
ಮಹೇಶ್ ಬಾಬು ಕುಟುಂಬ ದುಃಖದಲ್ಲಿದೆ. ಒಂದೂವರೆ ತಿಂಗಳಲ್ಲೇ ಮಹೇಶ್ ಬಾಬು ತಾಯಿ ಮತ್ತು ತಂದೆಯ ಇಬ್ಬರನ್ನು ಕಳೆದುಕೊಂಡರು. ಇದೀಗ ತಂದೆ ಕೃಷ್ಣ ಅವರ ಅಗಲಿಕೆ ಮಹೇಶ್ ಬಾಬು ಅವರನ್ನು ಮತ್ತಷ್ಟು ಕುಗ್ಗಿಸಿದೆ. ಕೃಷ್ಣ ನಿಧನದ ಬಳಿಕ ಮಹೇಶ್ ಬಾಬು ಕುಟುಂಬ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಮಹೇಶ್ ಬಾಬು, ನಮ್ರತಾ ಶಿರೋಡ್ಕರ್, ಸಿತಾರಾ ಮತ್ತು ಇಡೀ ಘಟ್ಟಮನೇನಿ ಕುಟುಂಬದ ಸದ್ಯರು ಮೊದಲ ಹೇಳಕೆ ನೀಡಿದೆ. ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಹಾಗೂ ಅವರ ಮಕ್ಕಳಾದ ಗೌತಮ್ ಮತ್ತು ಸಿತಾರಾ ಮತ್ತು ಮಹೇಶ್ ಬಾಬು ಸಹೋದರಿಯರಾದ ಮಂಜುಳಾ, ಪದ್ಮಾವತಿ ಮತ್ತು ಪ್ರಿಯದರ್ಶಿನಿ ಘಟ್ಟಮನೇನಿ ಕೂಡ ಹೇಳಿಕೆ ನೀಡಿದ್ದಾರೆ.
'ನಮ್ಮ ಪ್ರೀತಿಯ ಕೃಷ್ಣ ಅವರ ಅಗಲಿಕೆಯ ಬಗ್ಗೆ ನಾವು ನಿಮಗೆ ಅತ್ಯಂತ ದುಃಖದಿಂದ ತಿಳಿಸುತ್ತೇವೆ. ಅವರು ಸಿನಿಮಾ ಹೊರತಾಗಿಯೂ ಹಲವು ವಿಧಗಳಲ್ಲಿ ಸೂಪರ್ ಸ್ಟಾರ್ ಆಗಿದ್ದರು. ಪ್ರೀತಿ, ವಿನಮ್ರತೆ ಮತ್ತು ಸಹಾನುಭೂತಿಯಿಂದ ಮಾರ್ಗದರ್ಶನ ನೀಡಿದ್ದಾರೆ. ಅವರು ತಮ್ಮ ಕೆಲಸದ ಮೂಲಕ ಇನ್ನೂ ಜೀವಂತವಾಗಿದ್ದಾರೆ. ಅವರು ನಮ್ಮನ್ನು ಅತೀ ಹೆಚ್ಚು ಪ್ರೀತಿಸುತ್ತಿದ್ದರು ಮತ್ತು ಪ್ರತಿ ದಿನವೂ ನಾವು ಅವನನ್ನು ಮಿಸ್ ಮಾಡಿಕೊಳ್ಳುತ್ತೆವೆ. ಆದರೆ ಅವರು ಹೇಳಿದಂತೆ, ವಿದಾಯಗಳು ಶಾಶ್ವತವಲ್ಲ. ನಾವು ಮತ್ತೆ ಭೇಟಿಯಾಗುವವರೆಗೆ' ದಿ ಘಟ್ಟಮನೇನಿ ಕುಟುಂಬ. ಎಂದು ದೀರ್ಘವಾದ ನೋಟ್ ಹಂಚಿಕೊಂಡಿದ್ದಾರೆ.
Mahesh Babu Father Death; ಸೂಪರ್ ಸ್ಟಾರ್ ಕೃಷ್ಣ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
80 ವರ್ಷದ ಕೃಷ್ಣ ಅವರು ಮಂಗಳವಾರ ಮುಂಜಾನೆ 4 ಗಂಟೆಗೆ ನಿಧನರಾದರು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಾಜಿಸಿದರು. ಕೃಷ್ಣ ಅವರು 1960ರಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕೃಷ್ಣ ಅವರು ಟಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ್ದರು. ಸಿನಿಮಾರಂಗದ ಜೊತೆಗೆ ಕೃಷ್ಣ ಅವರು ರಾಜಕೀಯದಲ್ಲೂ ಸಕ್ರೀಯರಾಗಿದ್ದರು.
Actor Krishna Death: ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ತಂದೆ ಇನ್ನಿಲ್ಲ
ಕೃಷ್ಣ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಅವರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. 'ಕೃಷ್ಣ ಅವರು ತಮ್ಮ ಅದ್ಭುತ ನಟನಾ ಕೌಶಲ್ಯ ಮತ್ತು ಸ್ನೇಹಪರ ವ್ಯಕ್ತಿತ್ವದಿಂದ ಜನರ ಹೃದಯವನ್ನು ಗೆದ್ದ ಲೆಜೆಂಡರಿ ಸೂಪರ್‌ಸ್ಟಾರ್. ಅವರ ನಿಧನ ಭಾರತೀಯ ಸಿನಿಮಾರಂಗಕ್ಕೆ ದೊಡ್ಡ ನಷ್ಟ. ದುಃಖ ಬರಿಸುವ ಶಕ್ತಿ ನೀಡಲಿ ಮಹೇಶ್ ಬಾಬು ಕುಟುಂಬಕ್ಕೆ. ಆತ್ಮಕ್ಕೆ ಶಾಂತಿ' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.