
ನಟಿ ಕಂಗನಾ ರಣಾವತ್ ನಿರ್ಮಾಣದ ಟಿಕು ವೆಡ್ಸ್ ಶೇರು ಸಿನಿಮಾ ರಿಲೀಸ್ ಆಗಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಟಿಕು ವೆಡ್ಸ್ ಶೇರು ಸ್ಟ್ರೀಮಿಂಗ್ ಆರಂಭಿಸಿದೆ. ಈ ಸಿನಿಮಾದಲ್ಲಿ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ನಟಿ ಅವನೀತ್ ಕೌರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ರಿಲೀಸ್‌ಗೂ ಮೊದಲೇ ಟಿಕು ವೆಡ್ಸ್ ಶೇರು ಸಿನಿಮಾ ಲಿಪ್‌ಲಾಕ್ ದೃಶ್ಯದ ಮೂಲಕ ವಿವಾದ ಸೃಷ್ಟಿಸಿತ್ತು. 49 ವರ್ಷದ ನಟ ನವಾಜುದ್ದೀನ್ ಸಿದ್ದಿಕಿ 21ರ ಅವನೀತ್ ಕೌರ್ ಜೊತೆ ಲಿಪ್‌ಲಾಕ್ ಮಾಡಿದ್ದಾರೆ ಎಂದು ಅನೇಕರು ಅಕ್ರೋಶ್ ಹೊರಹಾಕಿದ್ದರು. ಇದೀಗ ಸಿನಿಮಾ ಅಭಿಮಾನಿಗಳ ಮುಂದೆ ಬಂದಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಕಾಮೆಂಟ್‌ಗಳು ಹರಿದಾಡುತ್ತಿವೆ. ಈ ಬಗ್ಗೆ ಕಂಗನಾ ಕಿಡಿ ಕಾರಿದ್ದಾರೆ. ಮತ್ತೆ ಸಿನಿಮಾ ಮಾಫಿಯಾ ಗ್ಯಾಂಗ್ ಆಕ್ರೋಶ ಹೊರಹಾಕಿದ್ದಾರೆ.
ಸಿನಿಮಾ ಮಾಫಿಯಾ ಗ್ಯಾಂಗ್ ತನ್ನ ಇಮೇಜ್ ಡ್ಯಾಮೇಜ್ ಮಾಡುವ ಕ್ಯಾಂಪೇನ್ ಮಾಡುತ್ತಿದೆ ಎಂದು ಗುಡುಗಿದ್ದಾರೆ. ಸುಳ್ಳು ಟ್ರೆಂಡ್ ಅನ್ನು ನಂಬಬೇಡಿ ದಯವಿಟ್ಟು ಸಿನಿಮಾ ವೀಕ್ಷಿಸಿ ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಕಂಗನಾ ಇನ್ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಬರೆದುಕೊಂಡಿದ್ದಾರೆ. 'ನನ್ನ ಚಿತ್ರಕ್ಕೆ ಹಾನಿ ಮಾಡಲು ಮೂವಿ ಮಾಫಿಯಾ ಗ್ಯಾಂಗ್ ಎಲ್ಲವನ್ನೂ ಮಾಡುತ್ತಿದೆ. ಅದರ ಬಿಡುಗಡೆಗೆ ಮುಂಚೆಯೇ ಸುಳ್ಳು ವಿಮರ್ಶೆಗಳು ಮತ್ತು ಇಮೇಜ್ ಡ್ಯಾಮೇಜ್ ಪ್ರಚಾರ ಪ್ರಾರಂಭಸಿತ್ತು. ಹೇಗಾದರೂ ಈಗ ಸ್ಟ್ರೀಮಿಂಗ್ ಆಗುತ್ತಿದೆ ದಯವಿಟ್ಟು ಅದನ್ನು ನಿಮಗಾಗಿ ವೀಕ್ಷಿಸಿ. ನಿಮ್ಮ ಸ್ನೇಹಿತರು ಅಥವಾ ನಿಮಗೆ ತಿಳಿದಿರುವ ಜನರಿಗೆ ಚಲನಚಿತ್ರದ ವಿಮರ್ಶೆಗಳನ್ನು ನೀವು ನೋಡಿದ್ದರೆ ಮಾತ್ರ ಹೇಳಿ. ಪಾವತಿಸಿದ ನಕಲಿ ವಿಮರ್ಶೆಗಳಿಗೆ ಹೋಗಬೇಡಿ' ಎಂದು ಹೇಳಿದ್ದಾರೆ.
ನನ್ನದೇ ಕುಟುಂಬ ಹೊಂದಲು ಬಯಸುತ್ತೇನೆ, ಮದ್ವೆ ಆಗಬೇಕು ಆದರೆ...; ಮದುವೆ ಬಗ್ಗೆ ಮೌನ ಮುರಿದ ನಟಿ ಕಂಗನಾ
'ನಾನು ಸಿನಿಮಾ ಪ್ರಾರಂಭಿಸಿದಾಗ ನನಗೆ 16 ವರ್ಷ. ನೀವು ಚಲನಚಿತ್ರ ವೃತ್ತಿಜೀವನವನ್ನು ನೋಡುತ್ತಿದ್ದರೆ ಯುವಕರಾಗಿ ಪ್ರಾರಂಭಿಸುವುದು ಉತ್ತಮ. ಯಾವುದೇ ಮಾಫಿಯಾ PR ವಯಸ್ಸಿನ ವಿವಾದವನ್ನು ಮಾಡಲು ಪ್ರಯತ್ನಿಸುತ್ತಿದೆ. ಅದು ಕೆಲಸ ಮಾಡುತ್ತಿಲ್ಲ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ' ಎಂದು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ರಾಮನ ಹೆಸರು ಹಾಳುಮಾಡಬೇಡಿ: ಪ್ರಭಾಸ್- ಕೃತಿ 'ಅದಿಪುರುಷ್' ವಿರುದ್ಧ ಕಂಗನಾ ಪರೋಕ್ಷ ಕಿಡಿ
ಟಿಕು ವೆಡ್ಸ್ ಶೇರು ಸಾಯಿ ಕಬೀರ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವಾಗಿದೆ. ಅವನೀತ್ ಕೌರ್ ಮತ್ತು ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್ 23 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆರಂಭಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.