ಅಭಿಮಾನಿಯ ಫೋನ್ ಕಸಿದು ಅದರಲ್ಲಿರುವ ವಿಡಿಯೋ, ಫೋಟೋ ಡಿಲೀಟ್ ಮಾಡಿದ್ದಾರೆ ತಮಿಳು ನಟ ಅಜಿತ್! ವೈರಲ್ ವಿಡಿಯೋಗೆ ಫ್ಯಾನ್ಸ್ ಗರಂ
ತಮಿಳು (Tamil) ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಖ್ಯಾತಿ ಪಡೆದಿರುವ ನಟ ಅಜಿತ್ ಕುಮಾರ್ ಕಳೆದ ಮೇ ತಿಂಗಳಿನಲ್ಲಿ 52 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಯಸ್ಸಿನಲ್ಲಿಯೂ ಟಾಲಿವುಡ್ನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ ನಟ ಅಜಿತ್. ಇವರ ಕುರಿತು ಒಂದು ಇಂಟರೆಸ್ಟಿಂಗ್ ವಿಷಯ ಇದೆ. ಅದೇನೆಂದರೆ, ಅಜಿತ್ ಅವರು ಮೊಬೈಲ್ ಫೋನ್ ಬಳಸುವುದೇ ಇಲ್ಲ ಎನ್ನುವುದು. ಇವರ ಬಳಿ ಇದುವರೆಗೂ ಒಂದೇ ಒಂದು ಮೊಬೈಲ್ ಫೋನ್ ಇಲ್ಲ. ಇದು ಅವರಿಗೆ ಇಷ್ಟವಿಲ್ಲವಂತೆ. ಇವರನ್ನು ಯಾರಾದರೂ ಸಂಪರ್ಕಿಸುವುದಾದರೆ, ಅವರ ಆಪ್ತರ ಬಳಿ ಹೇಳಬೇಕಷ್ಟೇ. ಇದು ತುಂಬಾ ವಿಚಿತ್ರ ಎನಿಸಿದರೂ ನಿಜವೂ ಹೌದು. ನನಗೆ ಇದರಲ್ಲಿ ಆಸಕ್ತಿ ಇಲ್ಲ ಎನ್ನುತ್ತಾರೆ ನಟ. ಪೊನ್ನಿಯಿನ್ ಸೆಲ್ವನ್ ಪ್ರಚಾರದ ವೇಳೆ ಈ ಕುರಿತು ನಟಿ ತ್ರಿಶಾ ಕೂಡ ಮಾತನಾಡಿದ್ದರು. ಅಜಿತ್ ಕುಮಾರ್ ಹೆಸರನ್ನು ನಿಮ್ಮ ಮೊಬೈಲ್ನಲ್ಲಿ ಏನೆಂದು ಸೇವ್ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ಉತ್ತರ ಕೊಟ್ಟಾಗಲೇ ಅಜಿತ್ ಅವರು ಫೋನ್ ಬಳಸುವುದಿಲ್ಲ ಎನ್ನುವ ವಿಷಯ ಬಹಿರಂಗಗೊಂಡಿತ್ತು. ನಟಿ ತಮಗೆ ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ಅಜಿತ್ ತಮ್ಮ ಬಳಿ ಫೋನ್ ಹೊಂದಿಲ್ಲ ಎಂದಿದ್ದರು. ನಾನು ಅವರೊಂದಿಗೆ ಮಾತಾಬೇಕು ಅಂದ್ರೆ ಮೊದಲು ಅವರ ಆಪ್ತರನ್ನು ಸಂಪರ್ಕಿಸಬೇಕು ನಟಿ ಹೇಳಿದ್ದರು. ಅಜಿತ್ ಫೋನ್ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಅಜಿತ್ ಕುಮಾರ್ ಅವರು ಭಾರತದ ಐರನ್ ಮ್ಯಾನ್ನಂತೆ ಎಂದು ನಟಿ ಹೇಳಿದ್ದರು.
ಸರಿ. ಇವರಿಗೇನೋ ಮೊಬೈಲ್ ಫೋನ್ ಅಂದ್ರೆ ಆಗಿಬರಲ್ಲ. ಹಾಗೆಂದು ಅಭಿಮಾನಿಗಳ ಫೋನ್ ತಗೊಂಡು ಹೀಗೆಲ್ಲಾ ಮಾಡೋದಾ? ಹೌದು. ಅಜಿತ್ ಈ ಹಿಂದೆ, ಮತಗಟ್ಟೆಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಲು ಪ್ರಯತ್ನಿಸಿದ ಅಭಿಮಾನಿಯ ಫೋನ್ ಕಿತ್ತುಕೊಂಡಿದ್ದರು. ಅಲ್ಲಿದ್ದ ವಿಡಿಯೋ ಮತ್ತು ಫೋಟೋಗಳನ್ನು ಡಿಲೀಟ್ ಮಾಡಿ ಅಭಿಮಾನಿಗೆ ಸಖತ್ ವಾರ್ನಿಂಗ್ ನೀಡಿದ್ದರು. ಅಷ್ಟಕ್ಕೂ ಆಗ ಕೊರೋನಾ ಸಮಯ ಆಗಿದ್ದ ಹಿನ್ನೆಲೆಯಲ್ಲಿ ಕೊರೋನಾ ರೂಲ್ಸ್ ಬ್ರೇಕ್ ಮಾಡಿ ಅಭಿಮಾನಿ ಬಂದಿರುವುದರಿಂದ ನಟ ಕೋಪಗೊಂಡಿದ್ದಾರೆ ಎನ್ನಲಾಗಿತ್ತು. ಅದರೆ ಈಗ ಆಗಿದ್ದೇ ಬೇರೆ.
ಅದೇನೆಂದರೆ, ಈಗ ಮತ್ತೊಮ್ಮೆ ಅಜಿತ್ ಅದೇ ರೀತಿ ಮಾಡಿದ್ದಾರೆ. ಅವರ ಅಭಿಮಾನಿಯೊಬ್ಬರು ಇವರ ಫೋಟೋ, ವಿಡಿಯೋ ಕ್ಲಿಕ್ ಮಾಡಿಕೊಂಡಿದ್ದರು. ಇದರಿಂದ ಗರಂ ಆಗಿರೋ ನಟ, ಫೋನ್ ಕಸಿದುಕೊಂಡು ಎಲ್ಲಾ ವಿಡಿಯೋ ಡಿಲೀಟ್ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಹಾಗೂ ಅಜಿತ್ ಅವರ ಫ್ಯಾನ್ಸ್ ಗರಂ ಆಗಿದ್ದಾರೆ. ಪದೇ ಪದೇ ಇವರು ಇದೇ ರೀತಿ ಮಾಡುತ್ತಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಮೇಲೆ ಇಂಥದ್ದೆಲ್ಲಾ ಮಾಮೂಲು. ವಿಡಿಯೋ, ಫೋಟೋ ಕ್ಲಿಕ್ ಮಾಡಿದರೆ ಅವರಿಗೇನು ಸಮಸ್ಯೆ ಆಗುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋ ಅವರು ಕುಟುಂಬ ಸಹಿತ ಹೊಸ ವರ್ಷವನ್ನು ದುಬೈನಲ್ಲಿ ಕಳೆಯುತ್ತಿದ್ದ ಸಂದರ್ಭದಲ್ಲಿ ನಡೆದದ್ದು ಎನ್ನಲಾಗಿದೆ.
ಅಂದಹಾಗೆ, ಅಜಿತ್ ಅವರು, ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಬಯಸುವವರಲ್ಲ. ತಮ್ಮ ಸಿನಿಮಾ ಕಾರ್ಯಕ್ರಮಗಳಿಗೂ ಹಾಜರು ಆಗುವುದಿಲ್ಲ, ಸಿನಿಮಾ ಪ್ರಚಾರ ಮಾಡುವುದಿಲ್ಲ. ಇವರ ಸಿನಿಮಾದ ಕುರಿತು ಹೇಳುವುದಾದರೆ, ಇವರು, ಕೊನೆಯದಾಗಿ ತುನಿವು ಸಿನಿಮಾದಲ್ಲಿ ಕಾಣಿಸಿಕೊಂಡರು. ಇದು ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಅವರು ಪ್ರಸ್ತುತ ಮಾಗಿಜ್ ತಿರುಮೇನಿ ನಿರ್ದೇಶನದ ವಿದಾಮುಯಾರ್ಚಿ ಎಂಬ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಜಿತ್ ಹೊರತುಪಡಿಸಿ, ಚಿತ್ರದಲ್ಲಿ ತ್ರಿಶಾ, ಅರ್ಜುನ್ ಮತ್ತು ರೆಜಿನಾ ಕ್ಯಾಸೆಂಡ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Video ah எடுக்கிறா ??
அத குடு இங்க ...Deleted😂 pic.twitter.com/Ygwf28Z7q3