ಈ Bollywood ನಿರ್ದೇಶಕನ ಹಿಂದೆ ಬೆತ್ತಲಾಗಿ ಓಡಿದ್ದಳು ಈ ನಟಿ

Published : Sep 04, 2022, 04:06 PM IST
ಈ Bollywood ನಿರ್ದೇಶಕನ ಹಿಂದೆ ಬೆತ್ತಲಾಗಿ ಓಡಿದ್ದಳು ಈ ನಟಿ

ಸಾರಾಂಶ

ಬಾಲಿವುಡ್ ಚಿತ್ರರಂಗದ ಫೇಮಸ್ ಪರ್ಸನಾಲಿಟಿ ಎಂದರೆ ಮಹೇಶ್ ಭಟ್. ವಿವಿಧ ಕಾರಣಗಳಿಂದ ಅದರಲ್ಲಿಯೂ ಕೆಲವು ಕಾಂಟ್ರೋವರ್ಸಿಗಳಿಂದಲೇ ಇರವು ಸುದ್ದಿಯಲ್ಲಿರುತ್ತಾರೆ. ಅದರಲ್ಲಿಯೂ ಪರ್ವಿನ್ ಬಾಬಿಯೊಂದಿಗಿನ ಅಫೇರ್ ಇವತ್ತಿಗೂ ಚರ್ಚೆಯಾಗೋದು ಏಕೆ ಗೊತ್ತಾ? 

ಪರ್ವೀನ್ ಬಾಬಿ ಬಾಲಿವುಡ್ ಜಗತ್ತನ್ನು ಆಳಿದ ನಟಿ. ಸಾಕಷ್ಟು ಅಭಿಮಾನಿಗಳಿದ್ದರು ಈ ನಟಿಗೆ. ಅದ್ಯಾವ ಘಳಿಗೆಯಲ್ಲಿ ಇವರು ಮಹೇಶ್ ಭಟ್ ಪ್ರೀತಿಯಲ್ಲಿ ಬಿದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಮನುಷ್ಯನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ಆಕೆಯ ಪ್ರೀತಿ ಈ ಭಟ್‌ಗೆ ಅರ್ಥವಾಗಲಿಲ್ಲವೋ, ಅಥವಾ ನಟಿಯೇ ಮಾನಸಿಕವಾಗಿ ಅಸ್ವಸ್ಥಳಾದಳೋ ಬಲ್ಲವರೇ ಹೇಳಬೇಕು. ಆದರೆ, ಭಟ್ ಹಿಂದೆ ಬೆತ್ತಲಾಗಿ ರಾತ್ರೋ ರಾತ್ರಿ ನಟಿ ಓಡಿದ್ದು ಮಾತ್ರ ಇವತ್ತಿಗೂ ಚರ್ಚಿತವಾಗುವ ವಿಷಯ.  

1972ರಿಂದಲೂ ಪರ್ವೀನ್‌ ಬಾಲಿವುಡ್‌ನ (Bollywood) ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಳು. ಮಾಡೆಲ್ ಜಗತ್ತಿನಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. ಆಕೆಯ ರೂಪ (Beauty), ಅಭಿನಯವನ್ನು (Acting) ಮೆಚ್ಚಿದ್ದ ಬಾಲಿವುಡ್‌ ಈ ನಟಿಗೆ ಸಾಕು ಸಾಕೆನ್ನುವಷ್ಟು ಅವಕಾಶಗಳನ್ನೂ ನೀಡಿತ್ತು. ಬಾಲಿವುಡ್ ಬಿಗ್ ಬಿ ಅಮಿತಾಭ್‌ ಬಚ್ಚನ್‌ ಜೊತೆ ಹನ್ನೆರಡು ಚಿತ್ರಗಳಲ್ಲಿ ನಟಿಸಿದ್ದ ಫರ್ವೀನ್, ಆಗಿನ ಕಾಲದ ಬಹು ಬೇಡಿಕೆಯ, ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯಲ್ಲೊಬ್ಬರು. ಕೈಯಲ್ಲಿ ದುಡ್ಡು, ಖ್ಯಾತಿ ಎರಡು ಒಟ್ಟಿಗೆ ಈಕೆಯನ್ನು ಆರಿಸಿಕೊಂಡು ಬಂದಿದ್ದವು. ಆ ಕಾರಣದಿಂದಲೋ ಏನೋ ಕಂಡ ಕಂಡವರ ಅಫೇರ್ಸ್‌ನಲ್ಲೂ ಬಿದ್ದಿದ್ದಳು ಈ ನಟಿ. ಆಗಿನ ಕಾಲದಲ್ಲಿ ಮೂರು ಮೂರು ಪ್ರಭಾವಿಗಳ ಜೊತೆ ಪರ್ವೀನ್ ಲವ್‌ ಅಫೇರ್ಸ್ ಇಟ್ಟು ಕೊಂಡಿದ್ದರು. ಕಬೀರ್‌ ಬೇಡಿ, ಡ್ಯಾನಿ ಡೆಂಗ್ಜೋಂಗ್ಪಾ ಹಾಗೂ ಮಹೇಶ್‌ ಭಟ್‌. ಡ್ಯಾನ್ಸರ್ ಪ್ರೊತೀಮಾ ಬೇಡಿಯನ್ನ ಮದುವೆಯಾಗಿದ್ದ ಕಬೀರ್ ಬೇಡಿ, ಈಕೆಯ ಮೋಹಕ್ಕೆ ಬಿದ್ದಿದ್ದ. ಮಹೇಶ್ ಭಟ್ ಆಗಿನ್ನೂ ಬಾಲಿವುಡ್‌ನ ಯಂಗ್ ಆ್ಯಂಡ್ ಎನರ್ಜೆಟಿಕ್ ನಿರ್ದೇಶಕ. ಆದರೂ ವಿದೇಶಿಯೊಬ್ಬಳನ್ನು ವರಿಸಿದ್ದ. ಪೂಜಾ ಮತ್ತು ರಾಹುಲ್ ಎಂಬ ಮಕ್ಕಳಿಗೆ ತಂದೆಯೂ ಆಗಿದ್ದರು. ಆದರೆ, ಹೆಣ್ಣಿನ ವ್ಯಾಮೋಹದಿಂದ ದೂರವಾಗಲು ಆಗಲಿಲ್ಲ ಮಹೇಶ್ ಭಟ್‌ಗೆ. ಪರ್ವೀನ್ ಬಲೆಗೆ ಬಿದ್ದರು. ಅಥವಾ ಪರ್ವೀನ್‌ಳನ್ನ ಇವರೇ ತಮ್ಮ ಬಲೆಗೆ ಬೀಳಿಸಿಕೊಂಡರು. ಇವರಿಬ್ಬರೂ ಒಟ್ಟಿಗಿದ್ದಾಗಲೇ ಯು.ಜಿ.ಕೃಷ್ಣಮೂರ್ತಿ ಎಂಬ ಅಧ್ಯಾತ್ಮ ಗುರುವಿನ ಪ್ರಭಾವಕ್ಕೊಳಗಾದರು. ಅವರ ಜೊತೆ ದೇಶ-ವಿದೇಶಗಳನ್ನು ಸುತ್ತಿದರು. ಹಲವು ಪುಸ್ತಕಗಳನ್ನೂ ಬರೆದರು. ಬರು ಬರುತ್ತಾ, ಮಹೇಶ್ ಭಟ್‌ನನ್ನು ಬಿಟ್ಟು, ಕೃಷ್ಣಮೂರ್ತಿ ಜೊತೆಯೇ ಸುತ್ತಲು ಶುರು ಮಾಡಿದ್ದಳು ಪರ್ವೀನ್. 

ಬೋಲ್ಡ್‌ನೆಸ್‌ನಿಂದನೇ ಬಾಲಿವುಡ್‌ನ ಟ್ರೆಂಡ್ ಬದಲಾಯಿಸಿದ ನಟಿ Parveen Babi

ಎಲ್ಲ ಅನುಭವವನ್ನೂ ಪಡೆದು, ಕೆಲವು ವರ್ಷಗಳ ನಂತರ ಭಾರತಕ್ಕೆ ಮರಳಿದಳು ಪರ್ವೀನ್. ಬದಲಾಗಿದ್ದಳು. ಪ್ಯಾರಾನೋಯ್ಡ್‌ ಸ್ಕಿಜೋಫ್ರೇನಿಯಾ (Paranoid Schizophrenia) ಎಂಬ ಮಾನಸಿಕ ಕಾಯಿಲೆಯನ್ನೂ ಜೊತೆಯಾಗಿ ತಂದಳು. ಆ ರೋಗದಿಂದ ಹೊರ ಬರಲು ಆಕೆಗೆ ಆಗಲೇ ಇಲ್ಲ. ಬಾಲಿವುಡ್‌ನಲ್ಲಿ ಗಟ್ಟಿ ನೆಲೆಯೂರಲು ಕಾರಣವಾಗಿದ್ದ ಅಮಿತಾಭ್ ಭಚ್ಚನ್ ಅವರನ್ನೂ ಸಂಶಯದಿಂದ ನೋಡಲು ಶುರು ಮಾಡಿದಳು. ಅವರೇ ತನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆಂದೂ ಆರೋಪಿಸಿದ್ದಳು. ಅಷ್ಟೇ ಅಲ್ಲ ದೇಶ, ವಿದೇಶದ ಗಣ್ಯರೆಲ್ಲಾ ತನ್ನ ಕೊಲ್ಲಲು  ಸಂಚು ರೂಪಿಸಿದ್ದಾರೆಂದೂ ಸುಖಾ ಸುಮ್ಮನೆ ಆರೋಪಿಸುವಂತೆ ಮಾಡಿತ್ತು ಈಕೆ ಮಾನಸಿಕ ರೋಗ. 

ನೆರವಾದ ಮಹೇಶ್ ಭಟ್
ಈ ಮಹೇಶ್ ಭಟ್ ವ್ಯಕ್ತಿತ್ವ ಹೇಗೇ ಇರಲಿ. ಪರ್ವೀನ್ ಮೋಹಕ್ಕೆ ಬಿದ್ದಿದ್ದಂತೂ ಹೌದು. ಬರೀ ಸುಖಕ್ಕೆ ಮಾತ್ರವಲ್ಲ, ಕಷ್ಟದಲ್ಲಿದ್ದಾಗಲೂ ಪರ್ವೀನ್ ನೆರವಿಗೆ ಮುಂದಾಗಿದ್ದರು. ಸಾಧ್ಯವಾದಷ್ಟು ವೈದ್ಯಕೀಯ ಚಿಕಿತ್ಸೆ (Medical Treatement) ಕೊಡಿಸಿದರು. ಇವಳೊಂದಿಗೆ ಟೈಮ್ ಕಳೆಯುತ್ತಿದ್ದರು. ಆದರೂ ಮನಸ್ಸು ಹಿಡಿತಕ್ಕೆ ಸಿಗಲಿಲ್ಲ. ಮಹೇಶ್ ಭಟ್ ಕಣ್ಣೆದುರಿನಿಂದ ಆಚೆ ಈಚೆ ಹೋಗಲೂ ಬಿಡುತ್ತಿರಲಿಲ್ಲ ಈ ನಟಿ. ಎಷ್ಟರ ಮಟ್ಟಿಗೆಂದರೆ ಮನೆಯಿಂದ ಭಟ್ ಹೊರ ಹೊರಟರೆ ಸಾಕು, ಬಾತ್‌ ರೂಮಿನಿಂದ ಬೆತ್ತಲಾಗಿಯೇ ಬೀದಿ ತನಕ ಅವನನ್ನು ತಡೆಯಲು ಹೊರ ಬಂದು ಬಿಡುತ್ತಿದ್ದಳು. ಮಾನಸಿಕ ರೋಗದಿಂದ ಇವಳು ಇನ್ನು ಸುಧಾರಿಸುವುದಿಲ್ಲವೆಂದು ಅರಿವಾದಾಗ ಭಟ್ ಸಹ ದೂರವಾಗಿಬಿಟ್ಟರು. 

70 ರ ದಶಕದ ಈ ಬೋಲ್ಡ್‌ ನಟಿ ಪರ್ವೀನ್ ಜೀವನ ಭಯದಿಂದಲೇ ಹಾಳಾಯಿತು!

ಕೈಯಲ್ಲಿ ತಕ್ಕಮಟ್ಟಿಗೆ ಪರ್ವೀನ್ ಹತ್ತಿರ ಹಣವಿತ್ತು. ಸ್ವಂತ ಮನೆ ಇತ್ತು. ಆದರೆ, ಒಂಟಿತನ (Loneliness) ಆಕೆಯನ್ನು ಹಿಡಿದು ಹಿಪ್ಪೆ ಮಾಡಿತ್ತು. ಜೊತೆಗೆ ಕೆಲವು ಬಿಪಿ, ಶುಗರ್‌ನಂಥ ಕಾಯಿಲೆಗಳೂ ಇವಳೊಂದಿಗಿದ್ದವು. ಒಮ್ಮೆ ತಾನಿದ್ದ ಫ್ಲಾಟಿನಲ್ಲಿಯೇ ಶವವಾಗಿ ಪತ್ತೆಯಾದಳು. ಹೇಗೆ ಸತ್ತಳೋ ಗೊತ್ತಿಲ್ಲ. ಒಟ್ಟಿನಲ್ಲಿ ಸರಿಯಾಗಿ ಊಟ ಮಾಡದೇ, ಶುಗರ್ ಲೆವೆಲ್ ಹೆಚ್ಚು ಕಡಿಮೆಯಾಗಿ, ಸತ್ತಿರಬಹುದು ಎನ್ನುತ್ತಾರೆ. ಮೂರು ದಿನಗಳ ನಂತರ ಈಕೆಯ ಸಾವು ಹೊರ ಜಗತ್ತಿನ ಅರಿವಿಗೆ ಬಂತು. 

ಪರ್ವೀನ್ ಇಂಥ ಸ್ಥಿತಿಗೆ ಕಾರಣವಾಗಿದ್ದು ಯಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಬಾಲಿವುಡ್‌ನ ಫೇಮಸ್ ನಟಿಯೊಬ್ಬಳು ದುರಂತವಾಗಿ ಅಂತ್ಯ ಕಂಡಿದ್ದಳು. ಈ ಕಾರಣದಿಂದ ಇವತ್ತಿಗೂ ಬಾಲಿವುಡ್ ಗುಪ್ತ್ ಗುಪ್ತ್ ಅಫೇರ್ಸ್ ವಿಷಯ ಬಂದಾಗ ಬಹು ಚರ್ಚಿತ ಜೋಡಿ ಎಂದರೆ ಪರ್ವೀನ್ ಬಾಬಿ ಹಾಗೂ ಮಹೇಶ್ ಭಟ್ ಹೆಸರು ಚರ್ಚೆಗೆ ಬರುತ್ತದೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?