'ಹಲೋ ಆಂಟಿ... ಬುರ್ಖಾ ಬದ್ಲು ರಾತ್ರೀಲಿ ಕಪ್ಪು ಕನ್ನಡಕ ಯಾಕೆ' ಅಂತಿದ್ದಾರೆ ಟ್ರೋಲಿಗರು!

Published : Jan 21, 2023, 03:20 PM IST
'ಹಲೋ ಆಂಟಿ... ಬುರ್ಖಾ ಬದ್ಲು ರಾತ್ರೀಲಿ ಕಪ್ಪು ಕನ್ನಡಕ ಯಾಕೆ' ಅಂತಿದ್ದಾರೆ ಟ್ರೋಲಿಗರು!

ಸಾರಾಂಶ

ನಟಿ ಕರೀನಾ ಕಪೂರ್​ ರಾತ್ರಿಯ ವೇಳೆ ಕಪ್ಪು ಕನ್ನಡಕ ಧರಿಸಿದ್ದು, ಅವರೀಗ ಟ್ರೋಲ್​ ಆಗಿದ್ದಾರೆ. ಟ್ರೋಲಿಗರು ಹೇಳುತ್ತಿರೋದೇನು?

ಮುಂಬೈ: ಚಿತ್ರತಾರೆಯರು, ರಾಜಕಾರಣಿಗಳು ಟ್ರೋಲ್​ ಆಗುವುದು ಹೊಸ ವಿಷಯವೇನಲ್ಲ. ಕೆಲವರು ಟ್ರೋಲ್​ (Troll)ಆಗಲೆಂದೇ ಚಿತ್ರ ವಿಚಿತ್ರ ರೀತಿಯಲ್ಲಿ ವರ್ತಿಸಿದರೆ, ಇನ್ನು ಕೆಲವರು ಏನು ಮಾಡಿದರೂ ಟ್ರೋಲ್​ ಆಗುತ್ತಾರೆ. ಒಟ್ಟಿನಲ್ಲಿ ಟ್ರೋಲ್​ ಆಗುತ್ತಲೇ ಖ್ಯಾತ ಕುಖ್ಯಾತಿ ಎಲ್ಲವನ್ನೂ ಗಳಿಸುತ್ತಾರೆ ಇವರು. ಅದರಲ್ಲಿಯೂ ಇಂಥ ವ್ಯಕ್ತಿಗಳ ವೀಕ್​ನೆಸ್​ ಸಿಕ್ಕಿಬಿಟ್ಟಿತು ಎಂದರೆ ಅವರ ಮೇಲೆಯೇ ಸದಾ ಟ್ರೋಲಿಗರ ಕಣ್ಣು ನೆಟ್ಟಿರುತ್ತದೆ. ಅವರ ಮಾತು, ನಡೆ ನುಡಿ, ಹಾವ ಭಾವ, ಡ್ರೆಸ್​ ವಿಧಾನ ಎಲ್ಲವೂ ಟ್ರೋಲಿಗರ ಬಾಯಲ್ಲಿ ಆಹಾರವಾಗುತ್ತದೆ. ಈಗ ಇದೇ ರೀತಿ ಟ್ರೋಲ್​ ಆಗುತ್ತಿರುವವರು ಬಾಲಿವುಡ್​ ತಾರೆ ಕರೀನಾ ಕಪೂರ್ ಅಲಿಯಾಸ್​ ಕರೀನಾ ಕಪೂರ್​ ಖಾನ್​ (Kareena Kapoor Khan).

ಕೆಲ ಚಿತ್ರತಾರೆಯರಂತೆ ಕರೀನಾ ಕಪೂರ್​ ಅವರು ಟ್ರೋಲ್​ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಸಾಕಷ್ಟು ಬಾರಿ ಟ್ರೋಲ್​ ಆಗಿದ್ದಾರೆ. ಈಗ ಅವರು ಟ್ರೋಲ್​  ಆಗುತ್ತಿರುವುದಕ್ಕೆ ಕಾರಣ ರಾತ್ರಿಯ ವೇಳೆ ಕಪ್ಪು ಕನ್ನಡಕ (Sun glass) ಧರಿಸಿ ಬೀದಿಯಲ್ಲಿ ಓಡಾಡುತ್ತಿರುವುದಕ್ಕೆ. ಇವರು ಸನ್​ ಗ್ಲಾಸ್​ ಧರಿಸಿ ರಾತ್ರಿ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದದ್ದು, ಇದು ಟ್ರೋಲಿಗರಿಗೆ ಆಹಾರವಾಗಿದೆ.  ವಯಸ್ಸು 42 ಆದರೂ ಗ್ಲಾಮರ್ ಲುಕ್‌ ಕಾಪಾಡಿಕೊಂಡು ಬಂದಿರುವ ಈ ನಟಿ ಈಗ ಟ್ರೋಲಿಗರ ಬಾಯಲ್ಲಿ ಆಂಟಿಯೂ ಆಗಿಬಿಟ್ಟಿದ್ದಾರೆ! ಕರೀನಾ ಕಪೂರ್ ಹೀಗೆ ರಾತ್ರಿಯ ವೇಳೆ ಕೂಲಿಂಗ್​ ಗ್ಲಾಸ್​ (Cooling glass) ಹಾಕಿಕೊಂಡು ಹೋಗುತ್ತಿರುವುದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ. ಇದಕ್ಕೆ ಟ್ರೋಲಿಗರು ಹಲೋ ಆಂಟಿ, ರಾತ್ರಿ ವೇಳೆ ಯಾವ ಸೂರ್ಯ ಬರುತ್ತಾನೆ ಎಂದು ಕೆಲವರು ಕರೀನಾ ಅವರ ಕಾಲು ಎಳೆಯುತ್ತಿದ್ದರೆ, ಇನ್ನು ಕೆಲವರು ರಾತ್ರಿ ಬುರ್ಖಾ ಧರಿಸಿ ಹೋಗಬೇಕು, ಹೀಗೆಲ್ಲಾ ಕಪ್ಪು ಕೂಲಿಂಗ್​ ಗ್ಲಾಸ್​ ಹಾಕಿಕೊಂಡು ಹೋಗಬಾರದು ಎಂದು ಕಿಂಡಲ್​ ಮಾಡಿದ್ದಾರೆ. 

Sushant Singh ಹುಟ್ಟುಹಬ್ಬದ ಸವಿ ನೆನಪಲ್ಲಿ ಭಾವುಕ ಪತ್ರ ಬರೆದ ಸಹೋದರಿ ಶ್ವೇತಾ

ಕಪೂರ್​ ವಂಶದ ಈ ಬೆಡಗಿ ತಮಗಿಂತ 13 ವರ್ಷ ದೊಡ್ಡವರಾಗಿರುವ ಇದಾಗಲೇ ಮದುವೆಯಾಗಿ ದೊಡ್ಡ ದೊಡ್ಡ ಮಕ್ಕಳನ್ನು ಹೊಂದಿರುವ ನಟ ಸೈಫ್​ ಅಲಿ ಖಾನ್​ (Saif Ali Khan) ಅವರನ್ನು ವಿವಾಹವಾದಾಗಿನಿಂದಲೂ ಇವರು ಟ್ರೋಲ್​ಗೆ ಒಳಗಾಗುತ್ತಲೇ ಇದ್ದಾರೆ. 2012ರಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದೆ. ಸೈಫ್​ ಅಲಿ ಖಾನ್​ ಅವರಿಗೆ ಇದು ಎರಡನೆಯ ಮದುವೆ. 1991ರಲ್ಲಿ ಅಮೃತಾ ಸಿಂಗ್​ (Amruta Singh) ಅವರನ್ನು ಮದುವೆಯಾಗಿದ್ದ ಸೈಫ್​ ಅಲಿ 2004ರಲ್ಲಿ ಅವರಿಗೆ ವಿಚ್ಛೇದನ ನೀಡಿದ್ದರು. ಈ ಸಮಯದಲ್ಲಿ ಕೆಲ ನಟಿಯರ ಜೊತೆ ಅವರ ಹೆಸರು ಕೇಳಿಬರುತ್ತಿದ್ದರೂ ಕೊನೆಗೆ ತಮಗಿಂತ 13 ವರ್ಷ ಚಿಕ್ಕವಳಾದ ಕರೀನಾ ಕಪೂರ್​ ಅವರ ಪ್ರೇಮಕ್ಕೆ ಸಿಲುಕಿದರು. 2012ರಲ್ಲಿ ಇಬ್ಬರೂ ಮದುವೆಯಾದರು. ಮದುವೆಯಾದ ಬಳಿಕ ಕರೀನಾ, ತಮ್ಮ ಹಿಂದಿನ ಕಪೂರ್​ ಅಡ್ಡಹೆಸರನ್ನು ಬದಲಿಸಿಕೊಳ್ಳದೇ ಕಪೂರ್​ ಜೊತೆ ಖಾನ್​ ಕೂಡ ಸೇರಿಸಿ ಕರೀನಾ ಕಪೂರ್​ ಖಾನ್​ ಆದರು. ಈ ಮದುವೆ ಅವರ ಹಲವು ಅಭಿಮಾನಿಗಳನ್ನು ಕೆರಳಿಸಿದೆ.

ಇದೇ ಕಾರಣಕ್ಕೆ, ಅಲ್ಲಿಂದೀಚೆಗೆ ಕರೀನಾ ಕಪೂರ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಟ್ರೋಲ್​ ಮಾಡಲಾಗುತ್ತಿದೆ. ತಮ್ಮ ಇಬ್ಬರು ಮಕ್ಕಳಿಗೆ  ತೈಮೂರ್ ಅಲಿ ಖಾನ್ (Taimur Ali Khan) ಮತ್ತು ಜೆಹ್ ಅಲಿ ಖಾನ್ (Jeh Ali Khan) ಎಂದು ಹೆಸರಿಟ್ಟ ಮೇಲಂತೂ ಇವರ ಮೇಲಿನ ಟ್ರೋಲ್​ ಇನ್ನಷ್ಟು ಹೆಚ್ಚಾಗಿದೆ. ಇದೇ ಕಾರಣಕ್ಕೆ ಅವರನ್ನು ಛೇಡಿಸಲು ಹಲೋ ಆಂಟಿ ಎಂದು ಹಲವರು ಹೇಳುತ್ತಿದ್ದರೆ, ಕಪ್ಪು ಕನ್ನಡದ ಬದಲು ಕಪ್ಪು ಬುರ್ಖಾ (Black burkha) ಧರಿಸಿ ಓಡಾಡಿ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಖಾನ್​ ಅವರನ್ನು ಮದುವೆಯಾಗಿರುವ ಸಂಕೇತವಾಗಿ  ಕಪ್ಪು ಕನ್ನಡಕ ಹಾಕಿಕೊಂಡಿರುವಿರಾ ಎಂದೂ ಒಬ್ಬ ನೆಟ್ಟಿಗ ಕಾಲೆಳೆದಿದ್ದಾನೆ. 

ಸರೋಗಸಿ ಮೂಲಕ ಮಗು ಪಡೆದಿದ್ಯಾಕೆ? ಕೊನೆಗೂ ಮೌನ ಮುರಿದ ಪ್ರಿಯಾಂಕಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?