ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ತಾಯಿ ಪ್ರತಿದಿನ ಹೊಸದಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ,
ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಸಿನಿಮಾ ಜೊತೆಗೆ ಬೇರೆ ಬೇರೆ ವಿಚಾರವಾಗಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಸಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಕಂಗನಾ ರಣಾವತ್ ಇದೀಗ ತನ್ನ ತಾಯಿ ಬಗ್ಗೆ ಮಾತನಾಡಿದ್ದಾರೆ. ಅಮ್ಮ ಪ್ರತಿದಿನ ಹೊಲದಲ್ಲಿ ಕೆಲಸ ಮಾಡುತ್ತಾರೆ ಎಂದು ಫೋಟೋವನ್ನು ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾಯಿ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರಿಗೆ ಉತ್ತರಿಸಿದ ಕಂಗನಾ ಸಿನಿಮಾ ಮಾಫಿಯಾ ವಿರುದ್ಧ ಕಿಡಿ ಕಾರಿದ್ದಾರೆ. ತನ್ನ ತಾಯಿ ಸಂಸ್ಕೃತ ಶಿಕ್ಷಕಿ, ತನ್ನ ಹಣದಿಂದ ಶ್ರೀಮಂತೆ ಆಗಿಲ್ಲ ಎಂದು ಹೇಳಿದ್ದಾರೆ.
ತಾಯಿ ಬಗ್ಗೆ ಕಾಮೆಂಟ್ ಮಾಡಿದ ನೆಟ್ಟಿಗರಿಗೆ ಪ್ರತಿಕ್ರಿಯೆ ನೀಡಿದ ಕಂಗನಾ, 'ದಯವಿಟ್ಟು ಗಮನಿಸಿ ನನ್ನ ತಾಯಿ ನನ್ನಿಂದ ಶ್ರೀಮಂತ ಆಗಿಲ್ಲ. ನಾನು ರಾಜಕಾರಣಿ, ಅಧಿಕಾರಿಗಳು ಹಾಗೂ ಉದ್ಯಮಿಗಳ ಕುಟುಂಬದಿಂದ ಬಂದಿದ್ದೇನೆ,. ನನ್ನ ಅಮ್ಮ 25 ವರ್ಷಕ್ಕೂ ಹೆಚ್ಚು ಕಾಲ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ನನ್ನ ಆಟಿಟ್ಯೂಡ್ ಎಲ್ಲಿಂದ ಬರುತ್ತದೆ, ನಾನ್ಯಾಕೆ ಮದುವೆ ಸಮಾರಂಭದಲ್ಲಿ ಡಾನ್ಸ್ ಮಾಡಲ್ಲ ಎಂದು ಸಿನಿಮಾ ಮಫಿಯಾ ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.
ತನ್ನ ತಾಯಿ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಚಿತ್ರವನ್ನು ಸಹ ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ ತನ್ನ ತಾಯಿ ಪ್ರತಿದಿನ 7-8 ಗಂಟೆ ಹೊಲಸದಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ. ತನ್ನ ್ೃತಾಯಿ ಹೊರಗೆ ತಿನ್ನಲು ಇಷ್ಟಪಡಲ್ಲ, ವಿದೇಶಕ್ಕೆ ಹೋಗಲ, ಸಿನಿಮಾ ಸೆಟ್ ಗೆ ಭೇಟಿ ನೀಡಲ್ಲ, ಮುಂಬೈನಲ್ಲಿ ವಾಸಿಲು ಇಷ್ಟಪಡಲ್ಲ ಎಂದು ತನ್ನ ತಾಯಿ ಬಗ್ಗೆ ಹಾಡಿ ಹೊಗಳಿದ್ದಾರೆ. ಇವುಗಳಲ್ಲಿ ಯಾವುದನ್ನಾದರೂ ಒತ್ತಾಯಿಸಿ ಮಾಡಿ ಎಂದರೂ ಸರಿಯಾಗಿ ಗದರುತ್ತಾರೆ ಎಂದು ಹೇಳಿದ್ದಾರೆ.
ನನ್ನನ್ನು ಹೊಗಳಲು ಅವಳ್ಯಾರು? ಕಂಗನಾ ವಿರುದ್ಧ ಜಾವೇದ್ ಅಖ್ತರ್ ಗರಂ
ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಪೋಸ್ಟ್ ಶೇರ್ ಮಾಡಿರುವ ಕಂಕನಾ, 'ಬಿಕಾರಿ ಚಲನಚಿತ್ರ ಮಾಫಿಯಾ ಮದುವೆಗಳಲ್ಲಿ ನೃತ್ಯ ಮಾಡುವ ಮತ್ತು ನಾಣ್ಯಗಳಿಗೆ ಐಟಂ ಹಾಡುಗಳನ್ನು ಮಾಡುವ ಮಾಫಿಯಾಗೆ ಎಂದಿಗೂ ತಿಳಿದಿರುವುದಿಲ್ಲ. ಅದಕ್ಕಾಗಿಯೇ ನಾನು ಅವರನ್ನು ಎಂದಿಗೂ ಗೌರವಿಸುವುದಿಲ್ಲ, ನಾನು ಅವರನ್ನು ಎಂದಿಗೂ ಗೌರವಿಸುವುದಿಲ್ಲ' ಎಂದು ಹೇಳಿದ್ದಾರೆ.
ಪ್ರಶಸ್ತಿಗಳ ವಿರುದ್ಧ ಕಂಗನಾ ಕಿಡಿ; ರಿಷಬ್, ರಾಜಮೌಳಿ ಬೆಸ್ಟ್ ನಟ, ನಿರ್ದೇಶಕ ಎಂದ ಬಾಲಿವುಡ್ ನಟಿ
'ಸಿನಿಮಾ ಮಾಫಿಯಾ ಯಾವಾಗಲೂ ನನ್ನ ವರ್ತನೆ ದುರಹಂಕಾರ ಎಂದು ಕರೆಯುತ್ತದೆ. ನನ್ನ ತಾಯಿ ನನಗೆ ಎರಡು ರೊಟ್ಟಿ ಮತ್ತು ಉಪ್ಪಿನಲ್ಲಿ ಬದುಕಲು ಕಲಿಸಿದ್ದಾಳೆ, ಬೇಡಿಕೊಳ್ಳುವುದನ್ನು ಅಲ್ಲ. ಅವರು ನನಗೆ ಹುಚ್ಚು ಎಂದು ಕರೆದರು. ಏಕೆಂದರೆ ನಾನು ಇತರ ಹುಡುಗಿಯರಂತೆ ನಗುವುದಿಲ್ಲ ಮತ್ತು ಗಾಸಿಪ್ ಮಾಡುವುದಿಲ್ಲ ಅಥವಾ ಮದುವೆಗಳಲ್ಲಿ ನೃತ್ಯ ಮಾಡಲ್ಲ, ಅಥವಾ ನಾಯಕರ ಕೋಣೆಗೆ ಹೋಗಲ್ಲ' ಎಂದು ಬರೆದುಕೊಂಡಿದ್ದಾರೆ. ಈಗಲೂ ನಾನು ಸಿನಿಮಾ ಮಾಡಲು ಪ್ರತಿ ಪೈಸೆಯನ್ನೂ ಹಾಕುತ್ತೇನೆ' ಎಂದು ಹೇಳಿದ್ದಾರೆ.