Farmers block Kangana's Car: ಕಂಗನಾ ಕಾರಿಗೆ ರೈತರ ಮುತ್ತಿಗೆ, ನಟಿಗೆ ಘೇರಾವ್

By Suvarna NewsFirst Published Dec 3, 2021, 5:40 PM IST
Highlights
  • Kangana ranaut: ಬಾಲಿವುಡ್ ನಟಿಯ ಕಾರಿಗೆ ಮುತ್ತಿಗೆ ಹಾಕಿದ ರೈತರು
  • ಸುತ್ತಲೂ ರೈತರ ಮುತ್ತಿಗೆ, ಕಂಗನಾ ಕಂಗಾಲು

ಪಂಜಾಬ್‌ನ(Punjab) ಕಿರಾತ್‌ಪುರದಲ್ಲಿ ರೈತರು ಬಾಲಿವುಡ್(Bollywood) ನಟಿ ಕಂಗನಾ ರಣಾವತ್(Kangana Ranaut) ಅವರ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ರೈತರು ತನ್ನ ಕಾರಿಗೆ ಮುತ್ತಿಗೆ ಹಾಕಿರುವುದಾಗಿ ನಟಿ ಆರೋಪಿಸಿದ್ದಾರೆ. ಚಂಡೀಗಡ ಹಾಗೂ ಉನಾ ಹೈವೇಯ ಬುಂಗಾ ಸಾಹಿಬ್ ಹಾಗೂ ಕಿರಾತ್‌ಪುರ ಎಂಬಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ಸ್ಥಳದ ವಿಡಿಯೋ ವೈರಲ್ ಆಗಿದ್ದು ಇದರಲ್ಲಿ ನಟಿಯ ಬಿಳಿ ಬಣ್ಣದ ಕಾರನ್ನು ರೈತರು ಮುತ್ತಿಗೆ ಹಾಕಿರುವುದನ್ನು ಕಾಣಬಹುದು. ಸ್ಥಳದಲ್ಲಿದ್ದ ಪೊಲೀಸರು(Police) ಮುತ್ತಿಗೆ ಹಾಕಿದ ರೈತರನ್ನು ನಿಭಾಯಿಸುವುದನ್ನು ಕಾಣಬಹುದು.

ರೈತ ಮುಖಂಡರಾಕೇಶ್ ಟಿಕಾಯತ್ ಅವರು ಮಾತನಾಡಿ, ರೈತರ ಈ ದಿಢೀರ್ ಮುತ್ತಿಗೆ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದಿದ್ದಾರೆ. ಕಂಗನಾ ಅವರ ಕಾರಿಗೆ ರೈತರು ಮುತ್ತಿಗೆ ಹಾಕಿದ್ದು ತಿಳಿದಿಲ್ಲ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಘಟನೆಯ ಮಾಹಿತಿ ಸಿಕ್ಕಿದ ಮೇಲೆ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.

ಕೋಲಾಹಲ ಸೃಷ್ಟಿಸಿದ ವಿವಾದಾತ್ಮಕ ಹೇಳಿಕೆಗಳು!

ರೈತರ ಪ್ರತಿಭಟನೆ ಕುರಿತ ಪೋಸ್ಟ್‌ಗಳಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿರುವುದಾಗಿ ನಟಿ ಕಂಗನಾ ರಣಾವತ್ ಮಂಗಳವಾರ ಹೇಳಿದ್ದಾರೆ. ಕಂಗನಾ ಅವರು ರೈತರ ಚಳವಳಿಯ ವಿರುದ್ಧ ಟೀಕೆ ವ್ಯಕ್ತಪಡಿಸುವುದಲ್ಲದೆ ಕೆಲವೊಮ್ಮೆ ಆವೇಶದ ಮಾತುಗಳನ್ನೂ ಹೇಳುತ್ತಾರೆ. ಇದು ಬಹಳಷ್ಟು ಸಂದರ್ಭಗಳಲ್ಲಿ ವಿವಾದಕ್ಕೆ ಕಾರಣವಾಗುತ್ತದೆ. ತನ್ನ ಇತ್ತೀಚಿನ ಪೋಸ್ಟ್‌ಗಳ ಕುರಿತಾಗಿ ತನಗೆ ನಿರಂತರವಾಗಿ ಬೆದರಿಕೆಗಳು ಬರುತ್ತಿವೆ ಎಂದು ನಟಿ ಆರೋಪಿಸಿದ್ದಾರೆ.

ನನ್ನ ಈ ಪೋಸ್ಟ್‌ನಲ್ಲಿ ನನಗೆ ನಿರಂತರ ಬೆದರಿಕೆಗಳು ಬರುತ್ತಿವೆ. ಬಟಿಂಡಾದ ಒಬ್ಬ ವ್ಯಕ್ತಿ ನನ್ನನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ. ಈ ರೀತಿಯ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ಎಂದಿದ್ದಾರೆ ನಟಿ. ದೇಶ ಮತ್ತು ಭಯೋತ್ಪಾದಕ ಶಕ್ತಿಗಳ ವಿರುದ್ಧ ಪಿತೂರಿ ಮಾಡುವವರ ವಿರುದ್ಧ ನಾನು ಮಾತನಾಡುವುದನ್ನು ಮುಂದುವರಿಸುತ್ತೇನೆ. ಅದು ನಕ್ಸಲರು ಅಮಾಯಕ ಯೋಧರನ್ನು ಕೊಲ್ಲುತ್ತಾರೆ. ತುಕ್ಡೆ ತುಕ್ಡೆ ಗ್ಯಾಂಗ್‌ಗಳು ಅಥವಾ ಖಲಿಸ್ತಾನ್ ರಚನೆಯ ಕನಸು ಕಾಣುತ್ತಿರುವ ವಿದೇಶದಲ್ಲಿ ಕುಳಿತಿರುವ ಭಯೋತ್ಪಾದಕರು ಎಂದು ಕಂಗನಾ ಹೇಳಿದ್ದರು.

ಬಟಿಂಡಾ ನಿವಾಸಿ ವಿರುದ್ಧ ದೂರು:

ನಟಿ ಕಂಗನಾ ರಣಾವತ್(Kangana Ranaut) ಅವರು ಇತ್ತೀಚೆಗೆ ಬಟಿಂಡಾ ನಿವಾಸಿಯೊಬ್ಬರ ವಿರುದ್ಧ ದೂರು ನೀಡಿದ್ದು ಎಫ್‌ಐಆರ್(FIR) ದಾಖಲಿಸಲಾಗಿದೆ. ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ನಟಿ ಅಭಿಮಾನಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದಾರೆ. ಕಂಗನಾ ಎಫ್‌ಐಆರ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ 26/11 ದಾಳಿಯ ಬಗ್ಗೆ ಮಾತನಾಡಿದ ನಂತರ ನನಗೆ ಈ ಬೆದರಿಕೆಗಳು ಬಂದವು ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮೊರೆ ಹೋಗಿರೋ ನಟಿ ತಮಗೆ ನೆರವಾಗುವಂತೆ ಕೇಳಿಕೊಂಡಿದ್ದಾರೆ. ಈ ಸುದ್ದಿ ಈಗ ವೈರಲ್ ಆಗಿದೆ.

ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅವರು ಸೋನಿಯಾ ಗಾಂಧಿ(Sonia Gandhi) ಅವರಿಗೆ ಮನವಿ ಮಾಡಿದ್ದಾರೆ. ಬೆದರಿಕೆಗಳಿಗೆ ಹೆದರುವುದಿಲ್ಲ ಎಂದ ಕಂಗನಾ, ಭಾರತಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಈ ಸುದ್ದಿ ಕಂಗನಾ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸದಾ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿ (Bollywood) ಕಂಗನಾ ರಣಾವತ್ (Kangana Ranaut)ಮೇಲೆ ಇದೀಗ ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ (hurting religious sentiments) ತಂದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.

ಕಂಗನಾ ವಿರುದ್ಧ ಮುಂಬೈ ಪೊಲೀಸರಿಂದ ಕೇಸ್:

ಮುಂಬೈ (Mumbai)ಪೊಲೀಸರು ನಟಿ ಕಂಗನಾ ರಣಾವತ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಮರ್ ಜೀತ್ ಸಿಂಗ್ ಸಂಧು ಎಂಬುವರು ದಾಖಲಿಸಿದ್ದ ದೂರಿನ ಆಧಾರದಲ್ಲಿ ಕೇಸ್ ಬುಕ್ ಆಗಿದೆ.

ಶ್ರೀ ಗುರು ಸಿಂಗ್ ಸಭಾ ಗುರುದ್ವಾರ ಸಮಿತಿ (SGSSGC) ಸದಸ್ಯ ಅಮರ್ಜಿತ್ ಸಿಂಗ್ ಸಂಧು ಅವರು ದೂರು ದಾಖಲಿಸಿದ್ದಾರೆ, ಕಂಗನಾ  ವಿರುದ್ಧ ಐಪಿಸಿಯ ಸೆಕ್ಷನ್ 295-A ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಪ್ರೀಂ ಕೌನ್ಸಿಲ್ ನವಿ ಮುಂಬೈ ಗುರುದ್ವಾರಸ್ ಅಧ್ಯಕ್ಷ ಜಸ್ಪಾಲ್ ಸಿಂಗ್ ಸಿಧು   ನಟಿ ವಿರುದ್ಧ ದೂರು ದಾಖಲಿಸಿದ್ದರು. ಖಾರ್ ಪೊಲೀಸ್ ಠಾಣೆಯಲ್ಲಿ ಸಹ ದೂರು ದಾಖಲಾಗಿತ್ತು. ಫೇಸ್  ಬುಕ್ ಮತ್ತು ಇಸ್ಟಾ ಗ್ರಾಮ್ ನಲ್ಲಿ (Social Media) ಕಂಗನಾ ಸಿಖ್ಖರ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಪೋಸ್ಟ್ ಹಾಕಿದ್ದಾರೆ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

click me!