ಪ್ರಶಸ್ತಿಗಳ ವಿರುದ್ಧ ಕಂಗನಾ ಕಿಡಿ; ರಿಷಬ್, ರಾಜಮೌಳಿ ಬೆಸ್ಟ್ ನಟ, ನಿರ್ದೇಶಕ ಎಂದ ಬಾಲಿವುಡ್ ನಟಿ

By Shruthi Krishna  |  First Published Feb 22, 2023, 12:35 PM IST

ಪ್ರಶಸ್ತಿಗಳ ವಿರುದ್ಧ ಕಿಡಿಕಾರಿರುವ ನಟಿ ಕಂಗನಾ ರಣಾವತ್ ತನ್ನದೇ ಅವಾರ್ಡ್ ಲಿಸ್ಟ್ ರಿಲೀಸ್ ಮಾಡಿದ್ದಾರೆೆ. 


ಇತ್ತೀಚೆಗಷ್ಟೆ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನಡೆದ ಬಳಿಕ ಕಂಗನಾ ರಣಾವತ್ ಕಿಡಿಕಾರಿದ್ದಾರೆ. ಇದು ನೆಪೋಟಿಸಂ ಪ್ರಶಸ್ತಿ ಎಂದು ಕಂಗನಾ ಗರಂ ಆಗಿದ್ದಾರೆ. ಅಷ್ಟಕ್ಕೂ ಕಂಗನಾ ಆಗಲು ಕಾರಣ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್, ದುಲ್ಕರ್ ಸಲ್ಮಾನ್ ಪ್ರಶಸ್ತಿ ಸ್ವೀಕರಿಸದ್ದಕ್ಕೆ ಆಕ್ರೋಶ ಹೊರಹಾಕಿದರು. ಅರ್ಹರಿಂದ ಪ್ರಶಸ್ತಿ ಕಸಿದುಕೊಳ್ಳಲಾಗುತ್ತಿದೆ ಎಂದು ಕಂಗನಾ ಹೇಳಿದ್ದಾರೆ. ಬಳಿಕ ಕಂಗನಾ ತನ್ನದೇ ಆದ ಲಿಸ್ಟ್ ರಿಲೀಸ್ ಮಾಡಿದ್ದಾರೆ. ಪ್ರಶಸ್ತಿ ಯಾರ್ಯಾರಿಗೆ ಕೊಡಬೇಕು ಎಂದು ಅವರೇ ಅನೌನ್ಸ್ ಮಾಡಿದ್ದಾರೆ. ಕಂಗನಾ ಲಿಸ್ಟ್ ಪ್ರಕಾರ ಅತ್ಯುತ್ತಮ ನಟ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಅತ್ಯುತ್ತಮ ನಿರ್ದೇಶಕ ರಾಜಮೌಳಿ ಎಂದು ಹೇಳಿದ್ದಾರೆ. 

ಕಂಗನಾ ಅನೌನ್ಸ್ ಮಾಡಿರುವ ಲಿಸ್ಟ್ ಹೀಗಿದೆ 

Tap to resize

Latest Videos

ಅತ್ಯುತ್ತಮ ನಿರ್ದೇಶಕ- ಎಸ್ ಎಸ್ ರಾಜಮೌಳಿ (ಆರ್ ಆರ್ ಆರ್)

ಉತ್ಯುತ್ತಮ ನಟ - ರಿಷಬ್ ಶೆಟ್ಟಿ (ಕಾಂತಾರ) 

ಅತ್ಯುತ್ತಮ ನಟಿ - ಮೃಣಾಲ್ ಠಾಕೂರ್ (ಸೀತಾ ರಾಮಮ್) 

ಅತ್ಯುತ್ತಮ ಪೋಷಕ ನಟ- ಅನುಪಮ್ ಖೇರ್( ಕಾಶ್ಮೀರ್ ಫೈಲ್ಸ್) 

ಅತ್ಯುತ್ತಮ ಪೋಷಕ ನಟಿ- ತಬು ( ದೃಶ್ಯಂ-2) 

ಎಂದು ಲಿಸ್ಟ್ ರಿಲೀಸ್ ಮಾಡಿರುವ ಕಂಗನಾ, ಸದ್ಯಕ್ಕೆ ಇಷ್ಟೆ ಮಾಡಿರುವೆ, ಸಮಯ ಸಿಕ್ಕಾಗ ಅರ್ಹರ ಲಿಸ್ಟ್ ರೆಡಿ ಮಾಡಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Awards season is here and nepo mafia is at it again, snatching all awards from the deserving talent. Here’s a list of some of those who displayed volcanic artistic brilliance and owned 2022.
Best Actor -Rishab Shetty ( Kantara)
Best Actress-Mrunal Thakur ( Sita Ramam)
(Cont)

— Kangana Ranaut (@KanganaTeam)

ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿಯಲ್ಲಿ ನೆಪೋಟಿಸಂ ಮಾಫಿಯಾ: ಕಂಗನಾ ಗರಂ!

ಅಲಿಯಾ-ರಣಬೀರ್ ವಿರುದ್ಧ ಕಂಗನಾ ಆಕ್ರೋಶ 

ಅರ್ಹ ಪ್ರತಿಭೆಗಳಿಂದ ಎಲ್ಲಾ ಪ್ರಶಸ್ತಿಗಳನ್ನು ಕಸಿದುಕೊಳ್ಳಲಾಗಿದೆ. ಇದರಿಂದ  ನೆಪೋ ಮಾಫಿಯಾ ಇನ್ನೂ ಜೀವಂತವಾಗಿದೆ ಎಂದು ತಿಳಿಯುತ್ತಿದೆ.  ಪ್ರಶಸ್ತಿಗಳ ಸೀಸನ್ ಬರುತ್ತಲೇ  ನೆಪೋಟಿಸಂ ಮಾಫಿಯಾ ಮತ್ತೆ ಶುರುವಾಗಿದೆ.  ಅರ್ಹ ಪ್ರತಿಭೆಗಳಿಂದ ಎಲ್ಲಾ ಪ್ರಶಸ್ತಿಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಬರೆದಿದ್ದಾರೆ. ನೆಪೋ ಮಕ್ಕಳು ಕೆಲಸ ಪಡೆಯಲು ಕರಣ್ ಜೋಹರ್ ಅವರನ್ನು ಹೊಗಳುತ್ತಾರೆ. ಅಷ್ಟೇ ಅಲ್ಲದೆ ಪ್ರತಿಭೆಯುಳ್ಳ ವ್ಯಕ್ತಿಯ ವೃತ್ತಿ ಜೀವನವನ್ನು ಹಾಳು ಮಾಡುತ್ತಾರೆ. ಆದರೆ ಯಾರಾದರೂ ತಮಗಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ರೆ ಅವರಿಗೆ ಸಮಸ್ಯೆ ತಪ್ಪಿದ್ದಲ್ಲ. ನಾನು ನೆಪೋಟಿಸಂ ಮಾಡುವವರನ್ನು ನಾಶ ಮಾಡ್ತೀನಿ. ಸುತ್ತಲೂ ದುಷ್ಟರು ಇರುವಾಗ ಒಬ್ಬರು ಜೀವನದ ಸೌಂದರ್ಯ ಸವಿಯಲು ಸಾಧ್ಯವಿಲ್ಲ. ದುಷ್ಟರ ಸಂಹಾರವೇ ಧರ್ಮದ ಗುರಿ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ ಎಂದೂ ಕಂಗನಾ ಹೇಳಿದ್ದಾರೆ. 


 

click me!