
ಚಿತ್ರರಂಗಕ್ಕೆ ಕಾಲಿಟ್ಟು ಎಂಟು ವರ್ಷಗಳ ಒಳಗಡೆ ನಾಲ್ಕು ಭಾಷೆಯ ಸ್ಟಾರ್ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಈಗ ಬಿಗ್ ನ್ಯೂಸ್ ನೀಡಿದ್ದಾರೆ. ವೃತ್ತಿ ಜೀವನದಲ್ಲಿ ರಶ್ಮಿಕಾ ಮಂದಣ್ಣ ನಿಜಕ್ಕೂ ನಾಗಾಲೋಟದಲ್ಲಿದ್ದಾರೆ ಎಂದು ಕಾಣುತ್ತದೆ. ಸಲ್ಮಾನ್ ಖಾನ್ ಜೊತೆಗೆ ರಶ್ಮಿಕಾ ಸಿನಿಮಾ ಮಾಡಿದ್ದು, ಈದ್‌ಗೆ ಈ ಚಿತ್ರ ರಿಲೀಸ್ ಆಗಲಿದೆ.
ಸಲ್ಮಾನ್ ಸಿನಿಮಾದಲ್ಲಿ ರಶ್ಮಿಕಾ
ಸಲ್ಮಾನ್ ಖಾನ್ ಅವರ ʼಸಿಕಂಧರ್ʼ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರೋ ಸಲ್ಮಾನ್ ಖಾನ್‌ಗೆ ನಾಯಕಿಯಾಗಿದ್ದಾರೆ. ಈ ಚಿತ್ರದ ಎರಡನೇ ಟೀಸರ್ ರಿಲೀಸ್ ಆಗಿದ್ದು, ಅದರಲ್ಲಿ ರಶ್ಮಿಕಾ ಮಂದಣ್ಣ ಅವರು ಗಂಭೀರವಾಗಿ ಡೈಲಾಗ್ ಹೇಳಿರೋದು ಕಣ್ಣಿಗೆ ಬಿದ್ದಿದೆ.
ಆನ್ಲೈನ್ ನಲ್ಲಿ ಛವಾ ಸಿನಿಮಾ ಲೀಕ್! ಒಟಿಟಿ ರಿಲೀಸ್ ಡೇಟ್ ಅನೌನ್ಸ್
ಸಿಕಂದರ್ ಸಿನಿಮಾದಲ್ಲಿ ಏನಿದೆ?
ಇನ್ನು ಸಲ್ಮಾನ್ ಖಾನ್ ಅವರು ʼಸಿಕಂಧರ್ʼ ಸಿನಿಮಾದಲ್ಲಿ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಕಾಜಲ್ ಅಗರ್‌ವಾಲ್, ಪ್ರತೀಕ್ ಬಬ್ಬರ್ ಕೂಡ ಈ ಚಿತ್ರದಲ್ಲಿದ್ದಾರೆ. ಒಂದು ನಿಮಿಷ ಇಪ್ಪತ್ತೊಂದು ಸೆಕೆಂಡ್ ಇರುವ ಈ ಟೀಸರ್‌ನಲ್ಲಿ ಸಲ್ಮಾನ್ ಖಾನ್ ಪಾತ್ರದ ಪರಿಚಯ ಮಾಡಿಕೊಡಲಾಗಿದೆ. ಅಜ್ಜಿ ತನ್ನನ್ನು ಸಿಕಂಧರ್ ಎಂದು ಕರೆಯುತ್ತಾಳೆ, ಅಜ್ಜ ಸಂಜಯ್ ಎಂದರೆ ಜನರು ರಾಜಾ ಎಂದು ಕರೆಯುತ್ತಾರೆ ಎಂದು ಸಲ್ಮಾನ್ ಇಲ್ಲಿ ಹೇಳುತ್ತಾರೆ. ಈ ಚಿತ್ರದಲ್ಲಿ ಭರ್ಜರಿ ಆಕ್ಷನ್ ಸೀನ್‌ಗಳಿವೆ. ಅಷ್ಟೇ ಅಲ್ಲದೆ ಸಲ್ಮಾನ್ ಖಾನ್ ಸ್ವಾಗ್ ಕೂಡ ಇರಲಿದೆ. ಅಷ್ಟೇ ಅಲ್ಲದೆ ಪಂಚಿಂಗ್ ಡೈಲಾಗ್ ಕೂಡ ಇವೆ. ಕಳೆದ ವರ್ಷವೇ ʼಸಿಕಂಧರ್ʼ ಟೀಸರ್ ರಿಲೀಸ್ ಆಗಿತ್ತು. ಈಗ ಪಾತ್ರದ ಪರಿಚಯ ಮಾಡಿಕೊಡಲಾಗಿದೆ.
ಈ ಸಿನಿಮಾ ರಿಲೀಸ್ ಯಾವಾಗ?
ಮಾರ್ಚ್ 30ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಸದ್ಯ ʼಛಾವಾʼ ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ರಶ್ಮಿಕಾ ಮಂದಣ್ಣ ಈಗ ಭರ್ಜರಿ ನ್ಯೂಸ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ನಾಯಕರಾಗಿದ್ದು, ರಶ್ಮಿಕಾ ಅವರು ಮಹಾರಾಣಿ ಯೇಸುಭಾಯಿ ಪಾತ್ರ ಮಾಡಿದ್ದರು. ಈ ಸಿನಿಮಾ ಈಗಾಗಲೇ 300 ಕೋಟಿ ರೂಪಾಯಿ ಮೇಲೆ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
Pushpa 2 ನೋಡಿ ಅರ್ಧದಷ್ಟು ವಿದ್ಯಾರ್ಥಿಗಳು ಹಾಳಾದ್ರು: ಹೆಡ್‌ಮಾಸ್ಟರ್ ಬೇಸರ! ಅಲ್ಲು ಅರ್ಜುನ್ ಟ್ರೋಲ್!
ಬಹುಬೇಡಿಕೆಯ ನಟಿ!
ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ 2' ಸಿನಿಮಾದಲ್ಲಿ ಕೂಡ ರಶ್ಮಿಕಾ ಮಂದಣ್ಣ ನಟಿಸಿದ್ದರು. ಈ ಚಿತ್ರ ಕೂಡ ಹಿಟ್ ಆಗಿತ್ತು. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳ ಭಾಗ ಆಗುತ್ತಿದ್ದು, ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಳ್ತಿದ್ದಾರೆ. ಅಂದಹಾಗೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಹೆಸರು ಅಗ್ರಗಣ್ಯ ಸ್ಥಾನದಲ್ಲಿದೆ ಎನ್ನೋದನ್ನು ಮರೆಯಬೇಡಿ.
ಇನ್ನು ʼthamaʼ, ‘ದಿ ಗರ್ಲ್‌ಫ್ರೆಂಡ್’, ʼಕುಬೇರʼ ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರದ ಕೆಲಸಗಳು ನಡೆಯುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.