Latest Videos

ಬರ್ತಡೇ ಪಾರ್ಟಿಗೆ ಕನ್ನಡ ಸೆಲೆಬ್ರಿಟಿಗಳಿಗೂ ಆಹ್ವಾನ ನೀಡಿದ ಕರಣ್ ಜೋಹರ್

By Shruiti G KrishnaFirst Published May 17, 2022, 2:12 PM IST
Highlights

ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ಇದೇ ತಿಂಗಳು ಮೇ 25ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 50ನೇ ವರ್ಷಕ್ಕ ಕಾಲಿಡುತ್ತಿರುವ ಕರಣ್ ಜೋಹರ್ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ದಕ್ಷಿಣದ ಅನೇಕ ಸ್ಟಾರ್ ನಟರನ್ನು ಮತ್ತು ನಿರ್ದೇಶಕರನ್ನು ತಮ್ಮ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿರುವುದು ವಿಶೇಷವಾಗಿದೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್(Karan Johar) ಇದೇ ತಿಂಗಳು ಮೇ 25ರಂದು ಹುಟ್ಟುಹಬ್ಬ(Birthday) ಆಚರಿಸಿಕೊಳ್ಳುತ್ತಿದ್ದಾರೆ. 50ನೇ ವರ್ಷಕ್ಕ ಕಾಲಿಡುತ್ತಿರುವ ಕರಣ್ ಜೋಹರ್ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿವರ್ಷ ಕರಣ್ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಆದರೆ ಈ ಬಾರಿಯ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷ ರೀತಿಯಲ್ಲೇ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ದಕ್ಷಿಣದ ಅನೇಕ ಸ್ಟಾರ್ ನಟರನ್ನು ಮತ್ತು ನಿರ್ದೇಶಕರನ್ನು ತಮ್ಮ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿರುವುದು ವಿಶೇಷವಾಗಿದೆ.

ಕರಣ್ ಜೋಹರ್ ಅಥವಾ ಬಾಲಿವುಡ್ ಸೆಲೆಬ್ರಿಟಿಗಳ ಪಾರ್ಟಿ, ಕಾರ್ಯಕ್ರಮಗಳಲ್ಲಿ ಕೇವಲ ಹಿಂದಿ ಮಂದಿಗೆ ಮಾತ್ರ ಆಹ್ವಾನ ಇರುತ್ತಿತ್ತು. ದಕ್ಷಿಣ ಭಾರತದ ಕಲಾವಿದರನ್ನು ಲೆಕ್ಕಕ್ಕೆ ಇಟ್ಟಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ದಕ್ಷಿಣದ ಕಲಾವಿದರಿಗೂ ಆಹ್ವಾನ ನೀಡುವ ಮೂಲಕ ಅದ್ದೂರಿ ಸ್ವಾಗತ ಕೋರಲು ಸಜ್ಜಾಗಿದ್ದಾರೆ. ಅಂದಹಾಗೆ ಈ ಬದಲಾವಣೆಗೆ ಕಾರಣವಾಗಿದ್ದು ದಕ್ಷಿಣ ಭಾರತದ ಸಿನಿಮಾಗಳ ಸಕ್ಸಸ್. ಹೌದು, ದಕ್ಷಿಣ ಭಾರತದ ಸಿನಿಮಾಗಳ ಯಶಸ್ಸು ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿವೆ. ಪುಷ್ಪ, ಆರ್ ಆರ್ ಆರ್, ಕೆಜಿಎಫ್-2 ಸೇರಿದಂತೆ ಅನೇಕ ದಕ್ಷಿಣ ಸಿನಿಮಾಗಳು ಬಾಲಿವುಡ್ ನಲ್ಲಿ ಭರ್ಜರಿ ಕಮಾಯಿ ಮಾಡಿವೆ.

ಇದೇ ಕಾರಣಕ್ಕೆ ಕರಣ್ ಜೋಹರ್ ದಕ್ಷಿಣದ ಸ್ಟಾರ್ ಕಲಾವಿದರ ಜೊತೆಯೂ ಸ್ನೇಹ ಬೆಳೆಸಿದ್ದಾರೆ. ಸೌತ್ ಸೆಲೆಬ್ರಿಟಿಗಳ ಜೊತೆ ಉತ್ತಮ ಒಡನಾಟ ಹೊಂದಿರುವ ಕರಣ್ ಜೋಹರ್ ಅವರನ್ನು ಪಾರ್ಟಿಗೆ ಆಹ್ವಾನಿಸುತ್ತಿದ್ದಾರೆ. ವಿಶೇಷ ಎಂದರೆ ಕನ್ನಡದ ಕಲಾವಿದರು ಇದ್ದಾರೆ. ಕೆಜಿಎಫ್-2 ಸಿನಿಮಾತಂಡದ ಜೊತೆ ಕರಣ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕೆಜಿಎಫ್-2 ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮವನ್ನು ಕರಣ್ ಜೋಹರ್ ಹೋಸ್ಟ್ ಮಾಡಿದ್ದರು. ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನೆರವೇರಿತ್ತು. ಮೊದಲ ಬಾರಿಗೆ ಕರಣ್ ಕನ್ನಡ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು.

Koffee with Karan ಶೋನಲ್ಲಿ ರಶ್ಮಿಕಾ ಜೊತೆ ಇರ್ತಾರೆ ಮತ್ತೊಬ್ಬ ಸ್ಟಾರ್ ನಟ

ಹೀಗೆ ದಕ್ಷಿಣದ ಸೆಲೆಬ್ರಿಟಿಗಳ ಸ್ನೇಹ ಸಂಪಾದಿಸಿರುವ ಕರಣ್ ಜೋಹರ್ ತನ್ನ ಹುಟ್ಟುಹಬ್ಬಕ್ಕೆ ತೆಲುಗು ಸ್ಟಾರ್ ವಿಜಯ್ ದೇವರಕೊಂಡ, ಆರ್ ಆರ್ ಆರ್ ಕಲಾವಿದರಾದ ಜೂ ಎನ್ ಟಿ ಆರ್, ರಾಮ್ ಚರಣ್, ರಾಜಮೌಳಿ ಕನ್ನಡದ ಸ್ಟಾರ್ಸ್ ಪ್ರಶಾಂತ್ ನೀಲ್, ಯಶ್ ಸೇರಿದಂತೆ ಅನೇಕರಿಗೆ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನ ನೀಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.

7 ವರ್ಷದ ಬಳಿಕ ಮತ್ತೆ ತೆರೆಮೇಲೆ ಶಾರುಖ್-ಕಾಜೋಲ್ ಜೋಡಿ; ಕರಣ್ ಜೋಹರ್‌ಗೆ ಥ್ಯಾಂಕ್ಸ್ ಎಂದ ಫ್ಯಾನ್ಸ್

ಕರಣ್ ಜೋಹರ್ ಬಾಲಿವುಡ್‌ನ ಅತ್ಯಂತ ಶ್ರೀಮಂತ ನಿರ್ಮಾಪಕರಲ್ಲಿ ಒಬ್ಬರು. ರಾಯಲ್ ಲೈಫ್ ನಡೆಸುತ್ತಿರುವ ಕರಣ್ ಹುಟ್ಟುಹಬ್ಬವನ್ನು ಅಷ್ಟೇ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಇಡೀ ಬಾಲಿವುಡ್ ಮಂದಿಯನ್ನು ಪಾರ್ಟಿಗೆ ಕರೆದು ಸಂಭ್ರಮಿಸುತ್ತಾರೆ. ಈ ಬಾರಿ ಸೌತ್ ಸ್ಟಾರ್ ಗಳಿಗೂ ಆಹ್ವಾನ ನೀಡುವ ಮೂಲಕ ಮತ್ತಷ್ಟು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಅಂದಹಾಗೆ ಈ ಬಾರಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ ಕನ್ನಡದ ಸೆಲೆಬ್ರಿಟಿಗಳು ಯಾರೆಲ್ಲ ಹಾಜರಾಗಲಿದ್ದಾರೆ ಎಂದು ಕಾದು ನೋಡಬೇಕು.

click me!