
ಈ ಸೋಷಿಯಲ್ ಮೀಡಿಯಾದಲ್ಲಿ ಯಾರು ಯಾವಾಗ ಪ್ರತ್ಯಕ್ಷವಾಗ್ತಾರೆ, ಯಾರು ಯಾವಾಗ, ಎಷ್ಟೋ ವರ್ಷಗಳ ಮೇಲೆ ಮತ್ತೆ ಕಣ್ಣಿಗೆ ಬೀಳ್ತಾರೆ ಅಂತ ಹೇಳೋದಕ್ಕೆ ಆಗಲ್ಲ.. ಈಗ್ಯಾಕೆ ಈ ಸಂಗತಿ ಅಂದ್ರೆ... ನಟಿ ಶಿಲ್ಪಾ (Shilpa) ಅವರು 2004ರಲ್ಲಿ ತೆರೆಗೆ ಬಂದ ಕನ್ನಡ ಸಿನಿಮಾ 'ಪಾಂಡವ' ಬಳಿಕ ಮತ್ತೆ ಕನ್ನಡಿಗರ ಕಣ್ಣಿಗೆ ಬಿದ್ದಿರಲಿಲ್ಲ. ಆದರೆ, ಇದೀಗ ಸೋಷಿಯಲ್ ಮೀಡಿಯಾದಲಲ್ಲಿ ಮಲಯಾಳಂ ನಟಿಯ ವಿಡಿಯೋವೊಂದು ವೈರಲ್ ಆಗ್ತಿದೆ.
ಹೌದು, ಖಾಸಗಿ ಯೂಟ್ಯೂಬ್ ಚಾನೆಲ್‌ನ ವಿಡಿಯೋ ಒಂದರಲ್ಲಿ 'ಜನುಮದ ಜೋಡಿ' ಚಿತ್ರದ (Janumada Jodi) ಬೆಡಗಿ ಶಿಲ್ಪಾ ಅವರು ವೈರಲ್ ಅಗ್ತಿದಾರೆ.. ಈ ವಿಡಿಯೋದಲ್ಲಿ ಅವರು ಕೆಲವು ಸ್ನೇಹಿತೆಯರೋ ಅಥವಾ ನೆಂಟರ ಜೊತೆಗೋ ಫೋಟೋವನ್ನು ಸೆಲ್ಫೀ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ. ಈ ಶಾರ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ತುಂಬಾ ದಿನಗಳಿಂದ ನೋಡದೇ ಇದ್ದ ನಟಿ ಶಿಲ್ಪಾರನ್ನು ಅವರ ಫ್ಯಾನ್ಸ್ ನೋಡಿ ಈಗ ಖುಷಿ ಅನುಭವಿಸುತ್ತಿದ್ದಾರೆ.
Shilpa: 'ಜನುಮದ ಜೋಡಿ'ಯ ಶಿಲ್ಪಾ ನೆನಪಿದ್ಯಾ? ಈಗವರು ಅಲ್ಲಿದ್ದಾರೆ, ಆ ಕೆಲಸ ಮಾಡ್ತಿದ್ದಾರೆ!
ಆ ವಿಡಿಯೋದಲ್ಲಿ ಈ ಹಾಡು ಕೂಡ ಗಮನ ಸೆಳೆಯುತ್ತಿದೆ. ನೀನು ಬರದೇ ಗುಡಿ ತುಂಬಲ್ಲಾ.. ನೀನು ಬರದೇ ಮನೆ ತುಂಬಲ್ಲಾ.. ನೀನು ಬರದೇ ಹಾಲು ಉಕ್ಕಲ್ಲಾ.. ಹೂವಂತ ಹೆಣ್ಣೆ ಹೂವಂತ ಹೆಣ್ಣೇ..' ಎಂಬ ಹಾಡು ಅದು.. ಅಂದಹಾಗೆ, 'ಜನುಮದ ಜೋಡಿ' ಶಿವರಾಜ್‌ಕುಮಾರ್ ನಾಯಕತ್ವದ ಬ್ಲಾಕ್ ಬಸ್ಟರ್ ಚಿತ್ರ. ಅದರಲ್ಲಿ ಶಿವಣ್ಣನಿಗೆ ಜೋಡಿಯಾಗಿ ನಟಿ ಶಿಲ್ಪಾ ನಟಿಸಿದ್ದಾರೆ.
ಕೆಲವರಿಗೆ ಶಿಲ್ಪಾ ಅಂದ್ರೆ ಗೊತ್ತಾಗ್ಲಿಕ್ಕಿಲ್ಲ, ಅದ್ರೆ ಕನಕ ಅಂದ್ರೆ ಗೊತ್ತಾಗುತ್ತೆ.. ಅಷ್ಟರಮಟ್ಟಿಗೆ ಶಿಲ್ಪಾರ ಕನಕ ಪಾತ್ರ ಫೇಮಸ್ ಆಗಿತ್ತು. ಹೌದು, ಜನುಮದ ಜೋಡಿಯ (Janumada Jodi) ಕನಕ ಪಾತ್ರದಲ್ಲಿ ಅಕ್ಷರಶಃ ಜೀವಿಸಿದಂತೆ ನಟಿಸಿದ್ದಾರೆ ಈ ಶಿಲ್ಪಾ. ಆ ಬಳಿಕ ಕೂಡ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಮುಂಗಾರಿನ ಮಿಂಚು, ಧರ್ಮ ದೇವತೆ, ಭೂಮಿತಾಯಿಯ ಚೊಚ್ಚಲು ಮಗ ಹೀಗೆ ಸಾಲು ಸಾಲು ಚಿತ್ರಗಳು. ಕನ್ನಡದಲ್ಲಿ ಪಾಂಡವ ನಟಿ ಶಿಲ್ಪಾರ ಕೊನೆಯ ಚಿತ್ರ.
ಎಸ್‌ಎಸ್ ರಾಜಮೌಳಿಗೆ ಭಾರೀ ಸಂಕಷ್ಟ, ಆಪ್ತಮಿತ್ರನ ಡೆತ್ ನೋಟ್ ಪತ್ತೆ, ಆ ವ್ಯಕ್ತಿ ನಾಪತ್ತೆ..!
ಅಂತಹ ಖ್ಯಾತ ನಟಿ ಶಿಲ್ಪಾ ಈಗೇನು ಮಾಡುತ್ತಿದ್ದಾರೆ? ಬಹಳಷ್ಟು ಸಿನಿಮಾ ಪ್ರೇಮಿಗಳಿಗೆ ಈ ಕುತೂಹಲ ಸಹಜ. ಶಿಲ್ಪಾ ಅವರು 2004ರಲ್ಲಿ ಕನ್ನಡದಲ್ಲಿ ಪಾಂಡವ ಸಿನಿಮಾದಲ್ಲಿ ನಟಿಸಿದ್ದೇ ಲಾಸ್ಟ್ . ಆ ಬಳಿಕ ಅವರು ಮಲಯಾಳಂನ ಖ್ಗಯಾತ ನಿರ್ಮಾಪಕ ಎಂ ರಂಜಿತ್ ಅವರನ್ನು ವಿವಾಹವಾದರು. ಧಾರಾವಾಹಿ ಹಾಗೂ ದೂರದರ್ಶನದಲ್ಲಿ ಸಹ ನಟಿಸುತ್ತಿದ್ದರು ಈ ಶಿಲ್ಪಾ. ಬಳಿಕ, ಸ್ವಂ ನಿರ್ಮಾಣ ಸಂಸ್ಥೆಯ ಮೂಲಕ ಮಲಯಾಳಂ ಸಿನಿಮಾ ನಿರ್ಮಾಣವನ್ನೂ ಸಹ ಮಾಡಿದ್ದಾರೆ. ಕೇರಳದಲ್ಲಿ ಸೆಟ್ಲ್ ಆಗಿದ್ದಾರೆ.
ಆದ್ರೆ, ಸಿನಿಮಾ ನಿರ್ಮಾಣ ಶಿಲ್ಪಾರ ಪ್ರೊಡಕ್ಷನ್ ಹೌಸ್‌ಗೆ ಸಿಕ್ಕಾಪಟ್ಟೆ ನಷ್ಟ ತಂದಿಟ್ಟಿತು. ಬಳಿಕ ಅವರು ಸಿನಿಮಾ ಬದಲು ಸೀರಿಯಲ್ ನಿರ್ಮಾಣಕ್ಕೆ ಇಳಿದರು. ಅದು ಶಿಲ್ಪಾ-ರಂಜಿತ್ ಜೋಡಿಯ ಕೈ ಹಿಡಿಯಿತು. ಈ ಜೋಡಿಯ ನಿರ್ಮಾಣ ಸಂಸ್ಥೆ ಹೆಸರು ಆವಂತಿಕಾ ಕ್ರಿಯೇಷನ್ಸ್. ಇದು ಅವರಿಬ್ಬರ ಮಗಳ ಹೆಸರು! ಗಂಡ ನಿರ್ದೇಶನದಲ್ಲಿ ಬ್ಯುಸಿ ಆಗಿದ್ದಾಗ ಹೆಂಡತಿ ಶಿಲ್ಪಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
ರಜನಿಕಾಂತ್ ಸ್ಟಾರ್‌ಡಂ ಸೀಕ್ರೆಟ್ ಕೊನೆಗೂ ಗೊತ್ತಾಯ್ತು! ಯೋಗ-ಪ್ರಾಣಾಯಾಮ ಅಲ್ಲ, ಆದ್ರೆ ಮತ್ತೊಂದು...
ಮಲಯಾಳಂನ ಎರಡು ಸೀರಿಯಲ್‌ಗಳು ಅವರ ಕೈ ಹಿಡಿಯಿತು. ಹೀಗೆ, ಮೊದಲು ನಟಿಯಾಗಿದ್ದ ಶಿಲ್ಪಾ ಈಗ ನಿರ್ಮಾಪಕಿಯಾಗಿದ್ದಾರೆ. ಶಿವರಾಜ್‌ಕುಮಾರ್-ಶಿಲ್ಪಾ ಜೋಡಿಯ ಜನಿಮದ ಜೋಡಿ ಚಿತ್ರವು ಬಾಕ್ಸ್ ಆಫೀಸ್ ಕಲೆಕ್ಷನ್ ದೃಷ್ಟಿಯಿಂದ ಮಾತ್ರ ಸೂಪರ್ ಹಿಟ್ ಚಿತ್ರವಲ್ಲ. ಇದು ಮ್ಯೂಸಿಕಲ್ ಹಿಟ್ ಸಿನಿಮಾ ಕೂಡ.
ಈ ಚಿತ್ರದ ಹಾಡುಗಳು ತುಂಬಾ ಜನಪ್ರಿಯ ಆಗಿದ್ದವು. ಈಗಲೂ ಕೂಡ ಕನ್ನಡ ಸಿನಿಪ್ರೇಮಿಗಳು ಈ ಚಿತ್ರದ ಹಾಡುಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ನಟಿ ಪವಿತ್ರಾ ಲೋಕೇಶ್ ಅವರು ಇದೇ ಶಿಲ್ಪಾರ ಸ್ನೇಹಿತೆ ಪಾತ್ರದಲ್ಲಿ ನಟಿಸಿದ್ದಾರೆ. ಅಂದಹಾಗೆ ಈ ಚಿತ್ರವು 1996ರಲ್ಲಿ ತೆರೆಗೆ ಬಂದಿತ್ತು.
ಕಾರು ಕೇಳಿದ ಶಿವಣ್ಣಗೆ ಹೀಗೆ ಹೇಳಿದ್ದ ಅಪ್ಪು.. ಈಗ ಬೇಕಾ ಇವೆಲ್ಲಾ ಅಂದ್ರೂ ಯಾರೋ ಬಿಡ್ತಿಲ್ಲ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.