ಸಂಬಂಧದಲ್ಲಿ ತಮ್ಮ ಪುತ್ರಿಯಾಗಬೇಕಿರುವ ನಟಿ ಸಾರಾ ಅಲಿ ಖಾನ್ಗೆ ಕರೀನಾ ಕಪೂರ್ ಸೆಕ್ಸ್ ಸಂಬಂಧಿತ ಪ್ರಶ್ನೆ ಕೇಳಿದ್ದು, ಇದರಿಂದ ಸಕತ್ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ನಟಿ ಕೇಳಿದ್ದೇನು?
ಕರೀನಾ ಕಪೂರ್ ಮತ್ತು ಸಾರಾ ಅಲಿ ಖಾನ್ ಸಂಬಂಧದಲ್ಲಿ ಅಮ್ಮ-ಮಗಳಾಗಬೇಕು. ಬಾಲಿವುಡ್‌ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ನಟಿ ಸಾರಾ ಅಲಿ ಖಾನ್ ಈ ದಂಪತಿ ಪುತ್ರಿ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
ಅದೇನೇ ಇದ್ದರೂ ಸಂಬಂಧದಲ್ಲಿ ಸಾರಾ ಅಲಿ ಮತ್ತು ಕರೀನಾ ಕಪೂರ್ ಅಮ್ಮ-ಮಗಳು. ಆದರೆ ಇದೇ ಕರೀನಾ ಕಪೂರ್ ಮಗಳಿಗೆ ಸೆಕ್ಸ್ ಬಗ್ಗೆ ಪ್ರಶ್ನೆ ಮಾಡುವ ಮೂಲಕ ಭಾರಿ ಟ್ರೋಲ್ಗೆ ಒಳಗಾಗಿದ್ದಾರೆ. ಅಮ್ಮ-ಮಗಳು ಎನ್ನುವ ಸಂಬಂಧವನ್ನೂ ತಿಳಿಯದೇ ಓಪನ್ ಆಗಿ ಹೀಗೆ ಪ್ರಶ್ನೆ ಕೇಳಬಹುದಾ ಎಂದು ಹಲವರು ನಟಿಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕರೀನಾ ಕಪೂರ್ ಖಾನ್ ಅವರ ರೇಡಿಯೊ ಕಾರ್ಯಕ್ರಮ 'ವಾಟ್ ವುಮೆನ್ ವಾಂಟ್' ನ ಇತ್ತೀಚಿನ ಸಂಚಿಕೆಯಲ್ಲಿ ಸಾರಾ ಅಲಿ ಖಾನ್ಗೆ ಕರೀನಾ ಹಲವಾರು ಪ್ರಶ್ನೆಗಳನ್ನು ಕೇಳಿದರು. ಅದರಲ್ಲಿ ಕೊನೆಯದಾನಿ ಒನ್ ನೈಟ್ ಸ್ಟ್ಯಾಂಡ್ ಬಗ್ಗೆ ಕೇಳಿದರು. ಅಂದರೆ ಯಾರ ಜೊತೆಯಾದ್ರೂ ಸೆಕ್ಸ್ ಸಂಬಂಧ ಇದ್ಯಾ ಎಂದು. ಇದನ್ನು ಕೇಳಿ ಸಾರಾ ಸ್ವಲ್ಪ ಮುಜುಗರಕ್ಕೆ ಒಳಗಾದರು. ನಂತರ ನೋ ವೇ ಎಂದರೆ, ಈ ರೀತಿ ಸಂಬಂಧ ನಡೆದೇ ಇಲ್ಲ ಎಂದು ಉತ್ತರ ಕೊಟ್ಟರು.
ಇವಳದ್ದು ಮಗುವಿನಂಥ ಮನಸ್ಸು ಎಂದ್ರೆ, ನಿಮ್ದು ನಾಯಿಬುದ್ಧಿ ಅನ್ನೋದಾ ಭಾಗ್ಯ? ತುಂಟಾಟ ನೋಡಿ ಫ್ಯಾನ್ಸ್ ಫುಲ್ ಖುಷ್
ಇದಕ್ಕೆ ಕರೀನಾ ಕಪೂರ್ ಸಾಕಷ್ಟು ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಮಗಳೇ ಎಂದು ಕರೆದವನನ್ನೇ ಮದುವೆಯಾದ ಹಾಗೆ ಸಾರಾ ಅಲಿ ಖಾನ್ ಅಂದುಕೊಂಡ್ಯಾ ಎಂದು ಪ್ರಶ್ನಿಸಿದ್ದಾರೆ. ಸಾರಾಗೆ ಅಪ್ಪನ ಯಾವುದೇ ಗುಣ ಬಂದಿಲ್ಲ. ಆಕೆ ತುಂಬಾ ಬುದ್ಧಿವಂತೆ ಹಾಗೂ ಸೌಮ್ಯ ಸ್ವಭಾವದವಳು. ಒಳ್ಳೆಯ ಹೆಸರು ಗಳಿಸಿದ್ದಾರೆ. ಈ ರೀತಿ ಎಲ್ಲದಕ್ಕೂ ಸೆಕ್ಸ್ ಪ್ರಶ್ನೆ ತಂದು ನಿಮ್ಮ ಮರ್ಯಾದೆಯನ್ನೇ ನೀವು ತೆಗೆದುಕೊಂಡಿರುವಿರಿ ಎಂದಿದ್ದಾರೆ. ಅಂದಹಾಗೆ, ನಟಿ ಸಾರಾ ಅಲಿ ಖಾನ್ ಪಟೌಡಿ ರಾಜಮನೆತನದ ಮೊದಲ ಕುಡಿ, ಬಾಲಿವುಡ್‌ನ ಹಿರಿಯ ನಟಿ ಶರ್ಮಿಳಾ ಟಾಗೋರ್ ಮೊಮ್ಮಗಳು. ಆದರೆ ಬೆಳೆದಿದ್ದು ಮಾತ್ರ ಒಂಟಿಯಾಗಿದ್ದ ಅಮ್ಮ ಅಮೃತಾ ಸಿಂಗ್ ಜೊತೆ. ಪ್ರೀತಿಸಿ ಮದ್ವೆಯಾದ ಸೈಪ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರು 2004 ರಲ್ಲಿ ವಿಚ್ಛೇದನದ ಪಡೆದು ಪರಸ್ಪರ ದೂರ ದೂರವಾಗಿದ್ದರು.
ವಿಚ್ಛೇದನದ ಬಳಿಕ ಅಮೃತಾ ಸಿಂಗ್ ಮತ್ತೆ ಮದುವೆಯಾಗಿಲ್ಲ. ಸೈಫ್ ಅಲಿ ಕರೀನಾ ಜೊತೆ ಮದ್ವೆಯಾಗಿ ಮತ್ತೆ ಇಬ್ಬರು ಮಕ್ಕಳ ಅಪ್ಪನಾಗಿದ್ದಾರೆ. ಒಟ್ಟೂ ಅವರಿಗೆ ಈಗ ನಾಲ್ವರು ಮಕ್ಕಳು. ಸಂದರ್ಶನವೊಂದರಲ್ಲಿ, ಸಾರಾ ಕೂಡ ತಮ್ಮ ತಾಯಿ ಪಟ್ಟ ಕಷ್ಟದ ಬಗ್ಗೆ ಮಾತನಾಡಿದ್ದರು. ನನ್ನ ಅಮ್ಮ ದಾಂಪತ್ಯದಲ್ಲಿ ಸಂತೋಷ ಇರಲಿಲ್ಲ. ಒಟ್ಟಿಗೆ ಅತೃಪ್ತರಾಗುವುದಕ್ಕಿಂತ ಬೇರ್ಪಡುವುದು ಉತ್ತಮ ಎಂದು ಅವರು ಭಾವಿಸಿದರು. ತಂದೆಗೆ ವಿಚ್ಛೇದನ ನೀಡಿದ್ದು ಅವರ ಅತ್ಯುತ್ತಮ ನಿರ್ಧಾರದಲ್ಲಿ ಒಂದು. ಬಹಳ ವರ್ಷಗಳ ನಂತರ ಇಬ್ಬರೂ ತಮ್ಮ ಜೀವನದಲ್ಲಿ ಸಂತೋಷವಾಗಿದ್ದೇವೆ ಎಂದಿದ್ದರು.
ಸಿಹಿಯ ಗುಟ್ಟು ತಿಳಿದಿರೋ, ಮೇಲಿಂದ ಮೇಲೆ ಶಾಕ್ ಕೊಡ್ತಿರೋ ನಿಗೂಢ ವೈದ್ಯೆ ಅನಂತಲಕ್ಷ್ಮಿ ಯಾರು?