ಹುಡುಗರು ನಿಮ್ಮನ್ನು ಕಂಡಾಕ್ಷಣ ಎಲ್ಲಿ ನೋಡ್ತಾರೆ ಎಂದು ಕರಣ್ ಜೋಹರ್ ಪ್ರಶ್ನಿಸಿದಾಗ, ಜಾಹ್ನವಿ ಕೊಟ್ಟ ಉತ್ತರ ಕೇಳಿ ಖುದ್ದ ಕರಣ್ ಶಾಕ್ ಆದ್ರು! ಅಷ್ಟಕ್ಕೂ ನಟಿ ಹೇಳಿದ್ದೇನು?
ತೀರಾ ಖಾಸಗಿ, ಸೆಕ್ಸ್ ವಿಷಯಗಳನ್ನೇ ನಟ-ನಟಿಯರಿಗೆ ಕೇಳುವುದಲ್ಲಿ ಫೇಮಸ್ ಆಗಿರೋ ಷೋ ಎಂದರೆ ಕರಣ್ ಜೋಹರ್ ಹೋಸ್ಟ್ ಮಾಡುವ ಫೇಮಸ್ ಟಾಕ್‌ಶೋ 'ಕಾಫಿ ವಿತ್ ಕರಣ್. ಇದೀಗ ಸೀಸನ್ 8 ಆರಂಭಿಸಿದೆ. ಕಾಫಿ ವಿತ್ ಕರಣ್ (Koffee With Karan) ಮುಂಬರುವ ಸಂಚಿಕೆಯಲ್ಲಿ ನಟಿ ಶ್ರೀದೇವಿಯವರ ಪುತ್ರಿಯರಾದ ಖುದ್ದು ನಟಿಯರಾದ ಜಾಹ್ನವಿ ಕಪೂರ್ ( Janhvi Kapoor) ಮತ್ತು ಖುಷಿ ಕಪೂರ್ (Khushi Kapoor) ಕಾಣಿಸಿಕೊಳ್ಳಲಿದ್ದಾರೆ. ಪ್ರೋಮೋ ಬಿಡುಗಡೆಯಾದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿತ್ತು. ಇದೀಗ ನಟಿ ಜಾಹ್ನವಿ ಅವರು ಕರಣ್ ಜೊತೆ ಮಾತನಾಡಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಇವುಗಳ ಪೈಕಿ ಕೆಲವೊಂದು ತಮಾಷೆಯ ವಿಡಿಯೋಗಳೂ ಇವೆ. ಅಷ್ಟಕ್ಕೂ ಈ ಷೋನಲ್ಲಿ ಕರಣ್, ನಟ-ನಟಿಯರ ತೀರಾ ಖಾಸಗಿ ಜೀವನಗಳ ಬಗ್ಗೆ ಪ್ರಶ್ನೆ ಕೇಳಿ ಕಾಂಟ್ರವರ್ಸಿ ಮಾಡುವುದೂ ಇದೆ. ಅದೇ ಇನ್ನೊಂದೆಡೆ, ಇಲ್ಲಿಗೆ ಬರುವ ನಟ-ನಟಿಯರು ತಮ್ಮ ತೀರಾ ಖಾಸಗಿ ವಿಷಯಗಳನ್ನು ಹೇಳಿಕೊಳ್ಳುವುದೂ ಇದೆ.
ಇದೀಗ, ಜಾಹ್ನವಿ ಅವರಿಗೆ ಕರಣ್, ಹುಡುಗರೆಲ್ಲಾ ನನ್ನನ್ನು ನೋಡಿದಾಗ ನಿಮ್ಮ ಕಣ್ಣುಗಳು ತುಂಬಾ ಅಟ್ರಾಕ್ಟ್ ಆಗಿದೆ. ಅದನ್ನೇ ನೋಡುತ್ತೇವೆ ಎನ್ನುತ್ತಾರೆ. ಆದರೆ ನಾನು ಅವರನ್ನು ಸರಿಯಾಗಿ ನೋಡಿದಾಗ ತಿಳಿಯುತ್ತದೆ. ಅವರ ಕಣ್ಣುಗಳು ನನ್ನ ಕಣ್ಣುಗಳನ್ನು ನೋಡುತ್ತಿರುವುದಿಲ್ಲ, ಬದಲಿಗೆ ಅವರ ದೃಷ್ಟಿ ಬೇರೆಲ್ಲೋ ನೆಟ್ಟಿರುತ್ತದೆ ಎಂದು ಧೈರ್ಯವಾಗಿಯೇ ಹೇಳಿದರು. ಇದನ್ನು ಕೇಳಿ ಖುದ್ದು ಕರಣ್ ಜೋಹರ್ ಶಾಕ್ ಆದರೂ ಈ ಧೈರ್ಯದ ಉತ್ತರ ಕೇಳಿ ಗಹಗಹಿಸಿ ನಕ್ಕರು. ಅಷ್ಟಕ್ಕೂ ಜಾಹ್ನವಿ ಕಪೂರ್ ಇತ್ತೀಚೆಗೆ ತಮ್ಮ ಫೋಟೋಶೂಟ್ಗಳಿಂದಲೇ ಫೇಮಸ್ ಆಗುತ್ತಿರುವವರು. ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಾ ಸಾಕಷ್ಟು ಟ್ರೋಲ್ಗೂ ಒಳಗಾಗುತ್ತಿರುತ್ತಾರೆ. ಶ್ರೀದೇವಿ ಪುತ್ರಿಯಾಗಿ ಈ ರೀತಿಯ ಅಶ್ಲೀಲತೆ ಸಲ್ಲದು ಎಂದು ಫ್ಯಾನ್ಸ್ ಆಗಾಗ್ಗೆ ನಟಿಗೆ ಹೇಳುವುದೂ ಉಂಟು. ಇಷ್ಟಿದ್ದರೂ ಅದ್ಯಾವುದರ ಬಗ್ಗೆ ಜಾಹ್ನವಿ ತಲೆ ಕೆಡಿಸಿಕೊಳ್ಳುವುದಿಲ್ಲ. ಇದೀಗ ಎಲ್ಲರ ಕಣ್ಣು ಬೇರೆ ಕಡೆ ನೆಟ್ಟಿರುತ್ತದೆ ಎನ್ನುವ ಮೂಲಕ ತಮ್ಮ ಡ್ರೆಸ್ ಸೆನ್ಸ್ ಬಗ್ಗೆ ನಟಿ ಹೆಮ್ಮೆ ಪಟ್ಟುಕೊಂಡಿರುವಂತೆ ಕಾಣಿಸುತ್ತಿದೆ.
ನಿಮ್ಮ ದೇಹದಲ್ಲಿ ಎಷ್ಟು ಸೌಂದರ್ಯದ ತಾಣಗಳಿವೆ ಎಂದು ಜಾಹ್ನವಿ ಕಪೂರ್ಗೆ ಪ್ರಶ್ನಿಸಿದ ಕರಣ್! ನಟಿ ಹೇಳಿದ್ದೇನು?
ಅದೇ ರೀತಿ ಕಾಫಿ ವಿತ್ ಕರಣ್ಗೆ ಬಂದಾಗಲೂ ನಟಿ ಇಂಥದ್ದೇ ಡ್ರೆಸ್ ಧರಿಸಿದ್ದಾರೆ. ಕೆಂಪು ಡ್ರೆಸ್ನಲ್ಲಿ ಜಾಹ್ನವಿ ಮಿಂಚಿದ್ದಾರೆ. ಈ ಮೂಲಕ ಕಾಫಿ ವಿತ್ ಕರಣ್ ಷೋನ್ನು ಹಾಟ್ ಆಗಿಸಿದ್ದಾರೆ. ಸೆಲೆಬ್ರಿಟಿಗಳು ಎಂದರೆ ಅವರು ಧರಿಸುವ ಬಟ್ಟೆಯ ರೇಟ್ ಅಂತೂ ಕೇಳುವುದೇ ಬೇಡ ಬಿಡಿ. ಆದರೆ ಪಾಪರಾಜಿಗಳು ಬಟ್ಟೆಯನ್ನೂ ಬಿಡದೇ ಅದರ ರೇಟ್ ಕೂಡ ತನಿಖೆ ಮಾಡಿಯೇ ಬಿಡುತ್ತಾರೆ. ಅದೇ ರೀತಿ ಇದೀಗ ಜಾಹ್ನವಿ ಕಪೂರ್ ತೊಟ್ಟ ಬಟ್ಟೆಯ ವಿಷಯವೂ ಮುನ್ನೆಲೆಗೆ ಬಂದಿದೆ. ಅಂದಹಾಗೆ ನಟಿ ತೊಟ್ಟಿರೋ ಈ ಬಟ್ಟೆಯ ಬೆಲೆ 1 ಲಕ್ಷದ 63 ಸಾವಿರ ರೂಪಾಯಿಗಳು ಎನ್ನಲಾಗಿದೆ.
ಈ ರೆಡ್ ಬಾಡಿಕಾನ್ ಡ್ರೆಸ್ ಐಷಾರಾಮಿ ಸ್ಯಾಟಿನ್ ಫ್ಯಾಬ್ರಿಕ್, ಹಾಲ್ಟರ್‌ನೆಕ್, ಮಿಡ್ರಿಫ್ ಕಟೌಟ್, ಬಾಡಿಕಾನ್ ಫಿಟ್ ಆಕಾರ ಹೊಂದಿದೆ. ಮಾಮೂಲಿನಂತೆ ಈ ಡ್ರೆಸ್ನಲ್ಲಿಯೂ ಯಥೇಚ್ಛವಾಗಿ ಶ್ರೀದೇವಿ ಪುತ್ರಿ ದೇಹ ಪ್ರದರ್ಶನ ಮಾಡಿದ್ದಾರೆ. ಕೇಶ ವಿನ್ಯಾಸಕಿ ಮಾರ್ಸ್ ಪೆಡ್ರೊಜೊ ಅವರ ಕೇಶ ವಿನ್ಯಾಸ ಹಾಗೂ ಈ ದುಬಾರಿ ಬಟ್ಟೆಯಿಂದಾಗಿ ಜಾಹ್ನವಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಬಟ್ಟೆ ಸೀಳು ಕಟೌಟ್ ಇರುವ ಕಾರಣ ತೊಡೆಯ ಭಾಗಗಳೂ ಕಾಣಿಸುತ್ತವೆ. ಈಕೆಯ ಡ್ರೆಸ್ ಬೆಲೆ ರಿವೀಲ್ ಆಗುತ್ತಿದ್ದಂತೆಯೇ ನಟಿಯ ಕಾಲೆಳೆದಿರುವ ಕೆಲವು ತರ್ಲೆಕಮೆಂಟಿಗರು ಬಟ್ಟೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಬಟ್ಟೆಯೇ ಇಲ್ಲದಿರೋ ಬಟ್ಟೆಗೆ ಇಷ್ಟು ರೇಟಾ ಎಂದು ಪ್ರಶ್ನಿಸುತ್ತಿದ್ದಾರೆ.
ಕಾಫಿ ವಿತ್ ಕರಣ್ನಲ್ಲಿ ಜಾಹ್ನವಿ ತೊಟ್ಟ ಬಟ್ಟೆಗೆ ಉಫ್ ಇಷ್ಟು ರೇಟಾ? ಬಟ್ಟೆ ಎಲ್ಲಿದೆ ಕೇಳಿದ ನೆಟ್ಟಿಗರು!