'ಅಸ್ಲಾಂ' ಹೆಸರನ್ನು ಬದಲಾಯಿಸಿಕೊಂಡಿದ್ದೇಕೆ ಮಹೇಶ್ ಭಟ್? ಆಲಿಯಾ ತಂದೆ ವಿರುದ್ಧ ಕಂಗನಾ ವ್ಯಂಗ್ಯ

By Shruiti G Krishna  |  First Published Sep 5, 2022, 10:42 AM IST

 ಬಿ ಟೌನ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ, ನಟ ಮಹೇಶ್ ಭಟ್ ಕೂಡ ತನ್ನ ಮೂಲ ಹೆಸರನ್ನು ಬದಲಾಸಿಕೊಂಡಿದ್ದಾರೆ.  ಈ ಬಗ್ಗೆ  ಕಂಗನಾ ರಣಾವತ್ ವ್ಯಂಗ್ಯವಾಡಿದ್ದಾರೆ. ಮಹೇಶ್ ಭಟ್ ತನ್ನ ಸುಂದರವಾದ ಮೂಲಹೆಸರನ್ನು ಯಾಕೆ ಮರೆಮಾಚುತ್ತಿದ್ದಾರೆ ಎಂದು ಕಂಗನಾ ಪ್ರಶ್ನೆಸಿದ್ದಾರೆ. 


ಸಿನಿಮಾರಂಗದಲ್ಲಿ ಅನೇಕರು ನಮ್ಮ ನಿಜವಾದ ಹೆಸರನ್ನು ಬದಲಾಯಿಸಿಕೊಂಡು ಲಕ್ಕಿ ಹೆಸರಿನ ಮೂಲಕ ಖ್ಯಾತಿಗಳಿಸಿದ್ದಾರೆ. ಅದರಲ್ಲೂ ಬಾಲಿವುಡ್‌ನಲ್ಲಿ ಮೂಲಹೆಸರನ್ನು ಬದಲಾಯಿಸಿಕೊಂಡು ಸ್ಕ್ರೀನ್ ನೇಮ್ ಮೂಲಕ ಪ್ರಸಿದ್ಧಿ ಗಳಿಸಿದವರು ಸಾಕಷ್ಟು ಮಂದಿ ಇದ್ದಾರೆ. ಬಿ ಟೌನ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ, ನಟ ಮಹೇಶ್ ಭಟ್ ಕೂಡ ತನ್ನ ಮೂಲ ಹೆಸರನ್ನು ಬದಲಾಸಿಕೊಂಡಿದ್ದಾರೆ. ಈ ಬಗ್ಗೆ  ಕಂಗನಾ ರಣಾವತ್ ವ್ಯಂಗ್ಯವಾಡಿದ್ದಾರೆ. ಮಹೇಶ್ ಭಟ್ ತನ್ನ ಅಸ್ಲಾಂ ಅಂತಿದ್ದ ಸುಂದರವಾದ ಮೂಲಹೆಸರನ್ನು ಯಾಕೆ ಮರೆಮಾಚುತ್ತಿದ್ದಾರೆ ಎಂದು ಕಂಗನಾ ಪ್ರಶ್ನೆಸಿದ್ದಾರೆ. 

ಕಂಗನಾ ರಣಾವತ್ ಸಿನಿಮಾ ನಿರ್ಮಾಪಕ ಮಹೇಶ್ ಅವರ ಹಳೆಯ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಮಹೇಶ್ ಭಟ್ ಹೆಸರು ಅಸ್ಲಾಂ ಅಂತ ಇದೆ ಎಂದು ಕಂಗನಾ ಆರೋಪಿಸಿದ್ದಾರೆ. ಅಲ್ಲದೆ ನಿರ್ಮಾಪಕರು ತನ್ನ ಸುಂದರವಾದ ಹೆಸರನ್ನು ಯಾಕೆ ಮರೆಮಾಚುತ್ತಿದ್ದಾರೆ ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ. ಮಹೇಶ್ ಭಟ್ ತನ್ನ ನಿಜವಾದ ಹೆಸರನ್ನೇ ಬಳಸಬೇಕು. ಅವರು ಮತಾಂತರಗೊಂಡಾಗ ನಿರ್ಧಿಷ್ಟ ಧರ್ಮವನ್ನು ಪ್ರತಿನಿಧಿಸಬಾರದು ಎಂದು ಹೇಳಿದ್ದಾರೆ. 

Tap to resize

Latest Videos

ಕಂಗನಾ ರಣಾವತ್ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ ನಲ್ಲಿ ಮಹೇಶ್ ಭಟ್ ಅವರ ಸರಣಿ ವಿಡಿಯೋ ಕ್ಲಿಪ್‌ಗಳನ್ನು ಶೇರ್ ಮಾಡಿದರು. 2006ರಲ್ಲಿ ಕಂಗನಾ ರಣಾವತ್ ಗ್ಯಾಂಗ್‌ಸ್ಟರ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಮಹೇಶ್ ಭಟ್ ಅವರ ಬ್ಲಾಕ್ ಬಸ್ಟರ್ ಸಿನಿಮಾವಾಗಿದೆ. ಇದೇ ಸಮಯದಲ್ಲಿ ಮಹೇಶ್ ಭಟ್ ಅವರ ನಿಜವಾದ ಹೆಸರು ಮತ್ತು ಧರ್ಮದ ಬಗ್ಗೆ ಕಂಗನಾ ಬಹಿರಂಗ ಪಡಿಸಿದ್ದಾರೆ.  ಮಹೇಶ್ ಅವರ ಹಳೆಯ ಭಾಷಣದ ಒಂದು ತುಣುಕನ್ನು ಶೇರ್ ಮಾಡಿ, 'ಮಹೇಶ್ ಜೀ ಆಕಸ್ಮಿಕವಾಗಿ ಮತ್ತು ಕಾವ್ಯಾತ್ಮಕವಾಗಿ ಜನರನ್ನು ಹಿಂಸೆಗೆ ಪ್ರಚೋದಿಸುತ್ತಿದ್ದಾರೆ' ಎಂದು ಹೇಳಿದ್ದಾರೆ. 

ಫಿಲ್ಮ್ ಫೇರ್ ಪ್ರಶಸ್ತಿ ವಿರುದ್ಧ ನಟಿ ಕಂಗನಾ ಗರಂ; ನಾಮನಿರ್ದೇಶನ ಹಿಂಪಡೆದ ಕಮಿಟಿ

ವೀಡಿಯೊದ ಮತ್ತೊಂದು ಕ್ಲಿಪ್ ನಲ್ಲಿ ಕಂಗನಾ, 'ನನಗೆ ಅವರ (ಮಹೇಶ್ ಭಟ್) ನಿಜವಾದ ಹೆಸರು ಅಸ್ಲಂ ಎಂದು ಹೇಳಲಾಗಿದೆ. ಅವರು ತನ್ನ ಎರಡನೇ ಹೆಂಡತಿಯನ್ನು (ಸೋನಿ ರಜ್ದಾನ್) ಮದುವೆಯಾಗಲು ಮತಾಂತರಗೊಂಡಿದ್ದಾರೆ. ಇದು ಸುಂದರವಾದ ಹೆಸರು, ಅದನ್ನು ಏಕೆ ಮರೆಮಾಚುತ್ತಿದ್ದಾರೆ?' ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ.  ಕಂಗನಾ ಅವರು ಹಂಚಿಕೊಂಡಿರುವ ಮತ್ತೊಂದು ವಿಡಿಯೋದಲ್ಲಿ ಮಹೇಶ್ ಅವರ ಹೆಸರಿನ ಹೇಳಿಕೆಯೂ ಇತ್ತು, ಅದರಲ್ಲಿ 'ಅವರು ಮತಾಂತರಗೊಂಡಾಗ ಅವರು ತನ್ನ ನಿಜವಾದ ಹೆಸರನ್ನು ಬಳಸಬೇಕು, ನಿರ್ದಿಷ್ಟ ಧರ್ಮವನ್ನು ಪ್ರತಿನಿಧಿಸಬಾರದು' ಎಂದು ಹೇಳಿದ್ದಾರೆ. 

Ranbir-Alia; ಅಳಿಯನನ್ನು ತಬ್ಬಿಕೊಂಡು ಭಾವುಕರಾದ ಅಲಿಯಾ ಭಟ್ ತಂದೆ, ಫೋಟೋ ವೈರಲ್

ಕಂಗನಾ ರಣಾವತ್, ನಿರ್ದೇಶರ ಮಹೇಶ್ ಭಟ್ ವಿರುದ್ಧ ಆರೋಪ ಮಾಡುತ್ತಲೆ ಬಂದಿದ್ದಾರೆ. ಮಹೇಶ್ ಭಟ್ ಪುತ್ರಿ ಪೂಜಾ ಭಟ್ ನಿರ್ದೇಶನದ ದೋಖಾ ಸಿನಿಮಾ ತಿರಸ್ಕರಿಸಿದಾಗ ಮಹೇಶ್ ಭಟ್ ತನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಿದ್ದರು. ಕಂಗನಾ, ಮಹೇಶ್ ಭಟ್ ಮತ್ತು ಪುತ್ರಿ ಅಲಿಯಾ ಭಟ್ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ಮಹೇಶ್ ಭಟ್ ಅವರನ್ನು ಬಾಲಿವುಡ್ ಸಿನಿಮಾ ಮಾಫಿಯಾ ಎಂದು ಜರಿಸಿದ್ದರು. ಅಲ್ಲದೇ ಅಲಿಯಾ ಭಟ್ ಅವರನ್ನು ಸಹ ಅಪ್ಪನ ಏಂಜಲ್, ಸ್ಟಾರ್ ಕಿಡ್ ಎಂದು ಕೆಂಡಕಾರುತ್ತಿರುತ್ತಾರೆ. ಇದೀಗ ಮಹೇಶ್ ಭಟ್ ಹಿಂದೂ ಅಲ್ಲ ಮುಸ್ಲಿಂ ಎಂದು ಆರೋಪ ಮಾಡಿದ್ದಾರೆ.  

ಮಹೇಶ್ ಭಟ್ ತಂದೆ ನಾನಾಭಾಯಿ ಭಟ್ ತಾಯಿ ಶಿರಿನ್ ಮೊಹಮ್ಮದ್ ಅಲಿ. ತಂದೆ ಗುಜರಾತಿ ಬ್ರಾಹ್ಮಿನ್ ಆದರೆ ತಾಯಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು.  ಹಾಗಾಗಿ ಕಂಗನಾ ರಣವಾತ್ ಮಹೇಶ್ ಭಟ್ ಅವರ ಮೂಲ ಕೆದಕಿ ಕೆಣಕಿದ್ದಾರೆ. 

click me!