ಪತಿ ಅರೆಸ್ಟ್‌ ಆಗುತ್ತಿದ್ದಂತೆ ನಡು ರಸ್ತೆಯಲ್ಲಿ ತಲೆ ಸುತ್ತಿ ಬಿದ್ದ ರಾಖಿ ಸಾವಂತ್; ವಿಡಿಯೋ ವೈರಲ್

By Vaishnavi ChandrashekarFirst Published Feb 8, 2023, 10:32 AM IST
Highlights

ವಿವಾದಕ್ಕೆ ಸಿಲುಕಿಕೊಂಡ ರಾಖಿ ಸಾವಂತ್ ಮದುವೆ ವಿಚಾರ. ಪತಿ ಅರೆಸ್ಟ್‌ ಆಗುತ್ತಿದ್ದಂತೆ ತಲೆ ಸುತ್ತಿಬಿದ್ದ ರಾಖಿ.... 

ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ನಟ- ನಟಿಯರು, ಬಿಗ್ ಬಜೆಟ್‌ ಚಿತ್ರಗಳಿಗಿಂತ ಅತಿ ಹೆಚ್ಚು ಸದ್ದು ಮಾಡುತ್ತಿರುವುದು ರಾಖಿ ಸಾವಂತ್ ಕಾಂಟ್ರವರ್ಸಿ. ಮೈಸೂರು ಮೂಲದ ಆದಿಲ್ ಖಾನ್ ದುರ್ರಾನಿಯನ್ನು ರಿಜಿಸ್ಟರ್ ಮ್ಯಾರೇಜ್‌ ಆಗಿರುವ ರಾಖಿ ಸಾವಂತ್ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಬುರ್ಖಾ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಚಾರ ಅಫೀಶಿಯಲ್ ಮಾಡಿದ್ದಾರೆ. ರಾಖಿ ತಾಯಿ ಜಯಾ ಸಾವಂತ್ ಅಗಲಿದ ನಂತರ ಆದಿಲ್ ವರ್ತನೆ ಬದಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಆದಿಲ್ ಹಲ್ಲೆ ಮಾಡಿದ್ದಾನೆ ಹಾಗೂ ಅನೈತಿಕ ಸಂಬಂಧ ಹೊಂದಿದ್ದಾನೆಂದು ರಾಖಿ ದೂರು ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಆದಿಲ್ ನನ್ನ ಬಳಿ ಇಲ್ಲ ನನ್ನನ್ನು ಮದುವೆಯಾಗಿ ಮತ್ತೊಬ್ಬಳ ಜೊತೆಗಿದ್ದಾನೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ನಂತರ ಒಬ್ಬರು ಒಟ್ಟಿಗೆ ಹೋಟೆಲ್‌ನಲ್ಲಿ ಕಾಣಿಸಿಕೊಂಡು ಒಟ್ಟಿಗೆ ಊಟ ಮಾಡಿದ್ದರು. ಇರಿಬ್ಬರ ನಡುವೆ ಜಗಳ ತುಂಬಾನೇ ಕಾಮನ್ ಇರಲಿ ಎಂದು ನೆಟ್ಟಿಗರು ಸುಮ್ಮನಿದ್ದರು ಆದರೆ ಯಾವಾಗ ಜಿಮ್‌ ಮುಗಿಸಿಕೊಂಡು ಹೊರ ಬರುತ್ತಿದ್ದಂತೆ ಪ್ಯಾಪರಾಜಿಗಳ ಎದುರು ಆದಿಲ್ ಜೊತೆ ಮಾತನಾಡುತ್ತಿರುವ ವಿಡಿಯೋವನ್ನು ಪ್ಯಾಪರಾಜಿಗಳು ಸೆರೆ ಹಿಡಿದರು ಆದ ಆದಿಲ್ ಮತ್ತೊಂದು ಮುಖ ಬೆಳಕಿಗೆ ಬಂತು. 

ಅವರಿಬ್ಬರೂ ದೈಹಿಕ ಸಂಪರ್ಕ ಹೊಂದಿದ್ದಾರೆ, ನನ್ನ ಬಳಿ ಅವರ ಹೋಟೆಲ್ ಬಿಲ್‌ಗಳಿವೆ; ಪತಿ ವಿರುದ್ಧ ರಾಖಿ ಸಾವಂತ್ ಆರೋಪ

ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಓಶಿವಾರ ಪೊಲೀಸರು ಆದಿಲ್‌ನ ಅರೆಸ್ಟ್‌ ಮಾಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಫ್ಯಾಮಿಲಿ ಜೊತೆ ರಾಖಿ ಠಾಣೆ ಎದುರು ಹಾಜರ್ ಆಗಿದ್ದರು. ಆದಿಲ್ ಮಾಡಿರುವ ಜಗಳ, ಕುಟುಂಬಕ್ಕೆ ಕೊಟ್ಟಿರುವ ಕಿರುಕುಳದ ಬಗ್ಗೆ ರಾಖಿ ಮಾಧ್ಯಮಗಳ ಜೊತೆ ಹಂಚಿಕೊಂಡರು. ರಾಖಿ ಪರವಾಗಿ ಸಹೋದರರು ಬಂದು ಮಾತನಾಡಿದ್ದಾರೆ. ಬೆಳಗ್ಗಿನಿಂದ ರಾತ್ರಿವರೆಗೂ ರಸ್ತೆಯಲ್ಲಿ ನಿಂತು ಅತ್ತು ಅತ್ತು ಸುಸ್ತಾಗಿರುವ ರಾಖಿ ನಡು ರಸ್ತೆಯಲ್ಲಿ ತಲೆ ಸುತ್ತಿ ಬಿದ್ದಿದ್ದಾರೆ.  ತಕ್ಷಣವೇ ಅಲ್ಲಿದ್ದ ಜನರು ರಾಖಿಗೆ ನೀರು ಕೊಟ್ಟು ಸಮಾಧಾನ ಮಾಡಿದ್ದಾರೆ. ಕೆಲವು ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಂಡಿದ್ದಾರೆ. 

ರಾಖಿ ಸ್ಪಷ್ಟನೆ:

ಮಾಧ್ಯಮಗಳ ಜೊತೆ ಮಾತನಾಡುವಾಗ ರಾಖಿ ಮೈಸೂರಿನಲ್ಲಿರುವ ಅತ್ತೆ ಜೊತೆ ನಡೆದಿರುವ ಚರ್ಚೆ ಬಗ್ಗೆ ಬಹಿರಂಗ ಪಡಿಸಿದ್ದಾರೆ. 'ಆದಿಲ್‌ ತಾಯಿ ಜೊತೆ ನಾನು ಸಂಪರ್ಕದಲ್ಲಿರುವೆ ಆಗಾಗಾ ಅವರಿಗೆ ಕರೆ ಮಾಡಿ ಮಾಹಿತಿ ನೀಡುವೆ. ತಾಯಿ ತಾಯಿನೇ ಅತ್ತೆ ಅತ್ತೆನೇ. ಅದಿಲ್ ಹೊಡೆಯುತ್ತಾನೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಹೇಳಿದರೆ ಆತನಿಗೆ ಡಿವೋರ್ಸ್‌ ಕೊಟ್ಟಿ ಬಿಟ್ಟು ಹೋಗು ಎನ್ನುತ್ತಾರೆ. ಆ ಜಾಗದಲ್ಲಿ ಯಾರೇ ಇದ್ದರೂ ಅಥವಾ ನಾನೇ ಇದ್ದರೂ ಬಿಟ್ಟು ಹೋಗುತ್ತಿದ್ದೆ. ಆದಿಲ್‌ನ ನಾನು ಮಗನಾಗಿ ಸ್ವೀಕರಿಸಿಲ್ಲ ಎನ್ನುತ್ತಾರೆ. ಆದಿಲ್ ತಾಯಿಗೆ ಸಾಕ್ಷಿಯಾಗಿ ವಿಡಿಯೋ ಕೂಡ ಕಳುಹಿಸಿರುವೆ. ಈ ರೀತಿ ಜೀವನ ಯಾರಿಗೂ ಬೇಡ. ಮುಂಬೈಗೆ ಬಂದು ಆದಿಲ್ ಜೀವನ ಹಾಳು ಮಾಡಿಕೊಂಡಿದ್ದಾನೆ' ಎಂದು ರಾಖಿ ಮಾತನಾಡುತ್ತಾರೆ. 

ರಾಖಿ ತಲೆ ಸುತ್ತಿ ಬಿದ್ದಿರುವ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್‌ಗಳು ಬರುತ್ತಿದೆ. ಬೆಳಗ್ಗೆ ಮಾಡಿರುವ ಮೇಕಪ್ ಹಾಗೇ ಇದೆ ತಲೆ ಸುತ್ತಿ ಬಿದ್ದರೂ ಕೈಯಲ್ಲಿ ಫೋನ್ ಮತ್ತು ಬ್ಯಾಗ್ ಬಿಗಿಯಾಗಿ ಇಟ್ಟುಕೊಂಡಿರುವೆ ಅಲ್ಲದೆ ನಿಮ್ಮ ಹೈ ಡ್ರಾಮಾ ಕಂಟ್ರೋಲ್ ಮಾಡಲು ಬಾಡಿ ಗಾರ್ಡ್‌ಗಳನ್ನು ಕರೆಸಿದಿದ್ದಾರೆ ಎಂದು ಕಾಮೆಂಟ್‌ಗಳು ಬರುತ್ತಿದೆ.

 

click me!