ಲೀವಿಂಗ್ ರೂಮ್‌ನಲ್ಲಿ ಕುಳಿತಿರುವ ಆಲಿಯಾ ಭಟ್ ಫೋಟೋ ವೈರಲ್. ನೆರೆಯವರ ಮನೆ ಮೇಲೆ ನಿಂತುಕೊಂಡು ಫೋಟೋ ಕ್ಲಿಕ್ ಮಾಡುವುದು ತಪ್ಪು ಎಂದ ನಟಿ....
ಬಾಲಿವುಡ್ ಬ್ಯುಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಪುತ್ರಿ Raha ಆಗಮನದ ನಂತರ ವೈಯಕ್ತಿಕ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ಆಲಿಯಾ ಫ್ಯಾಮಿಲಿ ಜೊತೆ ಲೀವಿಂಗ್ ಏರಿಯಾದಲ್ಲಿ ಸಮಯ ಕಳೆಯುತ್ತಿರುತ್ತಾರೆ ಈ ವೇಳೆ ಖಾಸಗಿ ಮಾಧ್ಯಮವೊಂದು ಕ್ಲಿಕ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ. ನನ್ನ ಪರ್ಸನಲ್ ಜೀವನಕ್ಕೆ ದಕ್ಕೆಯಾಗುತ್ತಿದೆ ಎಂದು ಆಲಿಯಾ ಆರೋಪ ಮಾಡಿ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಆಲಿಯಾ ಗರಂ:
'ತಮಾಷೆ ಮಾಡುತ್ತಿದ್ದೀರಾ? ನನ್ನ ಮನೆಯ ಲೀವಿಂಗ್ ರೂಮ್‌ನಲ್ಲಿ ನೆಮ್ಮದಿಯಾಗಿ ಮಧ್ಯಾಹ್ನ ಕಳೆಯುತ್ತಿರುವಾಗ ಯಾರೋ ನನ್ನನ್ನು ನೋಡುತ್ತಿದ್ದಾರೆ ಅನಿಸಿತ್ತು. ಅದು ಈಗ ನಿಜವಾಗಿದೆ. ತಕ್ಷಣವೇ ನಾನು ನೋಡಿದಾಗ ನಮ್ಮ ಪಕ್ಕದ ಮನೆಯವರ ಮೇಲೆ ಇಬ್ಬರು ವ್ಯಕ್ತಿಗಳು ಕ್ಯಾಮೆರಾ ಹಿಡಿದುಕೊಂಡು ಫೋಟೋ ಕ್ಲಿಕ್ ಮಾಡುತ್ತಿದ್ದರು. ನೀವು ಮಾಡುತ್ತಿರುವುದು ಎಷ್ಟು ಸರಿ? ಇದನ್ನು ಯಾರಾದರೂ ಒಪ್ಪಿಕೊಳ್ಳುತ್ತೀರಾ? ಮಿತಿ ಮೀರಿ ಒಬ್ಬರ ಪ್ರೈವಸಿಯನ್ನು ಹಾಳು ಮಾಡುತ್ತಿದ್ದೀರಿ. ಎಲ್ಲದಕ್ಕೂ ಒಂದು ಲೈನ್ ಇರುತ್ತದೆ ಈ ಘಟನೆಯಿಂದ ನಾನು ಹೇಳುವೆ ನೀವು ಎಲ್ಲಾ ಲೈನ್‌ಗಳನ್ನು ಮೀರಿದ್ದೀರಿ' ಎಂದು ಆಲಿಯಾ ಬರೆದುಕೊಂಡಿದ್ದಾರೆ. ಇದಕ್ಕೆ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಆಲಿಯಾ ಭಟ್ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಇನ್ನಿತ್ತರ ಬಿ-ಟೌನ್ ಸ್ಟಾರ್‌ಗಳು ರೆಸ್ಪಾಂಡ್ ಮಾಡಿದ್ದಾರೆ. ಅವರಿಗೆ ಪ್ಯಾಪರಾಜಿಗಳಿಂದ ಆಗಿರುವ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಪೋಸ್ಟ್:
'ಪ್ಯಾಪರಾಜಿಗಳು ಈ ರೀತಿ ಮಾಡುತ್ತಿರುವುದು ಮೊದಲಲ್ಲ. ಎರಡು ವರ್ಷಗಳ ಹಿಂದೆ ಪ್ರೈವಸಿ ಕಾರಣಕ್ಕೆ ಅವರನ್ನು ಸಂಪರ್ಕ ಮಾಡಿದೆವು. ಒಬ್ಬರ ವೈಯಕ್ತಿಕ ಜೀವನ ಹಾಳು ಮಾಡುವುದರಿಂದ ನಿಮ್ಮ ಗೌರವ ಕಳೆದುಕೊಳ್ಳುತ್ತಿದ್ದೀರಿ. ನಾವು ಎಷ್ಟು ಸಲ ಮನವಿ ಮಾಡಿಕೊಂಡರೂ ಪದೇ ಪದೇ ನಮ್ಮ ಮಗಳ ಫೋಟೋ ಅಪ್ಲೋಡ್ ಮಾಡುತ್ತಿದ್ದವರು ಇವರು' ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.
ಜಾನ್ವಿ ಕಪೂರ್:
'ಅಸಯ್ಯ ಅನಿಸುತ್ತಿದೆ. ಈ ಪ್ಯಾಪರಾಜಿಗಳು ನನ್ನ ವಿಚಾರದಲ್ಲೂ ಈ ರೀತಿ ತಪ್ಪು ಮಾಡಿದ್ದಾರೆ. ಪ್ರತಿನಿತ್ಯ ನಾನು ಜಿಮ್‌ಗೆ ಹೋಗುವೆ ಆಗ ನನಗೆ ತಿಳಿಯದ ಹಾಗೆ ಜಿಮ್ ಗ್ಲಾಸ್ ಬಾಗಿಲಿನಿಂದ ಫೋಟೋ ಕ್ಲಿಕ್ ಮಾಡಿದ್ದಾರೆ. ಆ ಜಾಗದಲ್ಲಿ ಯಾರಿಗೂ ಫೋಟೋ ಕ್ಲಿಕ್ ಮಾಡಿಸಿಕೊಳ್ಳುವ ಆಸೆ ಇರುವುದಿಲ್ಲ ಏಕೆಂದರೆ ಅದು ಪ್ರೈವೇಟ್ ಜಾಗ. ನಿಮ್ಮ ಕೆಲಸ ನಮಗೆ ಅರ್ಥವಾಗುತ್ತದೆ ನೀವು ನಿಮ್ಮ ಕೆಲಸ ಮಾಡಬೇಕು ಮಾಡುತ್ತಿದ್ದೀರಿ ಆದರೆ ಇರದಲ್ಲಿ ಪರಸ್ಪರ ಮಾತುಕತೆ ಇರಬೇಕು. ಪಬ್ಲಿಕ್ ಫಿಟರ್ ಆದ ಮೇಲೆ ಕ್ಯಾಮೆರಾಗಳು ನಮ್ಮ ಮೇಲೆ ಇರುತ್ತದೆ ಆದರೆ ನಮಗೆ ಮುಜುಗರ ಮಾಡುವಂತೆ ಫೋಟೋ ಕ್ಲಿಕ್ ಮಾಡುವುದು ತಪ್ಪು. ತಪ್ಪು ಮಾಡಿ ಅದನ್ನು exclusive ಅಂತ ಬರೆದುಕೊಳ್ಳುವುದು ಇನ್ನೂ ದೊಡ್ಡ ತಪ್ಪು' ಎಂದು ಜಾನ್ವಿ ಬರೆದುಕೊಂಡಿದ್ದಾರೆ.
ಅರ್ಜುನ್ ಕಪೂರ್:
'ನಾಚಿಕೆ ಆಗಬೇಕು. ಎಲ್ಲಾ ಲಿಮಿಟ್‌ಗಳನ್ನು ಮೀರಿ ಫೋಟೋ ಕ್ಲಿಕ್ ಮಾಡುವುದು ಸರಿ ಅಲ್ಲ. ಒಂದು ಕ್ಷಣ ಯೋಚನೆ ಮಾಡಿ ಹೆಣ್ಣು ತಮ್ಮ ಮನೆಯಲ್ಲಿ ನೆಮ್ಮದಿಯಾಗಿ ಕುಳಿತುಕೊಳ್ಳುವಂತಿಲ್ಲ ಅಂದರೆ ಎಷ್ಟು ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು. ಮಾಧ್ಯಮಗಳ ಮೇಲೆ ಅಪಾರ ನಂಬಿಕೆ ಮತ್ತು ಹೊಂದಿರುವ ಕಲಾವಿದರು ನಾವು ಹೀಗಿರುವಾಗ ನಮ್ಮ ಫೋಟೋಗಳನ್ನು ಕ್ಲಿಕ್ ಮಾಡಿ ಹೊಟ್ಟೆ ಪಾಡು ನೋಡಿಕೊಳ್ಳುವವರು ನೀವು ನಮ್ಮಗೆ ಬಣ್ಣ ಬೆಲೆ ಕೊಡಬಾರದೇ?' ಎಂದು ಅರ್ಜುನ್ ಬರೆದುಕೊಂಡಿದ್ದಾರೆ.