
ಬಹುಭಾಷಾ ನಟ ಪ್ರಕಾಶ್ ರಾಜ್ ಮೊದಲ ಸಲ ರಾಜಕೀಯ ಮತ್ತು ಸಿನಿಮಾ ಜರ್ನಿ ಹೇಗಿದೆ ಎಂದು ಮಾತನಾಡಿದ್ದಾರೆ. ಈಗಿನ ಸರ್ಕಾರದ ವ್ಯವಸ್ಥೆಗಳ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವ ಪ್ರಕಾಶ್ ನೇರವಾಗಿ ಟೀಕೆ ಮಾಡುತ್ತಾರೆ ಅಲ್ಲದೆ ಕೇಂದ್ರ ಸರ್ಕಾರಕ್ಕೆ ನೇರ ಪ್ರಶ್ನೆ ಕೇಳಿ ಎಂದು ಜನರ ಪರ ನಿಂತಿರುವ ನಟ ಪ್ರಕಾಶ್. 2019ರಲ್ಲಿ ಬೆಂಗಳೂರಿನಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಈ ರಾಜಕೀಯ ಈಗ ಪ್ರಕಶ್ ಸಿನಿಮಾ ಜರ್ನಿ ಮೇಲೂ ಪರಿಣಾಮ ಬೀರಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
'ರಾಜಕೀಯದಿಂದ ನನ್ನ ಸಿನಿ ಸ್ನೇಹಿತರ ಜೊತೆಗಿರುವ ಸಂಬಂಧ ಹಾಳಾಗಿದೆ. ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ನನ್ನ ಜೊತೆ ಕೆಲಸ ಮಾಡಲು ಕೆಲವರಿಗೆ ಮನಸ್ಸಿಲ್ಲ, ಮತ್ತೊಬ್ಬರು ಮಾಡಬೇಡ ಅಂತ ಹೇಳಿದ್ದಾರೆ ಅಂತಲ್ಲ ನನ್ನ ಜೊತೆ ಕೆಲಸ ಮಾಡಿದ್ದರೆ 'ಅವರುಗಳು' ಅವರನ್ನು ಒಪ್ಪಿಕೊಳ್ಳುವುದಿಲ್ಲ, ಜೀವನ ಹಾಳಾಗುತ್ತದೆ ಎಂದು. ನಾನು ಶಕ್ತಿವಂತ ಮತ್ತು ಸಿರಿವಂತ ಅದೆಲ್ಲವನ್ನೂ ಕಳೆದುಕೊಳ್ಳುವುದಕ್ಕೂ ರೆಡಿ. ಒಂದು ವಿಚಾರ ನನಗೆ ಚೆನ್ನಾಗಿ ಗೊತ್ತಿದೆ, ನನ್ನ ಭಯ ಮತ್ತೊಬ್ಬರಿಗೆ ಗೆಲ್ಲುವುದಕ್ಕೆ ಅಸ್ತ್ರವಾಗುತ್ತದೆ' ಎಂದು ಪ್ರಕಾಶ್ ರಾಜ್ ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕೆಲಸ ಮಾತನಾಡಬೇಕು ಲೆಗೆಸಿ ಮುಂದುವರೆಯಬೇಕು ಎನ್ನುವ ಕಾರಣಕ್ಕೆ ಪ್ರಕಾಶ್ ರಾಜ್ ಈ ಯಾವ ವಿಚಾರಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. 'ಈಗ ಯಾರು ಹೇಗೆ ಯಾವ ರೀತಿ ಎಂದು ತಿಳಿದುಕೊಂಡಿರುವೆ. ನಾನು ಹೆಚ್ಚು ವಿಮೋಚನೆ ಹೊಂದಿದ್ದೇನೆ ಏಕೆಂದರೆ ನಾನು ಧ್ವನಿ ಎತ್ತಿರಲಿಲ್ಲ ಅಂದ್ರೆ ಒಳ್ಳೆಯ ನಟನಾಗಿ ಮಾತ್ರ ಗುರುತಿಸಿಕೊಂಡು ಸಾಯುತ್ತಿದ್ದೆ. ನನ್ನ ವ್ಯಕ್ತಿತ್ವ ಜನರಿಗೆ ಗೊತ್ತಾಗುತ್ತಿರಲಿಲ್ಲ. ನಾನು ಏಣು ಕೆಲಸ ಮಾಡುತ್ತಿರುವ ಅದಕ್ಕೆ ಬೆಲೆ ಇದೆ.. I can afford it' ಎಂದು ಹೇಳಿದ್ದಾರೆ.
The Kashmir Files; ನೆಟ್ಟಿಗರ ಕೋಪಕ್ಕೆ ಗುರಿಯಾದ ಪ್ರಕಾಶ್ ರಾಜ್ ಟ್ವೀಟ್
ಅದೆಷ್ಟೋ ಸ್ಟಾರ್‌ಗಳು ಮನಸ್ಸಿನಲ್ಲಿ ವಿಚಾರ ಇಟ್ಟುಕೊಂಡು ಸುಮ್ಮನಿರುತ್ತಾರೆ ಸತ್ಯ ಗೊತ್ತಿದ್ದರೂ ನಾನು ಸುಮ್ಮನಿರುವೆ ಏಕೆಂದರೆ ಅವರ ವಿರುದ್ಧ ದ್ವೇಷ ಮಾಡಲು ಮನಸಿಲ್ಲ ಎಂದು ಪ್ರಕಾಶ್ ಹೇಳಿದ್ದಾರೆ. ' ಚಿತ್ರರಂಗದಲ್ಲಿ ಹಲವು ಸ್ಟಾರ್ ನಟರು ಮೌನವಾಗಿದ್ದಾರೆ ಇದೆಕ್ಕೆಲ್ಲಾ ಅವರನ್ನು ನಾನು ದೂರುವುದಿಲ್ಲ...ಅವರ ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟಿಲ್ಲ ಅಂದರೆ ಅವರು ನನ್ನನ್ನು ಖರೀದಿ ಮಾಡಲು ಶಕ್ತಿ ಇಲ್ಲ ಅಂತ. ಒಂದು ಸಮಯದಲ್ಲಿ ಅವರನ್ನೂ ಜನರು ನೂಕುತ್ತಾರೆ ಆದರೆ ದಾರಿ ಇಲ್ಲದೆ ಸತ್ಯವನ್ನು ಒಪ್ಪಿಕೊಳ್ಳಬೇಕು. ಅವರೆಲ್ಲಾ ಹೆಚ್ಚಿನ ದಿನ ಉಳಿದುಕೊಳ್ಳುವುದಿಲ್ಲ. ಇದೆಲ್ಲಾ ಅವರ ತಪ್ಪಲ್ಲ ಬಿಡಿ' ಎಂದಿದ್ದಾರೆ ಪ್ರಕಾಶ್.
ಪ್ರಕಾಶ್ ರಾಜ್ ಮಹತ್ವದ ಕಾರ್ಯ:
ಅಪ್ಪು ಹೆಸರಿನಲ್ಲಿ ಅನೇಕ ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ಇದೀಗ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಅಪ್ಪು ಹೆಸರಿನಲ್ಲಿ ಮಹತ್ವಕ ಕೆಲಸ ಮಾಡಿದ್ದಾರೆ. ಹೌದು, ನಟ ಪ್ರಕಾಶ್ ರಾಜ್ ಅಪ್ಪ ಹೆಸರಿನಲ್ಲಿ ಅಪ್ಪು ಎಕ್ಸ ಪ್ರೆಸ್ ಎನ್ನವ ಆಂಬ್ಯುಲೆನ್ಸ್ ಅನ್ನು ಮೈಸೂರಿನ ಮಿಷನ್ ಆಸ್ಪತ್ರೆಗೆ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಮೇಲಿನ ಪ್ರೀತಿಯಿಂದ ಈ ಸೇವೆ ಪ್ರಾರಂಭ ಮಾಡಿರುವುದಾಗಿ ಹೇಳಿದ್ದಾರೆ. ಸದ್ಯ ಮೈಸೂರು ಜಿಲ್ಲೆಗೆ ಈ ಆಂಬ್ಯುಲೆನ್ಸ್ ನೀಡಿದ್ದೇವೆ ಇನ್ಮುಂದೆ 31 ಜಿಲ್ಲೆಯಗಳಿಗೂ ಈ ಸೇವೆ ಮುಂದುವರೆಸಲಿದ್ದೇವೆ ಎಂದು ಪ್ರಕಾಶ್ ರಾಜ್ ಹೇಳಿದರು. 'ಎಂದಿಂಗೂ ನಮ್ಮ ಜೊತೆ ಇರುವ ಕಥಾನಯಕ ಅಪ್ಪು. ಅಪ್ಪು ಅಗಲಿದಾಗ ರಾಜ್ಯ ಕಣ್ಣಿರಿಡ್ತು. ಅನಾಥ ಪ್ರಜ್ಞೆ ನಮ್ಮನ್ನು ಕಾಡಿತು.ಕರ್ನಾಟಕದ ಪ್ರತಿಯೊಬ್ಬರಿಗೂ ಸಾಕಷ್ಟು ನೋವಾಯಿತು.ಮಾತು ಹೊರಡದ ಮೌನ ಅಂದ್ರೆ ಅಪ್ಪು.ಅಪ್ಪು ಅವರನ್ನ ಬಾಲ್ಯದಿಂದ ನೋಡಿದ್ದೇನೆ.ಎತ್ತರಕ್ಕೆ ಬೆಳೆದ ವ್ಯಕ್ತಿಯನ್ನ ಕಳೆದುಕೊಂಡು ಸಮಾಜಕ್ಕೆ ಬಹಳ ನಷ್ಟವಾಗಿದೆ.'ಕೋವಿಡ್ ಸಮಯದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೆ.ಆ ಸಮಯದಲ್ಲಿ ಅಪ್ಪು ಅವರು ಕಾಲ್ ಮಾಡಿ ಒಳ್ಳೆಯ ಕೆಲಸ ಮಾಡುತ್ತಿದ್ದೀರ ಎಂದರು.ಎರೆಡು ಲಕ್ಷವನ್ನು ನಮ್ಮ ಫೌಂಡೇಶನ್ ಗೆ ಕೊಟ್ರು. ಈ ವಿಚಾರವನ್ನ ಎಲ್ಲಿಯೂ ಹೇಳಿಕೊಳ್ಳಲಿಲ್ಲ.ಅಪ್ಪು ಇದಿದ್ರೆ ಮಾಡುತ್ತಿದ್ದ ಕೆಲಸವನ್ನ ನಾವು ಮುಂದುವರೆಸಿಕೊಂಡು ಹೋಗಬೇಕು.ಬಡವರಿಗೋಸ್ಕರ ಅಂಬ್ಯುಲೆನ್ಸ್ ಕೊಡಲು ನಿರ್ಧರಿಸಿದೆ.ಇದು ಕೇವಲ ಆರಂಭ.32 ಜಿಲ್ಲೆಗಳಲ್ಲಿ ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ಓಡಾಡಬೇಕು.ಮಿಷನ್ ಆಸ್ಪತ್ರೆ ಆವರಣದಲ್ಲಿ ಬ್ಲಡ್ ಬ್ಯಾಂಕ್ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ.ಅಪ್ಪು ಪ್ರೀತಿಸುವ ಜನರಿಗೆ ಸಹಾಯವಾಗಲಿ.ಅಪ್ಪು ವ್ಯಕ್ತಿತ್ವವನ್ನ, ನಮ್ಮೊಳಗೆ ಬೆಳೆಸಿಕೊಳ್ಳಬೇಕು.ಅಪ್ಪು ಮಾಡಿದ ಕೆಲಸಗಳಿಗೆ ಧನ್ಯವಾದ ಹೇಳುವುದು ಈ ರೀತಿ ಸಮಾಜಿಕ ಮುಖಿ ಕೆಲಸಗಳಿಂದ.ಅಪ್ಪು ಹೆಸರಿನ ಮೂಲಕ ಒಳ್ಳೆಯ ವಾತಾವರಣ ನಿರ್ಮಾಣ ಮಾಡೊಣ' ಎಂದು ಪ್ರಕಾಶ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.