ಕೊಲೆ ಬೆದರಿಕೆಯಿಂದ ಹೆದರಿದ ಖಾನ್ ಕುಟುಂಬ; ನಿದ್ದೆ ಇಲ್ಲದ ರಾತ್ರಿ ಕಳೆಯುತ್ತಿರುವ ಸಲ್ಮಾನ್ ತಂದೆ

Published : Mar 21, 2023, 12:36 PM IST
ಕೊಲೆ ಬೆದರಿಕೆಯಿಂದ ಹೆದರಿದ ಖಾನ್ ಕುಟುಂಬ; ನಿದ್ದೆ ಇಲ್ಲದ ರಾತ್ರಿ ಕಳೆಯುತ್ತಿರುವ ಸಲ್ಮಾನ್ ತಂದೆ

ಸಾರಾಂಶ

ಕೊಲೆ ಬೆದರಿಕೆಯಿಂದ ಖಾನ್ ಕುಟುಂಬ ಹೆದರಿದೆ. ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ನಿದ್ದೆ ಇಲ್ಲದ ರಾತ್ರಿ ಕಳೆಯುತ್ತಿದ್ದಾರೆ ಎನ್ನಲಾಗಿದೆ. 

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸದ್ಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿದೆ. ಈ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಸಲ್ಮಾನ್ ಖಾನ್ ಬ್ಯುಸಿಯಾಗಿದ್ದಾರೆ. ಆದರೆ ಈ ನಡುವೆ ಸಲ್ಮಾನ್ ಖಾನ್ ಬೇರೆಯದ್ದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕೊಂದೇ ತೀರುತ್ತೀನಿ ಎಂದು ಮತ್ತೊಮ್ಮೆ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಬೆದರಿಕೆ ಹಾಕಿದ್ದಾನೆ. ಸಲ್ಲುನ ಕೊಲ್ಲಲು ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಈ ಮೊದಲೇ ಸ್ಕೆಚ್ ಹಾಕಿದ್ದ. ಆದರೀಗ ಮತ್ತೆ ಬೆದರಿಕೆ ಹಾಕಿದ್ದಾನೆ. ಇದು ಸಹಜವಾಗಿ ಸಲ್ಮಾನ್ ಖಾನ್ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ  ಆತಂಕ ಮೂಡಿಸಿದೆ. 

ಇಮೇಲ್ ಮೂಲಕ ಬೆದರಿಕೆ ಹಾಕಿರುವ ಬಿಷ್ಣೋಯ್,  ದಬಾಂಗ್ ಖಾನ್‌ನನ್ನು ಖುದ್ದಾಗಿ ಭೇಟಿ ಮಾಡುತ್ತೇನೆ. ಅವರನ್ನು ಕೊಂದೆ ಕೊಲ್ಲುತ್ತೇನೆ ಎಂದು ಹೇಳಿದ್ದಾನೆ ಎನ್ನಲಾಗಿದೆ. ಬೆದರಿಕೆ ಬಳಿಕ ಸಲ್ಮಾನ್ ಖಾನ್ ಕುಟುಂಬ ಸುರಕ್ಷತೆ ಬಗ್ಗೆ  ಚಿಂತೆಗೀಡಾಗಿದೆ ಎನ್ನಲಾಗಿದೆ. ಆದರೆ ಸಲ್ಮಾನ್ ಖಾನ್ ಇಂಥ ಬೆದರಿಕೆಗೆಲ್ಲಾ ಹೆದರಲ್ಲ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. 

'ಸಲ್ಮಾನ್ ಖಾನ್ ಈ ಬೆದರಿಕೆಯನ್ನು ಕ್ಯಾಶ್ವಲ್ ಆಗಿ ತೆಗೆದುಕೊಂಡಿದ್ದಾರೆ ಅಥವಾ ಅವರ ಕುಟುಂಬದವರು ಗಾಬರಿಯಾಗುತ್ತಾರೆ ಎನ್ನುವ ಕಾರಣಕ್ಕೆ ನಾರ್ಮಲ್ ಆಗಿ ಇರುವಂತೆ ವರ್ತಿಸುತ್ತಿರಬಹುದು. ಈ ಕುಟುಂಬದಲ್ಲಿ ಯಾರು ಅವರ ನಿಜವಾದ ಆತಂಕ ಹೊರ ಹಾಕದೇ ಇರುವುದು. ಹಾಗಾಗಿ ಸಲ್ಮಾನ್ ಖಾನ್ತಂದೆ ಸಲೀಮ್ ಖಾನ್ ಅವರು ಹೊರನೋಟಕ್ಕೆ ತುಂಬಾ ಶಾಂತವಾಗಿ ಇರುವಂತೆ ಕಾಣುತ್ತಾರೆ. ಆದರೆ ಸಲೀಮ್ ಅವರು ಈ ಬೆದರಿಕೆ ಕರೆಯಿಂದ ನಿದ್ದೆಯಿಲ್ಲದೆ ರಾತ್ರಿಗಳನ್ನು ಕಳೆಯುತ್ತಿದ್ದಾರೆ ಎನ್ನುವುದು ಇಡೀ ಕುಟುಂಬಕ್ಕೆ ಗೊತ್ತಿದೆ' ಎಂದು ಮೂಲಗಳು ತಿಳಿಸಿವೆ. 

ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ; ಕೊಂದೇ ತೀರುತ್ತೇನೆ ಎಂದ ಗ್ಯಾಂಗ್‌ಸ್ಟರ್

ಸುರಕ್ಷತೆಯ ಬಗ್ಗೆ ಸೂಪರ್‌ಸ್ಟಾರ್ ಕುಟುಂಬ ಚಿಂತಿಸುತ್ತಿದೆ. ಆದರೆ ಸಲ್ಮಾನ್ ಖಾನ್ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ ಎನ್ನಲಾಗಿದೆ. 'ಸಲ್ಮಾನ್ ಬೆದರಿಕೆಯ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ ಎಂದು ಭಾವಿಸುತ್ತಾರೆ ಆದರೆ ಇಲ್ಲ. ಅವರು ಏನು ಆಗಬೇಕೋ ಅದು ಆಗುತ್ತೆ ಎಂದು ನಂಬಿದವರು. ಹಾಗಿದ್ದರೂ ಕುಟುಂಬದ ಒತ್ತಡದಿಂದಾಗಿ ಅವರು ತಮ್ಮ ಈದ್ ಬಿಡುಗಡೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಹೊರತುಪಡಿಸಿ ಎಲ್ಲಾ ಪ್ರವಾಸಗಳನ್ನು ರದ್ದು ಮಾಡಿದ್ದಾರೆ. ಯಾವುದನ್ನು ವಿಳಂಬ ಮಾಡಲಾಗುವುದಿಲ್ಲ' ಎಂದು ಹೇಳಿದ್ದಾರೆ. 

ಸಲ್ಮಾನ್ ಖಾನ್ ತುಂಬಾ ಸರಳ ವ್ಯಕ್ತಿ ಆದರೆ ಜನರು ತಪ್ಪಾಗಿ ತಿಳಿದುಕೊಂಡಿದ್ದಾರೆ; ನಿರ್ದೇಶಕ ಮುಕೇಶ್ ಛಾಬ್ರಾ

2022ರ ಮೇ 29 ರಂದು ಪಂಜಾಬ್‌ನ ಮಾನ್ಸಾ ಬಳಿ ಗಾಯಕ ಸಿಧು ಮೂಸೆ ವಾಲಾ ಅವರನ್ನು ಗುಂಡಿಕ್ಕಿ ಕೊಂದ ಕೆಲವೇ ದಿನಗಳ ನಂತರ ಜೂನ್ ಆರಂಭದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಕೊಲೆ ಬೆದರಿಕೆ ಕರೆ ಬಂದಿದ್ದು. ಸಲ್ಮಾನ್​ ಖಾನ್​ ಜೀವ ಬೆದರಿಕೆ ಹಿನ್ನೆಲೆಯಲ್ಲಿ  ಹೊಸದಾಗಿ ಬುಲೆಟ್ ಫ್ರೂಪ್ ಕಾರ್ ಅನ್ನು ಖರೀದಿಸಿದ್ದರು.  ಬಾಡಿಗಾರ್ಡ್‌ಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದ್ದರು. ಬೆದರಿಕೆ ಹಿನ್ನೆಲೆಯಲ್ಲಿ ಅನಗತ್ಯವಾಗಿ ವಿವಿಧ ಕಾರ್ಯಕ್ರಮಗಳಲ್ಲೂ ಭಾಗಿಯಾಗಿರಲಿಲ್ಲ.  ಟೈಗರ್ 3 ಚಿತ್ರೀಕರಣಕ್ಕೂ  ಅವರು ಬುಲೆಟ್ ಫ್ರೂಪ್ ಕಾರ್ ಅನ್ನು ತೆಗೆದುಕೊಂಡೇ ಹೋಗುತ್ತಿದ್ದರು.  ಇದೀಗ ಮತ್ತೆ ಬೆದರಿಕೆ ಹಾಕಿರುವುದು ಸಹಜವಾಗಿ ಆತಂಕ ಹೆಚ್ಚಾಗಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?