ಸ್ಟಾರ್ ಸುವರ್ಣ ವಾಹಿನಿಯ ಮತ್ತೊಂದು ಧಾರಾವಾಹಿ ಪ್ರಸಾರ ನಿಲ್ಲಿಸುತ್ತಿದೆ. ಸಂಘರ್ಷ ಧಾರಾವಾಹಿ. ಸಧ್ಯದಲ್ಲೇ ಸಂಘರ್ಷ ಧಾರಾವಾಹಿ ತನ್ನ ಪಯಣ ಮುಗಿಸುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. 500 ಸಂಚಿಕೆಗಳನ್ನು ಸಂಪೂರ್ಣಮಾಡಿರುವ ಈ ಧಾರಾವಾಹಿ ಮುಕ್ತಾಯದ ಹಂತಕ್ಕೆ ಬಂದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ. ಹಾಗೂ ಹೊಸ ಹೊಸ ಧಾರಾವಾಹಿಗಳು ಪ್ರಾರಂಭವಾಗುತ್ತಲೇ ಇವೆ. ಅನೇಕ ಧಾರಾವಾಹಿಗಳು ಟಿಆರ್‌ಪಿ ಇಲ್ಲದ ಕಾರಣ ದಿಢೀರ್ ಪ್ರಸಾರ ನಿಲ್ಲಿಸುತ್ತವೆ. ಕಿರುತೆರೆ ಲೋಕದಲ್ಲಿ ಧಾರಾವಾಹಿಗಳ ನಡುವೆ ಪೈಪೋಟಿ ಜೋರಾಗಿದೆ. ಪ್ರೇಕ್ಷಕರನ್ನು ಮೆಚ್ಚಿಸುವ, ಅವರ ಗಮನ ಸೆಳೆಯುವ ಧಾರಾವಾಹಿಗಳನ್ನು ಕಟ್ಟಿಕೊಡುವುದು ಚಾಲೆಂಜಿಂಗ್ ಕೆಲಸವಾಗಿದೆ. ಪ್ರಾರಂಭದಲ್ಲಿ ಧಾರಾವಾಹಿಗಳು ಭಾರಿ ಕುತೂಹಲ ಮತ್ತು ನಿರೀಕ್ಷೆಯನ್ನು ಮೂಡಿಸಿರುತ್ತವೆ. ಆದರೆ ಅದನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವುದು ಕಷ್ಟದ ಕೆಲಸ.
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಸ್ಟಾರ್ ಸುವರ್ಣ(Star Suvarna) ವಾಹಿನಿಯಲ್ಲಿ ಪಯಣ ಮುಗಿಸಿದ ಧಾರಾವಾಹಿಗಳ ಸಂಖ್ಯೆ ಹೆಚ್ಚಿಸಿದೆ. ಅದರಲ್ಲಿ ಇಂತಿ ನಿಮ್ಮ ಆಶಾ, ಮತ್ತೆ ವಸಂತ, ಜೀವ ಹೂವಾಗಿದೆ ಮತ್ತು ರಾಧೆ ಶ್ಯಾಮ ಹೀಗೆ ಮುಂತಾದ ಧಾರಾವಾಹಿಗಳು ತನ್ನ ಪ್ರಸಾರ ನಿಲ್ಲಿಸುವ ಮೂಲಕ ಪ್ರೇಕ್ಷಕರಿಗೆ ಶಾಕ್ ನೀಡಿವೆ. ಇದೀಗ ಮತ್ತೊಂದು ಧಾರಾವಾಹಿ ಪ್ರಸಾರ ನಿಲ್ಲಿಸುತ್ತಿದೆ. ಸಂಘರ್ಷ ಧಾರಾವಾಹಿ. ಸಧ್ಯದಲ್ಲೇ ಸಂಘರ್ಷ ಧಾರಾವಾಹಿ ತನ್ನ ಪಯಣ ಮುಗಿಸುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಮದ್ವೆ ಫಿಕ್ಸಾಗೋದು ಒಬ್ಬರ ಜೊತೆ, ತಾಳಿ ಕಟ್ಟೋದು ಮತ್ತೊಬ್ರಿಗೆ, ಈ ಕನ್ನಡ ಸೀರಿಯಲ್‌ಗಳಿಗೇನಾಗಿದೆ?
ಆದರೆ ಈ ಬಗ್ಗೆ ಧಾರಾವಾಹಿ ತಂಡದಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ಸಂಘರ್ಷ ಧಾರಾವಾಹಿ ಇನ್ನು ಪ್ರಸಾರವಾಗುತ್ತಿದೆ. ಅಲ್ಲದೇ ಚಿತ್ರೀಕರಣ ಸಹ ನಡೆಯುತ್ತಿದೆ. ಪ್ರಸಾರ ನಿಲ್ಲಿಸುವ ಬಗ್ಗೆ ಯಾವುದೇ ಮಾಹಿತಿ ತಿಳಿಸಿಲ್ಲ. ಇತ್ತೀಚಿಗಷ್ಟೆ ಸಂಘರ್ಷ ಧಾರಾವಾಹಿ 500 ಸಂಚಿಕೆಗಳನ್ನು ಪೂರೈಸಿದೆ. ಇದರ ಯಶಸ್ಸನ್ನು ಇತ್ತೀಚಿಗಷ್ಟೆ ಧಾರಾವಾಹಿ ತಂಡ ಆಚರಣೆ ಮಾಡಿತ್ತು. ನಿರ್ಮಾಪಕಿ ಶ್ರುತಿ ನಾಯ್ಡು ಅವರು ಗ್ರ್ಯಾಂಡ್ ಪಾರ್ಟಿಯನ್ನು ಆಯೋಜಿಸಿದ್ದು ಇಡೀ ಸಂಘರ್ಷ ತಂಡ ಭಾಗಿಯಾಗಿತ್ತು. ದೊಡ್ಡ ಕೇಕ್ ಕತ್ತರಿಸಿ ಸಂಭ್ರಮ ಆಚರಣೆ ಮಾಡಿದ್ದರು. ಅದ್ದೂರಿಯಾಗಿ ಆಚರಣೆ ಮಾಡಿದ್ದು ಡಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ್ದರು.
ಪ್ರಸಾರ ನಿಲ್ಲಿಸಲಿದೆ ಸ್ಟಾರ್ ಸುವರ್ಣ ವಾಹಿನಿಯ ಮತ್ತೊಂದು ಧಾರಾವಾಹಿ
ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ರೋಹಿತ್ ಮತ್ತು ತೇಜಸ್ವಿನಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಘರ್ಷ ಮಹತ್ವಾಕಾಂಕ್ಷಿ ಮಹಿಳೆಯಾಗಿದ್ದು, ಬೈರಾದೇವಿ ಎಂಬ ದುರಹಂಕಾರಿ ಮತ್ತು ಶಕ್ತಿಶಾಲಿ ಮಹಿಳೆಯ ಪ್ರಾಬಲ್ಯಕ್ಕೆ ಒಳಗಾಗಿರುವ ಜಿಲ್ಲೆಯ ಡಿಸಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾಳೆ. ಆದರೆ ಬೈರಾದೇವಿ ಇದು ಇಷ್ಟವಾಗುವುದಿಲ್ಲ. ಇದನ್ನು ವಿರೋಧ ಮಾಡುತ್ತಾಳೆ. ಹಾಗಾಗಿ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗುತ್ತದೆ. ಭೈರಾದೇವಿಯ ಪ್ರಾಬಲ್ಯದ ನಡುವೆಯೂ ನಾಯಕಿ ಹೇಗೆ ಯಶಸ್ವಿಯಾಗುತ್ತಾಳೆ ಎನ್ನುವುದು ಧಾರಾವಾಹಿಯ ತಿರುಳಾಗಿದೆ. ಒಂದಿಷ್ಟು ಕುತೂಹಲ ಟ್ವಿಸ್ಟ್ ಮತ್ತ ಟರ್ನ್ ಪಡೆದುಕೊಳ್ಳುತ್ತಾ ಮುನ್ನುಗ್ಗುತ್ತಿದ್ದ ಈ ಧಾರಾವಾಹಿ ಈ ಪ್ರಸಾರ ನಿಲ್ಲಿಸಲಿದೆ ಎನ್ನುವ ವಿಚಾರ ಕಿರುತೆರೆ ಪ್ರೇಕ್ಷಕರಲ್ಲಿ ಬೇಸರ ಮೂಡಿಸಿದೆ.