
ಬೇಸಿಗೆ ಇಲ್ಲಿದೆ ನೋಡಿ! ಸಮ್ಮರ್ ಬಂದಿದ್ದೇ ತಡ, ಬೇಸಗೆಯ ಬಿಸಿಗಿಂತಲೂ ಹಾಟ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ ಬಾಲಿವುಡ್ ನಟಿಯರು. ಲೇಟೆಸ್ಟ್ ಆಗಿ ನಟಿ ಇಶಾ ಅವರ ಸರದಿ.
ಇಶಾ ಕೊಪ್ಪಿಕರ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗಿದೆ. ನಟಿ ಇಶಾ ತನ್ನ ಇನ್ಸ್ಟಾಗ್ರಾಂ ಫ್ಯಾಮಿಲಿಗೆ ತನ್ನ ಈಜುಡುಗೆ ಫೋಟೋಶೂಟ್‌ನ ಫೋಟೋ ತೋರಿಸಿದ್ದಾರೆ.
ಪಿಗ್ಗಿಯ ಈ ಸಮ್ಮರ್ ಡ್ರೆಸ್ ಬೆಲೆಗೆ ಒಂದಲ್ಲ, 4 ಗೇಮಿಂಗ್ ಲ್ಯಾಪ್‌ಟಾಪ್ ಬರ್ತಿತ್ತು..!
ಫೋಟೋಗಳಲ್ಲಿ, ನಟಿ ಕಪ್ಪು ಮತ್ತು ಬಿಳಿ ಪಟ್ಟಿಯ ಈಜುಡುಗೆಯಲ್ಲಿ ಈಜುಕೊಳದ ಮುಂದೆ ಪೋಸ್ ಕೊಡೋದನ್ನು ಕಾಣಬಹುದು. ಅವಳು ತನ್ನ ಈಜುಡುಗೆಯನ್ನು ಬ್ರೈಟ್ ಹಳದಿ ಬ್ಲೇಜರ್, ಚಿನ್ನದ ಮೊಣಕಾಲು ತನಕ ಉದ್ದದ ಬೂಟುಗಳು ಮತ್ತು ಪಾರದರ್ಶಕ ಸನ್‌ಗ್ಲಾಸ್‌ನೊಂದಿಗೆ ಸೇರಿಸಿದ್ದಾರೆ.
ಏಕ್ ವಿವಾ ಐಸಾ ಭಿ ನಟಿ ಫೋಟೋ ಜೊತೆಗೆ ಚಮತ್ಕಾರಿ ಶೀರ್ಷಿಕೆ ಬರೆದಿದ್ದಾರೆ. ಮುಂಬರುವ ವಾರದಲ್ಲಿ ತಾಪಮಾನವು ಏರಿಕೆಯಾಗಲಿದೆ ಎಂದು ನಾನು ಕೇಳಿದೆ, ಅದನ್ನು ಸ್ವಲ್ಪ ಹೆಚ್ಚಿಸುವ ಯೋಚನೆ ಇದೆ ಎಂದು ಹಾಸ್ಯವಾಗಿ ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.