ಜವಾನ್ ಚಿತ್ರದಲ್ಲಿ 57ರ ಶಾರುಖ್ಗೆ 38 ವಯಸ್ಸಿನ ರಿಧಿ ಅಮ್ಮನಾಗಿದ್ದಾರೆ. ಒಲ್ಲದ ಮನಸ್ಸಿನಿಂದ ತಾಯಿಯಾದ ನಟಿ ರಿಧಿ ಹೇಳಿದ್ದೇನು?
ಚಲನಚಿತ್ರಗಳಲ್ಲಿ ವಯಸ್ಸಿನ ಭೇದವೇ ಇಲ್ಲ ಎನ್ನುವುದು ಇದಾಗಲೇ ನೋಡಿಯಾಗಿದೆ. ಮಗಳ ವಯಸ್ಸಿನವಳ ಜೊತೆ ಹೀರೋ ರೊಮ್ಯಾನ್ಸ್ ಮಾಡುವುದು ಮಾಮೂಲಾಗಿದೆ. ಇದು ಸಿನಿಮಾ ಮಾತ್ರವಲ್ಲದೇ ಸ್ಟಾರ್ಗಳ ರಿಯಲ್ ಲೈಫ್ನಲ್ಲಿಯೂ ಹೀಗಾಗಿರೋದು ಇದೆ ಅನ್ನಿ. ಆದರೆ ಈಗ ಹೇಳ್ತಿರೋ ವಿಷಯ ಜವಾನ್ ಚಿತ್ರದ್ದು. ಭರ್ಜರಿ ಹಿಟ್ ಆಗಿ ಇದಾಗಲೇ ಹಲವು ದಾಖಲೆಗಳನ್ನು ಧೂಳಿಪಟ ಮಾಡುತ್ತಾ ಮುನ್ನುಗ್ಗುತ್ತಿರುವ ಜವಾನ್ನಲ್ಲಿ ಶಾರುಖ್ ಖಾನ್ ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಾಗಲೇ ಇದರ ಕಲೆಕ್ಷನ್ 400 ಕೋಟಿ ಸಮೀಪಿಸುತ್ತಿದೆ. ಆದರೆ ಅಸಲಿಗೆ ಶಾರುಖ್ ಅವರ ವಯಸ್ಸು 57. ಆದರೆ ಈ ಚಿತ್ರದ ಒಂದು ಇಂಟರೆಸ್ಟಿಂಗ್ ವಿಷಯ ಎಂದರೆ, ಚಿತ್ರದಲ್ಲಿ ಶಾರುಖ್ಗೆ ತಾಯಿ ಆಗಿ ನಟಿಸಿರೋ ನಟಿ ರಿಧಿ ಡೋಗ್ರಾ, ಅವರಿಗೆ ಈಗ 38 ವರ್ಷ ವಯಸ್ಸು. ನಾಯಕಿಯಾಗಿ ಮಿಂಚಬೇಕಾಗಿದ್ದ ನಟಿ, ತಾಯಿಯ ಪಾತ್ರಕ್ಕೆ ಒಪ್ಪಿಕೊಳ್ಳುವುದು ತುಸು ಕಷ್ಟವೇ. ಇದೇ ರೀತಿ ಬೇಡ ಬೇಡ ಎನ್ನುತ್ತಲೇ ಶಾರುಖ್ಗೆ ಜವಾನ್ನಲ್ಲಿ ತಾಯಿಯಾಗಿದ್ದಾರೆ ರಿಧಿ ಡೋಗ್ರಾ.
ಅಂದಹಾಗೆ, ನಟಿ ರಿಧಿ, ಕಿರುತೆರೆ ಧಾರಾವಾಹಿ ಮತ್ತು ವೆಬ್ ಸಿರೀಸ್ಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 18 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ರಾಕೇಶ್ ಬಾಪಟ್ ಜೊತೆ ರಿಧಿ ಡೋಗ್ರಾಗೆ ಮದುವೆ ಆಗಿತ್ತು. ನಂತರ ಅವರು ಡಿವೋರ್ಸ್ ಪಡೆದರು. ‘ಜವಾನ್’ ಸಿನಿಮಾ ಬಿಡುಗಡೆ ಆದ ಬಳಿಕ ರಿಧಿ ಡೋಗ್ರಾ ಜನಪ್ರಿಯತೆ ಹೆಚ್ಚುತ್ತಿದೆ. ನಿಧಿ ಡೋಗ್ರಾ ಅವರ ಅಭಿನಯದ ಬಗ್ಗೆ ಮೆಚ್ಚುಗೆಯನ್ನು ಪಡೆದಿದ್ದಾರೆ, ಸ್ವತಃ ಖಾನ್ ಸೇರಿದಂತೆ ಈಕೆಯ ಸವಾಲಿನ ಪಾತ್ರದ ಕುರಿತು ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದು ನಿಜವಾದರೂ ಮೊದಲಿಗೆ ಈ ಪಾತ್ರವನ್ನು ನಟಿ ತಿರಸ್ಕರಿಸಿದ್ದರಂತೆ.
ಶಾರುಖ್ಗೆ ಚಾಟಿ ಬೀಸಿದ್ದ ಎನ್ಸಿಬಿ ಅಧಿಕಾರಿ ವಾಂಖೆಡೆಗೆ ಜಯ! ಜವಾನ್ ರಿಲೀಸ್ ಬೆನ್ನಲ್ಲೇ ಕ್ಲೀನ್ ಚಿಟ್
ಜವಾನ್ ಯಶಸ್ಸಿನ ಬಳಿಕ ರಿಧಿ ಡೋಗ್ರಾ ಇಡೀ ಚಿತ್ರತಂಡಕ್ಕೆ ಧನ್ಯವಾದ ಸಲ್ಲಿಸಿದ್ದು, ಈ ಪರಿಯಲ್ಲಿ ಜನ ತಮ್ಮನ್ನು ಗುರುತಿಸುವಂತೆ ಮಾಡಿರುವ ಶ್ರೇಯಸ್ಸು ಶಾರುಖ್ ಅವರಿಗೆ ಸಲ್ಲುತ್ತದೆ ಎಂದಿದ್ದಾರೆ. ಇದು ನನ್ನ ಜೀವನದಲ್ಲಿ ಅದ್ಭುತ ಕ್ಷಣವಾಗಿತ್ತು. ಜನರು ತುಂಬಾ ಪ್ರೋತ್ಸಾಹಿಸುತ್ತಿದ್ದಾರೆ. ನನ್ನ ಅಭಿನಯವನ್ನು ಎಲ್ಲರೂ ಮೆಚ್ಚಿಕೊಂಡಿರುವುದಕ್ಕೆ ತುಂಬಾ ಸಂತಸವಾಗುತ್ತದೆ ಎಂದಿರುವ ನಟಿ, ಶಾರುಖ್ ಖಾನ್ ಅವರ ತಾಯಿಯ ಪಾತ್ರ ಮಾಡಬೇಕೆಂದು ಆರಂಭದಲ್ಲಿ ಕೇಳಿಕೊಂಡಾಗ ಅದಕ್ಕೆ ತಮ್ಮ ಮನಸ್ಸು ಒಪ್ಪಿರಲಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.
'ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ. ನಾಯಕಿಯಾಗಿ ನಟಿಸಿರೋ ನನಗೆ ಅಮ್ಮನ ಪಾತ್ರ ಮಾಡಲು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ಶಾರುಖ್ ಖಾನ್ರಂಥವರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಖುಷಿ ಪಟ್ಟಿದ್ದೆ. ಆದರೆ ಅವರ ತಾಯಿ ಪಾತ್ರ ತೆಗೆದುಕೊಳ್ಳುವ ಬಗ್ಗೆ ನನಗೆ ತುಂಬಾ ಆತಂಕವಿತ್ತು. ಒಂದು ತಾಯಿಯ ಪಾತ್ರ ಎಂದಾದರೆ, ಇನ್ನೊಂದು ಶಾರುಖ್ ಅವರಿಗೆ ತಾಯಿ ಎನ್ನುವುದು ಸ್ವಲ್ಪ ಆತಂಕ ಸೃಷ್ಟಿಸಿತ್ತು. ಏನು ಮಾಡಬೇಕು ಎಂದು ನನಗೆ ತಿಳಿದಿರಲಿಲ್ಲ. ಈ ಪಾತ್ರ ಒಪ್ಪಿಕೊಳ್ಳಲೇ, ಬೇಡವೇ ಎಂದು ತಿಳಿದಿರಲಿಲ್ಲ. ಆದರೆ ವಿಚಾರ ಮಾಡಿದಾಗ ಇದು ನನ್ನ ಜೀವನದ ಅತಿ ದೊಡ್ಡ ಚಾಲೆಂಜಿಂಗ್ ಪಾತ್ರ ಎನ್ನಿಸಿತು. ಆಮೇಲೆ ಅದನ್ನು ಒಪ್ಪಿಕೊಂಡೆ. ಅದನ್ನು ಚಾಲೆಂಜಿಂಗ್ ಆಗಿಯೇ ಸ್ವೀಕರಿಸಿ, ಪಾತ್ರ ಮಾಡಿದೆ' ಎಂದಿದ್ದಾರೆ. ಚಿತ್ರ ಮಾಡುವ ಪೂರ್ವದಲ್ಲಿ ನಿರ್ದೇಶಕ ಅಟ್ಲಿ ಅವರು, ನೀನು ಸ್ವಲ್ಪ ಎಡವಿದರೂ ಮೀಮ್ಸ್ ಹುಟ್ಟಿಕೊಳ್ಳುತ್ತದೆ ಎಂದಿದ್ದರು. ಜೊತೆಗೆ ಸೆಟ್ನಲ್ಲಿ ಫೋನ್ ಕೂಡ ಕೊಡುತ್ತಿರಲಿಲ್ಲ. ಎಲ್ಲಾ ಸವಾಲು ಎದುರಿಸಿ ಚಿತ್ರ ಮಾಡಿದೆ ಎಂದಿದ್ದಾರೆ.
ಶಾರುಖ್ಗೆ ತಿಮ್ಮಪ್ಪನ ಕೃಪಾಕಟಾಕ್ಷ: ಮೊದಲ ದಿನವೇ ಇತಿಹಾಸ ಸೃಷ್ಟಿಸಿದ ಜವಾನ್!