ಕುಂಭಮೇಳ ಸಾಂಕೇತಿಕವಾದರೆ, ರಂಜಾನ್‌ಗೆ ಜನ ಸೇರುವುದನ್ನು ನಿಲ್ಲಿಸಿ; ಮೋದಿಗೆ ಕಂಗನಾ ಮನವಿ!

By Suvarna NewsFirst Published Apr 17, 2021, 8:31 PM IST
Highlights

ಕೊರೋನಾ ವೈರಸ್ ಹೆಚ್ಚಾದ ಕಾರಣ ಪ್ರಧಾನಿ ನರೇಂದ್ರ ಮೋದಿ ಮನವಿ ಮೇರೆಗೆ ಕುಂಭಮೇಳ ಆಚರಣೆಗೆ ತೆರೆ ಎಳೆಯಲಾಗಿದೆ. ಇದೀಗ ಬಾಲಿವುಡ್ ನಟಿ ಕಂಗನಾ ರನಾವತ್ ಹಾಗಾದರೆ ರಂಜಾನ್ ಕತೆ ಏನು? ಎಂದು ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಮೋದಿಗೆ ವಿಶೇಷ ಮನವಿ ಮಾಡಿದ್ದಾರೆ. 

ಮುಂಬೈ(ಏ.17): ಕೊರೋನಾ ವೈರಸ್ ಪ್ರಕರಣ ಭಾರತ ಕಂಡು ಕೇಳರಿಯದ ರೀತಿಯಲ್ಲಿ ಸಾಗುತ್ತಿದೆ. ಕಳೆದ 24 ಗಂಟೆಯಲ್ಲಿ 2.34 ಲಕ್ಷ ಪ್ರಕರಣ ದಾಖಲಾಗಿದೆ. ಹೀಗಾಗಿ ಪ್ರಧಾ ನರೇಂದ್ರ ಮೋದಿ, ಕುಂಭ ಮೇಳ ಸಾಂಕೇತಿಕವಾಗಿ ಆಚರಿಸುವಂತೆ ಮನವಿ ಮಾಡಿದ್ದರು. ಮೋದಿ ಮನವಿ ಮೇರೆಗೆ ಕುಂಭಮೇಳಕ್ಕೆ ತೆರೆ ಎಳೆಯಲಾಗಿದೆ. ಇದೀಗ ರಂಜಾನ್‌ ಪಾರ್ಥನೆಗೆ ಜನ ಸೇರುವುದನ್ನು ನಿಲ್ಲಿಸಿ ಎಂದು ಬಾಲಿವುಡ್ ನಟಿ ಕಂಗನಾ ರನಾವತ್ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಮನವಿ ಮೇರೆಗೆ ಕುಂಭಮೇಳಕ್ಕೆ ತೆರೆ!

ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸುವುದಾದರೆ, ರಂಜಾನ್‍ ಪ್ರಾರ್ಥನೆಗೆ ಜನ ಸೇರುವುದನ್ನೂ ನಿಲ್ಲಿಸಿ ಎಂದು ಕಂಗನಾ ರನಾವತ್ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ರಣಾವತ್ ಟ್ವೀಟ್‌ಗೆ ಪರ ವಿರೋಧ ವ್ಯಕ್ತವಾಗಿದೆ. 

ಹಲವರು ಕಂಗನಾ ಅಭಿಪ್ರಾಯವನ್ನ ಬೆಂಬಲಿಸಿದರೆ, ಇನ್ನೂ ಕೆಲವರು ವಿರೋಧಿಸಿದ್ದಾರೆ. ಕೊರೋನಾ ಹರಡಲು ಸಾಧ್ಯತೆ ಇರುವ ಎಲ್ಲಾ ಕಾರ್ಯಕ್ರಮ, ಹಬ್ಬ ರದ್ದು ಮಾಡಿ, ಆರೋಗ್ಯ ಮುಖ್ಯ ಎಂದು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ

ಕೊರೋನಾ ಹೆಚ್ಚಳ, ಸಾಂಕೇತಿಕ ಕುಂಭಮೇಳ: ಮೋದಿ

ಕುಂಭಮೇಳದಿಂದ ಕೊರೋನಾ ಹರಡಿದರೆ, ರಂಜಾನ್ ಪ್ರಾರ್ಥನೆಗೆ ಜನ ಸೇರಿದಾಗಲೂ ಹರಡಲಿದೆ. ಹೀಗಾಗಿ ಕುಂಭಮೇಳ ಜೊತೆಗೆ ರಂಜಾನ್ ಪ್ರಾರ್ಥನೆಗೆ ಜನ ಸೇರುವುದನ್ನು ನಿಲ್ಲಿಸಿ ಎಂದು ಕಂಗನಾ ಹೇಳಿದ್ದಾರೆ.  

click me!