Box Office Collection 11 ದಿನದಲ್ಲಿ .200 ಕೋಟಿ ಬಾಚಿದ ದಿ ಕಾಶ್ಮೀರ್‌ ಫೈಲ್ಸ್‌!

Published : Mar 23, 2022, 04:06 AM IST
Box Office Collection 11 ದಿನದಲ್ಲಿ .200 ಕೋಟಿ ಬಾಚಿದ ದಿ ಕಾಶ್ಮೀರ್‌ ಫೈಲ್ಸ್‌!

ಸಾರಾಂಶ

- ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿರುವ ಸಿನಿಮಾ - 11ನೇ ದಿನವೇ 206 ಕೋಟಿ ರು. ಗಳಿಕೆ  - ಮುಂದಿನ 3-4 ದಿನಗಳಲ್ಲೇ 300 ಕೋಟಿ ರು. ತಲುಪುವ ಸಾಧ್ಯತೆ

ಮುಂಬೈ(ಮಾ.23): ಮಿತವಾದ ಪ್ರಚಾರ, ವಿವಾದ, ಸೀಮಿತ ಸಿನಿಮಾ ಸ್ಕ್ರೀನುಗಳಲ್ಲಿ ಬಿಡುಗಡೆ, ಸೂಪರ್‌ಸ್ಟಾರ್‌ ಪ್ರಭಾಸ್‌ ನಟನೆಯ ರಾಧೇ ಶ್ಯಾಮ್‌ ಚಿತ್ರದ ಪೈಪೋಟಿಯ ನಡುವೆಯೂ ‘ದ ಕಾಶ್ಮೀರ್‌ ಫೈಲ್ಸ್‌’ ಬಾಕ್ಸಾಫೀಸ್‌ನಲ್ಲಿ ತನ್ನ ಭರ್ಜರಿ ಗಳಿಕೆ ಮುಂದುವರೆಸಿದೆ. 15 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಬಿಡುಗಡೆಯಾದ 11ನೇ ದಿನವೇ 206 ಕೋಟಿ ರು. ಗಳಿಕೆ ಮಾಡಿ ಹೊಸ ದಾಖಲೆ ಬರೆದಿದೆ. ಹಂತಹಂತವಾಗಿ ದೇಶಾದ್ಯಂತ ಮತ್ತಷ್ಟುಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿರುವ ಕಾರಣ, ಮುಂದಿನ 3-4 ದಿನಗಳಲ್ಲೇ 300 ಕೋಟಿ ರು. ತಲುಪುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ವಿಶ್ಲೇಷಿಸಲಾಗಿದೆ.

ಈ ಕುರಿತು ಮಂಗಳವಾರ ಟ್ವೀಟ್‌ ಮಾಡಿರುವ ಖ್ಯಾತ ಸಿನೆಮಾ ವಿಶ್ಲೇಷಕ ತರುಣ್‌ ಆದಶ್‌ರ್‍ ‘ಕಾಶ್ಮೀರ್‌ ಫೈಲ್ಸ್‌ ಬಿಡುಗಡೆಯ 2 ನೇ ವಾರದಲ್ಲೇ ಅಕ್ಷಯ ಕುಮಾರ್‌ ಅಭಿನಯದ ಸೂರ್ಯವಂಶಿ, ರಣವೀರ್‌ ಸಿಂಗ್‌ ಅವರ ‘83’ ಅಲ್ಲದೇ ಸ್ಪೈಡರ್‌ ಮ್ಯಾನ್‌ ಚಿತ್ರದ ಗಳಿಕೆಯನ್ನೂ ಮೀರಿಸಿ ಹೊಸ ದಾಖಲೆ ಸೃಷ್ಟಿಸಿದೆ. ಮುಂಬರುವ ದಿನಗಳಲ್ಲೂ ಇನ್ನಷ್ಟುಗಳಿಕೆ ಮಾಡುವ ನಿರೀಕ್ಷೆಯಿದೆ’ ಎಂದು ಹೇಳಿದ್ದಾರೆ.

The Kashmir Files ಮೆಚ್ಚಿದ Aamir Khan ಟ್ರೋಲ್ ; PM Modiಯನ್ನು ಟೀಕಿಸುವ ನಟನ ಹಳೆಯ ವಿಡಿಯೋ ವೈರಲ್!

ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್‌ ಫೈಲ್ಸ್‌ ಮಾಚ್‌ರ್‍ 11ರಂದು ಬಿಡುಗಡೆಯಾಗಿತ್ತು. 1990ರ ದಶಕದಲ್ಲಿ ಇಸ್ಲಾಮಿಕ್‌ ಮತೀಯವಾದಿಗಳು, ಪಾಕ್‌ ಬೆಂಬಲಿತ ಉಗ್ರರಿಂದ ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯದ ಕಥಾಹಂದರವನ್ನು ಚಿತ್ರ ಹೊಂದಿದ್ದು, ಚಿತ್ರದಲ್ಲಿ ಅನುಪಮ್‌ ಖೇರ್‌, ಮಿಥುನ್‌ ಚಕ್ರವರ್ತಿ, ಪಲ್ಲವಿ ಜೋಶಿ ಮೊದಲಾದವರು ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವನ್ನೂ ಎಲ್ಲರೂ ನೋಡಬೇಕು ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ನಟ ಅಮೀರ್‌ ಖಾನ್‌ ಸಲಹೆ ನೀಡಿದ್ದರು.

‘ಕಾಶ್ಮೀರಿ ಫೈಲ್ಸ್‌’ ನೋಡಿದ ಬಳಿಕ ಆಘಾತ ಸಹಿಸಲಾಗ್ತಿಲ್ಲ: ಪೇಜಾವರ
‘ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ನೋಡಿದಾಗ ಆದ ಆಘಾತವನ್ನು ಸಹಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಇನ್ನಾದರೂ ನಾವು ಭಾರತೀಯರು ಎಚ್ಚೆತ್ತುಕೊಳ್ಳೋಣ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿ​ದ​ರು. ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರೊಂದಿಗೆ ಮಣಿಪಾಲದ ಭಾರತ್‌ ಸಿನೆಮಾಸ್‌ನಲ್ಲಿ ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರ ನೋಡಿದ ಬಳಿಕ ಅವ​ರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಔರಂಗಜೇಬ್‌, ಬಾಬರ್‌, ಘಜನಿಯಂಥವರ ಕಾಲದಲ್ಲಿ ಕೌರ್ಯ ಹೇಗಿತ್ತು ಎಂದು ಕೇಳಿದ್ದೆವು. ಆದರೆ ಅದು ಇವತ್ತಿಗೂ ಜೀವಂತವಾಗಿದೆ ಎನ್ನುವುದನ್ನು ಅರಗಿಸಿಕೊಳ್ಳುವುದೂ ಕಷ್ಟವಾಗುತ್ತಿದೆ ಎಂದು ಶ್ರೀಗಳು ಹೇಳಿದ್ದಾರೆ. ಈ ಕೌರ್ಯದ ವಿರುದ್ಧ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎನ್ನುವುದನ್ನು ಈ ಸಿನಿಮಾದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ನಮ್ಮ ದೇಶದ ಮೇಲೆ ಹೊರಗಿನ ಆಕ್ರಮಣದ ಜೊತೆಗೆ ಆಂತರಿಕ ಆಕ್ರಮಣವನ್ನು ಎಚ್ಚರಿಕೆಯಿಂದ ಎದುರಿಸಬೇಕಾಗಿದೆ ಎನ್ನುವ ಕಟು ಸತ್ಯವನ್ನು ಈ ಸಿನಿ​ಮಾ ತೋರಿಸಿಕೊಟ್ಟಿದೆ ಎಂದರು.

Tha Kashmir Files ಚಿತ್ರ ಪ್ರದರ್ಶನಕ್ಕೆ ವಿರೋಧ, ರಾಜಸ್ಥಾನದ ಕೋಟಾದಲ್ಲಿ144 ಸೆಕ್ಷನ್ ಜಾರಿ!

ಕಾಶ್ಮೀರ್‌ ಫೈಲ್ಸ್‌-ಉಚಿತ ಪ್ರದರ್ಶನಕ್ಕೆ ಮುಗಿಬಿದ್ದ ಜನ
1990ರಲ್ಲಿ ಕಾಶ್ಮೀರ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಕುರಿತಾದ ದಿ ಕಾಶ್ಮೀರ ಫೈಲ್ಸ್‌ ಚಿತ್ರವನ್ನು ಉಚಿತವಾಗಿ ವೀಕ್ಷಿಸಲು ಬಿಜೆಪಿ ಮುಖಂಡರಿಂದ ವ್ಯವಸ್ಥೆ ಮಾಡಿದ್ದು, ನಗರದ ಶ್ರೀನಿವಾಸ ಹಾಗೂ ಸಂಗಮ ಚಿತ್ರಮಂದಿರದಲ್ಲಿ ಜನ ಮುಗಿಬಿದ್ದರು. ಸಂಗಮ ಚಿತ್ರಮಂದಿರದಲ್ಲಿ ಮಧ್ಯಾಹ್ನ 3ರಿಂದ ಹಾಗೂ ಶ್ರೀನಿವಾಸ ಚಿತ್ರಮಂದಿರದಲ್ಲಿ ಸಂಜೆ 6ರಿಂದ ಎರಡು ಆಟಗಳಲ್ಲಿ ನೂರಾರು ಜನರು ಚಿತ್ರವನ್ನು ವೀಕ್ಷಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ ಉಚಿತವಾಗಿ ವೀಕ್ಷಿಸಲು ಪಕ್ಷದ ಕಾರ‍್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಟಿಕೆಟ್‌ ವಿತರಣೆಗೆ ವ್ಯವಸ್ಥೆ ಮಾಡಿದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?