ಕಂಗನಾ 'ಧಾಕಡ್'ಗೆ ಹೀನಾಯ ಸೋಲು; ಚಿತ್ರಮಂದಿರಗಳಿಂದ ಕಿತ್ತೆಸೆದು ಕಾರ್ತಿಕ್ ಆರ್ಯನ್ ಸಿನಿಮಾ ಪ್ರದರ್ಶನ

By Shruiti G Krishna  |  First Published May 24, 2022, 3:04 PM IST

ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್(Kangana Ranaut) ನಟನೆಯ ಧಾಕಡ್(Dhakad) ಸಿನಿಮಾ ಮೇ 20ರಂದು ಬಿಡುಗಡೆಯಾಗಿದೆ. ಅದೇ ದಿನ ಬಾಲಿವುಡ್ ನಟ ಕಾರ್ತಿಕ್ ಆರ್ಯನ್(Kartik Aaryan) ಅಭಿನಯದ ಭೂಲ್ ಭುಲೈಯಾ-2(Bhool Bhulaiyaa 2) ಸಿನಿಮಾ ಕೂಡ ಚಿತ್ರಮಂದಿರಕ್ಕೆ ಬಂದಿದೆ. ಆದರೆ ಕಾರ್ತಿಕ್ ಆರ್ಯನ್ ನಟನೆಯ ಭೂಲ್ ಭುಲೈಯಾ-2 ಸಿನಿಮಾ ಮುಂದೆ ಕಂಗನಾ ನಟನೆಯ ಧಾಕಡ್ ಸಿನಿಮಾ ಹೀನಾಯ ಸೋತಿದೆ.


ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್(Kangana Ranaut) ನಟನೆಯ ಧಾಕಡ್(Dhakad) ಸಿನಿಮಾ ಮೇ 20ರಂದು ಬಿಡುಗಡೆಯಾಗಿದೆ. ಅದೇ ದಿನ ಬಾಲಿವುಡ್ ನಟ ಕಾರ್ತಿಕ್ ಆರ್ಯನ್(Kartik Aaryan) ಅಭಿನಯದ ಭೂಲ್ ಭುಲೈಯಾ-2(Bhool Bhulaiyaa 2) ಸಿನಿಮಾ ಕೂಡ ಚಿತ್ರಮಂದಿರಕ್ಕೆ ಬಂದಿದೆ. ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರುವ ಮೂಲಕ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಈ ಎರಡು ಸಿನಿಮಾಗಳಲ್ಲಿ ಯಾವ ಸಿನಿಮಾಗೆ ಪ್ರೇಕ್ಷಕರು ಜೈ ಎನ್ನುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದರು. ಆದರೆ ಕಾರ್ತಿಕ್ ಆರ್ಯನ್ ನಟನೆಯ ಭೂಲ್ ಭುಲೈಯಾ-2 ಸಿನಿಮಾ ಮುಂದೆ ಕಂಗನಾ ನಟನೆಯ ಧಾಕಡ್ ಸಿನಿಮಾ ಹೀನಾಯ ಸೋತಿದೆ.

ಕಾರ್ತಿಕ್ ನಟನೆಯ ಭೂಲ್ ಭುಲೈಯಾ-2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಆದರೆ ಕಂಗನಾ ಸಿನಿಮಾ ಧಾಕಡ್ ನೆಲಕಚ್ಚಿದೆ. ಧಾಕಡ್ ಸಿನಿಮಾ ನೋಡಲು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರೇ ಇಲ್ಲ. ಖಾಲಿ ಖಾಲಿ ಇದ್ದ ಚಿತ್ರಮಂದಿರಗಳಲ್ಲಿ ಈಗ ಕಾರ್ತಿಕ್ ಆರ್ಯನ್ ಭೂಲ್ ಭುಲೈಯಾ-2 ಪ್ರದರ್ಶನ ಮಾಡಲಾಗುತ್ತಿದೆ. ತೀರಾ ಕಡಿಮೆ ಜನ ಇದ್ದ ಕಾರಣ ಸಿಂಗಲ್ ಸ್ಕ್ರೀನ್ ಗಳಲ್ಲಿ ಧಾಕಡ್ ಬದಲಿಗೆ ಭೂಲ್ ಭುಲೈಯಾ-2 ಸಿನಿಮಾ ಹಾಕಲಾಗಿದೆ.

Tap to resize

Latest Videos

ಮುಂಬೈನ ಐಕಾನಿಕ್ ಸಿನಿಮಮಾಮಂದಿರ ಮರಾಠ ಚಿತ್ರಮಂದಿರದಲ್ಲಿ ಧಾಕಡ್ ಒಂದು ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಅದನ್ನು ರದ್ದು ಮಾಡಲಾಗಿದ್ದು ಭೂಲ್ ಭುಲೈಯಾ-2 ಸಿನಿಮಾ ಹಾಕಲಾಗಿದೆ.

ಧಾಕಡ್ v/s ಭೂಲ್ ಭುಲೈಯಾ-2; ಕಾರ್ತಿಕ್ ಆರ್ಯನ್ ಮುಂದೆ ಮಂಡಿಯೂರಿದ ಕಂಗನಾ

ಕಂಗನಾ ರಣಾವತ್ ನಟನೆಯ ಧಾಕಡ್ ಅತ್ಯಂತ ಕಡಿಮೆ ಕಲೆಕ್ಷನ್ ಮಾಡುವ ಮೂಲಕ ಹೀನಾಯ ಸೋತಿದೆ. ಮೊದಲ ವೀಕೆಂಡ್ ನಲ್ಲಿ ಧಾಕಡ್ ಸಿನಿಮಾ 3 ಕೋಟಿ ರೂಪಾಯಿ ಗಳಿಕೆ ಮಾಡಿದೆಯಷ್ಟೆ. ಸೋಮವಾರ ಕೇವಲ 30 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಧಾಕಡ್ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ತಯಾರಾದ ಸಿನಿಮಾವಾಗಿದೆ. ಒಟ್ಟಾಗೆ 5 ಕೋಟಿ ರೂಪಾಯಿ ಕಲೆಕ್ಷನ್ ಆಗುವುದು ಅನುಮಾನವಾಗಿದೆ. ಈಗಾಗಲೇ ಚಿತ್ರಮಂದಿರಗಳಿಂದ ಎತ್ತಂಗಡಿ ಆಗುತ್ತಿರುವ ಕಾರಣ ಕಲೆಕ್ಷನ್ ಮತ್ತಷ್ಟು ಕಮ್ಮಿ ಆಗಲಿದೆ.

Kangana Ranaut ವೃತ್ತಿಜೀವನದ ಅತ್ಯಂತ ಕಳಪೆ ಓಪನರ್ Dhaakad

ಧಾಕಡ್ ಸೋಲಿನ ಮೂಲಕ ಕಂಗನಾ ಸರಣಿ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಪಂಗ, ತಲೈವಿ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದ್ದವು. ಇದೀಗ ಧಾಕಡ್ ಕೂಡ ಅದೇ ಲಿಸ್ಟ್ ಗೆ ಸೇರಿದೆ. ಅಂದಹಾಗೆ ಕಾರ್ತಿಕ್ ಆರ್ಯನ್ ಸಿನಿಮಾ ಈಗಾಗಲೇ 66 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೊದಲ ವೀಕಂಡ್ ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಸದ್ಯದಲ್ಲೇ ಸಿನಿಮಾ 100 ಕೋಟಿ ಕ್ಲಬ್ ಸೇರಲಿದೆ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಕಾರ್ತಿಕ್ ಆರ್ಯನ್ ಭೂಲ್ ಭುಲೈಯಾ-2 ಸಿನಿಮಾ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಅಂದಹಾಗೆ ಬಾಲಿವುಡ್ ನಲ್ಲಿ ಇತ್ತೀಚಿಗೆ ರಿಲೀಸ್ ಆದ ಬಚ್ಚನ್ ಪಾಂಡೆ, ಜುಂದ್, ಅಟ್ಯಾಕ್, ಜೆರ್ಸಿ, ರನ್ ವೇ 34 ಮತ್ತು ಹೀರೋಪಂಕ್ತಿ-2 ಸೇರಿದಂತೆ ಅನೇಕ ಸಾಲು ಸಾಲು ಸಿನಿಮಾಗಳು ಸೋತಿವೆ. ಇದೀಗ ಧಾಕಡ್ ಕೂಡ ಅದೇ ಸಾಲಿಗೆ ಸೇರಿದೆ. ಆದರೆ ಈ ಎಲ್ಲಾ ಸಿನಿಮಾಗಳ ಸೋಲಿನ ನಡುವೆ ಕಾರ್ತಿಕ್ ಆರ್ಯನ್ ಅವರ ಭೂಲ್ ಭೂಲೈಯಾ-2 ಗೆದ್ದು ಬೀಗಿದೆ.

click me!