ಇಂದಿರಾನೇ ಕ್ಯಾಬಿನೆಟ್​, ಇಂದಿರಾನೇ ಇಂಡಿಯಾ.... 'ಎಮರ್ಜೆನ್ಸಿ'ಗೆ ಸಿಗುತ್ತಾ ಮುಕ್ತಿ? ಕರುಳು ಹಿಂಡುವ ಪ್ರೊಮೋ ರಿಲೀಸ್​!

By Suchethana D  |  First Published Jan 6, 2025, 7:04 PM IST

ವಿವಾದಗಳ ಸುಳಿಗೆ ಸಿಲುಕಿರುವ ಕಂಗನಾ ರಣಾವತ್​ ಅವರು ಎಮರ್ಜೆನ್ಸಿ ಚಿತ್ರದ ಇನ್ನೊಂದು ಪ್ರೊಮೋ ರಿಲೀಸ್​ ಮಾಡಲಾಗಿದೆ. ಈಗಲಾದರೂ ಸಿಗುತ್ತಾ ಮುಕ್ತಿ? 
 


ಕಂಗನಾ ರಣಾವತ್​ ಅವರಿಗೆ ರಾಜಕೀಯ ಕೈಹಿಡಿದಿದ್ದರೂ, ಅವರ ಕೊನೆಯ ಚಿತ್ರ ಎಂದೇ ಬಿಂಬಿತವಾಗಿರುವ ಎಮರ್ಜೆನ್ಸಿಗೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ. ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ ತಕ್ಷಣ ವಿವಾದಗಳ ಸುಳಿ ಸುತ್ತಿಕೊಂಡು ಬಿಡುತ್ತಿದೆ. ನಾಲ್ಕೈದು ಬಾರಿ ಚಿತ್ರ ಬಿಡುಗಡೆಯ ಸಮೀಪಕ್ಕೆ ಬಂದು ನಂತರ ಸ್ಟಾಪ್​ ಆಗಿದೆ. ಕಳೆದ ಬಾರಿ ಇನ್ನೇನು ಬಿಡುಗಡೆಗೆ ಸೆನ್ಸಾರ್​ ಮಂಡಳಿ ಅನುಮತಿ ಸಿಕ್ಕಿದ್ದರೂ ಕುತೂಹಲದ ಘಟ್ಟದಲ್ಲಿ, ಅಚ್ಚರಿಯ ಬೆಳವಣಿಗೆಯ ನಡುವೆ, ಸೆನ್ಸಾರ್​ ಮಂಡಳಿ ಯೂಟರ್ನ್​ ಹೊಡೆಯಿತು. ಕೊನೆಗೂ ಎಮರ್ಜೆನ್ಸಿಗೆ ಬಿಡುಗಡೆಯ ಭಾಗ್ಯ ಸಿಗಲೇ ಇಲ್ಲ. ಹೀಗೆ ನಾಲ್ಕೈದು ಬಾರಿ ಡೇಟ್​ ಫಿಕ್ಸ್​ ಆಗಿ ಮುಂದಕ್ಕೆ ಸಾಗುತ್ತಲೇ ಇರುವ ಈ ಚಿತ್ರಕ್ಕೆ ಈಗ ಹೊಸ ಮುಹೂರ್ತ ಫಿಕ್ಸ್​ ಮಾಡಲಾಗಿದೆ.  ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ 'ಎಮರ್ಜೆನ್ಸಿ' ಚಿತ್ರವು ಮೊದಲ ಮಹಿಳಾ ಪ್ರಧಾನಿ  ಇಂದಿರಾಗಾಂಧಿಯನ್ನು ಆಧರಿಸಿದ ಮೆಗಾ-ಬಜೆಟ್ ಚಲನಚಿತ್ರವಾಗಿದೆ. ಇದಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಈ ಚಿತ್ರಕ್ಕೆ ಇದೇ ಜನವರಿ 17ರ ಡೇಟ್​ ಫಿಕ್ಸ್​ ಆಗಿದೆ.
 
ಇದಾಗಲೇ ಕಳೆದ ವರ್ಷ  ಈ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೊಂದು ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಎಮರ್ಜೆನ್ಸಿಯ ಘೋಷಣೆ ಆಗುತ್ತಿದ್ದಂತೆಯೇ, ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ, ಸಚಿವ ಸಂಪುಟದ ಪರ್ಮಿಷನ್​ ಬೇಕು ಎಂದು ಹೇಳುತ್ತಿದ್ದಂತೆಯೇ, ಇಂದಿರಾ ಗಾಂಧಿ, ನಾನೇ ಕ್ಯಾಬಿನೆಟ್​ ಎನ್ನುವ ಡೈಲಾಗ್ ಇದೆ. ಇದೇ ವೇಳೆ, ಇಂದಿರಾ ಅವರ ಬಹು ಚರ್ಚಿತ ಘೋಷಣೆಯಾಗಿರುವ ಇಂದಿರಾನೇ ಇಂಡಿಯಾ, ಇಂಡಿಯಾನೇ ಇಂದಿರಾ ಎಂದೂ ಈ ಪ್ರೊಮೋದಲ್ಲಿ ತೋರಿಸಲಾಗಿದೆ. ಕೊನೆಗೆ ಯುದ್ಧನೇ ಕೊನೆಗೆ ದಾರಿ ಎನ್ನುವ ಮೂಲಕ, ನಡೆದಿರುವ ಯುದ್ಧ, ಅದರಲ್ಲಿ ಮಹಿಳೆ, ಮಕ್ಕಳು ಎನ್ನಲೇ ಅಸಂಖ್ಯ ಭಾರತೀಯರ ಬರ್ಬರ ಹತ್ಯೆ, ಹೋರಾಟಗಾರರಿಗೆ ಆಗಿರುವ ಭಯಾನಕ ಶಿಕ್ಷೆಗಳನ್ನೂ ಈ ಪ್ರೊಮೋದಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಎಮರ್ಜೆನ್ಸಿಯ ಬಹಿರಂಗಗೊಳ್ಳದ ಸತ್ಯ ಇದೆ ಎಂದು ಹೇಳಿಕೊಂಡಿದೆ ಚಿತ್ರತಂಡ. 

ಕಂಗನಾ ಮದ್ವೆ ಯಾವಾಗ? ಸಂಸದ ಚಿರಾಗ್‌ ಪಾಸ್ವಾನ್‌ ಜೊತೆ ಏನು ನಡೀತಿದೆ? ಬಾಯ್ಬಿಟ್ಟ ನಟಿ

Tap to resize

Latest Videos

ಈ ಚಿತ್ರದಲ್ಲಿ ಇರುವ ಕೆಲವು ಅಂಶಗಳ ವಿರುದ್ಧ ಕೋರ್ಟ್​ಗೆ ಹೋಗಿದ್ದ ಹಿನ್ನೆಲೆಯಲ್ಲಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಬಿಡುಗಡೆಗೆ ಅನುಮತಿ ನೀಡಿದ ಬಳಿಕವೂ ಚಿತ್ರ ಬಿಡುಗಡೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ಈ ಹಿಂದೆ ತಿಳಿಸಿದ್ದ ನಟಿ,  ಮಂಡಳಿಗೆ  ಬೆದರಿಕೆ ಕರೆಗಳು ಬರುತ್ತಿವೆ. ಈ ಸಿನಿಮಾದಲ್ಲಿ ಎಮರ್ಜೆನ್ಸಿ ಸಮಯದಲ್ಲಿ ಉಂಟಾದ ಪಂಜಾಬ್​ ಗಲಭೆ ತೋರಿಸಲಾಗಿದೆ. ಅದನ್ನು ತೋರಿಸದಂತೆ, ಇಂದಿರಾಗಾಂಧಿಯವರ ಹತ್ಯೆಯನ್ನು ತೋರಿಸದಂತೆ ಹೇಳಲಾಗುತ್ತಿದೆ. ಸತ್ಯವನ್ನು ಮರೆಮಾಚುವಂತೆ ತಿಳಿಸುತ್ತಿರುವುದನ್ನು ನೋಡಿದರೆ ವಿಚಿತ್ರವಾಗಿ ತೋರುತ್ತದೆ ಎಂದಿದ್ದರು. ಇದೀಗ ಕೋರ್ಟ್​ ಆದೇಶದ ಪ್ರಕಾರ ಹಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಈಗ ಚಿತ್ರದಲ್ಲಿ ಉಳಿದುಕೊಂಡಿರುವುದು ಏನು ಎಂದು ನೋಡುವ ಕುತೂಹಲದಲ್ಲಿ ಪ್ರೇಕ್ಷಕರಿದ್ದಾರೆ. 

ಜೂನ್ 25, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ್ದ ರಾಷ್ಟ್ರೀಯ ತುರ್ತು ಪರಿಸ್ಥಿತಿ ( National Emergency) ಕರಾಳ ಮುಖವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ನಟಿ ಹೇಳಿದ್ದಾರೆ.  21 ತಿಂಗಳು ಕಾಲ ತುರ್ತು ಪರಿಸ್ಥಿತಿ ಅಸ್ತಿತ್ವದಲ್ಲಿ ಇತ್ತು. 1975, ಜೂನ್ 25ರಂದು ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿತ್ತು.  ಸಂವಿಧಾನವನ್ನು ತಿರಸ್ಕರಿಸಿ ತುರ್ತು ಪರಿಸ್ಥಿತಿ ಹೇರಲಾಯ್ತು. ಭಾರತದ ಯುವ ಪೀಳಿಗೆ ಇದನ್ನ ಎಂದು ಮರೆಯೋದಿಲ್ಲ ಎಂದಿರುವ ನಟಿ, ತಮ್ಮ ಈ ಚಿತ್ರವನ್ನು ವೀಕ್ಷಿಸಿ, ನಮ್ಮ ಇತಿಹಾಸವನ್ನು ತಿಳಿದುಕೊಳ್ಳಿ ಎಂದಿದ್ದಾರೆ.  ಈ ಕುರಿತು ಈ ಹಿಂದೆ ಹೇಳಿಕೆ ನೀಡಿದ್ದ ಅವರು, ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದ ಕರಾಳ ಘಟ್ಟವನ್ನು ನೋಡಿ ಮತ್ತು ಅಧಿಕಾರದ ಲಾಲಸೆಯನ್ನು ನೋಡಿ ಎಂದಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ ಮತ್ತು ದಿವಂಗತ ಸತೀಶ್ ಕೌಶಿಕ್ ಅವರ ಸಂಗೀತವನ್ನು ಸಂಚಿತ್ ಬಲ್ಹಾರಾ ಅವರು ಸಂಯೋಜಿಸಿದ್ದಾರೆ. ಕಥೆ ಮತ್ತು ಸಂಭಾಷಣೆಗಳನ್ನು ರಿತೇಶ್ ಷಾ ಬರೆದಿದ್ದಾರೆ. ಚಿತ್ರದ ಬಿಡುಗಡೆ ಪದೇ ಪದೇ ಮುಂದೂಡುತ್ತಲೇ ಹೋಗುತ್ತಿತ್ತು.  ನವೆಂಬರ್ 24, 2023 ರಂದು ಬಿಡುಗಡೆಯಾಗಬೇಕಿತ್ತು. ನಂತರ ಜೂನ್‌ 14ರಂದು ಚಿತ್ರ ರಿಲೀಸ್‌ ಆಗಲಿದೆ ಎನ್ನಲಾಗಿತ್ತು.  ಕಂಗನಾ ಥೇಟ್​ ಇಂದಿರಾ ಗಾಂಧಿಯವರಂತೆ ಮೇಕಪ್​ ಮಾಡಿಕೊಂಡು, ಅವರಂತೆಯೇ   ಟ್ರೇಲರ್​ ಕಳೆದ ವರ್ಷವೇ ಬಿಡುಗಡೆಯಾಗಿತ್ತು. ಕಂಗನಾ ಅವರ ಈ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ ಯಾಕೋ ಈ ಚಿತ್ರಕ್ಕೆ ಇನ್ನೂ ಮುಹೂರ್ತ ಕೂಡಿ ಬರುತ್ತಲೇ ಇರಲಿಲ್ಲ. ಇದೀಗ ಬಿಜೆಪಿಯ ಸಂಸದೆ ಆದ ಮೇಲೆ ನಟಿಯ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮನೆ ಮಾಡಿದೆ.  ಈ ಚಿತ್ರವನ್ನು ಸುಮಾರು 25 ಕೋಟಿ ರೂಪಾಯಿಗಳ ಬಜೆಟ್​ನಲ್ಲಿ ರೆಡಿ ಮಾಡಲಾಗಿದೆ ಎನ್ನಲಾಗುತ್ತಿದೆ. 

ಐಶ್ವರ್ಯ- ಅಭಿಷೇಕ್​ ಕಲಹಕ್ಕೆ ಇದೇ ಕಾರಣನಾ? ಕಂಗನಾ ಕಂಡ್ರೆ ಆಗದವರೂ ಈ ಮಾತನ್ನು ಒಪ್ತಿರೋದ್ಯಾಕೆ?

click me!