Mission Majnu; ರಶ್ಮಿಕಾ ಮಂದಣ್ಣ 2ನೇ ಬಾಲಿವುಡ್ ಸಿನಿಮಾ ರಿಲೀಸ್: ಸಿಕ್ತು ಗುಡ್ ರೆಸ್ಪಾನ್ಸ್

Published : Jan 21, 2023, 03:03 PM ISTUpdated : Jan 21, 2023, 03:05 PM IST
Mission Majnu; ರಶ್ಮಿಕಾ ಮಂದಣ್ಣ 2ನೇ ಬಾಲಿವುಡ್ ಸಿನಿಮಾ ರಿಲೀಸ್: ಸಿಕ್ತು ಗುಡ್ ರೆಸ್ಪಾನ್ಸ್

ಸಾರಾಂಶ

ನಟಿ ರಶ್ಮಿಕಾ ಮಂದಣ್ಣ ನಟನೆಯ ಹಿಂದಿಯ 2ನೇ ಸಿನಿಮಾ ಮಿಷನ್ ಮಜ್ನು ರಿಲೀಸ್ ಆಗಿದೆ. ರಶ್ಮಿಕಾ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಬಾಲಿವುಡ್ ನಟ ಸಿದ್ಧಾರ್ತ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಮಿಷನ್​ ಮಜ್ನು’ ಸಿನಿಮಾ ರಿಲೀಸ್ ಆಗಿದೆ. ರಶ್ಮಿಕಾ ನಟನೆಯ 2ನೇ ಹಿಂದಿ ಸಿನಿಮಾ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಥಿಯೇಟರ್​ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.  ನೆಟ್​ಫ್ಲಿಕ್ಸ್​ನಲ್ಲಿ ಇಂದು (ಜನವರಿ 20) ಸಿನಿಮಾ ರಿಲೀಸ್​ ಆಗಿದೆ. ಸ್ಪೈ-ಥ್ರಿಲ್ಲರ್​ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ     ಗೋವಿಂದ್ ಭಾನಾ ನಿರ್ದೇಶನ ಮಾಡಿದ್ದಾರೆ. 

ಸಿನಿಮಾ ವೀಕ್ಷಿಸದ ಪ್ರೇಕ್ಷಕರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಶೇರ್ ಮಾಡುತ್ತಿದ್ದಾರೆ. ಚಿಕ್ಕದಾಗಿ ವಿಮರ್ಶೆ ಮಾಡುತ್ತಿದ್ದಾರೆ. ಸಿದ್ದಾರ್ಥ್ ನಟನೆಗೆ ಜೊತೆಗೆ ರಶ್ಮಿಕಾ ಮಂದಣ್ಣ ನಟನೆಯನ್ನು ಹಾಡಿಹೊಗಳುತ್ತಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ‘ಮಿಷನ್​ ಮಜ್ನು’ರೆಟ್ರೋ ಶೈಲಿಯಲ್ಲಿ ಮೂಡಿಬಂದಿದೆ.  ರಶ್ಮಿಕಾ ಮೊದಲ ಸಿನಿಮಾ ಗುಡ್‌ಬೈ ಚಿತ್ರಕ್ಕೆ ಹೇಳಿಕೊಳ್ಳುವಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದೀಗ ರಶ್ಮಿಕಾ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದು ಹೀಗೆ.

 'ಅದ್ಭುತವಾಗಿದೆ. ನೋಡಲೇ ಬೇಕಾದ ಸಿನಿಮಾ. ಸಿದ್ಧಾರ್ಥ್ ಅತ್ಯುತ್ತಮವಾದ ನಟನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮುಳಗಿಹೋಗಿದ್ದೆ. ರಶ್ಮಿಕಾ ತನ್ನ ನಟನೆಯನ್ನು ಸಾಭೀತು ಮಾಡಿದ್ದಾರೆ. ಅವರ ಮುಗ್ಧತೆ ಎಲ್ಲರ ಹೃದಯ ಗೆಲ್ಲುತ್ತದೆ. ಸೈಲೆಂಟ್ ಆಗಿದೆ ಆದರೆ ತುಂಬಾ ಪವರ್ ಫುಲ್ ಆಗಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ' ಎಂದು ಹೇಳಿದ್ದಾರೆ.

'ಸಿದ್ಧಾರ್ಥ್ ಮತ್ತು ರಶ್ಮಿಕಾ ಕೆಮಿಸ್ಟ್ರಿ ಅದ್ಭುತವಾಗಿದೆ. ಸ್ಟ್ರೀನ್ ಪ್ಲೇ, ಡೈಲಾಗ್, ಆಕ್ಷನ್ ಎಲ್ಲವೂ ಚೆನ್ನಾಗಿದೆ ಇದೆ' ಎಂದು ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ.

'ಮಿಷನ್ ಮಜ್ನು ವಾವ್..ಅಮನ್‌ದೀಪ್ ಸಿಂಗ್ ಆಗಿ ಸಿದ್ಧಾರ್ಥ್ ಮಲ್ಹೋತ್ರಾ ಅದ್ಭುತ ನಟನೆ. ರಶ್ಮಿಕಾ ಮಂದಣ್ಣ ನಸ್ರೀನ್ ಆಗಿ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ' ಎಂದು ಮತ್ತೊಬ್ಬ ಅಭಿಮಾನಿ ತನ್ನ ವಿಮರ್ಶೆ ತಿಳಿಸಿದ್ದಾರೆ.

ಎಷ್ಟೇ ಬಕೆಟ್ ಹಿಡಿದ್ರೂ ನೀನ್ ಮಾಡಿದ್ದು ಮರೆಯಲ್ಲ; ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿ ರಶ್ಮಿಕಾ ಮಂದಣ್ಣ ಟ್ರೋಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?