Bollywood ಚಿತ್ರಗಳು ಹಾದಿ ತಪ್ಪುತ್ತಿರುವುದೆಲ್ಲಿ..? ರಿಷಬ್‌ ಶೆಟ್ಟಿ ಹೇಳಿದ್ದು ಹೀಗೆ..

By BK AshwinFirst Published Nov 6, 2022, 4:16 PM IST
Highlights

ಕಾಂತಾರ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ್ದ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ, ಕರಾವಳಿ ಕರ್ನಾಟಕದ ಸಂಸ್ಕೃತಿ ಚಿತ್ರದ ಯಶಸ್ಸಿಗೆ ಕಾರಣ ಎಂದಿದ್ದರು. ಅಲ್ಲದೆ, ದಕ್ಷಿಣ ಭಾರತದ ಚಿತ್ರಗಳು ಪಡೆಯುತ್ತಿರುವಷ್ಟು ಸಕ್ಸಸ್‌ ಅನ್ನು ಸದ್ಯ ಬಾಲಿವುಡ್‌ ಚಿತ್ರಗಳು ಪಡೆಯುತ್ತಿಲ್ಲವೇಕೆ ಎಂಬುದರ ಬಗ್ಗೆಯೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. 

ರಿಷಬ್ ಶೆಟ್ಟಿ (Rishab Shetty) ನಟನೆ, ನಿರ್ದೇಶನದ ಕಾಂತಾರ (Kantara) ಚಿತ್ರ 2022ರ ಅತ್ಯಂತ ಯಶಸ್ವಿ ಚಲನಚಿತ್ರಗಳಲ್ಲಿ (Films) ಒಂದಾಗಿದೆ. ಕರ್ನಾಟಕ (Karnataka) ಮಾತ್ರವಲ್ಲ ಇತರೆ ರಾಜ್ಯ, ದೇಶಗಳಲ್ಲೂ ಅಪಾರ ಯಶಸ್ಸು ಗಳಿಸಿದೆ. ಹಾಗೆ, ಕನ್ನಡ (Kannada) ಮಾತ್ರವಲ್ಲದೆ ಇತೆ ಹಲವು ಭಾಷೆಗಳಿಗೂ ಚಿತ್ರ ಡಬ್‌ (Dubbing) ಆಗಿದೆ. ಈ ಮೂಲಕ ರಿಷಬ್‌ ಶೆಟ್ಟಿ ಸದ್ಯ ಭಾರತೀಯ ಚಲನಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದು, ಯಶಸ್ವಿಯೂ ಆಗಿದ್ದಾರೆ. ಕರಾವಳಿಯ (Coastal)  ಆಚರಣೆಗಳನ್ನು ಆಧರಿಸಿ ಮಾಡಿದ ಕಾಂತಾರ ಚಿತ್ರ ಸುಮಾರು 16 ಕೋಟಿ ರೂ. ಬಜೆಟ್‌ನಲ್ಲಿ (Budget)  ನಿರ್ಮಾಣವಾಗಿದ್ದರೂ ಬಾಕ್ಸಾಫೀಸ್‌ನಲ್ಲಿ (Box Office) ಹೆಚ್ಚು ಗಳಿಕೆ ಮಾಡಿದೆ. ದೊಡ್ಡ ಪ್ರೊಡಕ್ಷನ್‌ಗಳ ಚಿತ್ರವನ್ನೂ ಇದು ಮೀರಿಸಿದ್ದು, ಸ್ಯಾಂಡಲ್‌ವುಡ್‌ನ (Sandalwood) ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. ಅಲ್ಲದೆ, ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲೂ ಒಂದು ಎನಿಸಿದೆ. 

ಇನ್ನು, ಕಾಂತಾರ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ್ದ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ, ಕರಾವಳಿ ಕರ್ನಾಟಕದ ಸಂಸ್ಕೃತಿ ಚಿತ್ರದ ಯಶಸ್ಸಿಗೆ ಕಾರಣ ಎಂದಿದ್ದರು. ಅಲ್ಲದೆ, ದಕ್ಷಿಣ ಭಾರತದ ಚಿತ್ರಗಳು ಪಡೆಯುತ್ತಿರುವಷ್ಟು ಸಕ್ಸಸ್‌ ಅನ್ನು ಸದ್ಯ ಬಾಲಿವುಡ್‌ ಚಿತ್ರಗಳು ಪಡೆಯುತ್ತಿಲ್ಲವೇಕೆ ಎಂಬುದರ ಬಗ್ಗೆಯೂ ನಟ ಮಾತನಾಡಿದ್ದಾರೆ. ಕಾಂತಾರ ಚಿತ್ರ ಇತರೆ ಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿರುವ ಬಗ್ಗೆ ನಾನು ಊಹಿಸಿರಲಿಲ್ಲ. ನಾನು ನೋಡಿದ ಪ್ರಪಂಚವನ್ನು ಆಯ್ಕೆ ಮಾಡಿ ಚಿತ್ರ ಮಾಡಿದ್ದೆ ಎಂದೂ ನಟ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಇದನ್ನು ಓದಿ: Rishab Shetty ರಜಿನಿಕಾಂತ್‌ ಭೇಟಿ ಮಾಡಿದ ಆಶೀರ್ವಾದ ಪಡೆದ ಕಾಂತಾರ ಶಿವ!

ಹಾಗೂ, ಕಾಂತಾರ ಚಿತ್ರ ಕಥೆ ಸಾಮಾನ್ಯವಾಗಿದ್ದು, ಹೀರೋ, ಹಳ್ಳಿ, ರೊಮ್ಯಾನ್ಸ್‌ ಅನ್ನು ಹೊಂದಿದೆ. ಆದರೆ, ಚಿತ್ರದ ಹಿನ್ನೆಲೆ, ಪದರ ಮತ್ತು ಪ್ಯಾಕೇಜಿಂಗ್ ಮಾತ್ರ ಹೊಸತು ಎಂದೂ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ. 

ಇದೆಲ್ಲ ಸೇರಿ ಚಿತ್ರದ ರೀಲ್‌ ಸೃಷ್ಟಿಯಾಗಿದೆ. ಇದು ನನ್ನ ಗ್ರಾಮದ ಕಥೆ, ನಾನು ಚಿಕ್ಕವನಾಗಿದ್ದಾಗಿನಿಂದಲೂ ನೋಡಿರುವುದು, ಹೀಗಾಗಿ ಅದನ್ನೇ ಚಿತ್ರವಾಗಿಸಿದೆ. ನಾನು ಯಾವಾಗಲೂ ಹೇಳುವುದು ‘ಹೆಚ್ಚು ಪ್ರಾದೇಶಿಕತೆಯು ಹೆಚ್ಚು ಸಾರ್ವತ್ರಿಕವಾಗಿದೆ’ ಎಂದು. ಹೀಗಾಗಿ, ಒಬ್ಬ ಫಿಲ್ಮ್‌ ಮೇಕರ್‌ಗೆ ತನ್ನ ಪ್ರದೇಶದ ಸಂಸ್ಕೃತಿಯ ಕತೆಯನ್ನು ಪ್ರಸ್ತುತ ಪಡಿಸಿ ಹಾಗೂ ಪ್ಯಾಕೇಜ್‌ ಮಾಡಬಹುದು ಎಂದು ಅನಿಸಿದರೆ ಅಂತಹ ಸಿನಿಮಾ ಯಶಸ್ವಿ ಆಗಬಹುದು. ಆದರೆ, ನಿಖರವಾಗಿ ಯಾವಾಗಲೂ ಹೀಗೇ ಆಗುವುದಿಲ್ಲ ಎಂದೂ ನಟ ರಿಷಬ್‌ ಶೆಟ್ಟಿ ಹೇಳಿದರು. 

ಇದನ್ನೂ ಓದಿ: ಐಶ್ವರ್ಯಾ ರೈ ಸಿನಿಮಾಕ್ಕೂ ಬಾರೀ ಹೊಡೆತ ನೀಡಿದ ಕಾಂತಾರ

ಬಾಲಿವುಡ್‌ ಚಿತ್ರಗಳು ಯಶಸ್ವಿ ಆಗುತ್ತಿಲ್ಲ ಏಕೆ..?
ಇನ್ನು, ಬಾಲಿವುಡ್‌ ಚಿತ್ರಗಳು ಸದ್ಯ ದಕ್ಷಿಣ ಭಾರತ ಚಿತ್ರಗಳು ಪಡೆಯುತ್ತಿರುವಷ್ಟು ಯಶಸ್ಸನ್ನು ಪಡೆಯುತ್ತಿಲ್ಲವೇಕೆ ಎಂಬುದರ ಬಗ್ಗೆಯೂ ರಿಷಬ್‌ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್‌ ಚಿತ್ರಗಳು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಅತಿಯಾದ ಪ್ರಭಾವ ಹಾಗೂ ಭಾರತದ ಚಿತ್ರ ನಿರ್ದೇಶಕರು ಹಾಲಿವುಡ್‌ ಚಿತ್ರಗಳನ್ನು  ಹಾಗೂ ಇತರೆ ವಿಷಯಗಳನ್ನು ಬಳಕೆ  ಮಾಡುತ್ತಿರುವುದು ಬಹುಶ: ಥಿಯೇಟರ್‌ಗಳಿಗೆ ಹೆಚ್ಚು ಜನರನ್ನು ಆಕರ್ಷಿಸುತ್ತಿಲ್ಲ ಎನಿಸುತ್ತದೆ ಎಂದು ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.  

ಅಲ್ಲದೆ, ಸಮಕಾಲೀನ ಚಿತ್ರ ನಿರ್ದೇಶಕರಿಗೆ ಸವಾಲು ನೀಡಿದ ಅವರು, ಒಂದುಕಡೆ ಒಟಿಟಿ ಹೆಚ್ಚು ಪಾಶ್ಚಿಮಾತ್ಯ ವಿಷಯಗಳನ್ನು ವೀಕ್ಷಕರಿಗೆ ನೀಡುತ್ತಿದ್ದು, ಹಳ್ಳಿಯ ಕತೆಗಳು ಮಾತ್ರ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಗ್ರಾಮಗಳಲ್ಲಿ ಬೇರು ಬಿಟ್ಟಿರುವ ಪ್ರಾದೇಶಿಕ ಕತೆಗಳು ಜಗತ್ತಿನಲ್ಲಿ ಎಲ್ಲೂ ದೊರೆಯುತ್ತಿಲ್ಲ. ನೀವು ಕತೆ ಹೇಳುವವರು ಹಾಗೂ ನಿಮ್ಮ ಪ್ರದೇಶದಲ್ಲೇ ಕಥೆಗಳಿವೆ. ಜನರನ್ನು ಚಿತ್ರ ಮಂದಿರಗಳಿಗೆ ಕರೆ ತರಲು ಬೇಕಾಗಿರುವುದು ಅದೇ ಎಂದೂ ರಾಷ್ಟ್ರೀಯ ಮಾದ್ಯಮವೊಂದಕ್ಕೆ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಹೇಳಿದ್ದಾರೆ. 

ಇದನ್ನೂ ಓದಿ: ಕಾಂತಾರ ಹಿಂದಿ ಕಲೆಕ್ಷನ್ ಎಷ್ಟು ಗೊತ್ತಾ?: ಬಾಲಿವುಡ್ ಕಲೆಕ್ಷನ್ ಕೇಳಿದ್ರೆ ಶಾಕ್!

click me!