ಮದುವೆ ಬಗ್ಗೆ ನಟ ಕಾರ್ತಿಕ್ ಆರ್ಯನ್ ಸುಳಿವು ನೀಡಿದ್ದಾರೆ. ಅಭಿಮಾನಿಗಳು ದಯವಿಟ್ಟು ಕೃತಿ ಸನೊನ್‌ನ ಮದ್ವೆಯಾಗಿ ಎಂದು ಸಲಹೆ ನೀಡುತ್ತಿದ್ದಾರೆ.
ಬಾಲಿವುಡ್ ಸ್ಟಾರ್, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ಕಾರ್ತಿಕ್ ಆರ್ಯನ್ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಿರುತ್ತದೆ. ಡೇಟಿಂಗ್, ಪ್ರೀತಿ, ಪ್ರೇಮದ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ಕಾರ್ತಿರ್ ಆರ್ಯನ್ ಇದೀಗ ಮದುವೆ ಆಗುವ ಸೂಚನೆ ನೀಡಿದ್ದಾರೆ. ಕಾರ್ತಿಕ್ ಆರ್ಯನ್ ಮದುವೆ ಆಗುವ ಬಗ್ಗೆ ಯೋಚಿಸಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಕಾರ್ತಿಕ್ ಹೀಗೆ ಹೇಳುತ್ತಿದ್ದಂತೆ ಹುಡುಗಿ ಯಾರು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಯಾರಿರಬಹುದು ಎಂದು ಅನೇಕರು ಕಾಮೆಂಟ್ ಮಾಡಿ ಹೇಳುತ್ತಿದ್ದಾರೆ.
ಕಾರ್ತಿಕ್ ಕಾರ್ಯನ್ ಇತ್ತೀಚಿಗೆ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅಲ್ಲಿ ಮಾತಾಡಿದ್ದ ವಿಡಿಯೋ ಈಗ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ವಿಡಿಯೋದಲ್ಲಿ ಕಾರ್ತಿಕ್, 'ಮದುವೆ ಲಡ್ಡು ತಿಂದೇ ಬಿಡ್ತೀನಿ ಅಂತ ಯೋಚನೆ ಮಾಡಿದ್ದೀನಿ' ಎಂದು ಹೇಳಿದ್ದಾರೆ. ಮಾತು ಈಗ ವೈರಲ್ ಆಗಿದ್ದು ಕಾರ್ತಿಕ್ ಸದ್ಯದಲ್ಲೇ ಮದುವೆಯಾಗುತ್ತಿದೆ ಎನ್ನುವ ಮಾತು ಜೋರಾಗಿ ಕೇಳಿಬರುತ್ತಿದೆ. ಅಂದಹಾಗೆ ಕಾರ್ತಿಕ್ ಮದುವೆಯಾಗುತ್ತಿರುವ ಹುಡುಗಿ ಯಾರು ಎನ್ನುವ ಕುತೂಹಲದ ಜೊತೆಗೆ ಅಭಿಮಾನಿಗಳು ಬಾಲಿವುಡ್ ಸ್ಟಾರ್ ನಟಿಯ ಹೆಸರನ್ನು ಸೂಚಿಸುತ್ತಿದ್ದಾರೆ.
ವಿಡಿಯೋಗೆ ಅಭಿಮಾನಿಗಳು ಕೃತಿ ಸನೊನ್ ಅವರನ್ನು ಅವರನ್ನು ಮದುವೆಯಾಗಿ ಎಂದು ಹೇಳುತ್ತಿದ್ದಾರೆ. 'ಸರ್ ನೀವು ಮದುವೆಯಾಗಲು ಬಯಸಿದರೆ ದಯವಿಟ್ಟು ಕೃತಿ ಸನೋನ್ ಮಾಮ್ ಜೊತೆ ಮದುವೆಯಾಗಿ' ಎಂದು ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದಾನೆ. 'ಭಗವಾನ್ ಕೃತಿ ಜೊತೆಯೇ ಮದುವೆ ಮಾಡಿಸಿ' ಎಂದು ಮತ್ತೋರ್ವರು ಕೇಳಿಕೊಂಡಿದ್ದಾರೆ. ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿ, 'ನೀವು ಈಗಾಗಲೇ ನನ್ನ ಮನಸ್ಸಿನಲ್ಲಿ ಕೃತಿನಾ ಮದುವೆ ಆಗಿದ್ದೀರಿ' ಎಂದು ಹೇಳಿದ್ದಾರೆ. ಅನೇಕರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಬಹುತೇಕರು ಹೇಳಿದ್ದು ಕೃತಿನ ಮದುವೆ ಆಗಿ ಎಂದು ಸೂಚಿಸುತ್ತಿದ್ದಾರೆ.
2020 ನನ್ನ ಜೀವನದ ಕೆಟ್ಟ ಹಂತ, ಬ್ರೇಕಪ್‌ನಿಂದ ಆರಂಭವಾಯ್ತು; ಸಾರಾ ಅಲಿ ಖಾನ್
ಆದರೆ ಕಾರ್ತಿಕ್ ಮದುವೆಯಾಗುತ್ತಿರುವ ಸುಂದರಿ ಯಾರು ಎನ್ನುವ ಬಗ್ಗೆ ಬಹಿರಂಗ ಪಡಿಸಿಲ್ಲ. ಅಂದಹಾಗೆ ಕಾರ್ತಿಕ್ ಹೆಸರು ಅನೇಕ ನಟಿಯರ ಜೊತೆ ಕೇಳಿ ಬಂದಿತ್ತು. ಸಾರಾ ಅಲಿ ಖಾನ್, ಜಾನ್ವಿ ಕಪೂರ್, ಅನನ್ಯಾ ಪಾಂಡೆ ಹೀಗೆ ನಟಿಯರ ಜೊತೆ ಡೇಟಿಂಗ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ಕೃತಿ ಜೊತೆ ಕಾರ್ತಿಕ್ ಹೆಸರು ಕೇಳಿಬರುತ್ತಿದ್ದು ಅವರನ್ನೇ ಮದುವೆ ಆಗಲಿ ಎನ್ನುವುದು ಸಹ ಅಭಿಮಾನಿಗಳ ಆಸೆಯಾಗಿದೆ.
ನೋ ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿದ ಕಾರ್ತಿಕ್ ಆರ್ಯನ್; ವ್ಯಂಗ್ಯವಾಡಿದ ಮುಂಬೈ ಪೊಲೀಸ್
ಶೆಹಜಾದಾ ನಟ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಕಾರ್ತಿಕ್ ಶೆಹಜಾದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾದಲ್ಲಿ ಕೃತಿ ಸನೊನ್ ಜೊತೆ ರೊಮ್ಯಾನ್ಸ್ ಮಾಡಿದ್ದರು. ಆದರೆ ಶೆಹಜಾದಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಸದ್ಯ ಕಾರ್ತಿಕ್ ಸತ್ಯ ಪ್ರೇಮ್ ಕಿ ಕತಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಕಿಯಾರಾ ಜೊತೆ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.