Sara Ali Khan: ಬಾಯ್​ಫ್ರೆಂಡ್​ ಶುಭ್​ಮನ್​ ಗಿಲ್​ ಕುರಿತ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ನಟಿ

Published : Jun 04, 2023, 02:24 PM IST
Sara Ali Khan: ಬಾಯ್​ಫ್ರೆಂಡ್​ ಶುಭ್​ಮನ್​ ಗಿಲ್​ ಕುರಿತ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ನಟಿ

ಸಾರಾಂಶ

ಕ್ರಿಕೆಟಿಗ ಶುಭ್​ಮನ್ ಗಿಲ್​ ಜೊತೆ ನಟಿ ಸಾರಾ ಅಲಿ ಖಾನ್​ ಬ್ರೇಕಪ್​ ಮಾಡಿಕೊಂಡಿದ್ದು, ಕತ್ರಿನಾ ಕೈಫ್​ ಪತಿ ವಿಕ್ಕಿ ಕೌಶಕ್​ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಕಪಿಲ್​ ಶರ್ಮಾ ಇದೇ ಪ್ರಶ್ನೆ ಕೇಳೀದಾಗ ನಟಿ ಹೇಳಿದ್ದೇನು?​  

ಬಾಲಿವುಡ್​ ನಟಿ ಸಾರಾ ಅಲಿ ಖಾನ್ ನಿಜ ಮತ್ತು ರೀಲ್ ಜೀವನದಲ್ಲಿ ತುಂಬಾ ಕೂಲ್ ಎಂದು ಪರಿಗಣಿಸಲಾಗಿದೆ. ಆಕೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಏನನ್ನೂ ಮುಚ್ಚಿಡುವುದಿಲ್ಲ ಎಂದೇ ಫೇಮಸ್ ಆದವರು​. ಆದರೆ ಈಗ ಸಾರಾ ಕೂಡ ಮೌನವಾಗಿರುವುದನ್ನು ಕಲಿತಂತೆ ತೋರುತ್ತದೆ. ಟೀಂ ಇಂಡಿಯಾ ಆಟಗಾರ ಶುಭ್​​ಮನ್ ಗಿಲ್ (Shubman Gill) ಹಾಗೂ  ಸಾರಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಹಳ ಸದ್ದು ಮಾಡಿತ್ತು. ಹಲವು ಕಡೆ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದರು. ಆದರೆ ಕೆಲ ದಿನಗಳ ಹಿಂದೆ ಇವರ ಸಂಬಂಧ ಬ್ರೇಕಪ್​ ಆಗಿದೆ ಎನ್ನುವ ಸುದ್ದಿ ಮತ್ತೂ ಸದ್ದು ಮಾಡಿತ್ತು. ಇದಕ್ಕೆ ಕಾರಣ  ಇನ್​ಸ್ಟಾಗ್ರಾಮ್​ನಲ್ಲಿ (Instagram) ಇಬ್ಬರೂ ಅನ್​​ಫಾಲೋ ಮಾಡಿಕೊಂಡಿದ್ದರು.  ಇದು ಸಾಕಷ್ಟು ಅನುಮಾನ ಮೂಡಿಸಿತ್ತು.  ಇದರ ಬೆನ್ನಲ್ಲೇ ನಟಿ ಸಾರಾ ಕಳೆದ ವಾರ ಸಾರಾ, ಕತ್ರೀನಾ ಕೈಫ್ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಐಪಿಎಲ್‌ನ ಫಿನಾಲೆ ವೀಕ್ಷಿಸಲು ಬಂದಿದ್ದರು. ಇದಕ್ಕೂ ದುಬೈನಲ್ಲಿ ನಡೆದ ಐಐಎಫ್​ಎ ಕಾರ್ಯಕ್ರಮದಲ್ಲಿ ಸಾರಾ ಅಲಿ ಖಾನ್ ಹಾಗೂ ವಿಕ್ಕಿ ಕೌಶಲ್ ಜೋಡಿಯಾಗಿ ಕಾಣಿಸಿಕೊಂಡರು. ಕತ್ರೀನಾ ಕೈಫ್ ಹಾಗೂ ಅವರ ಪತಿ ವಿಕ್ಕಿ ಕೌಶಲ್ ಮಧ್ಯೆ ಬಿರುಕಿನ ವರದಿಗಳು ಬಂದ ಬೆನ್ನಲ್ಲೇ ಈಗ ನಟನ ಜೊತೆ ನಟಿ ಸಾರಾ ಕಾಣಿಸಿಕೊಂಡಿರುವುದು ಮತ್ತಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. 

ಒಂದೆಡೆ ಶುಭ್​ಮನ್​ ಗಿಲ್​ ಇನ್ನೊಂದು ಕಡೆ ವಿಕ್ಕಿ ಕೌಶಕ್​ ಏನಿದರ ಮರ್ಮ ಎನ್ನುವ ಚರ್ಚೆ ಮುನ್ನೆಲೆಗೆ ಬಂದದ್ದು 'ದಿ ಕಪಿಲ್ ಶರ್ಮಾ ಶೋ'ನಲ್ಲಿ. ತಮ್ಮ ಚಿತ್ರದ ಪ್ರಚಾರಕ್ಕಾಗಿ 'ದಿ ಕಪಿಲ್ ಶರ್ಮಾ ಶೋ'ಗೆ ಸಾರಾ ಆಗಮಿಸಿದ್ದರು. ಆ ಸಮಯದಲ್ಲಿ ಸಾರಾಗೆ ಆಕೆಯ ಗೆಳೆಯನ ಬಗ್ಗೆ ಕೇಳಲಾಯಿತು. ಇತ್ತೀಚಿನ ದಿನಗಳಲ್ಲಿ ಸಾರಾ ಅಲಿ ಖಾನ್ ಮತ್ತು ಕ್ರಿಕೆಟಿಗ ಶುಭಮನ್ ಗಿಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಿಂದೆ ಅವರನ್ನು ಒಟ್ಟಿಗೆ ನೋಡಿದ ನಂತರ, ಜನರು ಹಲವಾರು ರೀತಿಯಲ್ಲಿ ಚರ್ಚೆ ಪ್ರಾರಂಭಿಸಿದ್ದರಿಂದ ಅದರ ಬಗ್ಗೆ ವಿಷಯ ಕೇಳಲಾಗಿತ್ತು.  ಕುತೂಃಲದ ಸಂಗತಿ ಎಂದರೆ ಈ ಶೋಗೆ ವಿಕ್ಕಿ ಕೌಶಲ್ ಬಂದಿದ್ದರು. ಇವರಿಬ್ಬರೂ  ಜರಾ ಹಟ್ಕೆ ಜರಾ ಬಚ್ಕೆ ಚಿತ್ರದಲ್ಲಿ ನಟಿಸಿದ್ದು, ಅದರ ಪ್ರಚಾರಕ್ಕಾಗಿ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದರು. 

ಹಿಂದು ದೇಗುಲದಲ್ಲಿ ನಟಿ ಸಾರಾ ಅಲಿ ಖಾನ್; ಶಕ್ತಿಗಳ ಮೇಲೆ ನಂಬಿಕೆ ಇದೆ, ಜನರ ಕಾಮೆಂಟ್‌ಗಳಿಗೆ ಡೋಂಟ್ ಕೇರ್!

ಈ ವೇಳೆ ಕಪಿಲ್ ಶರ್ಮಾ ಅವರು, ಮದುವೆಗೆ ಮುನ್ನ ನೀವು ಮತ್ತು ಕತ್ರಿನಾ ಎಲ್ಲಿ ಭೇಟಿಯಾಗುತ್ತಿದ್ದಿರಿ, ಅದು ಯಾರಿಗೂ ತಿಳಿದಿಲ್ಲ, ಸ್ವಲ್ಪ ಹೇಳುವಿರಾ ಎಂದು ವಿಕ್ಕಿ ಅವರನ್ನು ಕೇಳಿದಾಗ,  ನಕ್ಕ ವಿಕ್ಕಿ ಇದು ಟಾಪ್ ಸೀಕ್ರೆಟ್ ಎಂದರು. ಸಾರಾ ಅಲಿ ಮತ್ತು ವಿಕ್ಕಿ ಅವರ ಡೇಟಿಂಗ್​ ಸುದ್ದಿ ಚಾಲ್ತಿಯಲ್ಲಿ ಇದ್ದರೂ ವಿಕ್ಕಿ ಅವರಿಗೆ ಸಾರಾ ಎದುರೇ ಪತ್ನಿಯ ವಿಷಯ ಕೇಳಿದ ಕಪಿಲ್​ ಶರ್ಮಾ, ಅಷ್ಟಕ್ಕೆ ಸುಮ್ಮನಾಗದೇ ಸಾರಾ ಅವರಿಗೆ ಅವರ ಗೆಳೆಯ ಶುಭ್​ಮನ್​ ಗಿಲ್​ ಅವರ ಬಗ್ಗೂ ಕೇಳಿದರು.  'ನಿಮ್ಮವರು ಯಾರು, ಹೇಳಿ, ಅವರು ಚಿತ್ರರಂಗದ ಹೊರಗಿನವರಾ?' ಎಂದು ಪ್ರಶ್ನಿಸಿದರು. ಸಾರಾ ಈ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ ಮತ್ತು ಆಕೆ ಆಘಾತಕ್ಕೊಳಗಾದಂತೆ ಕಂಡುಬಂತು.  ಅವರು ಉತ್ತರಿಸದಿದ್ದಾಗ, ಕಪಿಲ್ ನಾವು ಬಾಣಗಳನ್ನು ಹೊಡೆಯುತ್ತಿದ್ದೇವೆ, ಅದು ಗುರಿಯನ್ನು ಮುಟ್ಟುತ್ತದೆಯೇ ಎಂದು ಯಾರಿಗೆ ಗೊತ್ತು ಎಂದು ಹೇಳಿ ನಕ್ಕರು.  ಅದಕ್ಕೆ ನಟಿ, "ಹೌದು ಆದರೆ ಈ ದಿನಗಳಲ್ಲಿ ನನ್ನ ಬಾಣವು ಗುರಿಯನ್ನು ಹೊಡೆಯುತ್ತಿಲ್ಲ" ಎಂದು ಉತ್ತರಿಸಿದರು.

  ಇದರಿಂದಾಗಿ ಶುಭ್​ಮನ್​ ಗಿಲ್​ ಮತ್ತು ಸಾರಾ ಅಲಿ ಖಾನ್​ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಅದೇ ಇನ್ನೊಂದೆಡೆ ನಿಜಕ್ಕೂ ಕತ್ರಿನಾ ಮತ್ತು ವಿಕ್ಕಿ ಅವರ ದಾಂಪತ್ಯ ಜೀವನ ಬಿರುಕು ಬಿಟ್ಟಿದ್ಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ದುಬೈನಲ್ಲಿ ನಡೆದ ಐಐಎಫ್​ಎ ಕಾರ್ಯಕ್ರಮದಲ್ಲಿ ವಿಕ್ಕಿ ಕೌಶಲ್ (Vicky Koushik) ಜೊತೆ ಅವರ ಪತ್ನಿ ಕತ್ರೀನಾ ಕೈಫ್ ಇರಬೇಕಾಗಿತ್ತು. ಈ ರೀತಿಯಾಗಿ ಜೋಡಿಯಾಗಿಯೂ ಬಹಳಷ್ಟು ಸೆಲೆಬ್ರಿಟಿಗಳು ಬಂದಿದ್ದರು. ಹೀಗಿದ್ದರೂ ಕೂಡಾ ವಿಕ್ಕಿ ಜೊತೆ ಸಾರಾ ಬಂದಿದ್ದು ನೆಟ್ಟಿಗರು ಜೋಡಿಯನ್ನು ನೋಡಿ ಶುರುವಾಗಿರುವ ಗುಸುಗುಸು ಸುದ್ದಿಗೆ ಸಾರಾ ಉತ್ತರದಿಂದ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ. 

ರಾಖಿ ಸಾವಂತ್ ಜೊತೆ ಡಾನ್ಸ್ ಮಾಡಿ ಎಡವಿ ಬಿದ್ದ ವಿಕ್ಕಿ ಕೌಶಲ್: ವಿಡಿಯೋ ವೈರಲ್
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?