ಕಂಗನಾ ರಣಾವತ್ ಅವರು ಅಜಯ್ ದೇವಗನ್ ನನ್ನ ಚಿತ್ರವನ್ನು ಯಾವತ್ತೂ ಪ್ರಚಾರ ಮಾಡಿಲ್ಲ. ಅವರು ಬೇರೆಯವರ ಸಿನಿಮಾಗಳನ್ನು ಪ್ರಚಾರ ಮಾಡುತ್ತಾರೆ. ಆದರೆ ನನ್ನ ಸಿನಿಮಾ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದರು.
ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್(Kangana Ranaut) ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದ್ಯ ಕಂಗನಾ ಸಿನಿಮಾ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಹೌದು, ಕಂಗನಾ ನಟನೆಯ ಬಹುನಿರೀಕ್ಷೆಯ ಧಾಕಡ್(Dhaakad) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕಂಗನಾ ರಣಾವತ್ ಟ್ರೈಲರ್‌ಗೆ ಬಾಲಿವುಡ್‌ನ ಅನೇಕ ಗಣ್ಯರು ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಕಂಗನಾಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.
ಸಲ್ಮಾನ್ ಖಾನ್ ಪ್ರತಿಕ್ರಿಯೆಯಿಂದ ಕಂಗನಾ ಬಾಲಿವುಡ್‌ನಲ್ಲಿ ನಾನು ಯಾವತ್ತು ಒಂಟಿಯಲ್ಲ ಎಂದು ಹೇಳಿದ್ದರು. ಸಲ್ಮಾನ್ ಖಾನ್ ಬಿಟ್ಟರೆ ಬೇರೆ ಸ್ಟಾರ್ ಕಲಾವಿದರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಂಗನಾ, ಅಜಯ್ ದೇವಗನ್ ನನ್ನ ಚಿತ್ರವನ್ನು ಯಾವತ್ತೂ ಪ್ರಚಾರ ಮಾಡಿಲ್ಲ. ಅವರು ಬೇರೆಯವರ ಸಿನಿಮಾಗಳನ್ನು ಪ್ರಚಾರ ಮಾಡುತ್ತಾರೆ. ಆದರೆ ನನ್ನ ಸಿನಿಮಾ ಪ್ರಚಾರ ಮಾಡುವುದಿಲ್ಲ. ಇನ್ನು ಅಕ್ಷಯ್ ಕುಮಾರ್ ಸದ್ದಿಲ್ಲದೇ ನನಗೆ ಕರೆ ಮಾಡಿ ತಿಳಿಸುತ್ತಾರೆ. ಅವರು ಫೋನ್ ಮಾಡಿ ಹೇಳುತ್ತಾರೆ ಆದರೆ ಟ್ವೀಟ್ ಮಾಡುವುದಿಲ್ಲ'ಎಂದು ಕಂಗನಾ ಹೇಳಿದ್ದಾರೆ.
ಈ ಬಗ್ಗೆ ಯಾಕೆೆ ಎಂದು ನಿರೂಪಕರು ಕೇಳಿದಾಗ ಕಂಗನಾ, 'ನೀವು ನನ್ನನ್ನ ಅಲ್ಲ, ಅವರನ್ನು ಕೇಳಬೇಕು. ಅವರ ಪರವಾಗಿ ನಾನು ಉತ್ತರ ನೀಡಲು ಸಾಧ್ಯವಿಲ್ಲ. ಅಮಿತಾಬ್ ಬಚ್ಚನ್ ನನ್ನ ಟ್ರೈಲರ್ ಟ್ವೀಟ್ ಮಾಡಿ ತಕ್ಷಣ ಡಿಲೀಟ್ ಮಾಡಿದರು. ಅದು ಯಾಕೆ ಎಂದು ಅವರನ್ನು ಕೇಳಬೇಕು' ಎಂದು ಕಂಗನಾ ಪ್ರತಿಕ್ರಿಯೆ ನೀಡಿದರು.
ಇನ್ಮುಂದೆ ನಾನು ಏಕಾಂಗಿ ಎಂದು ಯಾವತ್ತೂ ಹೇಳಲ್ಲ; ಸಲ್ಮಾನ್ ಮಾತಿಗೆ ಕಂಗನಾ ಪ್ರತಿಕ್ರಿಯೆ
ಇನ್ನು ಅಜಯ್ ದೇವಗನ್ ಬಗ್ಗೆ ಮಾತು ಮುಂದುವರೆಸಿದ ಕಂಗನಾ, 'ಅಜಯ್ ದೇವಗನ್ ಹೋಗಿ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತಾರೆ. ಅದೆ ನನ್ನ ಸಿನಿಮಾದಲ್ಲಿ ಮಾಡುತ್ತಾರೆಯೇ? ಒಂದು ವೇಳೆ ಮಾಡಿದರೆ ನಾನು ನಿಜಕ್ಕೂ ಕೃತಜ್ಞಳಾಗುತ್ತೇನೆ. ನಾನು ಅವರನ್ನು ಬೆಂಬಲಿಸಿದಂತೆ ಅವರು ಸಹ ನನ್ನನ್ನು ಬೆಂಬಲಿಸಬೇಕು ಎಂದು ಭಾವಿಸುತ್ತೇನೆ. ನಾನು ಕಾಶ್ಮೀರ್ ಫೈಲ್ಸ್ ಹೊಗಳಿದ ಹಾಗೆ ಕರಣ್ ಜೋಹರ್ ಅವರ ಶೇರ್ಷಾ ಸಿನಿಮಾವನ್ನು ಹೊಗಳಿದ್ದೇನೆ. ನಾನು ಮುಕ್ತವಾಗಿ ಹೇಳುತ್ತೇನೆ. ಆದರೆ ಅವರು ಪ್ರತಿಕ್ರಿಯೆ ನೀಡುವುದಿಲ್ಲ. ಇದು ಬದಲಾಗುತ್ತದೆ ಎಂದು ಭಾವಿಸಿದ್ದೇನೆ' ಎಂದು ಕಂಗನಾ ಹೇಳಿದರು.
ಹುಡುಗರಿಗೆ ಹೊಡೆದಿದ್ದಾಳೆಂದು ಸುದ್ದಿ ಹಬ್ಬಿಸಿರುವುದೇ ನನ್ನ ಮದುವೆಯಾಗದಿರುವುದಕ್ಕೆ ಕಾರಣ: ಕಂಗನಾ ರಣಾವತ್
ಕಂಗನಾ ಸಿನಿಮಾ ಹೊಗಳಿದ್ದ ಸಲ್ಮಾನ್ ಖಾನ್
ನಟಿ ಕಂಗನಾ ನೆಪೋಟಿಸಂ ವಿರುದ್ಧ ಕೂಗಾಡಿದ್ದರು. ಕರಣ್ ಜೋಹರ್(Karan Johar), ಸಲ್ಮಾನ್ ಖಾನ್(Salman Khan) ಸೇರಿದಂತೆ ಅನೇಕರ ವಿರುದ್ಧ ಆರೋಪ ಮಾಡಿದ್ದರು. ಆದರೂ ಸಲ್ಮಾನ್ ಖಾನ್ ಕಂಗನಾ ಸಿನಿಮಾಗೆ ಪ್ರತಿಕ್ರಿಯೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಂಗನಾ ಟ್ರೈಲರ್ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಂಗನಾ ರಣಾವತ್ ಧನ್ಯವಾದ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಕಂಗನಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ. 'ನನ್ನ ದಬಂಗ್ ಹೀರೋಗೆ ಧನ್ಯವಾದಗಳು. ಗೋಲ್ಡನ್ ಹಾರ್ಟ್ ನಿಮ್ಮದು. ಇನ್ಮುಂದೆ ಚಿತ್ರರಂಗದಲ್ಲಿ ನಾನು ಏಕಾಂಗಿ ಎಂದು ನಾನು ಹೇಳುವುದಿಲ್ಲ. ಇಡೀ ಧಾಕಡ್ ಚಿತ್ರತಂಡದ ಪರವಾಗಿ ಧನ್ಯವಾದಗಳು' ಎಂದು ಹೇಳಿದ್ದರು.
ಇನ್ನು ಈ ಸಿನಿಮಾದಲ್ಲಿ ಕಂಗನಾ ಜೊತೆಗೆ ಅರ್ಜುನ್ ರಾಂಪಲ್, ದಿವ್ಯಾ ದತ್ತಾ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಸಿನಿಮಾಗೆ ರಜನೀಶ್ ಘಾಯ್ ಆಕ್ಷಯ್ ಕಟ್ ಹೇಳಿದ್ದಾರೆ. ಅಂದಹಾಗೆ ಈ ಸಿನಿಮಾ ಮೇ 20, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.