ರಾಜಾ ರಾಣಿ ಸೀಸನ್ 2 v/s ಜೋಡಿ ನಂ.1; ಕಿರುತೆರೆಯಲ್ಲಿ ಜೋಡಿಗಳ ರಿಯಾಲಿಟಿ ಶೋ ಪೈಪೋಟಿ

Published : May 17, 2022, 01:49 PM IST
ರಾಜಾ ರಾಣಿ ಸೀಸನ್ 2 v/s ಜೋಡಿ ನಂ.1; ಕಿರುತೆರೆಯಲ್ಲಿ ಜೋಡಿಗಳ ರಿಯಾಲಿಟಿ ಶೋ ಪೈಪೋಟಿ

ಸಾರಾಂಶ

ಶೀಘ್ರದಲ್ಲೇ ಕನ್ನಡ ಕಿರುತೆರೆಯಲ್ಲಿ ರಾಜಾ ರಾಣಿ ಸೀಸನ್ 2 ಎಂದು ಕಲರ್ಸ್ ವಾಹಿನಿ ಬಹಿರಂಗ ಪಡಿಸಿದೆ. ಮೊದಲ ಶೋ ದೊಡ್ಡ ಯಶಸ್ಸು ಕಂಡ ಬೆನ್ನಲ್ಲೇ ಅದೇ ಖುಷಿ, ಉತ್ಸಾಹದಿಂದ ರಾಜಾ ರಾಣಿ ಸೀಸನ್ 2 ಮಾಡಲು ವಾಹಿನಿ ನಿರ್ಧರಿಸಿದೆ. ಈಗಾಗಲೇ ಸೀಸನ್-2 ಗಾಗಿ ತಯಾರಿ ನಡೆಸುತ್ತಿದ್ದು ಸದ್ಯದಲ್ಲೇ ಪ್ರಸಾರವಾಗುವ ಸಾಧ್ಯತೆ ಇದೆ. ಡಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮ ಮುಗಿಯುತ್ತಿದ್ದಂತೆ ರಾಜಾ ರಾಣಿ ಸೀಸನ್ 2 ಅರಂಭವಾಗುತ್ತಿದೆ.  

ಕನ್ನಡ ಕಿರುತೆರೆಯಲ್ಲಿ ಅನೇಕ ರಿಯಾಲಿಟಿಗಳು ಪ್ರಸಾರವಾಗುತ್ತಿವೆ. ಒಂದು ಮುಗಿಯುತ್ತಿದ್ದಂತೆ ಮತ್ತೊಂದು ರಿಯಾಲಿಟಿ ಶೋ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿರುತ್ತವೆ. ಕಾಮಿಡಿ, ಗಾಯನ, ಡಾನ್ಸ್ ಸೇರಿದಂತೆ ಅನೇಕ ರೀತಿಯ ರಿಯಾಲಿಟಿ ಶೋಗಳು ಕನ್ನಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿವೆ. ಇತ್ತೀಚಿಗೆ ಕನ್ನಡದಲ್ಲಿ ವಿಭಿನ್ನ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಅಂತಹ ಶೋಗಳಲ್ಲಿ ಕನ್ನಡಿಗರ ಗಮನ ಸೆಳೆದ ಕಾರ್ಯಕ್ರಮ ವೆಂದರೆ ರಾಜ ರಾಣಿ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಶೋ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಇಷ್ಟು ಬೇಗ ಶೋ ಮುಕ್ತಾಯವಾಯಿತಾ ಎಂದು ಪ್ರೇಕ್ಷಕರು ಬೇಸರಮಾಡಿಕೊಂಡಿದ್ದರು. ಆದರೀಗ ಸಂತಸದ ವಿಚಾರ ಎಂದರೇ ರಾಜಾ ರಾಣಿ ಮತ್ತೆ ಬರ್ತಿದೆ.

ಬಹುನಿರೀಕ್ಷೆಯ ರಾಜಾ ರಾಣಿ ಶೋ ಮತ್ತೆ ಪ್ರಸಾರವಾಗುತ್ತಿದೆ. ಶೀಘ್ರದಲ್ಲೇ ಕನ್ನಡ ಕಿರುತೆರೆಯಲ್ಲಿ ರಾಜಾ ರಾಣಿ ಸೀಸನ್ 2 ಎಂದು ಕಲರ್ಸ್ ವಾಹಿನಿ ಬಹಿರಂಗ ಪಡಿಸಿದೆ. ಮೊದಲ ಶೋ ದೊಡ್ಡ ಯಶಸ್ಸು ಕಂಡ ಬೆನ್ನಲ್ಲೇ ಅದೇ ಖುಷಿ, ಉತ್ಸಾಹದಿಂದ ರಾಜಾ ರಾಣಿ ಸೀಸನ್ 2 ಮಾಡಲು ವಾಹಿನಿ ನಿರ್ಧರಿಸಿದೆ. ಈಗಾಗಲೇ ಸೀಸನ್-2 ಗಾಗಿ ತಯಾರಿ ನಡೆಸುತ್ತಿದ್ದು ಸದ್ಯದಲ್ಲೇ ಪ್ರಸಾರವಾಗುವ ಸಾಧ್ಯತೆ ಇದೆ. ಡಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮ ಮುಗಿಯುತ್ತಿದ್ದಂತೆ ರಾಜಾ ರಾಣಿ ಸೀಸನ್ 2 ಅರಂಭವಾಗುತ್ತಿದೆ.

ಜೋಡಿ ನಂ.1 ಕಾರ್ಯಕ್ರಮ

ಅಂದಹಾಗೆ ಕಲರ್ಸ್ ವಾಹಿನಿಯಲ್ಲಿ ರಾಜಾ ರಾಣಿ ಪ್ರಸಾರವಾಗುತ್ತಿದ್ದರೆ ಜೀ ಕನ್ನಡ ವಾಹಿನಿಯಲ್ಲೂ ಜೋಡಿ ನಂ.1 ಕಾರ್ಯಕ್ರಮ ಸಿದ್ಧವಾಗುತ್ತಿದೆ. ಇದು ಕೂಡ ದಂಪತಿಗಳ ಗೇಮ್ ಶೋ ಆಗಿರಲಿದೆ. ಈಗಾಗಲೇ ಜೀ ವಾಹಿನಿ ಪ್ರೋಮೋ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಎಂದು ಬಹಿರಂಗ ಪಡಿಸಿದ್ದಾರೆ. ಪ್ರೋಮೋ ನೋಡಿದರೆ ಇದು ಕೂಡ ರಾಜಾ ರಾಣಿ ಹಾಗೆ ಜೋಡಿಗಳ ಕಾರ್ಯಕ್ರಮ ಎನ್ನುವುದು ಗೊತ್ತಾಗುತ್ತಿದೆ. ಈ ಬಗ್ಗೆ ವಾಹಿನಿ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಒಟ್ನಲ್ಲಿ ಕನ್ನಡ ಕಿರುತೆರೆಯಲ್ಲಿ ಜೋಡಿಗಳ ರಿಯಾಲಿಟಿ ಶೋಗಳ ನಡುವೆ ಫೈಪೋಟಿ ಏರ್ಪಡಲಿದೆ. 

ಮಾಸ್ಟರ್ ಆನಂದ್ ಹೆಂಡ್ತಿ ಅಂತಿದ್ದವರು ಈಗ ಯಶಸ್ವಿನಿ ಅಂತಿದ್ದಾರೆ; ಸಂತಸದಲ್ಲಿ ರಿಯಾಲಿಟಿ ವಿನ್ನರ್!

ಸಿದ್ಧವಾಗುತ್ತಿದೆ ಸ್ಪರ್ಧಿಗಳ ಲಿಸ್ಟ್

ರಾಜಾ ರಾಣಿ ಶೋನಲ್ಲಿ ಬಣ್ಣದ ಲೋಕದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಸೀಸನ್-2ಗಾಗಿ ಈಗಾಗಲೇ ಅನೇಕ ಸೆಲಬ್ರಿಟಿಗಳನ್ನು ವಾಹಿನಿ ಸಂಪರ್ಕ ಮಾಡಿದ್ದು ಸ್ಪರ್ಧಿಗಳ ಅಂತಿಮ ಪಟ್ಟಿ ತಯಾರಿಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಶೋನಲ್ಲಿ 12 ಪ್ರಸಿದ್ಧ ಜೋಡಿಗಳು ಭಾಗಿಯಾಗಲಿದ್ದಾರೆ. ವಾರಾಂತ್ಯದಲ್ಲಿ ಈ ಶೋ ಪ್ರಸಾರವಾಗಲಿದೆ. ಮೊದಲ ಸೀಸನ್ ಗಿಂತ 2ನೇ ಸೀಸನ್ ನಲ್ಲಿ ಮನರಂಜನೆ ಮತ್ತಷ್ಟು ಹೆಚ್ಚಾಗಿ ಇರಲಿದೆ ಎನ್ನಲಾಗುತ್ತಿದೆ.

ರಾಜಾ ರಾಣಿ ಮದುವೆಯಾದ ಹೊಸ ಜೋಡಿಗಳು, ವೈವಾಹಿಕ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಿ ಸುಖಿಸಂಸಾರ ನಡೆಸುವ ಜೋಡಿಗಳ ಗೇಮ್ ಶೋ ಆಗಿದೆ. ಈ ಶೋನಲ್ಲಿ ಜೋಡಿಗಳ ನಡುವಿನ ಬಾಂಧವ್ಯ ಮತ್ತಷ್ಟು ಹೆಚ್ಚಾಗುವ ಜೊತೆಗೆ ಅನೇಕರಿಗೆ ಸ್ಫೂರ್ತಿಯಾಗಲಿದೆ. ರಾಜಾ ರಾಣಿ ಸೀಸನ್ 1ರಲ್ಲಿ ಸೃಜನ್ ಲೋಕೇಶ್ ಮತ್ತು ನಟಿ ತಾರಾ ಜಡ್ಜ್ ಆಗಿದ್ದರು. ಅನುಪಮಾ ಗೌಡ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು.

ರಾಜಾ ರಾಣಿ ಸೀಸನ್ 1 ವಿನ್ನರ್ ನೇಹಾ-ಚಂದನ್

ಅಂದಹಾಗೆ ಮೊದಲ ಸೀಸನ್ ನಲ್ಲಿ ಕಿರುತೆರೆಯ ಖ್ಯಾತ ನಟಿ ನೇಹಾ ಗೌಡ ಮತ್ತು ಚಂದನ್ ದಂಪತಿ ವಿನ್ನರ್ ಆಗಿ ಹೊರಹೊಮ್ಮಿದ್ದರು. 2ನೇ ಸೀಸನ್ ನಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ, ಯಾರು ವಿನ್ನರ್ ಆಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?