ಚಂಗು-ಮಂಗು, ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿತೀನಿ; ಬಾಲಿವುಡ್ ಸ್ಟಾರ್ ಜೋಡಿಗೆ ಕಂಗನಾ ವಾರ್ನಿಂಗ್

Published : Feb 08, 2023, 10:56 AM IST
ಚಂಗು-ಮಂಗು, ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿತೀನಿ; ಬಾಲಿವುಡ್ ಸ್ಟಾರ್ ಜೋಡಿಗೆ ಕಂಗನಾ ವಾರ್ನಿಂಗ್

ಸಾರಾಂಶ

ಚಂಗು-ಮಂಗು, ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿತೀನಿ, ಮನೆಗೆ ನುಗ್ಗಿ ಹೊಡಿತೀನಿ ಎಂದು ಬಾಲಿವುಡ್ ಸ್ಟಾರ್ ಜೋಡಿಗೆ ಕಂಗನಾ ರಮಾವತ್ ವಾರ್ನಿಂಗ್ ನೀಡಿದ್ದಾರೆ.  

ಬಾಲಿವುಡ್‌ ನಟಿ ಕಂಗನಾ ರನೌತ್ ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕಂಗನಾ ತನ್ನ ಮೇಲೆ ಬಾಲಿವುಡ್ ಸ್ಟಾರ್ ಜೋಡಿ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದೀಗ ಸ್ಟಾರ್ ಕಲಾವಿದ ದಂಪತಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಾಲಿವುಡ್ ಸೆಲೆಬ್ರಿಟಿ ಜೋಡಿ ತನ್ನ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಕಂಗನಾ ರಣಾವತ್ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದರು. ಇದೀಗ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮತ್ತೆ ಪ್ರತಿಕ್ರಿಯಿಸಿರುವ ನಟಿ ಕಂಗನಾ, 'ನನ್ನ ಬಗ್ಗೆ ಚಿಂತೆ ಮಾಡುತ್ತಿರುವವರಿಗೆ ಹೇಳುತ್ತಿದ್ದೇನೆ. ನಿನ್ನೆ ರಾತ್ರಿಯಿಂದ ನನ್ನ ಸುತ್ತ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ನಡೆದಿಲ್ಲ. ಕ್ಯಾಮರಾ ಅಥವಾ ಕ್ಯಾಮರಾಗಳಿಲ್ಲದೆ ಯಾರೂ ನನ್ನನ್ನ ಹಿಂಬಾಲಿಸುತ್ತಿಲ್ಲ. ಪದಗಳ ಮೂಲಕ ಅರ್ಥ ಮಾಡಿಕೊಳ್ಳದವರಿಗೆ, ವಿಷಯಗಳನ್ನು ಬೇರೆಯದೇ ಮಾರ್ಗದಲ್ಲಿ ಅರ್ಥ ಮಾಡಿಸಬೇಕಾಗುತ್ತದೆ' ಎಂದ ಇನ್ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ಕಂಗನಾ ರಣಾವತ್ ಎಚ್ಚರಿಕೆ ನೀಡಿದ್ದಾರೆ. 

'ಚಂಗು - ಮಂಗುಗೆ ಇದು ನನ್ನ ಸಂದೇಶ, ನೀವು ಹಳ್ಳಿಯಿಂದ ಬಂದ ಯಾರನ್ನೋ ಎದುರಿಸುತ್ತಿಲ್ಲ. ನಿಮ್ಮ ದಾರಿ ಸರಿಪಡಿಸಿಕೊಳ್ಳಲು ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ನಿಮ್ಮ ಮನೆಗೆ ನುಗ್ಗಿ ನಾನು ಹೊಡೆಯುತ್ತೇನೆ. ನನ್ನನ್ನು ಹುಚ್ಚಿ ಎಂದು ಕರೆದವರಿಗೂ ಕೂಡ ನಾನು ಯಾವ ಮಟ್ಟಕ್ಕೆ ಹೋಗಬಹುದು ಎಂಬ ತಿಳಿದಿಲ್ಲ' ಎಂದು ಕಂಗನಾ ಬರೆದುಕೊಂಡಿದ್ದಾರೆ. 

ಪಠಾಣ್ ಸಕ್ಸಸ್: ಭಾರತ ಕೇವಲ ಖಾನ್‌ಗಳನ್ನು ಮಾತ್ರ ಇಷ್ಟಪಡೋದು; ಕಂಗನಾ ಅಚ್ಚರಿ ಹೇಳಿಕೆ

'ನಾನು ಹೋದಲ್ಲೆಲ್ಲಾ ನನ್ನನ್ನು ಹಿಂಬಾಲಿಸಲಾಗುತ್ತಿದೆ ಮತ್ತು ಬೇಹುಗಾರಿಕೆ ಮಾಡಲಾಗುತ್ತಿದೆ, ರಸ್ತೆಗಳಲ್ಲಿ ಮಾತ್ರವಲ್ಲದೆ ನನ್ನ ಕಟ್ಟಡದ ಪಾರ್ಕಿಂಗ್ ಮತ್ತು ಮನೆಯ ತಾರಸಿಯಲ್ಲಿಯೂ ಅವರು ನನ್ನನ್ನು ಸೆರೆಹಿಡಿಯಲು ಜೂಮ್ ಲೆನ್ಸ್‌ಗಳನ್ನು ಹಾಕುತ್ತಾರೆ. ಪಾಪರಾಜಿಗಳು ಈ ಬಗ್ಗೆ ಸುಳಿವು ನೀಡಿದ್ದಾರೆ. ಪಾಪರಾಜಿಗಳು ಸ್ಟಾರ್ಸ್‌ಗಳನ್ನು ಭೇಟಿಯಾಗುತ್ತಾರೆ.  ಆದರೀಗ ಅವರು ಸ್ಟಾರ್ಸ್‌ಗಳನ್ನು ಕ್ಲಿಕ್ ಮಾಡಲು ಶುಲ್ಕ ವಿಧಿಸಲು ಪ್ರಾರಂಭಿಸಿದ್ದಾರೆ. ಆದರೆ ಅವರಿಗೆ ನಾನು ಅಥವಾ ನನ್ನ ತಂಡ ಅವರಿಗೆ ಪಾವತಿಸುತ್ತಿಲ್ಲ. ಯಾರು ಪಾವತಿಸುತ್ತಿದ್ದಾರೆ? ಬೆಳಗ್ಗೇ  6:30 ಕ್ಕೆಯೇ ನನ್ನನ್ನು ಸೆರೆಹಿಡಿಯುತ್ತಾರೆ. ನನ್ನ ವೇಳಪಟ್ಟಿ ಅವರಿಗೆ ಹೇಗೆ ಗೊತ್ತಾಗುತ್ತದೆ. ನನ್ನ ಫೋಟೋಗಳನ್ನು ಕ್ಲಿಕ್ಕಿಸಿ ಅವರು ಏನು ಮಾಡುತ್ತಾರೆ. ನಾನು ನನ್ನ ಮುಂಜಾನೆಯ ನೃತ್ಯ ಅಭ್ಯಾಸ ಮುಗಿಸಿ ಹೋಗಾದ ಯಾರೂ ಸ್ಟುಡಿಯೊಗೆ ಬರುವ ಸುಳಿವು ನೀಡಿರಲಿಲ್ಲ ಆದರೆ ಅವರೆಲ್ಲರೂ ಭಾನುವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು' ಎಂದು ಹೇಳಿದ್ದರು.

Pathaan: ಪಾಕಿಗಳಿಗೂ ಇಷ್ಟವಾಯ್ತು ಪಠಾಣ್! ಕಂಗನಾ ಮಾತು ನಿಜವಾಯ್ತು ಅಂತಿದ್ದಾರೆ ನೆಟ್ಟಿಗರು

ಕಂಗನಾ ರಣಾವತ್ ಯಾವ ಸ್ಟಾರ್ ಜೋಡಿಯ ಬಗ್ಗೆ ಮಾತನಾಡಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿಲ್ಲ. ಆದರೆ ಅನೇಕರು ಅನೇಕರು ಅಲಿಯಾ ಮತ್ತು ರಣಬೀರ್ ಕಪೂರ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.ರಣಬೀರ್ ಮತ್ತು ಅಲಿಯಾ ಜೋಡಿಗೆಯೇ ಕಂಗನಾ ಚಂಗ-ಮಂಗ ಎಂದು ಹೇಳಿದ್ದಾರೆ ಅಂತ ಅನೇಕರು ಭಾವಿಸಿದ್ದಾರೆ. ಆದರೆ ಯಾರ ಬಗ್ಗೆ ಹೇಳುತ್ತಿದ್ದಾರೆ ಎನ್ನುವ ಬಗ್ಗೆ ಕಂಗನಾ ಸುಳಿವು ನೀಡಿಲ್ಲ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Sobhita Dhulipala: ತಂದೆಯಾಗಲಿದ್ದಾರೆ ನಾಗ ಚೈತನ್ಯ.. ಸಮಂತಾಗೆ ದೊಡ್ಡ ಆಘಾತ!
'ಕಣ್ಣೀರು, ನೋವು, ಹತಾಶೆ... ಈ ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇಲ್ಲ!' - ನಟಿ ಭಾವನಾ ಭಾವುಕ ಪೋಸ್ಟ್