ಕಂಗನಾ ರಣಾವತ್ 'ಚಂದ್ರಮುಖಿ-2' ಬಾಕ್ಸ್‌ ಆಫೀಸ್ ಕಲೆಕ್ಷನ್ ಎಷ್ಟು?

By Shriram Bhat  |  First Published Sep 30, 2023, 12:56 PM IST

ನಟಿ ಕಂಗನಾ ರಣಾವತ್ ಇತ್ತೀಚೆಗೆ ಕೇವಲ ಬಾಲಿವುಡ್ ಚಿತ್ರವನ್ನಷ್ಟೇ ನಂಬಿಕೊಂಡಿಲ್ಲ. ದಕ್ಷಿಣ ಭಾರತದ ಚಿತ್ರಗಳಲ್ಲಿ ಸಹ ನಟಿಸುತ್ತ ಪ್ಯಾನ್ ಇಂಡಿಯಾ ನಟಿಯಾಗಿ  ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟಿ ಕಂಗನಾ ತಮಿಳುನಾಡಿನ ಮಾಜಿ ಮುಖ್ಯಮತ್ರಿ, ನಟಿ ಜಯಲಲಿತಾ ಪಾತ್ರದಲ್ಲಿ ಮಿಂಚಿದ್ದರು.


ಬಾಲಿವುಡ್ ಕ್ವೀನ್ ಖ್ಯಾತಿಯ ನಟಿ ಕಂಗನಾ ರಣಾವತ್ ಮತ್ತು ರಾಘವ ಲಾರೆನ್ಸ್ ನಟಿಸಿರುವ 'ಚಂದ್ರಮುಖಿ-2' ಚಿತ್ರವು 28 ಸೆಪ್ಟೆಂಬರ್ ರಂದು ಬಿಡುಗಡೆಯಾಗಿದೆ. ಈ ಚಿತ್ರವು ಮೊದಲ ದಿನ ಗುಡ್ ಕಲೆಕ್ಷನ್ ಎನ್ನುವ ರೂ. 7.5 ಕೋಟಿಗಿಂತ ಹೆಚ್ಚು ಗಳಿಸಿ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಎರಡನೇ ದಿನದ 'Chandramukhi 2' ಕಲೆಕ್ಷನ್ ರೂ. 4.5 ಕೋಟಿ ಆಗಿದ್ದು, ಚಿತ್ರವು ಮೊದಲ ದಿನಕ್ಕಿಂತ ಕಡಿಮೆ ಗಳಸುವ ಮೂಲಕ ಕುಸಿತ ಕಂಡಿದೆ. 

ನಟಿ ಕಂಗನಾ ರಣಾವತ್ ಇತ್ತೀಚೆಗೆ ಕೇವಲ ಬಾಲಿವುಡ್ ಚಿತ್ರವನ್ನಷ್ಟೇ ನಂಬಿಕೊಂಡಿಲ್ಲ. ದಕ್ಷಿಣ ಭಾರತದ ಚಿತ್ರಗಳಲ್ಲಿ ಸಹ ನಟಿಸುತ್ತ ಪ್ಯಾನ್ ಇಂಡಿಯಾ ನಟಿಯಾಗಿ  ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟಿ ಕಂಗನಾ ತಮಿಳುನಾಡಿನ ಮಾಜಿ ಮುಖ್ಯಮತ್ರಿ, ನಟಿ ಜಯಲಲಿತಾ ಪಾತ್ರದಲ್ಲಿ ಮಿಂಚಿದ್ದರು. ಇದೀಗ, ಈ ಮೊದಲು ರಜನಿಕಾಂತ್-ಜ್ಯೋತಿಕಾ ಜೋಡಿಯ 'ಚಂದ್ರಮುಖಿ-2' ಚಿತ್ರದ ಸೀಕ್ವೆಲ್ ನಲ್ಲಿ ನಟಿಸುವ ಮೂಲಕ ಮತ್ತೆ ಸೌತ್ ಇಂಡಿಯನ್ ಬೇಸ್ಡ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Tap to resize

Latest Videos

ಮುಖದಲ್ಲಿ ಮಹಾಲಕ್ಷ್ಮಿ ಕಳೆ; ನೆನಪಿರಲಿ ಪ್ರೇಮ್ ಪತ್ನಿ ಜ್ಯೋತಿ ಫೋಟೋಶೂಟ್ ವೈರಲ್!

ರಜನಿಕಾಂತ್-ಜ್ಯೋತಿಕಾ ನಟನೆಯಲ್ಲಿ ಈ ಮೊದಲು ತಮಿಳಿನಲ್ಲಿ ತೆರೆಗೆ ಬಂದಿದ್ದ 'ಚಂದ್ರಮುಖಿ' ಚಿತ್ರವು ಸೂಪರ್ ಹಿಟ್ ದಾಖಲಿಸಿತ್ತು. ಬಹಳ ವರ್ಷಗಳ ಬಳಿಕ ಮತ್ತೆ ತೆರೆಗೆ ಅದೇ ಚಿತ್ರದ ಸೀಕ್ವೆಲ್ ಇದೀಗ ಬಿಡುಗಡೆಯಾಗಿದ್ದು, ಚಿತ್ರದ ಫಲಿತಾಂಶ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಚಂದ್ರಮುಖಿ ಭಾಗ 2 ಮಾಡಲಿದ್ದೇವೆ ಎಂದು ಈ ಚಿತ್ರದ ನಿರ್ದೇಶಕ  ಪಿ ವಾಸು ಹೇಳಿದಾಗ, ನಟ ರಜನಿಕಾಂತ್ ಸಂತೋಷದಿಂದ ಒಪ್ಪಿದ್ದಾರೆ ಎನ್ನಲಾಗಿದೆ. ಭಾಗ 2 ರಲ್ಲಿ ಜ್ಯೋತಿಕಾ ಬದಲು ನಾಯಕಿಯಾಗಿ ಕಂಗನಾ ನಟಿಸಿದ್ದಾರೆ. ಪಿ ವಾಸು ಈ ಚಂದ್ರಮುಖಿ-2 ಚಿತ್ರವನ್ನು ನಿರ್ದೇಶಿಸಿದ್ದಾರೆ. 
 

click me!