ಬೆಂಗಳೂರು(ಮೇ.24): ದೇಶ ಹಾಗೂ ವಿದೇಶದಲ್ಲಿ ಧೂಳೆಬ್ಬಿಸಿದ ಯಶ್ ಅಭಿನಯದ ಕೆಜಿಎಪ್ 2 ಚಿತ್ರ ಬಾಕ್ಸ್ ಆಫೀಸ್‌ನಲ್ಲೂ ದಾಖಲೆ ಬರೆದಿದೆ. ಆದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆ ಮಾಡದಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದೆ.
ಬೆಂಗಳೂರಿನ ಕ್ಯಾನ್ಸರ್ ರೋಗಿಗಳ ನೆರವು ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿತ್ತು. ಕೆಜಿಎಫ್-2 ಚಿತ್ರದಲ್ಲಿ ಧೂಮಪಾನ ವಿಜೃಂಭಿಸಲಾಗಿದೆ. ಚಿತ್ರದಲ್ಲಿ ಸಮಾಜಕ್ಕೆ ಪೂರಕವಾದ ಯಾವುದೇ ಅಂಶಗಳಿಲ್ಲ. ಸಮಾಜದ ಕಳಕಳಿ ಚಿತ್ರೀಕರಿಸಿಲ್ಲ. ಚಿತ್ರ ಬಿಡುಗಡೆಯಾದರೆ ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
39 ದಿನದಲ್ಲಿ ಗಳಿಸಿದ್ದೆಷ್ಟು? ಹಲವು ದಾಖಲೆಗಳು ಉಡೀಸ್
ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು. ಈಗಾಗಲೇ ಕೆಜಿಎಪ್ 2 ಚಿತ್ರ ಬಿಡುಗಡೆಯಾಗಿದೆ. ಹೀಗಾಗಿ ಇದರಿಂದ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ ವಾದ ಮಂಡಿಸಲಾಗಿತ್ತು. ಸರ್ಕಾರದ ಪರ ವಿಜಯಕುಮಾರ್ ಪಾಟೀಲ್ ವಾದ ಮಂಡಿಸಿದ್ದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೆಜಿಎಫ್ 2 ಚಿತ್ರವನ್ನು ತಡೆ ಹಿಡಿದು ಯು/ಎ ಸೆನ್ಸಾರ್ ಪ್ರಮಾಣ ಪತ್ರ ಹಿಂಪಡೆಯುವಂತೆ ಕೇಂದ್ರ ಸೆನ್ಸಾರ್ ಮಂಡಳಿಗೆ ನಿರ್ದೇಶಿಸಬೇಕುಂದು ಕೋರಲಾಗಿತ್ತು. ವಾದ ಆಲಿಸಿದ ವಿಭಾಗೀಯ ಪೀಠ ಅರ್ಜಿ ವಜಾ ಮಾಡಿತು.
1200 ಕೋಟಿ ಕ್ಲಬ್ ಸೇರಿದ ಕೆಜಿಎಫ್ 2
ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ ವಿಶ್ವಮಟ್ಟದಲ್ಲಿ 1200 ಕೋಟಿ ರು. ಕ್ಲಬ್ ಸೇರಿದೆ. ಈ ಸಾಧನೆ ಮಾಡಿರುವ ಮೂರನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಕೆಜಿಎಫ್ 2’ ಚಿತ್ರ ಬಿಡುಗಡೆಯಾಗಿ 33 ದಿನಗಳಾಗಿವೆ. ಅಮೀರ್ ಖಾನ್ ನಟನೆಯ ‘ದಂಗಲ್’ ಚಿತ್ರ 2100 ಕೋಟಿ ರು. ಗಳಿಕೆ ಮಾಡಿದರೆ, ಬಾಹುಬಲಿ 2 ಸಿನಿಮಾ 1,810 ಕೋಟಿ ರು. ಗಳಿಕೆ ಮಾಡಿತ್ತು.
ಬರ್ತ್‌ಡೇ ಸೆಲೆಬ್ರೇಶನ್‌ಗೆ ರಾಕಿಭಾಯ್ ಇನ್ವೈಟ್ ಮಾಡಿದ ಕರಣ್ ಜೋಹರ್!
ಭಾರತದಲ್ಲಿ ರು.1000 ಕೋಟಿ ಗಳಿಕೆ ದಾಖಲಿಸಿದ ಎರಡನೇ ಸಿನಿಮಾ ಎಂಬ ಕೀರ್ತಿ ಕೆಜಿಎಫ್ 2ಗೆ ಇದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2 ಇದೆ.
ಅಮೆಜಾನ್ ಪ್ರೈಮ್‌ನಲ್ಲಿ ಕೆಜಿಎಫ್ 2
‘ಕೆಜಿಎಫ್ 2’ ಚಿತ್ರವನ್ನು ಅಮೆಜಾನ್ ಪ್ರೈಮ್‌ನಲ್ಲಿ ಪ್ರಸ್ತುತ ‘ಮೂವಿ ರೆಂಟಲ್ ಪ್ಲಾನ್’ ನಲ್ಲಿ 199 ರು. ಪಾವತಿಸಿ ನೋಡಬಹುದು. ಇಷ್ಟುಹಣ ಪಾವತಿ ಮಾಡಿದರೆ ‘ಕೆಜಿಎಫ್ 2’ ಚಿತ್ರ ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಸಿಗುತ್ತವೆ. ಒಂದು ತಿಂಗಳ ಅವಧಿ ಇರುತ್ತದೆ.
5.5 ಕೋಟಿಗೂ ಅಧಿಕ ಜನರಿಂದ ಕೆಜಿಎಫ್ 2 ವೀಕ್ಷಣೆ
ಯಶ್ ನಟನೆಯ ‘ಕೆಜಿಎಫ್ 2’ ಚಿತ್ರವನ್ನು 26 ದಿನಗಳಲ್ಲಿ 5.5 ಕೋಟಿಗೂ ಅಧಿಕ ಜನ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇದು ದಾಖಲೆಯ ವೀಕ್ಷಣೆಯಾಗಿದೆ. ಚಿತ್ರ ಈವರೆಗೆ 1160 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ 70 ಲಕ್ಷ, ತಮಿಳ್ನಾಡಿನ ಸುಮಾರು 70 ಲಕ್ಷ ಜನ, ಆಂಧ್ರಪ್ರದೇಶ, ತೆಲಂಗಾಣದಲ್ಲಿ 85 ಲಕ್ಷ ಜನ, ಕೇರಳದಲ್ಲಿ 45 ಲಕ್ಷ ಮಂದಿ ಈ ಚಿತ್ರ ವೀಕ್ಷಿಸಿದ್ದಾರೆ. ಒಟ್ಟಾರೆ ದಕ್ಷಿಣ ಭಾರತದಲ್ಲಿ 2.70 ಕೋಟಿಗೂ ಹೆಚ್ಚು ಜನ ಈ ಸಿನಿಮಾ ನೋಡಿದ್ದಾರೆ. ಉತ್ತರ ಭಾರತದಲ್ಲಿ 2.35 ಕೋಟಿಗೂ ಅಧಿಕ ಮಂದಿ ‘ಕೆಜಿಎಫ್ 2’ ಚಿತ್ರವನ್ನು ಥಿಯೇಟರ್‌ನಲ್ಲಿ ವೀಕ್ಷಿಸಿದ್ದಾರೆ.