ರಾಷ್ಟ್ರಗೀತೆ ಹಾಡುವಾಗ ಅಟೆನ್ಶನ್ ನಿಲ್ಲದೆ ಹೇಗೇಗೋ ವರ್ತಿಸ್ತಿದ್ದ ಕರೀನಾ ಕಪೂರ್ ಸಖತ್ ಟ್ರೋಲ್‌!

Published : Sep 13, 2023, 11:22 AM ISTUpdated : Sep 13, 2023, 11:45 AM IST
ರಾಷ್ಟ್ರಗೀತೆ ಹಾಡುವಾಗ ಅಟೆನ್ಶನ್ ನಿಲ್ಲದೆ ಹೇಗೇಗೋ ವರ್ತಿಸ್ತಿದ್ದ ಕರೀನಾ ಕಪೂರ್ ಸಖತ್ ಟ್ರೋಲ್‌!

ಸಾರಾಂಶ

ಬಾಲಿವುಡ್‌ ಸೆಲೆಬ್ರಿಟಿಗಳು ವಿಚಿತ್ರವಾಗಿ ವರ್ತಿಸಿ ಟ್ರೋಲಾಗಿರುವುದು ಹೊಸತೇನಲ್ಲ. ಅಶಿಸ್ತಿನ ನಡವಳಿಕೆ, ರೂಡ್ ಬಿಹೇವಿಯರ್‌ನಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಹಾಗೆಯೇ ಸದ್ಯ ಬಾಲಿವುಡ್ ಬೆಬೋ ಕರೀನಾ ಕಪೂರ್ ಸಹ ತಾವು ಮಾಡಿರೋ ಯಡವಟ್ಟಿನಿಂದ ಸಖತ್ ಟ್ರೋಲ್ ಆಗುತ್ತಿದ್ದಾರೆ. 

ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಕರೀನಾ ಕಪೂರ್ ಸಹ ಒಬ್ಬರು. ಹಲವಾರು ಹಿಟ್ ಸಿನಿಮಾಗಳನ್ನು ನೀಡಿರೋ ನಟಿ, ಹೈಯೆಸ್ಟ್ ಫ್ಯಾನ್‌ ಫಾಲೋವಿಂಗ್ ಸಹ  ಹೊಂದಿದ್ದಾರೆ. ಕರೀನಾ ಕಪೂರ್ ಅಭಿನಯಿಸಿದ ಹಲವಾರು ಸಿನಿಮಾಗಳು ಸೂಪರ್‌ ಹಿಟ್ ಆಗಿವೆ. ಹಾಗೆಯೇ ಆಗಾಗ ನಟಿ ತಮ್ಮ ನಡವಳಿಕೆಯ ಕಾರಣಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ತಮಗಿಂತ ಹಲವಾರು ವರ್ಷ ಹಿರಿಯವರಾದ ಸೈಫ್ ಆಲಿಖಾನ್‌ ಅವರನ್ನು ಮದ್ವೆಯಾದಾಗಲೇ ಕರೀನಾ ಕಪೂರ್ ಸಖತ್ ಟೀಕೆಗೆ ಒಳಗಾಗಿದ್ದರು. ಸದ್ಯ ಹೊಸ ವಿಚಾರವೊಂದಕ್ಕೆ ಕರೀನಾ ಸುದ್ದಿಯಲ್ಲಿದ್ದಾರೆ. ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವ ಸಂದರ್ಭ ಕರೀನಾ ಕಪೂರ್‌ ಅಟೆನ್ಶನ್‌ನಲ್ಲಿ ನಿಲ್ಲದಿರೋದು ಟ್ರೋಲ್‌ಗೆ ಗುರಿಯಾಗಿದೆ. 

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕರೀನಾ ಕಪೂರ್‌ ಸಾಂಪ್ರದಾಯಿಕ ಕೆಂಪು ಉಡುಪಿನಲ್ಲಿ ಮಿಂಚಿದರು. ಈ ಘಟನೆಯ ಹಲವಾರು ವೀಡಿಯೊಗಳು ಮತ್ತು ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಯಾಕೆಂದರೆ ಇಲ್ಲಿ ರಾಷ್ಟ್ರಗೀತೆಯನ್ನು ಹಾಡುವ ಸಂದರ್ಭ ಕರೀನಾ ಅಟೆನ್ಶನ್‌ನಲ್ಲಿ ನಿಂತಿಲ್ಲ. ಕೈಯನ್ನು ಅತ್ತಿತ್ತ ಚಲಿಸುತ್ತಿರುವುದನ್ನು ನೋಡಬಹುದು.

ಸಂಬಳ 2 ಲಕ್ಷ, ಟೇಬಲ್​ ಮಾತ್ರ ಸಪರೇಟ್​ ಯಾಕೆ? ಕರೀನಾ ಮಕ್ಕಳ ಇಂಟರೆಸ್ಟಿಂಗ್​ ಸ್ಟೋರಿ!

ರಾಷ್ಟ್ರಗೀತೆ ಹಾಡುವಾಗ ಅಟೆನ್ಶನ್‌ ನಿಲ್ಲದ ಕರೀನಾ ಕಪೂರ್
ಅದ್ಧೂರಿ ಇವೆಂಟ್‌ಗಾಗಿ ಕರೀನಾ ಸುಂದರವಾದ ಕೆಂಪು ಬಣ್ಣದ ಶಾರ್ಟ್ ಕುರ್ತಿ ಮತ್ತು ಧೋತಿಯನ್ನು ಧರಿಸಿದ್ದರು. ದೊಡ್ಡ ಕಿವಿಯೋಲೆಗಳನ್ನು ಧರಿಸಿ ಸರಳ ಮೇಕಪ್‌ನೊಂದಿಗೆ ಎಲ್ಲರ ಗಮನ ಸೆಳೆದರು. ಆದರೆ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಪ್ಲೇ ಮಾಡುವಾಗ, ಹಾಡುವಾಗ ಕರೀನಾ ಕಪೂರ್ ಅಟೆನ್ಶನ್‌ನಲ್ಲಿ ನಿಲ್ಲದಿರೋದು ಎಲ್ಲರಿಂದ ಟೀಕೆಗೆ (Troll) ಗುರಿಯಾಗಿದೆ. ರಾಷ್ಟ್ರಗೀತೆಯನ್ನು ಹಾಡುವಾಗ ಸರಿಯಾಗಿ ನಿಲ್ಲದಿದ್ದಕ್ಕಾಗಿ ನೆಟಿಜನ್‌ಗಳು ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವೈರಲ್‌ ಆಗಿರೋ ವಿಡಿಯೋಗೆ ನಾನಾ ರೀತಿ ಕಾಮೆಂಟ್ ಮಾಡಿ ಬೈಯ್ದಿದ್ದಾರೆ.

ಒಬ್ಬ ಬಳಕೆದಾರನು, 'ಈಕೆಗೆ ರಾಷ್ಟ್ರಗೀತೆ ಪ್ಲೇ ಆಗುವಾಗಲೂ ಅಟೆನ್ಶನ್‌ ನಿಲ್ಲಲು ಕಷ್ಟವೇ' ಎಂದು ಸಿಟ್ಟಿನಿಂದ ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ನ್ಯಾಷನಲ್ ಆಂಥಮ್ ಹಾಡುವಾಗ ಅಟೆನ್ಶನ್‌ನಲ್ಲಿ ನಿಲ್ಲಬೇಕೆಂದು ಸ್ಟಾರ್‌ ನಟಿಗೆ ಗೊತ್ತಿಲ್ಲ ಎಂದರೆ ವಿಪರ್ಯಾಸ' ಎಂದು ಟೀಕಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಇವಳು ಶಾಲೆಯಲ್ಲಿ ರಾಷ್ಟಗೀತೆ ಹಾಡುವಾಗ ಶಿಸ್ತಾಗಿ (Discipline) ಇರಬೇಕೆಂಬುದನ್ನು ಕಲಿತಿಲ್ಲವೇ' ಎಂದು ಬೈಯ್ದಿದ್ದಾರೆ. ಒಟ್ನಲ್ಲಿ ಎಲ್ಲರ ನೆಚ್ಚಿನ ನಟಿ (Actress)ಯಾಗಿದ್ರೂ ಕರೀನಾ ಕಪೂರ್ ತಮ್ಮ ನಡವಳಿಕೆಯಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರೋದಂತೂ ನಿಜ.

ಭಾರತೀಯ ಚಿತ್ರರಂಗದಲ್ಲಿ ಭರ್ತಿ 4000 ಕೋಟಿ ರೂ. ಗಳಿಸಿದ ನಟಿ ಈಕೆ, ಐಶ್ವರ್ಯಾ, ದೀಪಿಕಾ, ನಯನತಾರಾ ಅಲ್ಲ!

ಕರೀನಾ ಕಪೂರ್ ಅಮೀರ್‌ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.. ಸುಜೋಯ್ ಘೋಷ್ ಅವರ ಜಾನೆ ಜಾನ್, ದಿ ಕ್ರ್ಯೂ, ಮತ್ತು ಹನ್ಸಲ್ ಮೆಹ್ತಾ ಅವರ ಮುಂದಿನ ಸೇರಿದಂತೆ ಕೆಲವು ಪ್ರಾಜೆಕ್ಟ್‌ನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?