ಕೃಷ್ಣ ಫೋಟೋ ಹಂಚಿಕೊಂಡ ನಾಗಚೈತನ್ಯ ಭಾವಿ ಪತ್ನಿ… ಶೋಭಿತಾ ವಿರುದ್ಧ ಬ್ಯಾಟ್ ಬೀಸಿದ ನೆಟ್ಟಿಗರು

Published : Aug 27, 2024, 10:45 AM ISTUpdated : Aug 27, 2024, 11:22 AM IST
ಕೃಷ್ಣ ಫೋಟೋ ಹಂಚಿಕೊಂಡ ನಾಗಚೈತನ್ಯ ಭಾವಿ ಪತ್ನಿ… ಶೋಭಿತಾ ವಿರುದ್ಧ ಬ್ಯಾಟ್ ಬೀಸಿದ ನೆಟ್ಟಿಗರು

ಸಾರಾಂಶ

ದಕ್ಷಿಣ ಭಾರತದಲ್ಲಿ ಈಗ ಹೊಸ ಜೋಡಿಯೊಂದು ಸುದ್ದಿ ಮಾಡ್ತಿದೆ. ನಾಗ ಚೈತನ್ಯ ಹಾಗೂ ಶೋಭಿತಾ ಮದುವೆಯಾಗೋದು ಕನ್ಫರ್ಮ್ ಆಗಿದೆ. ಸಮಂತಾ ಒಂಟಿಯಾಗಲು ಶೋಭಿತಾ ಕಾರಣ ಎನ್ನುತ್ತಿರುವ ಅಭಿಮಾನಿಗಳು, ನಾಗ ಚೈತನ್ಯ ಭಾವಿ ಪತ್ನಿ ಏನು ಮಾಡಿದ್ರೂ ಇಷ್ಟಪಡ್ತಿಲ್ಲ.   

ದಕ್ಷಿಣ ಭಾರತದ ಪ್ರಸಿದ್ಧ ನಟಿ ಶೋಭಿತಾ ಧೂಳಿಪಾಲ (south indian actress shobhita dhulipala)  ಸದ್ಯ ಮದುವೆ ವಿಷ್ಯದಲ್ಲಿ ಸುದ್ದಿಯಲ್ಲಿದ್ದಾರೆ. ಶೋಭಿತಾ ಹಾಗೂ ನಟ ನಾಗಚೈತನ್ಯ (Actor Naga Chaitanya) ಎಂಗೇಜ್ಮೇಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾನೆ ಇದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ, ತಮ್ಮ ಡ್ರೆಸ್, ಫ್ಯಾಷನ್ ಮೂಲಕವೇ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಈಗ ಶೋಭಿತಾ ಕೃಷ್ಣನ ಡ್ರೆಸ್ ಅಭಿಮಾನಿಗಳಿಗೆ ಇಷ್ಟವಾಗುವ ಬದಲು ಕಣ್ಣು ಕುಕ್ಕುತ್ತಿದೆ. 

ಶೋಭಿತಾ ಕೃಷ್ಣ ಜನ್ಮಾಷ್ಟಮಿ (krishna janmashtami)ಯ ವಿಶೇಷ ಸಂದರ್ಭದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದ್ರೆ ನೆಟ್ಟಿಗರಿಗೆ ಶೋಭಿತಾ ಈ ಫೋಟೋ ಯಾಕೋ ಇಷ್ಟವಾಗಿಲ್ಲ. ಕೃಷ್ಣನ ಸ್ವಭಾವ ಹಾಗೂ ಶೋಭಿತಾ ಸ್ವಭಾವವನ್ನು ಹೋಲಿಕೆ ಮಾಡಿ, ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. 

'ಹಿಂದೂ ಅನ್ನೋದಕ್ಕೆ ಸಾಕ್ಷಿ ತೋರಿಸು..' ಮಧುರೈ ಮೀನಾಕ್ಷಿ ದೇಗುಲದಲ್ಲಿ ನಟಿ ನಮಿತಾಗೆ ಅವಮಾನ ಆರೋಪ

ಶೋಭಿತಾ ಧೂಳಿಪಾಲ, ಇನ್‌ಸ್ಟಾ ಹ್ಯಾಂಡಲ್‌ನಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಕೃಷ್ಣನ ಫೋಸ್ ನೀಡಿದ್ದು, ಬುದ್ಧಿವಂತಿಕೆ, ಹೊಳಪು, ಪ್ರೀತಿ ಎಂದು ಬರೆದಿದ್ದಲ್ಲದೆ ಜನ್ಮಾಷ್ಟಮಿಯ ಶುಭಾಶಯಗಳು ಎಂದು ಶೀರ್ಷಿಕೆ ಹಾಕಿದ್ದಾರೆ. ಶೋಭಿತಾ ಇದ್ರ ಜೊತೆ ನವಿಲುಗರಿ ಮತ್ತು ಕೃಷ್ಣನ ಅರ್ಧ ಮುಖವಿರುವ ಫೋಟೋ ಹಂಚಿಕೊಂಡಿದ್ದಾರೆ.

ಶೋಭಿತಾ ಅವರು, ಪೊನ್ನಿಯಿನ್ ಸೆಲ್ವನ್ 1 ಚಿತ್ರದಲ್ಲಿ ಕೃಷ್ಣನ ಪಾತ್ರ ಧರಿಸಿದ್ದರು. ಫೋಟೋದಲ್ಲಿ ಶೋಭಿತಾ ನೀಲಿ ಬಣ್ಣದ ಕುಪ್ಪಸ ಧರಿಸಿ, ಕೊಳಲು ಹಿಡಿದಂತೆ ಫೋಸ್ ನೀಡಿದ್ದಾರೆ. ಈ ಫೋಟೋದಲ್ಲಿ ಶೋಭಿತಾ ಸುಂದರವಾಗಿ ಕಾಣ್ತಿದ್ದಾರೆರ. ಕೆಳ ಭಾಗಕ್ಕೆ ಬನಾರಸಿ ಉಡುಗೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಡ್ಯುಯಲ್ ಟೋನ್ ಒಡ್ನಿ, ಮುತ್ತಿನ ಹಾರ, ಬಳೆಗಳು, ಬಾಜುಬಂಧಿ, ಕಿವಿಯೋಲೆಗಳು ಮತ್ತು ಪೇಟದ ಜೊತೆ ಶೋಭಿತಾ ತನ್ನ ನೋಟವನ್ನು ಪೂರ್ಣಗೊಳಿಸಿದ್ದಾರೆ.

ಶೋಭಿತಾ ಈ ಫೋಟೋವನ್ನು ಮೆಚ್ಚಿಕೊಳ್ಳುವ ಬದಲು ಅಭಿಮಾನಿಗಳು ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡಿದಂತಿದೆ. ಶೋಭಿತಾ, ನಾಗಚೈತನ್ಯ ಕೈ ಹಿಡಿಯುತ್ತಿರೋದು ಇದಕ್ಕೆ ಕಾರಣ. ನಾಗ ಚೈತನ್ಯ, ಶೋಭಿತಾ ಜೊತೆ ಡೇಟ್ ಮಾಡ್ತಿದ್ದು, ಇದೇ ಕಾರಣಕ್ಕೆ ಸಮಂತಾ ರುತ್ ಪ್ರಭು ಅವರನ್ನು ಬಿಟ್ಟಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ನಾಗಚೈತನ್ಯ ಹಾಗೂ ಶೋಭಿತಾ ಎಂಗೇಜ್ಮೆಂಟ್ ಆದಾಗಿನಿಂದ ಶೋಭಿತಾ ಮೇಲೆ ಅಭಿಮಾನಿಗಳು ಕೆಂಡಕಾರುತ್ತಿದ್ದಾರೆ. 

ಕೃಷ್ಣ ಅಧರ್ಮ ಮತ್ತು ಅನ್ಯಾಯವನ್ನು ಬೆಂಬಲಿಸುವುದಿಲ್ಲ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ನೀವು ರಾಧಾನಾ ಅಥವಾ ರುಕ್ಮಿಣಿಯಾ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಕೃಷ್ಣನ ಪಾತ್ರಕ್ಕೆ ನೀವು ಸೂಕ್ತರಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಕೃಷ್ಣನ ಫೋಟೋ ಹಾಕಿ ಶೋಭಿತಾ ಅಭಿಮಾನಿಗಳಿಂದ ಬೈಗುಳ ಕೇಳುವಂತಾಗಿದೆ. ನಾಗಚೈತನ್ಯಗೆ ಸಮಂತಾ ಬೆಸ್ಟ್ ಎಂದು ಈಗ್ಲೂ ಅಭಿಮಾನಿಗಳು ಹೇಳ್ತಿದ್ದಾರೆ.

ಶೋಭಿತಾ ಹಾಗೂ ನಾಗಚೈತನ್ಯ ಮಧ್ಯೆ ಪ್ರೀತಿ ಚಿಗುರಿದೆ ಎನ್ನುವ ಸುದ್ದಿ ಅನೇಕ ದಿನಗಳ ಹಿಂದೆಯೇ ಕೇಳಿ ಬಂದಿತ್ತು. ಈ ಜೋಡಿ ರಜೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದಾದ್ಮೇಲೆ ಆಗಸ್ಟ್ 8 ರಂದು ನಾಗ ಚೈತನ್ಯ ಅವರೊಂದಿಗೆ ಶೋಭಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾಗಚೈತನ್ಯ ಮನೆಯಲ್ಲಿ ಎಂಗೇಜ್ಮೆಂಟ್ ನಡೆದಿದೆ. ಇದನ್ನು ಅಕ್ಕಿನೇನಿ ನಾಗಾರ್ಜುನ ಅಧಿಕೃತಗೊಳಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು, ಮಗನ ನಿಶ್ಚಿತಾರ್ಥವಾಗಿದೆ ಎಂದಿದ್ದರು. 

ಮಲಯಾಳಂ ಚಿತ್ರರಂಗದಲ್ಲಿ ಇನ್ನೂ ಐವರ ಮೇಲೆ ಲೈಂಗಿಕ ಕಿರುಕುಳ ದೂರು! : ನಟಿ ಮೀನು ಮುನೀರ್‌ ಗಂಭೀರ ಆರೋಪ

ಇದು ನಾಗ ಚೈತನ್ಯ ಅವರಿಗೆ ಎರಡನೇ ಮದುವೆ. ಪ್ರೀತಿಸಿ ಸಮಂತಾ ರುತ್ ಪ್ರಭು ಅವರನ್ನು ಮದುವೆ ಆಗಿದ್ದ ನಾಗಚೈತನ್ಯ ನಾಲ್ಕು ವರ್ಷದ ನಂತ್ರ ಸಮಂತಾರಿಗೆ ವಿಚ್ಛೇದನ ನೀಡಿದ್ದರು. 2017ರಲ್ಲಿ ಇವರಿಬ್ಬರ ಮದುವೆ ನಡೆದಿತ್ತು. ಡಿವೋರ್ಸ್ ಪಡೆದು ಎರಡು ವರ್ಷದ ನಂತ್ರ ನಾಗ ಚೈತನ್ಯ ಎರಡನೇಡ ಮದುವೆಗೆ ಸಿದ್ಧವಾಗಿದ್ದಾರೆ. ಆದ್ರೆ ಶೀಘ್ರವೇ ಅವರ ಮದುವೆ ನಡೆಯೋದಿಲ್ಲ ಎನ್ನಲಾಗ್ತಿದೆ. ನಾಗ ಚೈತನ್ಯ ತಮ್ಮ ವೃತ್ತಿ ಮೇಲೆ ಗಮನ ಕೇಂದ್ರೀಕರಿಸಿದ್ದು, ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?