ಮೊದಲ ಬಾರಿ ತಾಯಿ ಆಗಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೇ ತಿಂಗಳಲ್ಲಿ ತಮ್ಮ ಕೆಲಸ ಆರಂಭಿಸುವುದಾಗಿ ಹೇಳಿದ್ದರು. ಆದರೆ ಈಗ ಎರಡು ತಿಂಗಳ ಮುಂಚೆಯೇ ಕೆಲಸಕ್ಕೆ ಹಾಜರಾಗಿದ್ದಾರೆ. ನಟಿ ಹೇಗೆ ಫಿಟ್ & ಫೈನ್ ಆಗಿದ್ದಾರೆ ನೋಡಿ..
ಜಾಹೀರಾತು ಚಿತ್ರೀಕರಣದವೊಂದರಲ್ಲಿ ಕಾಣಿಸಿಕೊಂಡಿರುವ ಅನುಷ್ಕಾ ಶರ್ಮಾ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ದಂಪತಿಗೆ ಜನವರಿ 11ಕ್ಕೆ ಮಗಳು ಜನಿಸಿದ್ದಳು. ಮಗಳಿಗೆ ವಾಮಿಕಾ ಎಂದು ಮುದ್ದಾದ ಹೆಸರಿಟ್ಟಿದ್ದಾರೆ.
ಮಗಳಿಗೆ ವಿರಾಟ್ ಕೊಹ್ಲಿ ಹೆಸರಿನಿ ವಿ ಅಕ್ಷರ ಮತ್ತು ಅನುಷ್ಕಾ ಹೆಸರಿನ ಕೊನೆಯ ಕಾ ಅಕ್ಷರ ಸೇರಿಸಿ ವಾಮಿಕಾ ಎಂದು ಹೆಸರಿಡಲಾಗಿದೆ. ಮಗಳು ಜನಿಸಿದ ನಂತರ ಮೊದಲ ಬಾರಿಗೆ ಮಾರ್ಚ್ 4 ರಂದು ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅನುಷ್ಕಾ ಶರ್ಮಾ ಮಗಳು ವಾಮಿಕಾ ಜೊತೆಗೆ ಕಾಣಿಸಿಕೊಂಡಿದ್ದರು.
ವಿರುಷ್ಕಾ ದಂಪತಿ ಮಗಳ ಫೋಟೋ ಕ್ಲಿಕ್: ಫೋಟೋಗ್ರಾಫರ್ ಮೇಲೆ ಸಿಟ್ಟಾಗಿರುವ ಫ್ಯಾನ್ಸ್!
ಈಗ ಮಗಳು ಜನಿಸಿದ ನಂತರ ಮೊದಲ ಬಾರಿ ಕೆಲಸಕ್ಕೆ ಹಾಜರಾಗಿದ್ದಾರೆ ಅನುಷ್ಕಾ ಶರ್ಮಾ. ಸದ್ಯಕ್ಕೆ ಅನುಷ್ಕಾ ಹೊಸದಾಗಿ ಯಾವುದೇ ಸಿನಿಮಾದಲ್ಲಿ ನಟಿಸುವ ಸುಳಿವು ನೀಡಿಲ್ಲ. ಆದರೆ ಅವರ ಅಭಿಮಾನಿಗಳು ಆದಷ್ಟು ಶೀಘ್ರದಲ್ಲಿಯೇ ಅನುಷ್ಕಾ ಹೊಸ ಸಿನಿಮಾವನ್ನು ಅನೌನ್ಸ್ ಮಾಡಲಿ ಎಂದು ಆಶಿಸುತ್ತಿದ್ದಾರೆ.
&
ಖಾಸಗಿ ಮಾಧ್ಯಮ ಜೊತೆಗಿನ ಸಂವಾದದಲ್ಲಿ ಮಾತನಾಡಿದ್ದ ಅನುಷ್ಕಾ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮಗಳ ಭಾವಚಿತ್ರಗಳನ್ನು ಹರಿದಾಡಲು ಬಿಡುವುದಿಲ್ಲ. ಯಾವುದೇ ಮಗುವನ್ನು ಇತರ ಮಕ್ಕಳಿಗಿಂತ ವೀಶೇಷವಾಗಿ ಬಿಂಬಿಸುವುದು ಸರಿಯಲ್ಲ. ಹಾಗಾಗಿ ಮಕ್ಕಳು ದೊಡ್ಡವರಾದ ಮೇಲೆ ಅವರೇ ಈ ನಿರ್ಧಾರ ಕೈಗೊಳ್ಳಬೇಕು. ನಮ್ಮ ಮಗಳನ್ನು ಸಾಮಾಜಿಕ ಜೀವನದಿಂದ ದೂರ ಇಡುವ ಕಾರ್ಯ ಸುಲಭವಲ್ಲ. ಆದರೆ ನಾವು ಪ್ರಯತ್ನವಂತೂ ಮಾಡುತ್ತೇವೆ, ಎಂದು ಹೇಳಿದ್ದರು.
ವಮಿಕಾಗೆ ಈಗಲೇ ನೇಮ್ ಪ್ಲೇಟ್..! ಎಷ್ಟು ಮುದ್ದಾಗಿದೆ ನೋಡಿ
ಈಗ ಅನುಷ್ಕಾ ಆರೋಗ್ಯ ಉತ್ತಮವಾಗಿದ್ದು ದೈಹಿಕವಾಗಿಯೂ ಸದೃಢರಾಗಿದ್ದಾರೆ. ಅಲ್ಲದೇ ಅವರು ಪ್ರೊಫೆಷನಲ್ ಲೈಫ್ ಮತ್ತು ಪರ್ಸನಲ್ ಲೈಫ್ ಬ್ಯಾಲೆನ್ಸ್ ಮಾಡುವುದಾಗಿ ಹೇಳಿದ್ದಾರೆ. ಅನುಷ್ಕಾ ಯಾವಾಗಲೂ ತುಂಬಾ ಪಂಕ್ಚುವಲ್ ಆಗಿರುತ್ತಾರೆ. ಅಲ್ಲದೇ ನಿಗದಿತ ಸಮಯಕ್ಕಿಂತ ಮೊದಲೇ ಅವರು ಸೆಟ್‌ಗೆ ಬರುತ್ತಾರೆ ಎಂಬುದು ಅವರನ್ನು ಹತ್ತಿರದಿಂದ ಕಂಡವರ ಮಾತು.
ಇದೀಗ ಮಗುವಾಗಿ ಮೂರು ತಿಂಗಳೊಳಗೇ ಕೆಲಸಕ್ಕೆ ಮರಳುತ್ತಿದ್ದು, ಅವರ ಪ್ರೊಫೆಷನಲಿಸಮ್ ತೋರಿಸುತ್ತೆ. ಅತ್ತ ಕರೀನಾ ಕಪೂರ್ ಸಹ ಮಗನಿಗೆ ಮೂರು ತಿಂಗಳು ತುಂಬುವುದರೊಂದಿಗೆ ತಮ್ಮ ರೂಟೀನ್ ಬದುಕಿಗೆ ಮರಳುತ್ತಿದ್ದು, ಬ್ಯುಸಿನೆಸ್ ಮೀಟಿಂಗ್ ಹಾಗೂ ಶೂಟಿಂಗ್‌ಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ. ಅಯ್ಯೋ ಮಕ್ಕಳ ಜೊತೆ ಕಾಲ ಕಳೆಯೋದ ಬಿಟ್ಟು, ದುಡ್ಡಿಗಾಗಿ ಈ ನಟಿಯರು ಇಷ್ಟು ಹಪಾಹಹಿಸುವುದೇಕೆ ಎಂದು ನೆಟ್ಟಿಗರು ಕಮೆಂಟ್ ಮಾಡಬಹುದು. ಆದರೆ, ಹೆಣ್ಣಿಗೆ ಮಗುವಾದ ಮೇಲೆ ಜೀವನ ಮುಗಿದು ಬಿಡೋಲ್ಲ. ಸಾಧಿಸುವ ಛಲ ಮಾತ್ರ ಬಿಡಬಾರದು. ಸಂಸಾರ ಹಾಗೂ ಉದ್ಯೋಗವನ್ನು ಬ್ಯಾಲೆನ್ಸ್ ಮಾಡೋ ಚಾಕಚಕ್ಯತೆ ಇರಬೇಕು ಎಂಬುದನ್ನು ಜಗತ್ತಿಗೆ ಸಾರಿ ಹೇಳುತ್ತಿರುವುದು ಮಾತ್ರ ಸುಳ್ಳಲ್ಲ. ಆ ಮೂಲಕ ಮಗುವಾದ ಮೇಲೆ ತಮ್ಮ ಜೀವನವೇ ಮುಗೀತು ಎನ್ನೋ ರೀತಿ ಆಡುವ ಸಾಮಾನ್ಯ ವರ್ಗದ ಹೆಣ್ಣು ಮಕ್ಕಳಿಗೆ ಈ ಬಾಲಿವುಡ್ ನಟಿಯರ ನಡೆ ಕಿವಿ ಹಿಂಡುವಂತೆ ಮಾಡಿದೆ.