ವಯಸ್ಸಿನ ಗುಟ್ಟು ತಿಳಿಸಿ ಹುಬ್ಬೇರಿಸುವಂತೆ ಮಾಡಿದ ಮಾಜಿ ಪೋರ್ನ್​ ಸ್ಟಾರ್​ ಸನ್ನಿ ಲಿಯೋನ್​

By Suvarna News  |  First Published Jun 24, 2023, 5:36 PM IST

ಕಳೆದ ಮೇ ತಿಂಗಳಿನಲ್ಲಿ 42ನೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ನಟಿ ಸನ್ನಿ ಲಿಯೋನ್​ ತಮ್ಮ ವಯಸ್ಸಿನ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು? 
 


ನೀಲಿತಾರೆ ಎಂದೇ ಖ್ಯಾತಿ ಪಡೆದಿರುವ 42 ವರ್ಷದ ಸನ್ನಿ ಲಿಯೋನ್​ (Sunny Leone) ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲವೇನೋ. ಇತ್ತೀಚೆಗೆ ಅವರು ಮಾಲ್ಡೀವ್ಸ್​ಗೆ ತೆರಳಿದ್ದರು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು. ಅವರ ಸೌಂದರ್ಯವನ್ನು ನೋಡಿ ಎಂಥವರೂ ವ್ಹಾರೆವ್ಹಾ ಎನ್ನುತ್ತಾರೆ. ನಟಿ ಸನ್ನಿ ಲಿಯೋನ್ ಅವರು ಬಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ. ಇದರ ಜೊತೆ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ವೆಕೇಷನ್ ತೆರಳುತ್ತಾರೆ. ಈ ಸಂದರ್ಭದಲ್ಲಿ ಅವರು ಮಾಲ್ಡೀವ್ಸ್​ಗೆ ತೆರಳಿದ್ದರು. ಆ ವೇಳೆ ಅವರ ಫೋಟೋ ಶೂಟ್ ಸಕತ್​ ಸೌಂಡ್​ ಮಾಡಿತ್ತು. ಈ ಫೋಟೋ ನೋಡಿ ನಟಿಗೆ ನಿಜವಾಗಿಯೂ 42 ಆಗಿರುವುದು ಹೌದಾ ಅನ್ನುತ್ತಿದ್ದಾರೆ ಫ್ಯಾನ್ಸ್​. ಆದರೆ ನಟಿ ಹೇಳುತ್ತಿರುವುದೇ ಬೇರೆ. 

ಅಂದಹಾಗೆ, ಸನ್ನಿ ಲಿಯೋನ್​ ಅವರು ಕಳೆದ ಮೇ ತಿಂಗಳಲ್ಲಿ  42 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದರೆ ಅವರು ಹೇಳಿದ್ದೇನೆಂದರೆ,  'ಈ ವರ್ಷ, ವಿಕಿಪೀಡಿಯಾ ಮತ್ತು ಈ ಎಲ್ಲಾ ವೆಬ್‌ಸೈಟ್‌ಗಳು ನನ್ನ ವಯಸ್ಸಿನ ಬಗ್ಗೆ ಏನು ಹೇಳಿದರೂ ಅದು ತಪ್ಪಾಗಿದೆ. ನನಗೆ 42 ಅಲ್ಲ ಬದಲಿಗೆ  24 ವರ್ಷಗಳಾಗಿವೆ ಎಂದಿದ್ದಾರೆ. ತಮ್ಮ ವಯಸ್ಸಿನ ಬಗ್ಗೆ ಹೇಳಿಕೊಂಡಿರೋ ನಟಿ,  ನನಗೆ ವಯಸ್ಸಾಗಿದೆ (Age) ಎನ್ನುವುದು ತಪ್ಪು, ಹಾಗೆಂದು ನನಗೆ ಅನ್ನಿಸುತ್ತಿಲ್ಲ. ನಾನು ಹಿಂದೆಂದಿಗಿಂತಲೂ ಚಿಕ್ಕವಳಾಗಿದ್ದೇನೆ.  ನನಗೆ ಸಾಕಷ್ಟು ಶಕ್ತಿಯಿದೆ, ನಾನು ಸಾಕಷ್ಟು ವ್ಯಾಯಾಮ ಮಾಡುತ್ತೇನೆ, ನಾನು ಚೆನ್ನಾಗಿ ತಿನ್ನುತ್ತೇನೆ ಮತ್ತು ಕುಟುಂಬ ಮತ್ತು ಮಕ್ಕಳಿಂದ ನಾನು ತುಂಬಾ ಶಕ್ತಿಯನ್ನು ಪಡೆಯುತ್ತೇನೆ ಎಂದಿದ್ದಾರೆ. ಇದನ್ನು ಕೇಳಿ ಈಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿಮ್ಮನ್ನು ನೋಡಿದರೆ ಯಾವ ಕಾರಣಕ್ಕೂ ವಯಸ್ಸಾಗಿದೆ ಎನ್ನಿಸುವುದೇ ಇಲ್ಲ ಎನ್ನುತ್ತಿದ್ದಾರೆ. 

Tap to resize

Latest Videos

ನನಗೆ ಮಕ್ಕಳು ಬೇಕು... ಆದರೆ... ದಾಂಪತ್ಯದ ರಹಸ್ಯ ಹೇಳಿದ ನಟಿ ಪೂಜಾ ಭಟ್​
 
ಮಾಜಿ ಪೋರ್ನ್‌ಸ್ಟಾರ್ (Porn star), ಸನ್ನಿ ಲಿಯೋನ್ ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ (2011-12) ಐದನೇ ಸೀಸನ್‌ನಲ್ಲಿ ಭಾಗವಹಿಸಿದಾಗ ರಾಷ್ಟ್ರವ್ಯಾಪಿ ಗಮನ ಸೆಳೆದರು. ನಂತರ ಅವರು 2012 ರ ಕಾಮಪ್ರಚೋದಕ ಥ್ರಿಲ್ಲರ್ ಜಿಸ್ಮ್ 2 ನಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು ಮತ್ತು ಅಂದಿನಿಂದ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಬಹು ಚಲನಚಿತ್ರಗಳ ಭಾಗವಾಗಿದ್ದಾರೆ. ಆದರೆ ಇವರು ಈಚೆಗೆ ಸಕತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದು,  ಮಾಲ್ಡೀವ್ಸ್​ಗೆ ತೆರಳಿದ್ದಾಗ.  ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಸಖತ್ ಬೋಲ್ಡ್ ಆಗಿ ಅವರು ಕಾಣಿಸಿಕೊಂಡಿದ್ದರು. ಸನ್ನಿ ಲಿಯೋನ್ ಅವರನ್ನು ಪತಿ ಡೇನಿಯಲ್ ವೇಬರ್ ಅವರು ಪತ್ನಿಯನ್ನು ಎತ್ತಿಕೊಂಡಿದ್ದರು.  ಫಿಲ್ಟರ್ ಇಲ್ಲದೆ ನೋ ಮೇಕಪ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದೀರಿ ಎಂದರೆ ನೀವೆಷ್ಟು ಕಾನ್ಫಿಡೆಂಟ್ ಎನ್ನುವುದು ನಮಗೆ ಗೊತ್ತಾಗುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು. ನಟಿಯ ನ್ಯಾಚುರಲ್ ಲುಕ್ ನೋಡಿ ಫಿದಾ ಆಗಿದ್ದಾರೆ.

ಅಂದಹಾಗೆ ಸನ್ನಿ, ಸನ್ನಿ ಲಿಯೋನ್ ಹಾಗೂ ಡೇನಿಯಲ್ ಅವರು 2011ರಲ್ಲಿ ಮದುವೆ ಆದರು. 2017ರಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದರು. ಇದಕ್ಕೆ ನಿಶಾ ಎಂದು ನಾಮಕರಣ ಮಾಡಿದ್ದಾರೆ. 2018ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದರು.  ಕಳೆದ ವರ್ಷ ಸ್ಯಾಂಡಲ್​ವುಡ್​ಗೆ ಪುನಃ ಪದಾರ್ಪಣೆ ಮಾಡುವ ಮೂಲಕ ಸ್ಯಾಂಡಲ್​ವುಡ್​ ಪ್ರಿಯರ ನಿದ್ದೆ ಕದ್ದವರು ನಟಿ ಸನ್ನಿ ಲಿಯೋನ್​, ನಟ-ನಿರ್ದೇಶಕ  ಉಪೇಂದ್ರ ಅವರು  ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಅವರನ್ನು ಮತ್ತೆ ಸ್ಯಾಂಡಲ್‌ವುಡ್‌ಗೆ (Sandalwood) ಕರೆತಂದಿದ್ದಾರೆ. ತಮ್ಮ ಮುಂಬರುವ ಚಿತ್ರ ಯುಐನಲ್ಲಿ ಸನ್ನಿ ಲಿಯೋನ್​ ಅವರನ್ನು ತೆರೆ ಮೇಲೆ ತರಲಿದ್ದಾರೆ. 

ಬಾಲಿವುಡ್​ನ ಐವರು ಸಿಂಗಲ್​ ಡ್ಯಾಡಿ: ಮದ್ವೆ ಆಗದೇ ಒಂಟಿ ಅಪ್ಪ ಆದವರು!

click me!