ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ಅವರ ಎಂಗೇಜ್ಮೆಂಟ್ನ ಹಳೆಯ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಜಯಾ ಬಚ್ಚನ್ ಹೊಸ ಸೊಸೆಯನ್ನು ಪರಿಚಯಿಸಿದ್ದು ಹೀಗೆ...
ಸದ್ಯ ಬಿ-ಟೌನ್ನಲ್ಲಿ ಹಾಟ್ ಟಾಪಿಕ್ ಎಂದರೆ ನಟರಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಯ ವಿಚ್ಛೇದನ ವಿಷಯ. ಈ ಸಂದರ್ಭದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ನಟಿ ಕರಿಷ್ಮಾ ಕಪೂರ್. ಇದಕ್ಕೆ ಕಾರಣವೂ ಇದೆ. ಐಶ್ವರ್ಯರೈ ಜೊತೆ ಲವ್ಗೆ ಬೀಳುವ ಮುನ್ನ ಅಭಿಷೇಕ್ ಅವರು ಕರಿಷ್ಮಾ ಕಪೂರ್ ಜೊತೆ ಸಂಬಂಧದಲ್ಲಿದ್ದರು. ಇವರಿಬ್ಬರೂ ಮದುವೆಯಾಗುತ್ತಾರೆ ಎಂದೇ ಹೇಳಲಾಗಿತ್ತು. 2002ರಲ್ಲಿ ಜಯಾ ಬಚ್ಚನ್ ಅವರು ತಮ್ಮ ಹೊಸ ಸೊಸೆ ಕರಿಷ್ಮಾ ಕಪೂರ್ ಎಂದು ಆಕೆಯ ಪರಿಚಯವನ್ನೂ ಸಾರ್ವಜನಿಕವಾಗಿಸಿದ್ದರು. ಬಚ್ಚನ್ ಕುಟುಂಬಕ್ಕೆ ಕಪೂರ್ ಫ್ಯಾಮಿಲಿಯಾಕೆಯನ್ನು ಸೊಸೆಯಾಗಿ ಸ್ವೀಕರಿಸುತ್ತಿದ್ದೇವೆ. ಈಕೆ ನಮ್ಮ ಮನೆಯ ಹೊಸ ಅತಿಥಿ ಎಂದು ಕರಿಷ್ಮಾರನ್ನು ಕರೆದಿದ್ದರು. ಆಗ ಕರಿಷ್ಮಾ ಮತ್ತು ಅಭಿಷೇಕ್ ಅವರ ಮೊಗದಲ್ಲಿ ಖುಷಿ ಇರುವುದನ್ನು ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ ನೋಡಬಹುದು.
ಆದರೆ ಅದೇನಾಯಿತೋ, ಸಂಬಂಧ ಮುರಿದು ಬಿತ್ತು. ಐಶ್ವರ್ಯ ರೈ ಜೊತೆ ಮದುವೆಯಾಯಿತು. ಐಶ್ವರ್ಯ ಜೊತೆಗಿನ ಮದುವೆ ಅಮಿತಾಭ್ ಅವರ ಪುತ್ರಿ ಶ್ವೇತಾ ಅವರಿಗೆ ಇಷ್ಟವಿರಲಿಲ್ಲ. ಅವರಿಗೆ ಅಭಿಷೇಕ್ ಅವರ ಮಾಜಿ ಲವರ್ ಕರಿಷ್ಮಾ ಕಪೂರ್ ಅವರನ್ನು ಅಣ್ಣನಿಗೆ ಕೊಟ್ಟು ಮದ್ವೆ ಮಾಡಿಸಬೇಕು ಎಂದುಕೊಂಡಿದ್ದರು. ಹೀಗೆ ಬಚ್ಚನ್ ಕುಟುಂಬದ ಕೆಲವರ ವಿರೋಧದ ನಡುವೆ ಐಶ್-ಅಭಿ ಮದುವೆ ನಡೆದಿತ್ತು. ಆದರೆ ಇಷ್ಟು ವರ್ಷಗಳ ಬಳಿಕ ಇಬ್ಬರ ನಡುವೆ ವಿಚ್ಛೇದನದ ಸುದ್ದಿ ಸುಳಿದಾಡುತ್ತಿದೆ. ಇದು ಬಹುತೇಕ ಫಿಕ್ಸ್ ಎನ್ನುವುದಾಗಿ ಬಿ-ಟೌನ್ ಹೇಳುತ್ತಿದೆ. ಆದರೆ ಅಧಿಕೃತವಾಗಿ ಯಾವುದೇ ಸುದ್ದಿ ಹೊರ ಬಂದಿಲ್ಲ.
ಟಬು ಮದ್ವೆಯಾಗದೇ ಇರೋದಕ್ಕೆ ಅಜಯ್ ದೇವಗನ್ ಕಾರಣನಾ? ಸಂದರ್ಶನದಲ್ಲಿ ಇಬ್ಬರೂ ಹೇಳಿದ್ದೇನು?
ಇದರ ನಡುವೆಯೇ, ಅಭಿಷೇಕ್ ಅವರ ಹೆಸರು, ನಟಿ ನಮ್ರತಾ ಕೌರ್ ಜೊತೆ ಕೇಳಿಬರುತ್ತಿದೆ. ಐಷ್-ಅಭಿ ಸಂಬಂಧ ಹಳಸಲು ನಟಿ ನಿಮ್ರತ್ ಕೌರ್ ಎನ್ನುವ ವಿಷಯ ಭಾರಿ ಸದ್ದು ಮಾಡುತ್ತಿದೆ. ದಸ್ವಿ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಲವ್ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಐಶ್ ಮತ್ತು ಅಭಿ ದಾಂಪತ್ಯದ ಬಿರುಕಿಗೆ ಇವರೇ ಕಾರಣ ಎಂದೂ ಹೇಳಲಾಗುತ್ತಿದೆ. ಆದರೆ ಇದುವರೆಗೂ ಅಭಿಷೇಕ್ ಬಚ್ಚನ್ ಆಗಲಿ ಐಶ್ವರ್ಯ ರೈ ಆಗಲಿ, ಅಥವಾ ಆರೋಪ ಹೊತ್ತಿರುವ ನಿಮ್ರತ್ ಕೌರ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ನಿಮ್ರತ್ ಕೌರ್ ಇವರ ಜೀವನದಲ್ಲಿ ಹುಳಿ ಹಿಂಡಿದ್ದು ನಿಜಾ ಎಂದು ಅಭಿಪ್ರಾಯ ವ್ಯಕ್ತವಾಗ್ತಿರೋ ಬೆನ್ನಲ್ಲೇ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋ ಎಂಪಿ4ವಾಲ್ಟ್ ಇಂಡಿಯಾ ಇನ್ಸ್ಟಾಗ್ರಾಮ್ ಖಾತೆಲ್ಲಿ ಶೇರ್ ಆಗಿದೆ.
ಇದು ಒಂದೆಡೆಯಾದರೆ, ನಟಿ ಕರಿಷ್ಮಾ ಕಪೂರ್ (Karisma Kapoor) ಅವರ ದಾಂಪತ್ಯ ಜೀವನ ಕರಾಳವಾದದ್ದು. ಸಿನಿ ಕೆರಿಯರ್‌ನ ಉತ್ತುಂಗದಲ್ಲಿ ಇದ್ದಾಗಲೇ 2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಜೊತೆಗೆ ಕರಿಷ್ಮಾ ಮದುವೆಯಾದರು. ಆದರೆ ಮದುವೆ ಜೀವನ ತಾನು ಅಂದುಕೊಂಡ ಹಾಗೆ ಇರಲಿಲ್ಲ. ನಂತರ 2016ರಲ್ಲಿ ಕರಿಷ್ಮಾ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಕರಿಷ್ಮಾ ಕಪೂರ್ ಪತಿ ಆಕೆಯನ್ನು ಹರಾಜು ಹಾಕಲು ಮುಂದಾಗಿದ್ದರಂತೆ. ಹನಿಮೂನ್ ನಲ್ಲಿ ಇದ್ದಾಗಲೆ ಕರಿಷ್ಮಾ ಅವರನ್ನು ಆಕೆಯ ಪತಿ ಸಂಜಯ್ ಕಪೂರ್ ಹರಾಜು ಮಾಡಲು ಯತ್ನಿಸಿದ್ದ ವಿಷಯವನ್ನೂ ನಟಿ ತಿಳಿಸಿದ್ದರು. 13 ವರ್ಷದ ಕಹಿ ದಾಂಪತ್ಯಕ್ಕೆ ಕರಿಷ್ಮಾ ಎಳ್ಳು ನೀರು ಬಿಟ್ಟರು. 2016ರಲ್ಲಿ ಪತಿ ಇಂದ ವಿಚ್ಛೇದನ ಪಡೆದು ದೂರಾಗಿದ್ದಾರೆ. ವಿಚ್ಛೇದನದ ನಂತರ, ಸಂಜಯ್ ಮಕ್ಕಳಿಗೆ 10 ಕೋಟಿ ರೂಪಾಯಿ ಪರಿಹಾರ ನೀಡಿದ್ದರೆ, ಕರಿಷ್ಮಾಗೆ ಡ್ಯೂಪ್ಲೆಕ್ಸ್ ಮನೆ ನೀಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಮತ್ತು ಇತರ ಖರ್ಚುಗಳನ್ನು ಸಂಜಯ್ ನೋಡಿಕೊಳ್ಳುತ್ತಿದ್ದಾರೆ. ಸದ್ಯ ಇಬ್ಬರು ಮಕ್ಕಳೊಂದಿಗೆ ಕರಿಷ್ಮಾ ಜೀವನ ನಡೆಸುತ್ತಿದ್ದಾರೆ. ಸಮೈರಾ ಕಪೂರ್ ಮತ್ತು ಕಿಯಾಣ್ ರಾಜ್ ಕಪೂರ್ ಇಬ್ಬರು ಮಕ್ಕಳು ಕರಿಷ್ಮಾ ಜೊತೆಗೆ ಇದ್ದಾರೆ. ಇದೀಗ ಮಗಳು ಸಮೈರಾಗೆ 18 ವರ್ಷ ವಯಸ್ಸು.
ಬೋಟಾಕ್ಸ್ ಸರ್ಜರಿಯಿಂದ ಆಲಿಯಾಗೆ ಪಾರ್ಶ್ವವಾಯು- ಮುಖ ಸೊಟ್ಟಗೆ? ನಟಿ ಹೇಳಿದ್ದೇನು?