ನಾನು ಬಾಲಿವುಡ್ ಉಳಿಸಲು ಬರುತ್ತಿದ್ದೇನೆ ಎಂದ ಕ್ವೀನ್ ಕಂಗನಾ

Suvarna News   | Asianet News
Published : Apr 01, 2021, 01:12 PM ISTUpdated : Apr 01, 2021, 02:00 PM IST
ನಾನು ಬಾಲಿವುಡ್ ಉಳಿಸಲು ಬರುತ್ತಿದ್ದೇನೆ ಎಂದ ಕ್ವೀನ್ ಕಂಗನಾ

ಸಾರಾಂಶ

ಕರಣ್ ಜೋಹರ್, ಆದಿತ್ಯ ಚೋಪ್ರಾ ಹಾಗೂ ಬಾಲಿವುಡ್‌ನ ಇತರೆ ನಾಯಕರು ತಲೆಮರೆಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಗೆ ವಿಳಂಬ ಮಾಡುತ್ತಿದ್ದಾರೆ. ಆದರೆ 100 ಕೋಟಿ ಬಜೆಟ್‌ನ ಸಿನಿಮಾದೊಂದಿಗೆ ಕಂಗನಾ ಟೀಂ ತೆರೆಮೇಲೆ ಬರಲಿದೆ. ನಾನು ಬಾಲಿವುಡ್ ಅ‌ನ್ನು ಉಳಿಸಲು ಬರುತ್ತಿದ್ದೇನೆ, ಎಂದಿದ್ದಾರೆ. ಆ ಮೂಲಕ ತಮ್ಮ ದುರಹಂಕಾರದ ಮಾತನ್ನು ಮತ್ತೆ ಮುಂದುವರಿಸಿದ್ದಾರೆ. ಅಷ್ಟಕ್ಕೂ ಬಾಲಿವುಡ್ ಉಳಿಸಲು ಈ ಕಂಗನಾ ಯಾರು?  

ಮಹರಾಷ್ಟ್ರದಲ್ಲಿ ದಿನೆ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇರೋ ಈ ಸಂದರ್ಭದಲ್ಲಿ ಬಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳು ತೆರೆಮೇಲೆ ಬರೋದಕ್ಕೆ ಹೆದರುತ್ತಿವೆ. ಹೀಗಿರಬೇಕಾದರೆ ತಮಿಳುನಾಡು ಮಾಡಿ ಮುಖ್ಯಮಂತ್ರಿ ಅಮ್ಮ ಜಯಲಲಿತಾ ಜೀವನಾಧಾರಿತ 'ಸಿನಿಮಾ' ತಲೈವಿ ತೆರೆಗೆ ಬರಲು ಸಿದ್ದವಾಗಿದೆ. ತಲೈವಿ ಬಿಡುಗಡೆಯ ದಿನಾಂಕವನ್ನು ಬಾಲಿವುಡ್ ಕ್ವೀನ್ ಖ್ಯಾತಿಯ ನಟಿ ಕಂಗನಾ ಮತ್ತೊಮ್ಮೆ ಖಚಿತ ಪಡಿಸಿದ್ದಾರೆ.

ಫ್ಲೋರಲ್ ಸೀರೆಯಲ್ಲಿ ಕಂಗನಾ ಕ್ಯೂಟ್ ಲುಕ್: ಇಲ್ನೋಡಿ ಫೋಟೋಸ್

ಬುಧವಾರ ತಡ ರಾತ್ರಿ ಟ್ವೀಟ್ ಮಾಡಿರುವ ನಟಿ ಕಂಗನಾ, 100 ಕೋಟಿ ಬಿಗ್ ಬಜೆಟ್ ಸಿನಿಮಾ ಬಿಡುಗಡೆ ಮಾಡುವುದರೊಂದಿಗೆ ನಾನೆ ಬಾಲಿವುಡ್‌ನ ಸಂರಕ್ಷಕಿ ಆಗಲಿದ್ದೇನೆ, ಎಂಬ ಸೊಕ್ಕಿನ ಮಾತನ್ನು ಹೇಳಿದ್ದಾರೆ. ಈಗಾಗಲೇ ಎಪ್ರಿಲ್ 23ರಂದು ಬಿಡುಗಡೆಯ ದಿನಾಂಕವನ್ನ ನಿಗದಿ ಮಾಡಿದ್ದ ಚಿತ್ರ ತಂಡ ಹಿಂದಿ, ತಮಿಳು, ತೆಲುಗು ಮೂರೂ ಬಾಷೆಗಳಲ್ಲಿಯೂ ಬಿಡುಗಡೆಗೆ ಸಿದ್ದತೆ ನಡೆಸಿದೆ.

 

 

ಈ ಕುರಿತು ಟ್ವೀಟರ್ ನಲ್ಲಿ ಬರೆದುಕೊಂಡಿರುವ ಕಂಗನಾ ಬಾಲಿವುಡ್ ಘಟಾನುಗಟಿಗಳ ವಿರುದ್ದ ಕಿಡಿಕಾರುವುದನ್ನ ಮರೆತಿಲ್ಲ. ಎಲ್ಲರೂ ಸೇರಿ ಗುಂಪುಗಾರಿಕೆ ಮಾಡಿದರು, ನನ್ನನ್ನು ಹೊರಹಾಕಲು ನೋಡಿದರು. ನನ್ನನ್ನು ಹೊರಗಿನವಳಾಗಿ ನೋಡಿದರು. ಈಗ ಕರಣ್ ಜೋಹರ್, ಆದಿತ್ಯ ಚೋಪ್ರಾ ಹಾಗೂ ಇತರೆ ಬಾಲಿವುಡ್‌ನ  ಘಟಾನುಘಟಿ ನಾಯಕರೇ ತಲೆಮರೆಸಿಕೊಂಡು ಕೂತಿರಬೇಕಾದರೆ, 100 ಕೋಟಿ ಬಜೆಟ್ ನ ಸಿನಿಮಾದೊಂದಿಗೆ ಕಂಗನಾ ಟೀಂ ತೆರೆಮೇಲೆ ಬರಲಿದೆ.

50 ಡಿಗ್ರಿಯ ಉರಿ ಬಿಸಿಯಲ್ಲಿ ಕಂಗನಾ ಆಕ್ಷನ್ ಶೂಟಿಂಗ್..!

ನಾನೇ ಬಾಲಿವುಡ್‌ನ ಸೇವಿಯರ್ ಆಗಲಿದ್ದೇನೆ. ಬಾಲಿವುಡ್ ಉಳಿಸಲು ಬರುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಸರಣಿ ಟ್ವೀಟ್ ಮಾಡಿರುವ ತಲೈವಿ ನಟಿ ತಮ್ಮನ್ನು ತಾವು ಬಾಲಿವುಡ್ ರಕ್ಷಕಿ, ತಾಯಿ ಎಂದು ಕರೆದುಕೊಂಡಿರುವ ಜೊತೆಗೆ ಈ ದಿನಗಳನ್ನ ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡಬಹುದು. ಹೊರಗನಿಂದ ಬಂದ ಮಹಿಳೆ ಬಾಲಿವುಡ್‌ನ ಸಂರಕ್ಷಕಿ ಆದಳು ಎಂದು ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ತಲೈವಿಯಲ್ಲಿ ಕಂಗನಾ ಜೊತೆ ಅರವಿಂದ್ ಸ್ವಾಮಿ, ನಸ್ಸಾರ್, ಭಾಗ್ಯಶ್ರೀ ಮುಂತಾದವರು ನಟಿಸಿದ್ದಾರೆ. 

ಕಂಗನಾ ಇತ್ತೀಚೆಗೆ ತಮ್ಮನ್ನು ಶ್ರೀದೇವಿಗೆ ಹೋಲಿಸಿಕೊಂಡಿದ್ದಲ್ಲದೇ, ಕೆಲವು ಹಾಲಿವುಡ್ ನಟಿಯರಿಗೂ ಕಂಪೇರ್ ಮಾಡಿಕೊಂಡಿದ್ದು ನೆಟ್ಟಿಗರ ಟೀಕೆಗೆ ಗುರಿಯಾಗಿದ್ದವು. ಅಲ್ಲದೇ ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ, ಹಿಂದಿ ಚಿತ್ರೋದ್ಯಮದಲ್ಲಿ ತಾಂಡವ ಆಡುತ್ತಿರುವ ಸ್ವಜನಪಕ್ಷಪಾತದ ಬಗ್ಗೆ ಧ್ವನಿ ಎತ್ತಿ, ಎಲ್ಲರನ್ನೂ ಎದುರು ಹಾಕಿಕೊಂಡಿದ್ದರು. ಇದೀಗ ಮತ್ತೆ ಬಾಲಿವುಡ್ ಸಂರಕ್ಷಕಿ ಎನ್ನುವ ಮೂಲಕ ಮತ್ತೊಂದು ವಿವಾದಕ್ಕೆ ಎಡೆ ಮಾಡಿ ಕೊಡುತ್ತಿದ್ದಾರೆ. ಅಷ್ಟಕ್ಕೂ ಹಲವಾರು ವರ್ಷಗಳ ಇತಿಹಾಸ ಇರುವ ಬಾಲಿವುಡ್ ಸಂರಕ್ಷಿಸಲು ಈ ಕಂಗನಾ ಯಾರೆಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತಿರುವುದು ಸುಳ್ಳಲ್ಲ. 

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!