
ಕನ್ನಡದ ಖ್ಯಾತ ಗಾಯಕ, ಗೀತರಚನೆಕಾರ ರಘು ದೀಕ್ಷಿತ್(Raghu Dixit) ಪ್ರತಿಷ್ಠಿತ ಕಾನ್ ಫಿಲ್ಮ್ ಫಿಸ್ಟಿವಲ್ ನಲ್ಲಿ(Cannes film festival) ಭಾಗಿಯಾಗುತ್ತಿದ್ದಾರೆ. ಮೇ 21ರಿಂದ ನಡೆಯುವ 75ನೇ ಕಾನ್ ಚಲನ ಚಿತ್ರೋತ್ಸವದಲ್ಲಿ ಭಾರತದ ಅನೇಕ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಐಶ್ವರ್ಯಾ ರೈ ಯಿಂದ ಪೂಜಾ ಹೆಗ್ಡೆ, ತಮನ್ನಾ, ನಯನತಾರಾ ಸೇರಿದಂತೆ ಅನೇಕ ಭಾರತೀಯ ಸಿನಿ ಸೆಲೆಬ್ರಿಟಿಗಳು ಕಾನ್ ಫೆಸ್ಟಿವಲ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಖ್ಯಾತಿಗಳಿಸಿರುವ ಕಾನ್ ಫೆಸ್ಟಿವಲ್ ನಲ್ಲಿ ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ಭಾಗಿಯಾಗಿ ಸಂಗೀತ ಕಾರ್ಯಕ್ರಮ ನೀಡುತ್ತಿರುವುದು ವಿಶೇಷವಾಗಿದೆ. ಕಾನ್ ಅಂತಹ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳ ಪ್ರದರ್ಶನಕ್ಕೂ ಅವಕಾಶ ಸಿಕ್ಕಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಗಾಯಕ ರಘು ದೀಕ್ಷಿತ್ ಯಾವೆಲ್ಲ ಹಾಡುಗಳನ್ನು ಹಾಡಲಿದ್ದಾರೆ ಎನ್ನುವುದು ಸದ್ಯ ಕುತೂಹಲ ಮೂಡಿಸಿದೆ.
ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿರುವ ರಘು ದೀಕ್ಷಿತ್, 'ನಮ್ಮ ಕೈಗೆ ವೀಸಾ ಸಿಗುವವರೆಗೂ ಈ ಬಗ್ಗೆ ಘೋಷಣೆ ಮಾಡಲು ಬಯಸುವುದಿಲ್ಲ. ನಾನು ನನ್ನ ಅಪ್ಲಿಕೇಷನ್ ಕಳುಹಿಸಿದ್ದೇನೆ. ಇನ್ನು ನನಗೆ ವಾಪಾಸ್ ಬಂದಿಲ್ಲ. ಹಾಗಾಗಿ ನಾನು ಈ ಬಗ್ಗೆ ಬಹಿರಂಗ ಪಡಿಸಲು ಇಷ್ಟಪಡುವುದಿಲ್ಲ. ವೀಸಾ ಬಂದರೆ ನಾನು ಉತ್ಸಾಹದಿಂದ ವಿಶೇಷ ಪ್ರದರ್ಶನ ನೀಡಲಿದ್ದೇನೆ ಎಂದು ಹೇಳಿದರು. ಈ ಬಗ್ಗೆ ಮಾತು ಮುಂದುವರಿಸಿದ ರಘು ದೀಕ್ಷಿತ್ ನಾವು ಮೊದಲು ಸೆಲೆಬ್ರೇಟ್ ಮಾಡಬಾರದು ಎನ್ನುವ ಪಾಠ ಕಲಿತಿದ್ದೀವಿ. ಮೊಟ್ಟೆಯೊಡಿಯುವ ಮೊದಲು ನಾವು ಕೋಳಿಯನ್ನು ಎಣಿಸಬಾರದು. ಆದ್ದರಿಂದ ಮೊಟ್ಟೆ ಒಡೆದು ಮರಿ ಹೊರಬರುವ ವರೆಗೂ ಕಾಯುತ್ತಿದ್ದೇನೆ' ಎಂದು ಹೇಳಿದರು. ಜೊತೆಗೆ ಈಗಾಗಲೇ ಸಿದ್ಧತೆ ಕೂಡ ನಡೆಯುತ್ತಿದೆ ಎಂದ ಹೇಳಿದರು.
ನಿರ್ದೇಶಕನಾಗಿ ರಘು ದೀಕ್ಷಿತ್ ಬೇಕು, ನಿರ್ಮಾಪಕನಾಗಿ ಬೇಡ: ಡಾರ್ಲಿಂಗ್ ಕೃಷ್ಣ 'ಲವ್ ಮಾಕ್ಟೇಲ್' ಗೊಂದಲ
'ನಾವು ಪ್ರತಿದಿನ ಪ್ರದರ್ಶನ ನೀಡುತ್ತಿರುವುದರಿಂದ ನಾವು ಸಿದ್ಧರಾಗಿದ್ದೇವೆ. ಆದರೆ ಅದೃಷ್ಟವಶಾತ್ ನಾವು ಸಂಪೂರ್ಣ ಬ್ಯಾಂಡ್ ನೊಂದಿಗೆ ಹೋಗುತ್ತಿಲ್ಲ. ಐದು ವಿಭಾಗಗಳನ್ನು ಮಾಡಲಾಗಿದೆ' ಎಂದು ರಘು ದೀಕ್ಷಿತ್ ಮಾಹಿತಿ ನೀಡಿದ್ದಾರೆ. ರಘು ದೀಕ್ಷಿತ್ ಅವರು ತಮ್ಮ ಸಿಗ್ನೇಚರ್ ಸ್ಟೈಲ್ ಲುಂಗಿಯಲ್ಲಿಯೇ ಪ್ರದರ್ಶನ ನೀಡಲಿದ್ದಾರಂತೆ.
ರಘು ದೀಕ್ಷಿತ್ ಪ್ರಪಂಚದಾದ್ಯಂತ ಸಂಗೀತ ಪ್ರದರ್ಶನ ನೀಡಿದ್ದಾರೆ. ಇದೀಗ ಮೊದಲ ಬಾರಿಗೆ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನ ನೀಡಲು ಸಜ್ಜಾಗಿದ್ದು ದೇಸಿ ಹಾಡುಗಳ ಮೂಲಕ ಗಮನ ಸೆಳೆಯಲಿದ್ದಾರೆ. ಈ ಬಗ್ಗೆ ಮಾತನಾಡಿದ ರಘು ದೀಕ್ಷಿತ್, 'ನಮ್ಮ ಹಾಡುಗಳು ಸಹಜವಾಗಿ ಭಾರತದ ಕಥೆಗಳನ್ನು ಹೇಳುತ್ತವೆ. ಇಲ್ಲಿ ಆಧ್ಯಾತ್ಮಿಕತೆ ಹೆಚ್ಚು ಒತ್ತು ನೀಡಲಾಗುತ್ತದೆ. ಹಾಗಾಗಿ ಈ ಬಗ್ಗೆ ಹೆಚ್ಚು ಒತ್ತು ನೀಡಲಿದ್ದೇನೆ' ಎಂದು ರಘು ದೀಕ್ಷಿತ್ ಹೇಳಿದರು.
ನಿನ್ನ ಸನಿಹಕೆ: ರಘು ದೀಕ್ಷಿತ್‌ಗೆ ದೊಡ್ಡ ಯಶಸ್ಸು, ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದಗಳು
ನಾವು ನೀಡುವ ಪ್ರದರ್ಶನದ ಸಮಯದಲ್ಲಿ ಉತ್ತಮ ಜನರಸಾಗರ ಸೇರಿರಬೇಕು, ವಿದೇಶಿಗರ ಬಾಯಲ್ಲಿ ಕನ್ನಡ ಹಾಡು ಗುನುಗುವಂತೆ ಮಾಡುತ್ತೇನೆ ಎಂದು ರಘು ದೀಕ್ಷಿತ್ ಹೇಳಿದರು. ಕನ್ನಡದ ಖ್ಯಾತ ಗಾಯಕ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನ ನೀಡುವುದನ್ನು ನೋಡಲು ಕನ್ನಡಿಗರು ಸಹ ಉತ್ಸುಕರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.