
ಕೊರೋನಾ ಲಾಕ್‌ಡೌನ್ (Covid19) ಅವಧಿಯಲ್ಲಿ ವೈರಸ್‌ನಿಂದ ಮತ್ತು ಡಿಪ್ರೆಶನ್‌ನಿಂದ (Depression) ಭಾರತೀಯ ಚಿತ್ರರಂಗ ಸಾಕಷ್ಟು ಕಲಾವಿದರನ್ನು ಕಳೆದುಕೊಂಡಿದೆ. ಆರೋಗ್ಯ ಸಮಸ್ಯೆಯಿಂದ ಕೆಲವರು ನಿಧನರಾದರೆ, ಮತ್ತೊಂದೆಡೆ ಆತ್ಮಹತ್ಯೆ (Suicide), ಕೊಲೆ (Murder) ಆದರೆ ಜೀವನ ಹೀಗೂನಾ ಎಂದು ಕಲ್ಪನೆ ಕೂಡ ಮಾಡಿಕೊಳ್ಳಲು ಸಾಧ್ಯವಾಗದಂತೆ ದುರಂತ ಸಾವು ಕಂಡಿದ್ದಾರೆ. ನಿನ್ನೆ ಚೆನ್ನಾಗಿದ್ದ ವ್ಯಕ್ತಿ ಇಂದು ಇಲ್ಲ, ಎಂದು ತಿಳಿದರೆ ಶಾಕ್ ಮಾತ್ರವಲ್ಲ ಎಷ್ಟು ನೋವಾಗುತ್ತದೆ ಅಲ್ವಾ?
36 ವರ್ಷದ ಬಾಲಿವುಡ್ ಖ್ಯಾತ ನಟ ಬ್ರಹ್ಮ ಮಿಶ್ರಾ (Brahma Mishra) ಗುರುವಾರ ಮುಂಬೈನ ಯಾರಿ ರಸ್ತೆಯಲ್ಲಿರುವ ವರ್ಸೋವಾನಲ್ಲಿ ಫ್ಲ್ಯಾಟ್‌ನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆಲವು ದಿನಗಳಿಂದ ಅಕ್ಕ-ಪಕ್ಕದ ಮನೆಯವರಿಗೆ ಅವರು ಕಾಣಿಸದೇ ಇದ್ದಾಗ ಪೊಲೀಸರಿಗೆ (Police) ಕರೆ ಮಾಡಿ, ದೂರು ದಾಖಲಿಸಿದ್ದಾರೆ. ಪೊಲೀಸರು ಫ್ಲ್ಯಾಟ್‌ಗೆ ಆಗಮಿಸಿ ಬಾಗಿಲು ಹೊಡೆದಾಗ ಮೃತ ದೇಹ ಪತ್ತೆಯಾಗಿದೆ. ದೇಹ ಕೊಳೆಯುವ (Body Decompose) ಸ್ಥಿತಿಯಲ್ಲಿದ್ದು, ಎನ್ನಲಾಗಿದೆ.
ಹಸೀನ್ ದಿಲ್ರುಬಾ (2021), ಕೇಸರಿ (Kesari) (2019) ಮತ್ತು ಚೋರ್ ಚೋರ್ ಸೂಪರ್ ಚೋರ್ (2013) ಸಿನಿಮಾದಲ್ಲಿ ನಟಿಸಿರುವ ಬ್ರಹ್ಮ ಅವರನ್ನು ಯಾರೂ ಕೊಲೆ ಮಾಡಿಲ್ಲ, ಹೃದಯಾಘಾತದಿಂದ (Heart Attack)ಕೊನೆ ಉಸಿರೆಳೆದಿದ್ದಾರೆ. ಆದರೆ ಯಾರೂ ನೋಡಿಕೊಳ್ಳದ ಕಾರಣ ದೇಹ ಇಂಥ ಸ್ಥಿತಿ ತಲುಪಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೂ ಕೂಪರ್ ಆಸ್ಪತ್ರೆಗೆ (Cooper Hospital) ಬ್ರಹ್ಮಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಭೂಪಾಲ್‌ನಲ್ಲಿರುವ ಕುಟುಂಬಸ್ಥರಿಗೆ ಸಾವಿನ ಮಾಹಿತಿ ತಲುಪಿಸಿದ್ದಾರೆ.
ಬ್ರಹ್ಮ ಸಾವಿಗೆ ಕಾರಣ ಏನು ಎಂದು ತಿಳಿಯ ಬೇಕು, ಎಂದು ಸಿನಿ ಸ್ನೇಹಿತರು ಮತ್ತು ಅಭಿಮಾನಿಗಳು (Fans) ಮುಂಬೈ ಪೊಲೀಸರ ಮೇಲೆ ಒತ್ತಾಯ ಹಾಕುತ್ತಿದ್ದಾರೆ. ಮನೆಯ ಹಾಲ್ ಅಥವಾ ರೂಮ್‌ನಲ್ಲಿ ಅಲ್ಲ, ಮೃತ ದೇಹ ಟಾಯ್ಲೆಟ್‌ನಲ್ಲಿ (Toilet) ಪತ್ತೆಯಾಗಿರುವುದು ಹೀಗಾಗಿ ತನಿಖೆ ಮಾಡಬೇಕು ಎಂದು ಅಗ್ರಹಿಸುತ್ತಿದ್ದಾರೆ.
ಜನಪ್ರಿಯ ವೆಸ್ ಸೀರಿಸ್ ಆದ ಮಿರ್ಜಾಪುರ್‌ನಲ್ಲಿ (Mirzapur) ಪ್ರಮುಖ ಪಾತ್ರದಲ್ಲಿ ಬ್ರಹ್ಮ ಕಾಣಿಸಿಕೊಂಡಿದ್ದರು. ನಟ ಅಕ್ಷಯ್ ಕುಮಾರ್ (Akshay Kumar), ಆಮೀರ್ ಖಾನ್, ಸುಶಾಂತ್ ಸಿಂಗ್, ಸೈಫ್ ಅಲಿ ಖಾನ್ (Saif Ali Khan), ನವಾಜುದ್ದೀನ್, ಹೃತಿಕ್ ರೋಷನ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ಬ್ರಹ್ಮ ನಟಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಿನಿ ಆಪ್ತರು ಸಂತಾಪ ಸೂಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.