ಸೈಫ್ ಕೇಸ್ ಬೆನ್ನಲ್ಲೇ ಕಪಿಲ್ ಶರ್ಮಾ ಸೇರಿ ನಾಲ್ವರಿಗೆ ಪಾಕ್‌ನಿಂದ ಜೀವ ಬೆದರಿಕೆ, ಪೊಲೀಸ್ ಅಲರ್ಟ್

Published : Jan 23, 2025, 09:10 AM IST
ಸೈಫ್ ಕೇಸ್ ಬೆನ್ನಲ್ಲೇ ಕಪಿಲ್ ಶರ್ಮಾ ಸೇರಿ ನಾಲ್ವರಿಗೆ ಪಾಕ್‌ನಿಂದ ಜೀವ ಬೆದರಿಕೆ, ಪೊಲೀಸ್ ಅಲರ್ಟ್

ಸಾರಾಂಶ

ಕಾಮಿಡಿ ಶೋ ನಿರೂಪಕ, ನಟ ಕಪಿಲ್ ಶರ್ಮಾ, ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಸೇರಿದಂತೆ ನಾಲ್ವರು ಸೆಲೆಬ್ರೆಟಿಗಳಿಗೆ ಪಾಕಿಸ್ತಾನದಿಂದ ಜೀವ ಬೆದರಿಕೆ ಬಂದಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. 

ಮುಂಬೈ(ಜ.23) ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲಿನ ದಾಳಿ ಪ್ರಕರಣದ ಬಳಿಕ ಮುಂಬೈ ಪೊಲೀಸರು ಹೆಚ್ಚು ಅಲರ್ಟ್ ಆಗಿದ್ದಾರೆ. ಈಗಾಗಲೇ ಹಲವು ಬಾಲಿವುಡ್ ಸೆಲೆಬ್ರೆಟಿಗಳು ಟಾರ್ಗೆಟ್ ಆಗಿದ್ದಾರೆ. ಹೀಗಾಗಿ ಈ ನಟ ನಟಿಯರಿಗೆ ಹೆಚ್ಚುವರಿ ಭದ್ರತೆ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಕಾಮಿಡಿ ಶೋ ನಿರೂಪಕ, ನಟ ಕಪಿಲ್ ಶರ್ಮಾ, ಬಾಲಿವುಡ್ ಕಾಮಿಡಿ ನಟ ರಾಜ್‌ಪಾಲ್ ಯಾದವ್ ಸೇರಿದಂತೆ ಒಟ್ಟು ನಾಲ್ವರು ಸೆಲೆಬ್ರೆಟಿಗಳಿಗೆ ಪಾಕಿಸ್ತಾನದಿಂದ ಬೆದರಿಕೆ ಬಂದಿದೆ. ಇಮೇಲ್ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಕುರಿತು ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಪಿಲ್ ಶರ್ಮಾ, ರಾಜ್‌ಪಾಲ್ ಯಾದವ್, ರೆಮೋ ಡಿಸೋಜಾ, ಸುಗಂಧ ಮಿಶ್ರಾಗೆ ಬೆದರಿಕೆ ಇಮೇಲ್ ಬಂದಿದೆ. ಅಂಬೋಲಿ ಪೊಲೀಸರ ಮಾಹಿತಿ ಪ್ರಕಾರ, ಇಮೇಲ್‌ ಮೂಲಕ ನಾಲ್ವರಿಗೆ ಬೆದರಿಕೆ ಹಾಕಲಾಗಿದೆ. ನಿಮ್ಮ ಇತ್ತೀಚಿನ ಎಲ್ಲಾ ಚಟುವಟಿಕೆಯನ್ನು ನಮ್ಮ ತಂಡ ಹತ್ತಿರದಿಂದ ಗಮನಿಸುತ್ತಿದೆ. ಇದು ಅತ್ಯಂತು ಸೂಕ್ಷ್ಮ ವಿಚಾರ, ಹೀಗಾಗಿ ನಿಮಗೆ ಎಚ್ಚರಿಕೆ ನೀಡುತಿದ್ದೇವೆ. ಇದು ಪ್ರಚಾರದ ಭಾಗವಲ್ಲ, ಈ ಇಮೇಲ್ ಗಂಭೀರವಾಗಿ ಪರಿಗಣಿಸಿ. ಈ ಸಂದೇಶವನ್ನು ಅತ್ಯಂತ ಗೌರವಯುತವಾಗಿ ಕಾಣಬೇಕು, ಜೊತೆಗೆ ರಹಸ್ಯವಾಗಿಡಬೇಕು ಎಂದು ಇಮೇಲ್ ಮೂಲಕ ಹೇಳಲಾಗಿದೆ. ಕೇವಲ 8 ಗಂಟೆ ಸಮಯ ನೀಡುತ್ತೇವೆ. ಅಷ್ಟರೊಳಗೆ ಹಣ ನೀಡಿ ಪ್ರಕರಣ ಸುಕಾಂತ್ಯಗೊಳಿಸಿ ಎಂದು ಸೂಚಿಸಲಾಗಿದೆ. ಕೊನೆಯಲ್ಲಿ ಬಿಷ್ಣು ಎಂದು ಬರೆಯಲಾಗಿದೆ.

ಸೈಫ್ ದಾಳಿ ಪ್ರಕರಣದಿಂದ ದೆಹಲಿ ಅಲರ್ಟ್, ಖಡಕ್ ಸೂಚನೆ ನೀಡಿದ ಲೆಫ್ಟಿನೆಂಟ್ ಗವರ್ನರ್

ಬಿಷ್ಣೋಯ್ ಗ್ಯಾಂಗ್ ಕೃತ್ಯವೇ ಎಂದು ಅಂಬೋಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. 351(3) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅನಾಮಿಕರಿಂದ ಬೆದರಿಕೆ ಕರೆ ಎಂದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ.  ಈ ವೇಳೆ ಇಮೇಲ್ ಕಳುಹಿಸಿರುವುದು ಪಾಕಿಸ್ತಾನದಿಂದ ಅನ್ನೋದು ಬಯಲಾಗಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂಬೈನಲ್ಲಿ ಸೆಲೆಬ್ರೆಟಿಗಳನ್ನು ಟಾರ್ಗೆಟ್ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಪೊಲೀಸರು ಅಲರ್ಟ್ ಆಗಿದ್ದಾರೆ.

ಸೈಫ್ ಆಲಿ ಖಾನ್ ಮೇಲಿನ ದಾಳಿ ಬಳಿಕ ಮುಂಬೈನಲ್ಲಿ ಸೆಲೆಬ್ರೆಟಿಗಳು ಆತಂಕದಿಂದ ದಿನದೂಡುತ್ತಿದ್ದಾರೆ. ಸೈಫ್ ಆಲಿ ಖಾನ್ ಬಾಂದ್ರಾದಲ್ಲಿರುವ ಮನೆಗೆ ನುಗ್ಗಿದ ಅನಾಮಿಕ ದಾಲಿ ನಡೆಸಿದ್ದ. 1 ಕೋಟಿ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಮುಂಜಾನೆ ಸೈಫ್ ಆಲಿ ಖಾನ್ ಮನೆಗೆ ನುಗ್ಗಿ ದಾಳಿ ಸಂಘಟಿಸಿದ್ದ. ಈ ದಾಳಿಯಲ್ಲಿ ಸೈಫ್ ಆಲಿ ಖಾನ್ ಗಂಭೀರವಾಗಿ ಗಾಯಗೊಂಡಿದ್ದರು. ನೆರವಿಗೆ ಧಾವಿಸಿದ ಪುತ್ರ ಇಬ್ರಾಹಿಂ ಆಲಿ, ಸೈಫ್ ಆಲಿ ಖಾನ್‌ನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದರು. 

ಆರು ದಿನದಿಂದ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸೈಫ್ ಆಲಿ ಖಾನ್ ಬಿಡುಗಡೆಯಾಗಿದ್ದಾರೆ. ಸದ್ಯ ಸೈಫ್ ಆಲಿ ಖಾನ್‌ಗೆ ವಶ್ರಾಂತಿಗೆ ಸೂಚಿಸಿದ್ದಾರೆ. ಸೈಫ್ ಆಲಿ ಖಾನ್ ಮೇಲೆ ದಾಳಿ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಾಂಗ್ಲಾದೇಶಿ ಅಕ್ರಮ ನುಸುಳುಕೋರನಾಗಿರುವ ಈ ಆರೋಪಿ ಇದೀಗ ಭಾರತದ ಆಂತರಿಕ ಭದ್ರತೆಗೆ ಸವಾಲೆಸೆದಿದ್ದಾನೆ. ಸೈಫ್ ಆಲಿ ಖಾನ್ ಪ್ರಕರಣಕ್ಕೂ ಮೊದಲು ಬಾಲಿವುಡ್ ನಟ ಸಲ್ಮಾನ್ ಖಾನ್ ಮೇಲೆ ದಾಳಿ ಯತ್ನಗಳು ನಡೆದಿತ್ತು. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. 

ಸಲ್ಮಾನ್ ಮನ ಮೇಲೆ ಗುಂಡಿನ ದಾಳಿ ನಡೆದಿತ್ತು. ಇಷ್ಟೇ ಅಲ್ಲ ಸಲ್ಮಾನ್ ಖಾನ್‌ಗೆ ಬಿಷ್ಣೋಯ್ ಗ್ಯಾಂಗ್ ಜೀವ ಬೆದರಿಕೆ ಹಾಕಲಾಗಿತ್ತು.

6 ದಿನಗಳ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೈಫ್ ಆಲಿ ಖಾನ್ ಬಿಡುಗಡೆ, ವೈದ್ಯರ ಖಡಕ್ ಸೂಚನೆ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?