
ಟಾಲಿವುಡ್ (Tollywood) ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಸಹೋದರ ನಾಗ ಬಾಬು (Naga Babu) ಪುತ್ರಿ ನಿಹಾರಿಕಾ ಕೊನೆಡೇಲಾ ಮತ್ತು ಉದ್ಯಮಿ ಚೈತನ್ಯ (Chaitanya) 2021ರ ಡಿಸೆಂಬರ್ 10ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಐಷಾರಾಮಿ ಮದುವೆ ತಯಾರಿಯಿಂದ ಹಿಡಿದು, ಇಬ್ಬರ ಹನಿಮೂನ್ ಟ್ರಿಪ್‌ವರೆಗೂ (Honeymoon trip) ದೊಡ್ಡ ಸುದ್ದಿಯಾಗಿತ್ತು. ಮದುವೆ ಸುದ್ದಿ ಹೊರತು ಪಡಿಸಿ ನಿಹಾರಿಕಾ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅನೇಕ ಬಾರಿ ನೆಟ್ಟಿಗರು ಪ್ರಶ್ನೆ ಮಾಡಿದ್ದರೂ, ಉತ್ತರಿಸಿರಲಿಲ್ಲ ಆದರೀಗ ಖಾಸಗಿ ಸಂದರ್ಶನದಲ್ಲಿ ತಮ್ಮ ದಾಂಪತ್ಯದ ಕೆಲವೊಂದು ಸತ್ಯಗಳನ್ನು ಹಂಚಿಕೊಂಡಿದ್ದಾರೆ.
ರಾಜಸ್ಥಾನದ ಅರಮನೆ (Rajasthan Palace) ಒಂದರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಹಾರಿಕಾ (Niharika Konidela) ಮತ್ತು ಚೈತನ್ಯ ಮದುವೆ ವಿಡಿಯೋಗಳನ್ನು ತಂದೆ ನಾಗ ಬಾಬು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ (Youtube Channel) ಅಪ್ಲೋಡ್ ಮಾಡಿದ್ದಾರೆ. ಮನೆಯಲ್ಲಿ ನಡೆದ ರಿಶಿಣ ಶಾಸ್ತ್ರ, ಪ್ರಯಾಣ ಮಾಡುತ್ತಿರುವುದು, ಆಗಮಿಸಿ ಅತಿಥಿಗಳಿಗೆ ರಿಟರ್ನ್ ಗಿಫ್ಟ್, ಸಂಗೀತ್ (Sangeeth), ಆರತಕ್ಷತೆ ಮತ್ತು ಮುಹೂರ್ತವನ್ನು ಈ ಸಂಪೂರ್ಣವಾಗಿ ಈ ವಿಡಿಯೋಗಳಲ್ಲಿ ತೋರಿಸಲಾಗಿದ್ದು, ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.
ಕೆಲವು ದಿನಗಳ ಹಿಂದೆ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಿಹಾರಿಕಾ ತಮ್ಮ ಮದುವೆ ಲೈಫ್ ಮತ್ತು ಸಿನಿ ಜರ್ನಿ ಹೇಗಿದೆ ಎಂದು ಹಂಚಿಕೊಂಡಿದ್ದಾರೆ. ಹೀಗೆ ಮಾತನಾಡುತ್ತಿದ್ದ ನಿಹಾರಿಕಾ, ಚೈತನ್ಯ ಅವರಿಗೆ ನಾನು ಸಿನಿಮಾದಲ್ಲಿ ನಟಿಸುವುದು ಇಷ್ಟವಿಲ್ಲ. ಹೀಗಾಗಿ ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟೆ, ಎಂದಿದ್ದಾರಂತೆ. 'ಸಮಂತಾ ಪ್ರಭು (Samantha) ಅವರನ್ನು ಉದಾಹರಣೆಯಾಗಿ ನೋಡಿ, ಮದುವೆ ಆದ ನಂತರವೂ ಆಕೆಯ ಕ್ರೇಜ್ ಕಡಿಮೆ ಆಗಲಿಲ್ಲ, ಇನ್ನು ಮದುವೆ ಆದ ನಂತರವೇ ಡಿಮ್ಯಾಂಡ್ ಹೆಚ್ಚಾಗಿದ್ದು. ಮದುವೆ ಆದ ನಂತರವೂ ಸಿನಿಮಾ ಮಾಡಿದ್ದಾರೆ ಗ್ರೇಟ್,' ಎಂದು ಮೆಗಾ ಪುತ್ರಿ ಹೇಳಿದ್ದಾರಂತೆ.
ಸಿನಿಮಾದಿಂದ ದೂರ ಉಳಿದಿರುವ ನಿಹಾರಿಕಾ ಸದ್ಯ ವೆಬ್ ಡ್ರಾಮಾವೊಂದರಲ್ಲಿ (Web-Drama) ನಟಿಸುತ್ತಿದ್ದಾರೆ. ಖ್ಯಾತ ಯುಟ್ಯೂಬರ್ Nikhiluu ಜೊತೆ ನಟಿಸುತ್ತಿರುವುದಾಗಿ ರಿವೀಲ್ ಮಾಡಿದ್ದಾರೆ. ಆದರೆ ವೆಬ್ ಡ್ರಾಮಾ ಟೈಟಲ್, ಪಾತ್ರ ಹೇಗಿರಲಿದೆ ಎಂದು ಹೇಳಿಲ್ಲ. ಮುದ್ದಪಪ್ಪು ಆವಕಾಯಿ, ನನ್ನ ಕೂಚಿ ಮತ್ತು ಮಡ್ಹೌಸ್ ವೆಬ್ ಸೀರಿಸ್‌ಗಳಲ್ಲಿ ನಿಹಾರಿಕಾ ನಟಿಸಿ ನಿರ್ಮಾಣ ಕೂಡ ಮಾಡಿದ್ದಾರೆ. 2016ರಲ್ಲಿ ಓಕಾ ಮನಸ್ಸು (Oka Manasu) ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆದರೆ ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ ಚಿರಂಜೀವಿ ನಟನೆಯ ಸೈರಾ (Sya Raa) ನರಸಿಂಹ ರೆಡ್ಡಿ ಚಿತ್ರದಲ್ಲಿ.
ಮದುವೆ ನಂತರ ಮಾಲ್ಡೀವ್ಸ್ (Maldives) ಟ್ರಿಪ್ ಹೋದ ನಿಹಾರಿಕಾ ಮತ್ತು ಚೈತನ್ಯ ಎಲ್ಲೆಡೆ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಟ್ರಾವಲಿಂಗ್ (Travel) ಇಷ್ಟ ಪಡುವ ಕಾರಣ ಸದಾ ಪ್ರಯಣ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮದುವೆ ಆಗಿ ಒಂದು ವರ್ಷದೊಳಗೆ ನಿಹಾರಿಕಾ ಪತಿ ವಿರುದ್ಧ ದೂರು ದಾಖಲು ಮಾಡಲಾಗಿತ್ತು. ಹೈದರಾಬಾದ್‌ನ (Hyderabad) ಶೇಖ್‌ಪೇಟೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಚೈತನ್ಯ ಒಂದು ಫ್ಲಾಟ್ ಖರೀದಿಸಿದ್ದಾರೆ. ಮಧ್ಯರಾತ್ರಿ ಗಲಾಟೆ ಮಾಡುತ್ತಾರೆ, ಪಾರ್ಟಿ ಮಾಡುತ್ತಾರೆ, ಪ್ರಶ್ನೆ ಮಾಡಲು ಹೋದರೆ ನಿವಾಸಿಗಳ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆಂದು ನಿವಾಸಿಗಳು ದೂರು ದಾಖಲಿಸಿದ್ದರು. ಆದರೆ ಚೈತನ್ಯ ಅವರು ಈ ಮನೆಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸಬೇಕು, ಎಂದು ಮರು ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿ ಕಚೇರಿ ಮಾಡಬಾರದು ಎನ್ನುವ ಕಾರಣಕ್ಕೂ ದೂರು ನೀಡಿದ್ದರು. ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ಚೈತನ್ಯ ನೀಡಿದ ನಂತರ ಆ ಫ್ಲಾಟ್ ವಿಚಾರದಿಂದ ದೂರ ಉಳಿದಿದ್ದಾರೆ.
ಕೆಲವು ದಿನಗಳಿಂದ ಸ್ಪೇನ್ (Spain) ಪ್ರವಾಸದಲ್ಲಿ ಬ್ಯುಸಿಯಾಗಿರುವ ನಿಹಾರಿಕಾ ಮೊದಲ ಬಾರಿ ಸ್ಕೈ ಡ್ರೈವಿಂಗ್ (Sku Driving) ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ತಾವು ಎಷ್ಟು ಭಯ ಪಡುತ್ತಿದ್ದೆ ಎಂಬುದನ್ನೂ ಹೇಳಿಕೊಂಡಿದ್ದಾರೆ. ಪುಟ್ಟ ಮಕ್ಕಳ ಹೆದರಿಕೊಳ್ಳುವ ರೀತಿ ನೀವು ಭಯ ಪಡುತ್ತಿದ್ದೀರಿ. ನಿಮ್ಮ ಪತಿ ಎಷ್ಟು ದೈರ್ಯವಾಗಿದ್ದಾರೆ ನೋಡಿ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.