23 ವರ್ಷಗಳ ಬಳಿಕ ಶಾರುಖ್​ ಪತ್ನಿ ಗೌರಿ ಮತಾಂತರ? ವೈರಲ್​ ಫೋಟೋಗಳ ಹಿಂದೆ ಭಯಾನಕ ಸತ್ಯ!

By Suchethana D  |  First Published Jan 6, 2025, 1:16 PM IST

ಹಿಂದೂ ಮತ್ತು ಇಸ್ಲಾಂ ಎರಡನ್ನೂ ಆಚರಿಸುತ್ತೇವೆ ಎಂದಿದ್ದ ಶಾರುಖ್​ ಖಾನ್​, ಪತ್ನಿಯನ್ನು ಮತಾಂತರ ಮಾಡಿದ್ರಾ? ವೈರಲ್​ ಆಗ್ತಿರೋ ಫೋಟೋಗಳು ಹೇಳ್ತಿರೋದೇನು? 
 


ಬಾಲಿವುಡ್ ನಟ ಶಾರುಖ್ ಖಾನ್ ಹಿಂದೂ ಯುವತಿ ಗೌರಿಯನ್ನು ಮದುವೆಯಾಗಿ ಆಮೇಲೆ ಗೌರಿ, ಗೌರಿ ಖಾನ್​ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಪತ್ನಿ ಹಿಂದೂ ಆಗಿರುವ ಕಾರಣದಿಂದಲೇ ಶಾರುಖ್​ ಮನೆಯಲ್ಲಿ ಮುಸ್ಲಿಂ ಮತ್ತು ಹಿಂದೂ ಆಚರಣೆಗಳು, ಹಬ್ಬ-ಹರಿದಿನಗಳ ನಡೆಯುತ್ತವೆ. ಆದರೆ ಅವರಿಗೆ ಎಲ್ಲಿಯೇ ಹೋದರೂ ಈ ಮೊದಲು ಎದುರಾಗುತ್ತಿದ್ದ ಪ್ರಶ್ನೆ ಒಂದೇ.  ಅವರ ಪತ್ನಿ ಹಿಂದೂ ಆಗಿರುವುದರಿಂದ ಶಾರುಖ್ ಮನೆಯಲ್ಲಿ ಯಾವ ಧರ್ಮವನ್ನು ಅನುಸರಿಸುತ್ತಾರೆ ಎನ್ನುವುದು. ಇದಕ್ಕೆ ಮೊದಲಿನಿಂದಲೂ ಶಾರುಖ್​ ಸಮಾಧಾನದಿಂದಲೇ ಉತ್ತರ ಕೊಡುತ್ತಲೇ ಬಂದಿದ್ದಾರೆ. ತಮ್ಮ ಮನೆಯಲ್ಲಿ ಎಲ್ಲಾ ಧರ್ಮದ ಆಚರಣೆಗಳನ್ನು ಮಾಡುತ್ತಿರುವುದಾಗಿ ಹೇಳುತ್ತಲೇ ಬಂದಿದ್ದಾರೆ. 

ಇದಾಗಲೇ ತಮ್ಮ ಮನೆಯಲ್ಲಿ ಆಚರಿಸುವ ಹಬ್ಬಗಳ ಬಗ್ಗೆಯೂ ಸಾಕಷ್ಟು ಬಾರಿ ಹೇಳಿದ್ದ ಶಾರುಖ್, ತಮ್ಮ ಮನ್ನತ್ ಬಂಗಲೆಯಲ್ಲಿ ಈದ್ ಅನ್ನು ಎಷ್ಟು ಸಂಭ್ರಮದಿಂದ ಆಚರಿಸಲಾಗುತ್ತದೆಯೋ ಅದೇ ಸಂಭ್ರಮದಿಂದ ಗಣೇಶೋತ್ಸವವನ್ನೂ ಆಚರಿಸಲಾಗುತ್ತದೆ ಎಂದಿದ್ದಾರೆ. "ನಾನು ಮುಸ್ಲಿಂ, ನನ್ನ ಹೆಂಡತಿ ಹಿಂದೂ ಮತ್ತು ನಮ್ಮ ಮಕ್ಕಳು ಎಲ್ಲಾ ಧರ್ಮವನ್ನೂ ಆಚರಿಸುತ್ತಾರೆ.   ಎಲ್ಲರೂ ಎಲ್ಲವನ್ನೂ ಯಾವುದೇ ಅಳುಕಿಲ್ಲದೇ ಆಚರಿಸುತ್ತೇವೆ ಎಂದಿದ್ದಾರೆ. ಇವೆಲ್ಲವುಗಳ ನಡುವೆಯೇ ಗೌರಿ ಖಾನ್​ ಬುರ್ಖಾದಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ. ಕೆಲವು ನಟರಂತೆಯೇ ಶಾರುಖ್​ ಕೂಡ ಪತ್ನಿಯನ್ನು ಮದುವೆಯಾಗಿ 23 ವರ್ಷಗಳ ಬಳಿಕ ಮತಾಂತರ ಮಾಡಿದ್ರಾ ಎಂದು ಸುದ್ದಿಗಳು ಹರಿದಾಡುತ್ತಿವೆ. ಶಾರುಖ್​ ಮತ್ತು ಗೌರಿಯ ಅಭಿಮಾನಿಗಳು ಕೂಡ ಈ ಫೋಟೋ ನೋಡಿ ಹಲವರು ಶಾಕ್​ ಆಗಿದ್ದರೆ, ಮತ್ತೆ ಕೆಲವರು ಖುಷಿ ಪಟ್ಟಿದ್ದಾರೆ. 

Tap to resize

Latest Videos

ಸಲ್ಮಾನ್​ ಬಳಿಕ ಶಾರುಖ್​ಗೂ ಜೀವ ಬೆದರಿಕೆ: ಶಾಕಿಂಗ್​ ನ್ಯೂಸ್​ಗೆ ನೆಟ್ಟಿಗರು ತಮಾಷೆ ಮಾಡ್ತಿರೋದ್ಯಾಕೆ ನೋಡಿ!

ಗೌರಿ ಅವರು, ಮುಸ್ಲಿಮರ ಪವಿತ್ರ ಸ್ಥಳವಾದ ಮೆಕ್ಕಾಕ್ಕೆ ಹೋಗಿರುವ ಫೋಟೋ ನೋಡಬಹುದಾಗಿದೆ. ಇದರಲ್ಲಿ ಗೌರಿ ಹಿಜಾಬ್​ ಧರಿಸಿರುವುದು ಇದರಲ್ಲಿ ನೋಡಬಹುದು.  ಈ ಫೋಟೋಗಳಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ಮೆಕ್ಕಾದಲ್ಲಿರುವ ಪವಿತ್ರ ಕಾಬಾದ ಮುಂದೆ ಪೋಸ್ ನೀಡಿದ್ದಾರೆ.  ಆದರೆ ಅಸಲಿಗೆ ಇದು ಅಸಲಿ ಫೋಟೋ ಅಲ್ಲವೇ ಅಲ್ಲ. ಬದಲಿಗೆ  AI- ರಚಿತವಾದ ನಕಲಿ ಚಿತ್ರವಾಗಿದೆ. ಸುಮ್ಮನೇ ಹಿಂದೂ-ಮುಸ್ಲಿಮರ ನಡುವೆ  ವಿವಾದವನ್ನು ಸೃಷ್ಟಿಸಲು ಇದನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ. ಇದಾಗಲೇ ಕೆಲವು ಸಿನಿ ತಾರೆಯರು ಡೀಪ್​ ಫೇಕ್​ ಫೋಟೋ, ವಿಡಿಯೋಗಳಿಗೆ ಬಲಿಯಾದದ್ದು ಇದೆ.  ದೀಪಿಕಾ ಪಡುಕೋಣೆಯಿಂದ ಹಿಡಿದು ಟೇಲರ್ ಸ್ವಿಫ್ಟ್ ವರೆಗೆ, ಹಲವಾರು ತಾರೆಯರು ಇದೇ ರೀತಿಯ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಇದೀಗ ಶಾರುಖ್​ ಮತ್ತು ಗೌರಿ ಖಾನ್​ ಅವರ ಫೋಟೋ ತಿರುಚಿರುವುದು ತಿಳಿದು ಬಂದಿದೆ.
 
ಈ ಹಿಂದಿನ ಸಂದರ್ಶನದಲ್ಲಿ ನನ್ನ ಮಕ್ಕಳು ಗಾಯತ್ರಿ ಮಂತ್ರ ಹೇಳುತ್ತಾರೆ, ನಾನು ಬಿಸ್ಮಿಲ್ಲಾ ಹೇಳುತ್ತೇನೆ. ಇದೆಲ್ಲವೂ ಓಕೆ. ನನ್ನ ಹಲವಾರು ಮುಸ್ಲಿಂ ಸ್ನೇಹಿತರು ಮನೆಗೆ ಬರುತ್ತಾರೆ. ಅವರೂ ಗಾಯತ್ರಿ ಮಂತ್ರ ಕೇಳುತ್ತಾರೆ. ನಾವು ನಮಾಜ್​ ಮಾಡುವುದನ್ನು ನೋಡುತ್ತಾರೆ. ಕೆಲವೊಮ್ಮೆ ಅದನ್ನು ನಾವು ಸರಿಯಾಗಿ ಮಾಡುವುದೇ ಇಲ್ಲ. ಆ ಸಮಯದಲ್ಲಿ ನನ್ನ ಸ್ನೇಹಿತರು ಸರಿಯಾಗಿ ಹೇಗೆ ಮಾಡುವುದು ಎನ್ನುವುದನ್ನು ಕಲಿಸುತ್ತಾರೆ. ನನ್ನ ಯಾವುದೇ ಸ್ನೇಹಿತರಿಗೂ ನನ್ನ ಬಗ್ಗೆ ಅಸಮಾಧಾನ ಇಲ್ಲ. ನಾನು ಖುರಾನ್​ ಓದುತ್ತೇನೆ. ಅಷ್ಟಕ್ಕೂ ಬೈಬಲ್​, ಗೀತಾ, ಖುರಾನ್​ ಎಲ್ಲವೂ ಒಂದೇ. ಇದಕ್ಕಾಗಿ ಎಲ್ಲರೂ ಬಡಿದಾಡುವುದನ್ನು ನೋಡಿದರೆ ಆಶ್ಚರ್ಯ ಆಗುತ್ತದೆ. ಎಲ್ಲದರ ಸಾರವೂ ಒಂದೇ. ನಾವ್ಯಾಕೆ ಕಿತ್ತಾಡಬೇಕು ಎಂದು ಕೇಳಿದ್ದರು. ಇದರ ನಡುವೆಯೇ ಇದೀಗ ಈ ಫೋಟೋ ಸಕತ್​ ಸದ್ದು ಮಾಡುತ್ತಿದೆ. 

ಶಾರುಖ್​ ಖಾನ್​ ಹಣವೇ ಕೊಡದಿದ್ರೂ ಬೀದಿ ವ್ಯಾಪಾರಿಗಳು ಮಾಲಾಮಾಲ್​- ಇದು ನಟನ ಕಮಾಲ್​!
 

click me!