್ ರವಿ, ವಿನಾಯಕನ್, ಯೋಗಿ ಬಾಬು ಡ್ಯಾನ್ಸರ್ ರಮೇಶ್‌ ಅಭಿನಯಿಸುತ್ತಿದ್ದಾರೆ. ಮಲಯಾಳಂ ಖ್ಯಾತ ನಟ ಮೋಹನ್‌ ಲಾಲ್‌ ಗೆಸ್ಟ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟೆಸ್ಟ್‌ ಶೂಟ್‌ ಚೆನ್ನೈನಲ್ಲಿ ನಡೆದಿದೆ. ಪ್ರಮುಖ ಭಾಗದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆದಿದೆ. ಕೆಲವೊಂದು ಸನ್ನಿವೇಶಗಳನ್ನು ಕಡಲೂರು ಮತ್ತು ಜೈಸಲ್ಮೇರ್‌ನಲ್ಲಿ ನಡೆದಿದೆ. ಈಗ ಹಳ್ಳಿ ದೃಶ್ಯವನ್ನು ಮಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. 

click me!