ಮತ್ತೆ ಪ್ರೀತಿಯಲ್ಲಿ ಬಿದ್ದ ರಾಖಿ ಸಾವಂತ್; ಬಾಯ್ ಫ್ರೆಂಡ್‌ನಿಂದ ಸಿಕ್ತು BMW ಕಾರು

Published : May 16, 2022, 06:50 PM IST
ಮತ್ತೆ ಪ್ರೀತಿಯಲ್ಲಿ ಬಿದ್ದ ರಾಖಿ ಸಾವಂತ್; ಬಾಯ್ ಫ್ರೆಂಡ್‌ನಿಂದ ಸಿಕ್ತು BMW ಕಾರು

ಸಾರಾಂಶ

ವಿವಾದಗಳ ಮೂಲಕವೇ ಸದ್ದು ಮಾಡುತ್ತಿರುವ ನಟಿ ರಾಖಿ ಸಾವಂತ್(Rakhi Sawant) ಒಂದಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ರಾಖಿ ಪ್ರೀತಿ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ.

ವಿವಾದಗಳ ಮೂಲಕವೇ ಸದ್ದು ಮಾಡುತ್ತಿರುವ ನಟಿ ರಾಖಿ ಸಾವಂತ್(Rakhi Sawant) ಒಂದಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ರಾಖಿ ಪ್ರೀತಿ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಪ್ರೀತಿ, ಬ್ರೇಕಪ್ ರಾಖಿ ಸಾವಂತ್ ಅವರಿಗೆ ಹೊಸದೇನಲ್ಲ. ಈಗಾಗಲೇ ಪ್ರೀತಿಯಲ್ಲಿ ಹಿದ್ದು ಮದುವೆ ಕೂಡ ಆಗಿದ್ದರು. ಆದರೆ ಪತಿಯಿಂದ ದೂರ ಆಗಿರುವ ರಾಖಿ ಇದೀಗ ಮತ್ತೋರ್ವ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿಗಳಿಸಿರುವ ರಾಖಿ ಸಾವಂತ್ ಬಿಗ್ ಬಾಸ್ ಸೀಸನ್ 15ರಲ್ಲಿ(Bigg Boss) ರಾಖಿ ಎಲ್ಲರಿಗೂ ಇಷ್ಟವಾಗಿದ್ದರು. ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಬಳಿಕ ರಾಖಿ ಸಾವಂತ್ ಪತಿ ಕೂಡ ಬರಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಬಿಗ್ ಬಾಸ್ ಮುಗಿಯುವುದರೊಳಗೆ ರಾಖಿ ಸಾವಂತ್ ಪತಿಯಿಂದ ದೂರ ಆಗಿದ್ದಾರೆ ಎನ್ನುವ ಸುದ್ದಿ ಹೊರಬಿತ್ತು.

ಈ ಬಗ್ಗೆ ರಾಖಿ ಸಾವಂತ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ ಬಾವುರಾಗಿದ್ದರು. ಅಲ್ಲದೇ ಪಾಪರಾಜಿಗಳ ಮುಂದೆಯೂ ವಿಷಯ ಪ್ರಸ್ತಾಪಿಸಿ ಕಣ್ಣೀರಾಕಿದ್ದರು. ಆದರೀಗ ಅದರಿಂದ ತುಂಬಾ ಮುಂದೆ ಬಂದಿರುವ ರಾಖಿ ಮತ್ತೋರ್ವ ವ್ಯಕ್ತಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ರಾಖಿ ಸಾವಂತ್ ಜೊತೆ ಪ್ರೀತಿಯಲ್ಲಿ ಮುಳುಗಿರುವ ವ್ಯಕ್ತಿ ಮತ್ಯಾರು ಅಲ್ಲ ಆದಿಲ್ ಖಾನ್ ದುರಾನಿ.

ಆದಿಲ್ ಮತ್ತು ರಾಖ್ ಸಾವಂತ್ ಪ್ರೀತಿ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದಿಲ್ ಜೊತೆ ನಟಿ ರಾಖಿ ಸಾವಂತ್ ಫೋಟೋ ಶೇರ್ ಮಾಡಿ ಸ್ವೀಟ್ ಹಾರ್ಟ್, ನನ್ನ ಜೀವನ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರಾಖಿ ತಾನು ಸಿಂಗಲ್ ಅಲ್ಲ ಸಂಬಂಧಲ್ಲಿ ಇದ್ದೀನಿ ಎಂದು ಬಹಿರಂಗ ಪಡಿಸಿದ್ದಾರೆ. ಕ್ಯಾಮರಾಗಳ ಮುಂದೆಯೇ ಅದಿಲ್ ಜೊತೆ ಮಾತನಾಡುತ್ತಾ ಆತನನ್ನುಮುದ್ದು ಮಾಡುತ್ತಿರುವ ವಿಡಿಯೋ ಕೂಡ ಸೆರೆಯಾಗಿದೆ. ರಾಖಿ ಸಾವಂತ್ ಬಗ್ಗೆ ಮಾತನಾಡಿದ ಆದಿಲ್, 'ರಾಖಿ ಸಾವಂತ್ ತುಂಬಾ ಒಳ್ಳೆಯ ವ್ಯಕ್ತಿ ಮತ್ತು ಸರಳ ಜೀವಿ' ಎಂದು ಹೇಳಿದ್ದಾರೆ.

ಬುಡಕಟ್ಟು ಜನಾಂಗಕ್ಕೆ ಅವಮಾನ; ರಾಖಿ ಸಾವಂತ್ ವಿರುದ್ಧ ಎಫ್ ಐ ಆರ್

ಅಂದಹಾಗೆ ರಾಖಿ ಸಾವಂತ್ ಬಾಯ್ ಫ್ರೆಂಡ್ ಆದಿಲ್ ಬಗ್ಗೆ ಈ ಮೊದಲೇ ಬಹಿರಂಗ ಪಡಿಸಿದ್ದರು. ಅಲ್ಲದೇ ತನ್ನ ಬಾಯ್ ಫ್ರೆಂಡ್ ಬಿಎಂಡ್ಲ್ಯೂ ಕಾರನ್ನು ಗಿಫ್ಟ್ ಮಾಡಿದ್ದಾನೆ ಎಂದು ಹೇಳಿದ್ದರು. ನನಗೆ ಕಾರನ್ನು ಗಿಫ್ಟ್ ಮಾಡಿದ ನನ್ನ ಆತ್ಮೀಯ ಸ್ನೇಹಿತ ಆದಿಲ್‌ಗೆ ಧನ್ಯವಾದಗಳು. ಇಂತ ದೊಡ್ಡ ಸರ್ಪ್ರೈಸ್ ಗೆ ಧನ್ಯವಾದಗಳು ಎಂದು ಹೇಳಿದ್ದರು. ಅಲ್ಲದೇ ಆದಿಲ್ ಬಗ್ಗೆ ರಾಖಿ ಸಾವಂತ್ ಈವೆಂಟ್ ಒಂದರಲ್ಲಿ ಹಾಡಿ ಹೊಗಳಿದ್ದರು. ಮದುವೆ ಮುರಿದು ಬಿದ್ದ ಬಳಿಕ ಖಿನ್ನತೆಯಿಂದ ಹೊರಬರಲು ಆದಿಲ್ ಸಹಾಯ ಮಾಡಿದರು ಎಂದು ಹೇಳಿದ್ದರು. ಅಲ್ಲದೆ ತನ್ನ ತಂಗಿ ಜೊತೆ ಸೇರಿ ನನ್ನನ್ನು ಖಿನ್ನತೆಯಿಂದ ಹೊರಬರುವಂತೆ ಮಾಡಲು ಬಿ ಎಂ ಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದರು.

RRR Success Partyಯಲ್ಲಿ ಆಮೀರ್ ಖಾನ್‌ ಸೇರಿದಂತೆ ಬಾಲಿವುಡ್‌ ಸೆಲೆಬ್ರೆಟಿಗಳು

ಈ ವರ್ಷದ ಫೆಬ್ರವರಿಯಲ್ಲಿ ರಾಖಿ ಸಾವಂತ್ ತನ್ನ ವಿಚ್ಛೇದನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. 'ಆತ್ಮೀಯ ಅಭಿಮಾನಿಗಳು ಮತ್ತು ಹಿತೈಶಿಗಳೇ, ನಾನು ಮತ್ತು ರಿತೇಶ್ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಹೇಳಲು ಬಯಸುತ್ತೇನೆ. ಬಿಗ್ ಬಾಸ್ ಕಾರ್ಯಕ್ರಮದ ನಂತರ ಬಹಳಷ್ಟು ಸಂಭವಿಸಿದೆ. ನಾವಿಬ್ಬರು ನಮ್ಮ ಜೀವನನ್ನು ಪ್ರತ್ಯೇಕವಾಗಿ ಆನಂದಿಸುತ್ತೇವೆ' ಎಂದು ಪೋಸ್ಟ್ ಶೇರ್ ಮಾಡುವ ಮೂಲ ವಿಚ್ಛೇದನದ ವಿಚಾರವನ್ನು ಅಧಿಕೃತಗೊಳಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!