ನಿಮ್ಮ ದೇಹದಲ್ಲಿ ಎಷ್ಟು ಸೌಂದರ್ಯದ ತಾಣಗಳಿವೆ ಎಂದು ಜಾಹ್ನವಿ ಕಪೂರ್​ಗೆ ಪ್ರಶ್ನಿಸಿದ ಕರಣ್! ನಟಿ ಹೇಳಿದ್ದೇನು?

By Suvarna News  |  First Published Jan 6, 2024, 5:50 PM IST

ನಿಮ್ಮ ದೇಹದಲ್ಲಿ ಎಷ್ಟು ಸೌಂದರ್ಯದ ತಾಣಗಳಿವೆ ಎಂದು ಜಾಹ್ನವಿ ಕಪೂರ್​ಗೆ ಪ್ರಶ್ನಿಸಿದ  ಕರಣ್​ ಜೋಹರ್​!  ಇದಕ್ಕೆ ನಟಿ ಕೊಟ್ಟ ಉತ್ತರವೇನು? 
 


ಕರಣ್ ಜೋಹರ್  ಹೋಸ್ಟ್ ಮಾಡುವ ಫೇಮಸ್‌ ಟಾಕ್‌ಶೋ 'ಕಾಫಿ ವಿತ್ ಕರಣ್ ಸೀಸನ್ 8' ರ  (Koffee With Karan)ಮುಂಬರುವ ಸಂಚಿಕೆಯಲ್ಲಿ ನಟಿ ಶ್ರೀದೇವಿಯವರ ಪುತ್ರಿಯರಾದ ಖುದ್ದು ನಟಿಯರಾದ ಜಾಹ್ನವಿ ಕಪೂರ್‌ ( Janhvi Kapoor) ಮತ್ತು ಖುಷಿ ಕಪೂರ್  (Khushi Kapoor) ಕಾಣಿಸಿಕೊಳ್ಳಲಿದ್ದಾರೆ.  ಪ್ರೋಮೋ ಬಿಡುಗಡೆಯಾದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿತ್ತು. ಇದಕ್ಕೆ ಕಾರಣ ಈ ಸೀಸನ್​ನಲ್ಲಿ ಜಾಹ್ನವಿ ಅವರು, ಅಚಾನಕ್​ ಆಗಿ ತಮ್ಮ ಬಾಯ್​ಫ್ರೆಂಡ್ ಹೆಸರನ್ನು ರಿವೀಲ್​ ಮಾಡಿರುವ ಕಾರಣದಿಂದ. ಅಷ್ಟಕ್ಕೂ ಕಾಫಿ ವಿತ್​ ಕರಣ್​ ಷೋನಲ್ಲಿ ಕಾಂಟ್ರವರ್ಸಿಗಳೇ ಹೆಚ್ಚು. ಕರಣ್​ ಹೆಚ್ಚಾಗಿ ಸೆಕ್ಸ್​ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆ ಕೇಳುತ್ತಾರೆ ಎನ್ನುವ ಆರೋಪವೂ ಇದೆ. ಅದೇ ರೀತಿ ಜಾಹ್ನವಿ ಕಪೂರ್​ ಕರಣ್​ ಕೇಳಿದ ಪ್ರಶ್ನೆಯೊಂದಕ್ಕೆ ಬಾಯ್ತಪ್ಪಿ ಉದ್ಯಮಿ ಶಿಖರ್​ ಪಹರಿಯಾ ಹೆಸರು ಹೇಳಿದರು.

ಇದೀಗ ಇದೇ ಸಂಚಿಕೆಯಲ್ಲಿ ಜಾಹ್ನವಿ ಇನ್ನೂ ಕೆಲವು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ನಿಮಗೆ ಅಭಿಮಾನಿಗಳಿಂದ ಏನಾದರೂ ಕೆಟ್ಟ ಸಂದೇಶಗಳು ಬಂದಿತ್ತಾ ಎಂದು ಪ್ರಶ್ನಿಸಿದರು. ಅದಕ್ಕೆ ಜಾಹ್ನವಿ, ಆ ರೀತಿ ಬರುತ್ತಲೇ ಇರುತ್ತದೆ. ಆದರೆ ಬಾಲಿವುಡ್​ನ ಓರ್ವ ನಟನಿಂದ ಬಂದಿರುವ ಸಂದೇಶ ಮಾತ್ರ ಬಹಳ ವಿಚಿತ್ರವಾಗಿತ್ತು ಎಂದಿದ್ದಾರೆ. ಆ ನಟ ನನಗೆ  ನಿಮ್ಮ ಬಾಡಿಯಲ್ಲಿರುವ ಎಲ್ಲಾ ಸೌಂದರ್ಯದ ತಾಣಗಳನ್ನು ನೋಡಬೇಕು ಎಂದು ಕೇಳಿ ಮೆಸೇಜ್​ ಕಳುಹಿಸಿದ್ದರು ಎಂದರು. ಇದನ್ನು ಕೇಳಿ ಕರಣ್​ ಜೋಹರ್​ ಬಿದ್ದೂ ಬಿದ್ದೂ ನಕ್ಕರು. ಹಾಗಿದ್ದರೆ ಆ ನಟನ ಸೌಂದರ್ಯದ ತಾಣಗಳೆಲ್ಲಾ ನಿಮ್ಮ ಬಾಡಿಯಲ್ಲಿ ಇವೆಯೇ ಎಂದು ಪ್ರಶ್ನಿಸಿದರು. ನಂತರ ಹಾಗಾದರೆ ನಿಮ್ಮ ದೇಹದಲ್ಲಿ ಎಷ್ಟು ಸೌಂದರ್ಯದ ತಾಣಗಳಿವೆ, ನಮಗೂ ಸ್ವಲ್ಪ ಗೊತ್ತಾಗಲಿ ಎಂದರು. ಆಗ ಜಾಹ್ನವಿ ಯಾವುದೇ ಅಳುಕು ಇಲ್ಲದೇ ನಗುತ್ತಲೇ ನನ್ನ ಬಾಡಿಯಲ್ಲಿ ತುಂಬಾ ಸೌಂದರ್ಯದ ತಾಣಗಳಿವೆ ಎಂದು ಕರಣ್​ ಜೋಹರ್​ ಅವರ ಬಾಯಿ ಮುಚ್ಚಿಸಿದರು. 

Tap to resize

Latest Videos

ಬಾಯ್​ಫ್ರೆಂಡ್​ ಜೊತೆ ಮತ್ತೆ ಜಾಹ್ನವಿ ಟೆಂಪಲ್​ ರನ್​: ಏನಮ್ಮಾ ನಿನ್​ ಕಥೆ ಅಂತಿದ್ದಾರೆ ಫ್ಯಾನ್ಸ್​!

ಇದೇ ವೇಳೆ ಯಾವುದಾದರೂ ನಟನ ಜೊತೆ ಡೇಟಿಂಗ್​ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಜಾಹ್ನವಿ,  ನನ್ನ ಜೀವನದಲ್ಲಿ ಮತ್ತೆಂದೂ ನಟನೊಂದಿಗೆ ಡೇಟಿಂಗ್ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೇನೆ ಎಂದಿದ್ದಾರೆ.  ದೋಸ್ತಾನಾ 2 ಚಿತ್ರೀಕರಣದ ವೇಳೆ ಜಾಹ್ನವಿ ಕಪೂರ್ ನಟ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ಮಾಡಿದ್ದಾರೆ ಎಂಬ ರೂಮರ್ಸ್ ಹರಿದಾಡಿತ್ತು. 2021ರಲ್ಲಿ ಗೋವಾದಲ್ಲಿ ಇಬ್ಬರನ್ನೂ ಒಟ್ಟಿಗೆ ನೋಡಿದವರೂ ಇದ್ದಾರೆ. ಆದರೆ ಈಗ ಅವರ ಹೆಸರು ಉದ್ಯಮಿ ಶಿಖರ್​ ಪಹಾರಿಯಾ ಜೊತೆ ಕೇಳುತ್ತಿರುವ ಕಾರಣ, ನಟನ ಜೊತೆ ಡೇಟಿಂಗ್​ ಮಾಡುವುದಿಲ್ಲ ಎಂದಿದ್ದಾರೆ. ಇದೇ ವೇಳೆ, ಭಾವಿ ಪತಿ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಜಾಹ್ನವಿ ಕಪೂರ್​,  ತನ್ನ ಬಗ್ಗೆ ಪ್ರೀತಿ ಇರುವವರು ನನಗೆ ಬೇಕು ಎನ್ನುತ್ತಲೇ ಶಿಖರ್​ ಪಹಾರಿಯಾ ಜೊತೆಗಿನ ಸಂಬಂಧದ ಕುರಿತು ಪರೋಕ್ಷವಾಗಿ ಹೇಳಿದ್ದಾರೆ.   

ಅಂದಹಾಗೆ, ಸದ್ಯ ಜಾಹ್ನವಿ ಅವರು ಶಿಖರ್ ಪಹಾರಿಯಾ ಜೊತೆ ಟೆಂಪಲ್​ ರನ್​  ಮಾಡುತ್ತಿದ್ದಾರೆ. ನಿನ್ನೆ ತಾನೇ ತಿರುಪತಿಗೂ ಭೇಟಿ ಕೊಟ್ಟಿದ್ದರು.   ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ (Sushil Kumar Shindhe) ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ. ಶಿಖರ್​ ಪಹರಿಯಾ ಜೊತೆ ಜಾಹ್ನವಿ ಡೇಟಿಂಗ್​  ಮಾಡ್ತಿರೋ ವಿಷಯ ತುಂಬಾ ಹಳೆಯದು. ಇದಾಗಲೇ ಹಲವು ಕಡೆಗಳಲ್ಲಿ ಇವರು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಫೋಟೋ ಶೂಟ್​ ಕೂಡ ಮಾಡಿಸಿಕೊಂಡಿದ್ದಾರೆ.  ಬಾಲಿವುಡ್​ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ನಡುವೆಯೇ ಹೀಗೆಲ್ಲಾ ಸುದ್ದಿಯಾಗುತ್ತಲೇ ಇರುವ ಜಾಹ್ನವಿ ಈಗ ಬಾಯ್​ ಫ್ರೆಂಡ್​ (Boy Friend) ಜೊತೆ ಟ್ರಿಪ್​ಗೆ ಹೋಗಿರುವ ಫೋಟೋಗಳು ವೈರಲ್​ ಆಗಿದ್ದವು. ಒಟ್ಟಿಗೇ ಪೂಜೆ ಮಾಡಿದ್ದ ಫೋಟೋ ಕೂಡ ವೈರಲ್​ ಆಗಿ ಇಬ್ಬರ ಮದ್ವೆ ನಡೆದೇ ಹೋಗಿದೆ ಎಂದೂ ಸುದ್ದಿಯಾಗಿತ್ತು.

ಕಾಫಿ ವಿತ್​ ಕರಣ್​ನಲ್ಲಿ ಜಾಹ್ನವಿ ತೊಟ್ಟ ಬಟ್ಟೆಗೆ ಉಫ್​ ಇಷ್ಟು ರೇಟಾ? ಬಟ್ಟೆ ಎಲ್ಲಿದೆ ಕೇಳಿದ ನೆಟ್ಟಿಗರು!
 

click me!