ಗರ್ಭಾವಸ್ಥೆಯಲ್ಲಿ ಹೈ ಹೀಲ್ಸ್… ಸದ್ಯ ದೀಪಿಕಾ ಪಡುಕೋಣೆ ವಿಷ್ಯದಲ್ಲಿ ಇದು ಚರ್ಚೆಯಾಗ್ತಿರುವ ವಿಷ್ಯ. ನೆಟ್ಟಿಗರು ದೀಪಿಕಾ ಗರ್ಭಾವಸ್ಥೆ ಬಗ್ಗೆಯೇ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ದೀಪಿಕಾ ಉತ್ತರ ನೀಡಿಲ್ಲವಾದ್ರೂ ಇನ್ನೊಬ್ಬ ನಟಿ ಸುಮ್ಮನಿಲ್ಲ. ನೆಟ್ಟಿಗರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದ್ದಾರೆ.
ಬಾಲಿವುಡ್ ಬ್ಯೂಟಿ ಕ್ವೀನ್ ದೀಪಿಕಾ ಪಡುಕೋಣೆಗೆ ಅಮ್ಮನಾಗುವ ಸಂಭ್ರಮ. ದೀಪಿಕಾ ಪಡುಕೋಣೆ ಆರು ತಿಂಗಳ ಗರ್ಭಿಣಿ ಅನ್ನೋದು ಎಲ್ಲರಿಗೂ ತಿಳಿದಿರೋ ವಿಷ್ಯ. ಸೆಪ್ಟೆಂಬರ್ ನಲ್ಲಿ ದೀಪಿಕಾ ಹಾಗೂ ರಣವೀರ್ ಸಿಂಗ್ ಮನೆಗೊಂದು ಪುಟಾಣಿ ಪಾಪು ಬರಲಿದೆ. ಅದನ್ನು ವೆಲ್ ಕಂ ಮಾಡಲು ಇಡೀ ಚಿತ್ರರಂಗ, ಅಭಿಮಾನಿ ಬಳಗವೇ ಸಿದ್ಧವಾಗಿದೆ. ಈ ಮಧ್ಯೆ ದೀಪಿಕಾ, ಬೇಬಿ ಬಂಪ್ ವೈರಲ್ ಆಗ್ತಾನೆ ಇದೆ. ದೀಪಿಕಾ ಹೋದಲ್ಲೆಲ್ಲ ಕ್ಯಾಮರಾ ಮೆನ್ ಗಳು ಹಿಂದೆ ಬರ್ತಿದ್ದಾರೆ.
ಪ್ರೆಗ್ನೆಂಟ್ (Pregnant) ದೀಪಿಕಾ ಪಡುಕೋಣೆ ವೃತ್ತಿ ಜೀವನದಲ್ಲೂ ಬ್ಯುಸಿಯಾಗಿದ್ದಾರೆ. ಅವರ ಬಹುನಿರೀಕ್ಷಿತ ಚಿತ್ರ ಕಲ್ಕಿ 2898 AD ನಾಳೆ ತೆರೆಗೆ ಬರಲಿದೆ. ಚಿತ್ರ ಬಿಡುಗಡೆಗೂ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ದೀಪಿಕಾ (Deepika), ಬೇಬಿ ಬಂಪ್ ನೊಂದಿಗೆ ಕಾಣಿಸಿಕೊಂಡಿದ್ದರು. ದೀಪಿಕಾ ಕಪ್ಪು ಬಣ್ಣದ ಡ್ರೆಸ್ ಜೊತೆ ಪೆನ್ಸಿಲ್ ಹೀಲ್ಸ್ (pencil heels) ಹಾಕಿದ್ರು. ಮುಖದಲ್ಲಿ ಪ್ರೆಗ್ನೆನ್ಸಿ ಹೊಳಪು ಸ್ಪಷ್ಟವಾಗಿ ಕಾಣಿಸ್ತಾ ಇತ್ತು.
ದೀಪಿಕಾ ಪಡುಕೋಣೆ ಮಗುವಿನ ಬಗ್ಗೆ ಭವಿಷ್ಯ ನುಡಿದ ಕಮಲ್ ಹಾಸನ್! ಉಳಗ ನಾಯಗನ್ ಹೇಳಿದ್ದೇನು?
ದೀಪಿಕಾ ಸ್ಟೈಲ್ ಟ್ರೋಲರ್ ಗಳ ಮನಸ್ಸಿಗೆ ಬರಲಿಲ್ಲ. ದೀಪಿಕಾ ಹೀಲ್ಸ್ ಬಗ್ಗೆ ಸಾಕಷ್ಟು ಕಮೆಂಟ್ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ. ಈಗ್ಲೂ ದೀಪಿಕಾ, ಪ್ರೆಗ್ನೆನ್ಸಿ ವಿಷ್ಯದ ಬಗ್ಗೆ ಸುಳ್ಳು ಹೇಳ್ತಿದ್ದಾಳೆ ಎಂಬ ಆರೋಪ ಇದೆ. ದೀಪಿಕಾ ಸುಳ್ಳು ಗರ್ಭಿಣಿ ಎಂದು ಟ್ರೋಲ್ ಮಾಡಲಾಗ್ತಿದೆ. ಶೀಘ್ರದಲ್ಲಿಯೇ ತಾಯಿಯಾಗಲಿರುವ ರಿಚಾ ಚಡ್ಡಾ, ಈ ಟ್ರೋಲರ್ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಿಚಾ ಚಡ್ಡಾ ಉತ್ತರ ನೀಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಯಾವುದೇ ಭಯವಿಲ್ಲದೆ ಎಲ್ಲರ ಮುಂದೆ ಹೇಳುವ ರಿಚಾ ಚಡ್ಡಾ, ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತಿದ್ದಾರೆ. ರಿಚಾ ಚಡ್ಡಾ ಕೂಡ ಗರ್ಭಿಣಿಯಾಗಿರುವ ಕಾರಣ ಅವರು ದೀಪಿಕಾ ಮನಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು, ದೀಪಿಕಾ ಪರ ಬ್ಯಾಟ್ ಬೀಸಿದ್ದಾರೆ.
ದೀಪಿಕಾ ಹೀಲ್ಸ್ ವೈರಲ್ ಆಗ್ತಿದ್ದಂತೆ, ದೀಪಿಕಾ ಅಸಡ್ಡೆ ತಾಯಿ ಎಂಬುದನ್ನು ಸಾಭೀತುಪಡಿಸಿದ್ದಾರೆಂದು ಎಂದು ಕೆಲವರು ಕಮೆಂಟ್ ಮಾಡಿದ್ರೆ ಮತ್ತೆ ಕೆಲವರು ದೀಪಿಕಾ ನಕಲಿ ಗರ್ಭಿಣಿ ಎಂದಿದ್ದರು. ಮತ್ತೆ ಕೆಲವರು ಗರ್ಭಾವಸ್ಥೆಯಲ್ಲಿ ಹೀಲ್ಸ್ ಧರಿಸೋದು ಸೂಕ್ತವಲ್ಲ ಎಂದು ಸಲಹೆ ನೀಡಿದ್ದರು. ಈ ಟ್ರೋಲರ್ ಮಧ್ಯೆ ದೀಪಿ ಅಭಿಮಾನಿಯೊಬ್ಬರು, ದೀಪಿಕಾ ಸಣ್ಣ ಹುಡುಗಿ ಅಲ್ಲ. ಏನು ಧರಿಸಬೇಕು, ಏನು ಧರಿಸಬಾರದು ಎಂಬುದು ಅವರಿಗೆ ಗೊತ್ತು. ತಮ್ಮ ಕಂಫರ್ಟ್ ಗೆ ತಕ್ಕಂತೆ ಅವರು ಏನು ಬೇಕಾದ್ರೂ ಧರಿಸ್ತಾರೆ. ಅವರಿಗೆ ಯಾರ ಸಲಹೆಯ ಅಗತ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ರಿಚಾ ಚಡ್ಡಾ ಪ್ರತಿಕ್ರಿಯೆ ನೀಡಿದ್ದಾರೆ. ಗರ್ಭಕೋಶವಿಲ್ಲ.. ಜ್ಞಾನವಿಲ್ಲ ಎಂದು ರಿಚಾ ಚಡ್ಡಾ ಹೇಳಿದ್ದಾರೆ.
ದೀಪಿಕಾಯಿಂದ ಪೀಸೀವರೆಗೆ.. ಇವರದೇನ್ ಲಕ್ಕು ಗುರೂ! ನಟಿಯರಾಗೂ ಯಶಸ್ಸು, ಉದ್ಯಮಿಯಾಗೂ ಗೆಲುವು
ನಟಿ ರಿಚಾ ಚಡ್ಡಾ ಕೂಡ ಚೊಚ್ಚಲ ಗರ್ಭಿಣಿ. ಅವರು ಮತ್ತು ಅಲಿ ಫಜಲ್ ತಮ್ಮ ಮೊದಲ ಮಗುವಿಗೆ ಪೋಷಕರಾಗಲಿದ್ದಾರೆ. ರಿಚಾ ಕೂಡ ತಮ್ಮ ಗರ್ಭಾವಸ್ಥೆಯಲ್ಲೂ ಕೆಲಸ ಮಾಡ್ತಿದ್ದಾರೆ. ರಿಚಾ ಒಂಭತ್ತು ತಿಂಗಳ ಗರ್ಭಿಣಿಯಾದ್ರೂ ಅವರು ಸೋನಾಕ್ಷಿ ಸಿನ್ಹಾ ಮದುವೆಗೆ ಹಾಜರಾಗಿದ್ದರು. ಆದ್ರೆ ಸೋನಾಕ್ಷಿ ಭೇಟಿಯಾಗಲು ಸಾಧ್ಯವಾಗ್ಲಿಲ್ಲ. ಅಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಹಾಗೆ ಬಂದೆ ಎಂದು ರಿಚಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ (Social Media Post) ಹಾಕಿದ್ದರು. ಅಲ್ಲದೆ ಸೋನಾಕ್ಷಿ, ಇಕ್ಬಾಲ್ ಜೋಡಿ ಬಗ್ಗೆ ಒಂದಿಷ್ಟು ಸಿಹಿ ಮಾತುಗಳನ್ನು ಹೇಳಿದ್ದರು. ರಿಚಾ ಚಡ್ಡಾ ಕೂಡ ಬೇರೆ ಧರ್ಮದ ಯುವಕನನ್ನು ಮದುವೆ ಆಗಿದ್ದಾರೆ. 2022ರಲ್ಲಿ ರಿಚಾ, ಅಲಿ ಫಜಲ್ ಕೈ ಹಿಡಿದಿದ್ದಾರೆ.